Breaking News

Breaking News

ಯಡಿಯೂರಪ್ಪ ಮೊಮ್ಮಗಳು ವಿಧಿವಶ : ಬಿಎಸ್ ವೈ ಮನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಎಸ್ ವೈ ಮೌನವಾಗಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಭೇಟಿ‌ ನೀಡಿ ಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ.

Read More »

ರಾಜಧಾನಿಯಲ್ಲಿ ಸೋಮವಾರದಿಂದ ಶಾಲೆ ಪುನಾರಂಭ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಭೀತಿಯಿಂದ ಕ್ಲೋಸ್‌ ಆಗಿದ್ದ ತರಗತಿಗಳನ್ನ ಸೋಮವಾರದಿಂದ ಮತ್ತೆ ಪುನಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ. ಈ ಕುರಿತು ಬೆಂಗಳೂರನಲ್ಲಿ ಮಾತನಾಡಿದ ಸಚಿವರು, ‘ಸೋಮವಾರದಿಂದ ಎಲ್ಲ ತರಗತಿಗಳು ಆರಂಭಿಸಲಾಗುವುದು. ಕೋವಿಡ್‌ ನಿಯಮ ಪಾಲಿಸಿ ಶಾಲೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗುವುದು’ ಎಂದರು.

Read More »

ಪವರ್​ಸ್ಟಾರ್ ಅಗಲಿ 3 ತಿಂಗಳು : ಸಸಿ ನೆಟ್ಟ ಭಾವುಕರಾದ ರಾಘಣ್ಣ

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ ಮೂರು ತಿಂಗಳು ಕಳೆದಿದೆ. ಕಳೆದ ವರ್ಷ ಅಕ್ಟೋಬರ್ 29 ರಂದು ಹೃದಯಾಘಾತದಿಂದ ಪುನೀತ್​ ರಾಜ್​ ಕುಮಾರ್​ ಇಹಲೋಕ ತ್ಯಜಿಸಿದ್ದರು.  ಪುನೀತ್ ಸಮಾಧಿ ಬಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಸಮಾಧಿ ಬಳಿ ಪುನೀತ್ ರಾಜ್ ಕುಮಾರ್ ಅವರಿಗೆ ಇಷ್ಟವಾದ ತಿಂಡಿಗಳನಿಟ್ಟು ಕುಟುಂಬಸ್ಥರು ನಮನ ಸಲ್ಲಿಸಿದ್ದಾರೆ. ಪೂಜೆ ಬಳಿಕ ಅಶ್ವಿನಿ ಪುನೀತ್ ರಾಜ್ ಕುಮಾರ್, ಅಭಿಮಾನಿಗಳಿಗೆ ಬಾದಾಮಿ, ಸೀಬೆ, ಮಾವು, ತೇಗ, ಹಲಸಿನ …

Read More »

ವಾಹನದ ರಿಮೋಟ್ ಕದ್ದು ಪರಾರಿ : ಆರೋಪಿ ಬಂಧನ

ಹುಬ್ಬಳ್ಳಿ: ಸುಮಾರು 5 ಲಕ್ಷ ರೂ. ಮೌಲ್ಯದ ವಾಹನದ ರಿಮೋಟ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ನಗರದ ಕಸಬಾಪೇಟ ಪೊಲೀಸ ಠಾಣೆ ಬಂಧಿಸಿದ್ದಾರೆ. ಕಸಬಾ ಪೇಟ ಪೊಲೀಸರು ಜನವರಿ 21ರಂದು ವರದಿಯಾಗಿದ್ದ ಕಳ್ಳತನದ ಪ್ರಕರಣವನ್ನು ಬೇಧಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಸಿಕಾಟಿಯಾದಲ್ಲಿ ಇದ್ದ ಆರೋಪಿಯನ್ನು ಬಂಧಿಸಿ, ಆತನಿಂದ ಕಳ್ಳತನವಾದ 5 ಲಕ್ಷ ರೂ. ಕಿಮ್ಮತ್ತಿನ ವಾಹನದ ರಿಮೋಟ ಜಪ್ತಿ ಮಾಡಲಾಗಿದೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಿಜೆಪಿ ನಾಯಕರಿಗೆ ಸವಾಲಾದ ಮೊದಲ ಪ್ರಜೆ ಆಯ್ಕೆ

ಹುಬ್ಬಳ್ಳಿ: ಅದು ರಾಜ್ಯದಲ್ಲಿಯೇ ದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದಿದೆ, ಆದರೂ ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ‌ಮಾಡಿ ಮೇಯರ್, ಉಪಮೇಯರ್ ಆಯ್ಕೆ ಮಾಡುವಂತೆ ನಿರ್ದೇಶನ ‌ನೀಡಿದೆ. ಮೀಸಲಾತಿ ಘೋಷಣೆ ಆಗುತ್ತಿದಂತೆ ಆಕಾಂಕ್ಷಿಗಳೆ ದಂಡೆ ಹುಟ್ಟಿಕೊಂಡಿದೆ. ಇದರಿಂದ ಬಿಜೆಪಿಯ ನಾಯಕರಿಗೆ ಮೊದಲ ಪ್ರಜೆ ಆಯ್ಕೆ ದೊಡ್ಡ ತಲೆನೋವಾಗಿದೆ.. ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನ 21 ನೇ …

Read More »

ಕೃಷಿಮಿತ್ರ ನಡಕಟ್ಟಿ‌ನ ‌ಕೂರಿ ಸಂಶೋಧನೆಗೆ ವಲಿದ ಪದ್ಮಶ್ರೀ ಪ್ರಶಸ್ತಿ

ಹುಬ್ಬಳ್ಳಿ: ಆತ ಕಲಿತದ್ದು 10 ನೆಯ ತರಗತಿ.ಅದರಲ್ಲೂ ಆತ ಫೇಲ್ ಆಗಿದ್ದ. ಆದರೆ ಈತನಿಗೆ ಒಲಿದಿದ್ದು ಪದ್ಮಶ್ರೀ ಪ್ರಶಸ್ತಿ. ರೈತನಾಗಿ ವಿಶೇಷ ತಂತ್ರಜ್ಞಾನದ ಮೂಲಕವೇ ಹೊಸ ಹೊಸ ಆವಿಷ್ಕಾರ ಮಾಡಿದಕ್ಕೆ ಸದ್ಯ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಇದೀಗ ಪದ್ಮಶ್ರೀ ಪ್ರಶಸ್ತಿಗೆ ಪಾತ್ರವಾದ ನಡಕಟ್ಟಿ ಅವರ ಸಾಧನೆಗೆ ಸ್ಫೂರ್ತಿ ಸಮಾಜಕ್ಕೆ ರೈತ ಸಮುದಾಯಕ್ಕೆ ಏನಾದರು ಕೊಡಬೇಕು ಎಂಬ ಹಂಬಲ ಅಂದರೆ ನೀವು ನಂಬಲೇಬೇಕು. ಹೀಗೆ ತಾವೇ ಸಿದ್ದ ಮಾಡಿರುವ ಕೃಷಿ ಉಪಕರಣಗಳನ್ನು …

Read More »

ಹುಬ್ಬಳ್ಳಿ ಪ್ರೊಡಕ್ಷನ್ ಚೊಚ್ಚಲ ಸಿನಿಮಾ ಶೀರ್ಷಿಕೆ ಬಿಡುಗಡೆ

ಹುಬ್ಬಳ್ಳಿ: ಹುಬ್ಬಳ್ಳಿ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರದ ಶೀರ್ಷಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರಕ್ಕೆ ಬ್ಯಾಡ್ ಬ್ರೋ ಎಂಬ ಹೆಸರಿಟ್ಟಿದೆ. ಇನ್ನೂ ಇದು ಹುಬ್ಬಳ್ಳಿ ಪ್ರೊಡಕ್ಷನ್ ದ ಮೊದಲ ಚಿತ್ರವಾಗಿದ್ದು, ರಿಯಾಜ್ ಮೊಕಾಶಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕುರಿತು ನಿರ್ದೇಶಕ ರಿಯಾಜ್ ಮೊಕಾಶಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಯುವಕರೇ ಸೇರಿಕೊಂಡು ನಿರ್ಮಾಣ ಮಾಡಿರುವ ಬ್ಯಾಡ್ ಬ್ರೋ, ಅಣ್ಣ-ತಂಗಿಯ …

Read More »

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ

ಬೆಂಗಳೂರು : ಕೊರೋನಾ ವೈರಸ್‌ ಸೋಂಕಿಗೆ ಒಳಗಾಗುವ ಸರ್ಕಾರಿ ನೌಕರರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಅಥವಾ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಚುಚ್ಚುಮದ್ದು ನೀಡಲಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ತೀವ್ರತೆಯು ಪ್ರಸ್ತುತ ಇಳಿಮುಖವಾಗಿದ್ದು, ಇದಕ್ಕೆ ತುತ್ತಾದವರು ಚಿಕಿತ್ಸೆ ಪಡೆದು ಗುಣಮುಖರಾ ಗುತ್ತಿರುವ ಪ್ರಮಾಣದಲ್ಲಿಯೂ ಗಣನೀಯವಾಗಿಯೂ ಬದಲಾವಣೆ ಆಗಿರುವುದನ್ನು ಪರಿಗಣಿಸಿ ಕೋವಿಡ್ 19 ಸಂಬಂಧ ಮುಂಜಾಗ್ರತಾ ಕ್ರಮದ ಮಾರ್ಗಸೂಚಿಯನ್ನು …

Read More »

ಹೆತ್ತ ಕರುಳಿನ ಮೇಲಿನ ಕೋಪಕ್ಕೆ ರೇಷ್ಮೆಗೂಡಿಗೆ ವಿಷ ಹಾಕಿದ ಮಗಳುಓಒ

ಕೋಲಾರ:  ಸ್ವಂತ ಮಗಳೇ ಗಂಡ ಮತ್ತು ಮಗ ಜೊತೆಆಸ್ತಿ ನೀಡುತ್ತಿಲ್ಲ ಎಂಬ ಕಾರಣಕ್ಕೆ  ತಂದೆ-ತಾಯಿಗೆ ಸೇರಿದ ರೇಷ್ಮೆಗೂಡಿನ ಮನೆಯಲ್ಲಿದ್ದ ಹಿಪ್ಪುನೇರಳೆ ಸೊಪ್ಪಿಗೆ ವಿಷ ಹಾಕಿ ಹುಳುಗಳನ್ನು ಸಾಯಿಸಿರುವ ಅಮಾನವೀಯ ಘಟನೆ, ಕೋಲಾರ ತಾಲೂಕಿನ ಯಳಚೀಪುರದಲ್ಲಿ ನಡೆದಿದೆ. ಗ್ರಾಮದ ರಾಮಣ್ಣ ಮತ್ತು ಲಕ್ಷ್ಮಮ್ಮ ದಂಪತಿ ಜೀವನೋಪಾಯಕ್ಕಾಗಿ ರೇಷ್ಮೆ ಬೆಳೆಯುತ್ತಿದ್ದು ಮೊಟ್ಟೆ ಉತ್ಪಾದನೆಗಾಗಿ ಹುಳುಗಳಿಗೆ ಹಿಪ್ಪು ನೇರಳೆ ಸೊಪ್ಪು ನೀಡಿ ಆರೈಕೆ ಮಾಡುತ್ತಿದ್ದರು. ಜಮೀನು ನೀಡುತ್ತಿಲ್ಲವೆಂಬ ಹತಾಶೆಯಿಂದ ಮಗಳು ಚೌಡಮ್ಮ, ಅಳಿಯ ಲಕ್ಷ್ಮಣ್​ …

Read More »

ಶ್ಯಾವಿಗೆ ಪಾಯಸದಲ್ಲಿ ಹುಳು ಕಂಡು ಶಾಕ್ ಆದ ವಿದ್ಯಾರ್ಥಿಗಳು : ಸಿಎಂಗೆ ಮನವಿ

ಗದಗ: ನಗರದ ಬಾಲಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದಲ್ಲಿ ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳು ಶಾಕ್‌ ಆಗಿದ್ದಾರೆ.ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರಿಗೂ ಮನವಿ ಮಾಡಿಕೊಂಡಿದ್ದಾರೆ. ವಸತಿ ನಿಲಯದಲ್ಲಿ ಮಾಡಿದ ಪಾಯಸದ ತುಂಬೆಲ್ಲಾ ಹುಳುಗಳು ಕಾಣಿಸಿಕೊಂಡಿವೆ. ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶುಕ್ರವಾರ (ಜ.28) ರಾತ್ರಿ ಈ ಪಾಯಸ ಮಾಡಲಾಗಿತ್ತು. ಅದನ್ನು ನೋಡಿದ ವಿದ್ಯಾರ್ಥಿಗಳು ಅರೆಕ್ಷಣ ದಂಗಾಗಿದ್ದಾರೆ. ಏಕೆಂದರೆ …

Read More »