Breaking News

Breaking News

ವೃದ್ದೆಯ ಉಸಿರುಗಟ್ಟಿಸಿ ಕೊಲೆ ಪ್ರಕರಣ; ಆರೋಪಿಗಳು ಕೇರಳದಲ್ಲಿ ಅರೆಸ್ಟ್

ಕೊರಟಗೆರೆ ತಾಲೂಕಿನ ದಾಸಾಲುಕುಂಟೆ ಗ್ರಾಮದಲ್ಲಿ ತೋಟದ ಮನೆಯಲ್ಲಿ ವಾಸವಾಗಿದ್ದ 68 ವರ್ಷದ ರತ್ನಮ್ಮ ಅವರನ್ನು ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ, ಅವರ ಮೈಮೇಲಿದ್ದ ಚಿನ್ನಾಭರಣ ದೋಚಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಂಗಾಧರ್ (24) ಹಾಗೂ ತುಮಕೂರು ಜಿಲ್ಲೆಯ ಸೂರ್ಯ (25) ಎಂಬ ಇಬ್ಬರು ಆರೋಪಿಗಳನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ಕೊಟ್ಟಾಕರಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳು ಮೂಲತಃ ಬಟ್ಟೆ ವ್ಯಾಪಾರಿಗಳಾಗಿದ್ದು, ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದರು. …

Read More »

ಕ್ರಿಪ್ಟೊ ಕರೆನ್ಸಿಗೆ ಬದಲಾವಣೆ ಮಾಡಿಕೊಡುವುದಾಗಿ ವಂಚನೆ, 12 ಮಂದಿ ಆರೋಪಿಗಳ ಬಂಧನ

ಕ್ರಿಪ್ಟೊ ಕರೆನ್ಸಿ ಹೆಸರಿನಲ್ಲಿ ₹17.64 ಲಕ್ಷ ದರೋಡೆ ನಡೆಸಿದ್ದ 12 ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹13.90 ಲಕ್ಷ ನಗದು, 6 ಬೈಕ್‌ಗಳು, ಒಂದು ಕಾರು ಹಾಗೂ 13 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉದ್ಯಮಿಯೊಬ್ಬರಿಗೆ ಕ್ರಿಪ್ಟೊ ಕರೆನ್ಸಿಗೆ ಹಣ ಬದಲಾಯಿಸುವುದಾಗಿ ನಂಬಿಕೆ ಮೂಡಿಸಿದ ಆರೋಪಿಗಳು, ಬೆಂಗಳೂರಿನ ಸಂಜಯನಗರಕ್ಕೆ ಕರೆಸಿ ₹17.64 ಲಕ್ಷ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ದೇವಸಂದ್ರದ ಬಳಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ …

Read More »

ಬೆಳ್ತಂಗಡಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ 2023ರಲ್ಲಿ ನಡೆದಿದ್ದು, ವಿಷಯ ಇತ್ತೀಚೆಗೆ ಬಾಲಕಿಯ ಪೋಷಕರ ಗಮನಕ್ಕೆ ಬಂದ ನಂತರ ಜೂನ್ 23ರಂದು ದೂರು ದಾಖಲಿಸಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಲ್ಲಿ ಒಬ್ಬನಾದ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಬ್ಬ 17 ವರ್ಷದ ಬಾಲಕ …

Read More »

ಅಪ್ರಾಪ್ತೆಗೆ ಪ್ರೇಮದ ಜಾಲ ಬೀಸಿ ಗರ್ಭಿಣಿ ಮಾಡಿದ ಕಾಮುಕ, ಮನನೊಂದು ಬಾಲಕಿ ಆತ್ಮಹತ್ಯೆ!

ಮಂಗಳೂರು: ಪ್ರೀತಿಯ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ದೈಹಿಕವಾಗಿ ದುರುಪಯೋಗಪಡಿಸಿಕೊಂಡು, ಆಕೆ ಗರ್ಭಿಣಿಯಾಗುತ್ತಿದ್ದಂತೆ ವಂಚಿಸಿದ ಆರೋಪದಡಿ ಗಂಜಿಮಠದ ಮನೀಶ್ ಪೂಜಾರಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದು, ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ವಿಷಯವನ್ನು ತಿಳಿಸಿದಾಗ ಆರೋಪಿ ಜವಾಬ್ದಾರಿ ನಿರಾಕರಿಸಿ ಆಕೆಯನ್ನು ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ತೀವ್ರ ಮನನೊಂದ ಬಾಲಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. …

Read More »

ಸುಪ್ರೀಂಕೋರ್ಟ್‌ ಹೆಸರಿನ ವೆಬ್‌ಸೈಟ್‌ ವಂಚನೆ ಪ್ರಕರಣ : 16 ರಾಜ್ಯಗಳ 80 ಸ್ಥಳಗಳಲ್ಲಿ ಸಿಬಿಐ ಶೋಧ

ನವದೆಹಲಿ: ಡಿಜಿಟಲ್ ಬಂಧನ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ದೇಶದ 16 ರಾಜ್ಯಗಳ 80 ಸ್ಥಳಗಳಲ್ಲಿ ಭಾರಿ ಶೋಧ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಚೆನ್ನೈನ ಬಿ. ನರೇಶ್ ಮತ್ತು ಕೋಲ್ಕತ್ತಾದ ಸಂಜಿಬ್ ಸಹಾ ಬಂಧಿತರು. ಬಂಧಿತರು ಶೆಲ್ ಕಂಪನಿಗಳು ಹಾಗೂ ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ಸುಮಾರು ₹2 ಕೋಟಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದರು ಎಂದು ಸಿಬಿಐ ತಿಳಿಸಿದೆ. ಈ ಖಾತೆಗಳನ್ನು ಡಿಜಿಟಲ್ ಬಂಧನ ಹೆಸರಿನಲ್ಲಿ …

Read More »

ಮೊಳೆಗಳ ಜೋಡಿಸಿದ 5 ಸಿಲಿಂಡರ್ ಬಾಂಬ್ ಸ್ಪೋಟಿಸುವುದಾಗಿ ಶಿವಮೊಗ್ಗ ಕೋರ್ಟ್ ಗೆ ಬೆದರಿಕೆ: ಎಫ್‌ಐಆರ್ ದಾಖಲು

ಶಿವಮೊಗ್ಗ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬುಧವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಂಗಳವಾರ ತಡರಾತ್ರಿ ನ್ಯಾಯಾಲಯದ ಅಧಿಕೃತ ಇ-ಮೇಲ್‌ಗೆ ಬಂದ ಸಂದೇಶದಲ್ಲಿ ಬಾಂಬ್ ಸ್ಫೋಟದ ಎಚ್ಚರಿಕೆ ನೀಡಲಾಗಿತ್ತು. ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ ನ್ಯಾಯಾಲಯದ ಕಟ್ಟಡ, ನ್ಯಾಯಾಂಗ ಕೊಠಡಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ತಪಾಸಣೆ ನಡೆಸಿದರು. ತಪಾಸಣೆ ವೇಳೆ ಯಾವುದೇ …

Read More »

ಬಂದೂಕು, ಮಾರಾಕಾಸ್ತ್ರ ಹಿಡಿದು ಸಂಚರಿಸಿ ಆತಂಕ ಸೃಷ್ಟಿಸಿದ್ದ ಮೂವರು ವಶಕ್ಕೆ

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಬಂದೂಕು ಹಾಗೂ ಮಾರಕಾಸ್ತ್ರಗಳೊಂದಿಗೆ ಸಂಚರಿಸಿ ಆತಂಕ ಸೃಷ್ಟಿಸಿದ್ದ ಮೂವರನ್ನು ಮಲ್ಲಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಏಳುನೂರು ಖಾನ್ ಕಾಫಿ ತೋಟದಲ್ಲಿ ಜೂನ್ 17, 21 ಮತ್ತು 22ರಂದು ಮಧ್ಯರಾತ್ರಿ ವೇಳೆ ಕೆಲವರು ಅಕ್ರಮವಾಗಿ ಪ್ರವೇಶಿಸಿ ಸಂಚರಿಸುತ್ತಿದ್ದರೆಂದು ತೋಟದ ಹಿರಿಯ ವ್ಯವಸ್ಥಾಪಕಿ ದಿವ್ಯ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಲ್ಲಂದೂರು ಸಮೀಪದ ತೋಟದಮಕ್ಕಿ ಗ್ರಾಮದ ಪುಟ್ಟಸ್ವಾಮಿ, ಗಿರೀಶ್ ಮತ್ತು ರಮೇಶ್ ಅವರನ್ನು …

Read More »

ವೈದ್ಯಕೀಯ ಜ್ಞಾನವೇ ಇಲ್ಲದ ವೈದ್ಯನ ಪತ್ನಿಯ ದರ್ಬಾರ್-‌ ಆಸ್ಪತ್ರೆಯಲ್ಲಿ ಗರ್ಭಿಣಿ, ಮಕ್ಕಳಿಗೆ ಚಿಕಿತ್ಸೆ!

ಬಾಗಲಕೋಟೆ ಜಿಲ್ಲೆಯ ಕಲಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯ ಬದಲಿಗೆ ಅವರ ಪತ್ನಿಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಪ ಕೇಳಿಬಂದಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ. ಎಚ್.ಪಿ. ಲೇಬಗೇರಿ ಅವರ ಪತ್ನಿ ಕಳೆದ ಕೆಲವು ದಿನಗಳಿಂದ ರೋಗಿಗಳನ್ನು ತಪಾಸಣೆ ಮಾಡಿ ಔಷಧ ವಿತರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವೈದ್ಯಕೀಯ ಅರ್ಹತೆ ಇಲ್ಲದ ವ್ಯಕ್ತಿಯಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಘಟನೆ ಕುರಿತು ದೂರುಗಳು ಬಂದಿರುವುದನ್ನು ತಾಲೂಕು …

Read More »

ಕೋಲಾರದಲ್ಲಿ ಅಕ್ರಮ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಸೆರೆ

ಕೋಲಾರ: ತಾಲ್ಲೂಕಿನ ಹೊದಲವಾಡಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಆರೋಪದ ಮೇಲೆ ಚಂದ್ರಪ್ರಕಾಶ್ (35) ಎಂಬುವರನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಆರೋಪಿಯ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಸುಮಾರು 5 ರಿಂದ 7 ಅಡಿ ಎತ್ತರದ 22 ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ಸಂಬಂಧ ಚಂದ್ರಪ್ರಕಾಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿ …

Read More »

ಕಾವೇರಿ ನದಿಯಲ್ಲಿ ಮುಳುಗಿದ ಐವರ ಮೃತದೇಹ ಪತ್ತೆ- ಕಣ್ಣೀರಿಟ್ಟು ಘಟನೆಯ ಭೀಕರತೆ ಬಿಚ್ಚಿಟ್ಟ ಪಾರಾದ ವ್ಯಕ್ತಿ

ಮಂಡ್ಯ ಜಿಲ್ಲೆಯ ಮುತ್ತತ್ತಿ ಬಳಿ ಕಾವೇರಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಒಂದೇ ಕುಟುಂಬದ ಐವರು ಸೇರಿದಂತೆ ಆರು ಮಂದಿಯ ಮೃತದೇಹಗಳು ಪತ್ತೆಯಾಗಿವೆ. ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕುಟುಂಬದ ಸದಸ್ಯರು ನದಿಯ ತಟದಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ವಿಜಯಮ್ಮ ನೀರಿನಲ್ಲಿ ಮುಳುಗಲು ಆರಂಭಿಸಿದಾಗ ಅವರನ್ನು ರಕ್ಷಿಸಲು ಶ್ವೇತಾ, ಚೈತ್ರಾ ಹಾಗೂ ಪ್ರಿಯಾಂಕಾ ಮುಂದಾಗಿದ್ದರು. ಬಳಿಕ ಅವರನ್ನು ಕಾಪಾಡಲು ನೀರಿಗೆ ಇಳಿದ ಕಾರು …

Read More »