ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿರುವ ಶ್ರೀ ಪಾದರಾಜ ಮಠದ ಹಿರಿಯ ಶ್ರೀಗಳಾದ ಶ್ರೀಶ್ರೀ ಕೇಶವನಿಧಿ ತೀರ್ಥರು ಅವರು
ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಹಿನ್ನಲೆ ಇಂದು ಬೆಳಗ್ಗೆ ನಿಧನರಾದರು.
ಈ ಹಿನ್ನಲೆಯಲ್ಲಿ ಕಳೆದ ಆರು ತಿಂಗಳ ಹಿಂದಷ್ಟೇ ಕಿರಿಯ ಶ್ರೀಗಳಾದ ಸುಜಯ ನಿಧಿ ತೀರ್ಥಸ್ವಾಮಿಗಳಿಗೆ ಅಧಿಕಾರ ವಹಿಸಿಕೊಡಲಾಗಿತ್ತು.
ಬೆಂಗಳೂರಿನ ಚಾಮರಾಜಪೇಟೆಯ ಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆ ನಂತರ ಮುಳಬಾಗಿಲು ನರಸಿಂಹ ತೀರ್ಥದ ಶ್ರೀಪಾದರಾಜ ಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2 ಗಂಟೆಯ ನಂತರ ಬೃಂದಾವನ ಕಾರ್ಯ ನೆರವೇರಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

