Breaking News

Breaking News

ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ‌ಏರುಪೇರು : ಆಸ್ಪತ್ರೆಗೆ ದಾಖಲು

ಮೈಸೂರು: ದೊಡ್ಮನೆಯ ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರುಯಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಮರಳಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರದ ಬಿಡುಗಡೆ, ಚಿತ್ರ ಪ್ರದರ್ಶನದ ಸೇರಿದಂತೆ ವಿವಿಧ ವಿಚಾರಗಳಲ್ಲಿ ಬ್ಯುಸಿ ಇದ್ದಂತ ನಟ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿರೋದೆ ಎಂದು ಹೇಳಲಾಗುತ್ತಿದೆ.

Read More »

ದೇಶದಲ್ಲಿ ಎಲ್ಲ ಧರ್ಮವೂ ಒಂದೆ : ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ

ಹುಬ್ಬಳ್ಳಿ: ದೇಶದಲ್ಲಿ ಎಲ್ಲ ಧರ್ಮದವೂ ಒಂದೆಯಾಗಿದೆ. ಸಂವಿಧಾನ ಮತ್ತು ಕಾನೂನಿಗಿಂತ ಯಾರು ದೊಡ್ಡವರಲ್ಲ. ಆದರೆ ಇತ್ತೀಚೆಗೆ ಇಂತಹ ಗಲಭೆ ಗಳು ರಾಜ್ಯದಲ್ಲಿ ನಡೆಯುತ್ತಿದೆ. ಇದು ಮುಂದೆಯಾಗದಂತೆ ಜನಸಾಮಾನ್ಯರು ಶಾಂತಿಯುತವಾಗಿರಬೇಕು ಎಂದು ಬೆಂಗಳೂರಿನ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಹಿಂಸಾತ್ಮಕ ಘಟನೆ ನಡೆದಿದೆ. ಇದು ಸಮಾಜಕ್ಕೆ ಮಸಿ ಬಳೆಯುವಂತಾಗಿದೆ. ಹಿಂದಿನ ಕಾಲದಿಂದಲೂ ಸರ್ವಧರ್ಮ ಸಮನ್ವಯತೆಯಿಂದ ನಡೆದುಕೊಂಡು ಬಂದಿದ್ದೇವೆ ಎಂದರು. ದೇಶದಲ್ಲಿ ಸಂವಿಧಾನದಂತೆ ನಡೆಯಬೇಕು. …

Read More »

ಹುಬ್ಬಳ್ಳಿ ಗಲಭೆ :ಏ‌.23 ರ ವರೆಗೆ ನಿಷೇಧಾಜ್ಞೆ ಮುಂದುವರೆಕೆ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣ ಹಿನ್ನೆಲೆ ಏ‌.23 ರ ವರೆಗೆ ನಿಷೇಧಾಜ್ಞೆ ಮುಂದುವರಿಸಿ ಆದೇಶ ಹೊರಡಿಸಲಾಗಿದೆ. ಹಳೇ ಹುಬ್ಬಳ್ಳಿ ಠಾಣೆ ಸೇರಿದಂತೆ ದಕ್ಷಿಣ ವಿಭಾಗದ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹು-ಧಾ ಪೊಲೀಸ್ ಆಯುಕ್ತ ಲಾಭೂ ರಾಮ್ ಆದೇಶ ಹೊರಡಿಸಿದ್ದಾರೆ.

Read More »

ಶಿಗ್ಗಾಂವಿ ಶೂಟೌಟ್‌ಗೆ ಪ್ರಕರಣಕ್ಕೆ ಮತ್ತೇ ಟ್ವಿಸ್ಟ್

ಹುಬ್ಬಳ್ಳಿ : ಶಿಗ್ಗಾಂವಿ ಶೂಟೌಟ್‌ಗೆ ಪ್ರಕರಣಕ್ಕೆ ಮತ್ತೇ ಟ್ವಿಸ್ಟ್ ಸಿಕ್ಕಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯುವಕನ ಮಾವ ಮಹದೇವಪ್ಪ ತಳವಾರ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರಮಂದಿರಕ್ಕೆ ಎಂಟ್ರಿಯಾಗಿ ಬಳಿಕ ಅಪರಿಚಿತ ವ್ಯಕ್ತಿ ಗನ್ ತೋರಿಸಿದ್ದ. ಗನ್ ತೋರಿಸುತ್ತಲೇ ಹಂತಕ ತಬ್ಬಿಕೊಂಡು ಶೂಟ್ ಮಾಡಿದ್ದಾರೆ. ಕೆಜಿಎಫ್ – 2 ಸಿನೆಮಾ ಪ್ರಾರಂಭವಾಗಿ ಐದೇ ನಿಮಿಷದಲ್ಲಿಯೇ ಕಾಲು ತಾಗಿದ್ದಕ್ಕೆ ಜಗಳ ಆರಂಭವಾಗಿದ್ದು, ಜಗಳದ ನಂತ್ರ ವಾಪಸ್ಸು ಬಂದು ನೋಡ್ತೆನಿ ಎಂದು ತೆರಳಿದ್ದರು. ಹತ್ತೆ ನಿಮಿಷಗಳಲ್ಲಿ …

Read More »

ಹುಬ್ಬಳ್ಳಿ ಗಲಭೆ ಪ್ರಕರಣ : 115 ಕ್ಕೇ ಏರಿದ ಬಂಧಿತರ ಸಂಖ್ಯೆ

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆ ಮತ್ತೆ ಹನ್ನೆರಡು ಜನರನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 115 ಕ್ಕೇ ಏರಿದೆ. ಹುಬ್ಬಳ್ಳಿಯಲ್ಲಿ ಪೊಲೀಸರನ್ನೇ ಗುರಿಯಾಗಿಸಿಕೊಂಡುಪುಂಡರು ದಾಂಧಲೆ ಮಾಡಿದ್ದರು. ಈ ಹಿನ್ನೆಲೆ ಮೊನ್ನೆ ರಾತ್ರಿಯಿಂದಲೇ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ. 200ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದರು. ಸದ್ಯ ಗಲಭೆಗೆ ಕಾರಣರಾದ ಮತ್ತಷ್ಟು ಪುಂಡರಿಗೆ ಪೊಲೀಸರು ಬಲೆ ಬಿಸಿದ್ದಾರೆ.

Read More »

ಅವಳಿನಗರದಲ್ಲಿ ಶಾಂತಿ ನೆಲಸಬೇಕಾಗಿರುವುದು ಅಗತ್ಯ: ಶ್ರೀ ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿ

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡದಲ್ಲಿ ಶಾಂತಿ ನೆಲೆಸಬೇಕಾಗಿರುವುದು ತೀರ ಅಗತ್ಯತೆ ಇದೆ ಎಂದು ಮೂರುಸಾವಿರಮಠದ ಶ್ರೀ ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು ಹಳೇ ಹುಬ್ಬಳ್ಳಿ ಗಲಭೆ ಹಿನ್ನೆಲೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಏ.17 ರಂದು ಹಳೇಹುಬ್ಬಳ್ಳಿ ಗಲಭೆಯಲ್ಲಿ ಗಾಯಗೊಂಡಿದ್ದ ಸಂಚಾರಿ ಪೋಲಿಸ್ ಇನ್ಸ್ಪೆಕ್ಟರ್ ಕಾಡದೇವರಮಠ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಇಂತಹ ಯಾವ ಘಟನೆಗಳು ನಡೆದಿಲ್ಲ. ಆದರೆ ಮೊನ್ನೆ ನಡೆದ ಘಟನೆ …

Read More »

ತನಿಖೆಯನ್ನು ಸಿಬಿಐ ಗೆ ಒಪ್ಪಿಸಿ: ಸೊಪ್ಪಿನ್

ಹುಬ್ಬಳ್ಳಿ :ಇತ್ತೀಚಿಗೆ ೫೪೫ ಕರ್ನಾಟಕ ಪೊಲೀಸ್ ಸಬ್ಇನ್ಸಪೆಕ್ಟರ್ (ಸಿವಿಲ್) ಅಭ್ಯರ್ಥಿಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮವಾಗಿದ್ದು, ಈ ತನಿಖೆಯ ನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಆಮ್ ಆದ್ಮಿ ಪಕ್ಷದ ಸಂಚಾಲಕ ವಿಕಾಸ ಸೊಪ್ಪಿನ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಕ್ರಮ ವಿಷಯವಾಗಿ ಸಾವಿರಾರು ನೊಂದ ವಿದ್ಯಾರ್ಥಿಗಳು ಧಾರವಾಡದ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳಿಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಈ ವರೆಗೆ ವಿದ್ಯಾರ್ಥಿಗಳು ಬೃಹತ್ ಧರಣಿ ಸತ್ಯಾಗ್ರಹ ಮಾಡಿದ್ದಾರೆ …

Read More »

ಚಲನಚಿತ್ರ ವೀಕ್ಷಣೆ ವೇಳೆ ಹಾರಿದ ಗುಂಡು

ಹಾವೇರಿ: ಕೆಜಿಎಫ್ 2 ಚಿತ್ರ ಪ್ರದರ್ಶನದ ವೇಳೆ ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸಿದ ಘಟನೆ ಶಿಗ್ಗಾವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ನಡೆದಿದೆ.ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಶಿವಪುರ ಎಂಬ ಯುವಕನಿಗೆ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಘಟನೆ ನಡೆದಿದ್ದು, ಗಾಯಾಳುವಿಗೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ರಮಂದಿರದಲ್ಲಿ ಗುಂಡು …

Read More »

ಅಕ್ರಮ ಪಡಿತರ ಸಾಗಣೆ: 7 ಜನರ ವಿರುದ್ಧ ಪ್ರಕರಣ, 259 ಕ್ವಿಂಟಲ್ ಅಕ್ಕಿ ವಶ

ಹುಬ್ಬಳ್ಳಿ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 8 ಲಕ್ಷ ರೂ.ಮೌಲ್ಯದ 259 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು, 7 ಜನರ ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಅಕ್ರಮ ಪಡಿತರ ಧಾನ್ಯ ಸಾಗಣೆ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪ್ರಭಾರ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ನೇತೃತ್ವದಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಸುಧೀರ್ ಸಾವ್ಕಾರ್ ಮತ್ತಿತರ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ತಂಡ ನಿನ್ನೆ ಸೋಮವಾರ …

Read More »

ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನಲೆ ಉಚಿತ ಬಸ್ ಪ್ರಯಾಣ

ರಾಜ್ಯಾದ್ಯಂತ ಏಪ್ರಿಲ್ 22 ರಿಂದ ಮೇ 18 ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಿ , ವಾಸಸ್ಥಳಕ್ಕೆ ಹಿಂತಿರುಗಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗರ ಸಂಸ್ಥೆಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ . ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ , ಸಂಸ್ಥೆಯ ನಗರ , ಹೊರವಲಯ , ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ವಾ.ಕ.ರ.ಸಾ. …

Read More »