admin
January 28, 2022
Breaking News, ಬೆಂಗಳೂರು
ಬೆಂಗಳೂರು : ಯಡಿಯೂರಪ್ಪ ಅವರ ಪುತ್ರಿ ಪದ್ಮಾವತಿ ಅವರ ಮಗಳಾದ ಸೌಂದರ್ಯ(30) ವಸಂತ ನಗರದ ಫ್ಯಾಟ್ ನಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 9 ತಿಂಗಳ ಪುಟ್ಟ ಮಗು ಇದ್ದರೂ ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ ಈ ಘಟನೆ ಹಿನ್ನಲೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮೌನಕ್ಕೆ ಶರಣಾಗಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಕರೆ …
Read More »
admin
January 28, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ : ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ 62 ನೇ ಹುಟ್ಟುಹಬ್ಬದ ಅಂಗವಾಗಿ ಚೆನ್ನಮ್ಮದಲ್ಲಿ ಬೃಹತ್ ರಂಗೋಲಿ ಹಾಕುವ ಮೂಲಕ ಆಚರಣೆ ಮಾಡಲಾಯಿತು. ಹುಬ್ಬಳ್ಳಿಯ ಕಿತ್ತೂರ ವರ್ತುಲದಲ್ಲಿಂದು ಕಲಾವಿದ ದಿನೇಶ್ ಚಿಲ್ಲಾಳ ಬೃಹತ್ ರಂಗೋಲಿ ಚಿತ್ರ ಬಿಡಿಸುವ ಮೂಲಕ ವಿನೂತನವಾಗಿ ಬೊಮ್ಮಾಯಿ ಅವರ ನಾಯಕ ಕಿರಣ ಹುಟ್ಟುಹಬ್ಬವನ್ನು ಆಚರಿಸಲಾಯಿತು . ಯುವ ಉಪ್ಪಾರ ಹಾಗೂ ಬೊಮ್ಮಾಯಿ ಅಭಿಮಾನಿಗಳು ಉಪಸ್ಥಿತರಿದ್ದರು .
Read More »
admin
January 28, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ಸರಕಾರದ ನಿಯಮಾವಳಿಗಳ ಪ್ರಕಾರ ಪಿರಾಮಲ್ ಸ್ವಾಸ್ತ್ಯ ಕಂಪನಿ ಸಿಬ್ಬಂದಿಗಳಿಗೆ ಯಾವುದೇ ಸವಲತ್ತುಗಳನ್ನು ನೀಡದೇ ಅನ್ಯಾಯವೆಸಗುತ್ತಿದ್ದು ಕಂಪನಿ ವಿರುದ್ಧ ದೂರು ನೀಡಲು ಗುರುವಾರ 104 ಆರೋಗ್ಯ ವಾಣಿ ಸಿಬ್ಬಂದಿಗಳು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಗೃಹ ಕಚೇರಿಗೆ ತೆರಳಿ ದೂರು ಸಲ್ಲಿಸಿದರು. ಕಂಪನಿ ಬಾಕಿ ಉಳಿಸಿಕೊಂಡಿರುವ ಎರಡೂವರೆ ತಿಂಗಳ ವೇತನ, ಎರಡು ವರ್ಷಗಳ ವೇತನ ಬಡ್ತಿಯ ಮೊತ್ತ, ಗ್ರಾಚ್ಯುಟಿ ಗೆ ಸಂಬಂಧಿಸಿದ ಹಣ ಹಾಗೂ ಮುಷ್ಕರ ದಿನಗಳ ವೇತನವನ್ನು …
Read More »
admin
January 28, 2022
Breaking News, ಧಾರವಾಡ
ಧಾರವಾಡ: ಕೆರೆಯಲ್ಲಿ ಈಜಲೆಂದು ಹೋಗಿ ಈಜು ಬರದೇ ಮುಳುಗುತ್ತಿದ್ದ ಅಳಿಯನನ್ನು ರಕ್ಷಿಸಲು ಹೋಗಿ ಅಳಿಯನ ಸಮೇತ ಮಾವನೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಮುಗದ ಗ್ರಾಮದ ಕೆರೆಯಲ್ಲಿ ನಡೆದಿದೆ. ಅಳಿಯ ಕರೆಪ್ಪ ಎಂಬಾತ ಕೆರೆಯಲ್ಲಿ ಈಜಲು ಹೋಗಿದ್ದ. ಈತನಿಗೆ ಈಜು ಬರದೇ ಮುಳುಗುತ್ತಿದುದನ್ನು ಕಂಡು ಆತನ ರಕ್ಷಣೆಗೆ ಮಾವ ವಿಠ್ಠಲ ಕುರುಬರ ಧಾವಿಸಿದ್ದಾನೆ. ಆದರೆ, ಇಬ್ಬರಿಗೂ ಈಜು ಬರದೇ ಮುಳುಗಿ ಸಾವನ್ನಪ್ಪಿದ್ದಾರೆ. ಮುಗದ ಗ್ರಾಮದಲ್ಲಿ ಬೀರಲಿಂಗೇಶ್ವರ ಮೂರ್ತಿ ಸ್ಥಾಪನೆ …
Read More »
admin
January 28, 2022
Breaking News, ಹುಬ್ಬಳ್ಳಿ
ಹುಬ್ಬಳ್ಳಿ: ನರಗುಂದ ತಾಲೂಕಿನಲ್ಲಿ ನಡೆದ ಸಮೀರ್ ಶಹಾಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಹುತ್ವ ಕರ್ನಾಟಕ ಸಂಘಟನೆ ಕಾರ್ಯಕರ್ತ ಶಬ್ಬೀರ್ ಅಹ್ಮದ್ ಒತ್ತಾಯಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜ.16ರಂದು ಗಲಾಟೆ ಆದಾಗ ಸಂಜು ನಾಲವಾಡ ಎಂಬಾತನನ್ನು ಬಂಧಿಸಿದ್ದರೆ ಈ ಘಟನೆ ಆಗುತ್ತಿರಲಿಲ್ಲ. ಆದರೆ ಪೊಲೀಸರ ನಿರ್ಲಕ್ಷ್ಯದಿಂದ ಸಮೀರ ಹತ್ಯೆಯಾಗಿದೆ. ಕೊಲೆ ಬಳಿಕ ಯಾವ …
Read More »
BigTv News
January 28, 2022
Breaking News, ಬೆಂಗಳೂರು
ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪದ್ಮಾವತಿ ಅವರ ಮಗಳು ಸೌಂದರ್ಯ (30) ಅವರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಜಿ ಸಿಎಂ ಅವರ ಮೊಮ್ಮಗಳ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೌಂದರ್ಯ ಅವರು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Read More »
admin
January 28, 2022
Breaking News, ಗದಗ, ಜಿಲ್ಲೆ
ಗದಗ:ಪುರಾತನ ದೇವಸ್ಥಾನದ ಈಶ್ವರಲಿಂಗುವನ್ನೆ ಕಳ್ಳರು ಕದ್ದೊಯ್ದ ಘಟನೆ ಗಜೇಂದ್ರಗಡದ ಎಪಿಎಂಸಿ ಪುರಾತನ ದೇವಾಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ಕೀಲಿ ಒಡೆದು ಈಶ್ವರಪೀಠದ ಮೇಲೆ ಇದ್ದ ಈಶ್ವರಲಿಂಗುವನ್ನ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ನಿಧಿ ಆಸೆಗಾಗಿಯೇ ಈಶ್ವಲಿಂಗುವನ್ನ ಕದಿಯಲಾಗಿದೆ ಅಂತಲೇ ಶಂಕಿಸಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
Read More »
admin
January 28, 2022
Breaking News, ಜಿಲ್ಲೆ, ಮೈಸೂರು
ಮೈಸೂರು: ಚಿತ್ರೀಕರಣದ ಬ್ಯೂಸಿ ಕೆಲಸದ ಮಧ್ಯೆಯೂ ಶಿವಣ್ಣ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಬಾಡೂಟ ಬಡಿಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದ ಹಿನ್ನಲೆ ಶಕ್ತಿಧಾಮಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನ ದೊನ್ನೆ ಬಿರಿಯಾನಿ ಪ್ಯಾಲೇಸ್ ವತಿಯಿಂದ ಸಚಿನ್ ಗೌಡ ಎನ್ನುವವರು ಶಕ್ತಿಧಾಮದ ಮಕ್ಕಳಿಗೆ ಬಿರಿಯಾನಿ ಹಾಗೂ ಕಬಾಬ್ ಊಟ ಹಂಚಿದ್ದಾರೆ.
Read More »
admin
January 28, 2022
Breaking News, ಬೆಂಗಳೂರು
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಟ್ಟೆ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನಲೆ ರಾಮಚಂದ್ರ (75) ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಕಟ್ಟೆ ರಾಮಚಂದ್ರ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
Read More »
admin
January 28, 2022
Breaking News, ಕೋಲಾರ
ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿರುವ ಶ್ರೀ ಪಾದರಾಜ ಮಠದ ಹಿರಿಯ ಶ್ರೀಗಳಾದ ಶ್ರೀಶ್ರೀ ಕೇಶವನಿಧಿ ತೀರ್ಥರು ಅವರುಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಹಿನ್ನಲೆ ಇಂದು ಬೆಳಗ್ಗೆ ನಿಧನರಾದರು. ಈ ಹಿನ್ನಲೆಯಲ್ಲಿ ಕಳೆದ ಆರು ತಿಂಗಳ ಹಿಂದಷ್ಟೇ ಕಿರಿಯ ಶ್ರೀಗಳಾದ ಸುಜಯ ನಿಧಿ ತೀರ್ಥಸ್ವಾಮಿಗಳಿಗೆ ಅಧಿಕಾರ ವಹಿಸಿಕೊಡಲಾಗಿತ್ತು.ಬೆಂಗಳೂರಿನ ಚಾಮರಾಜಪೇಟೆಯ ಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆ ನಂತರ ಮುಳಬಾಗಿಲು ನರಸಿಂಹ ತೀರ್ಥದ ಶ್ರೀಪಾದರಾಜ ಮಠದಲ್ಲಿ ಅಂತಿಮ ದರ್ಶನಕ್ಕೆ …
Read More »