Breaking News

Breaking News

ಅತಿಥಿ ಶಿಕ್ಷಕರಿಗೆ ಸಿಹಿಸುದ್ದಿ

ಬೆಂಗಳೂರು : ರಾಜ್ಯ ಸರ್ಕಾರವು ಅತಿಥಿ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಒಟ್ಟು 23,078 ಮಂದಿ ಅತಿಥಿ ಶಿಕ್ಷಕರಿಗೆ ಒಟ್ಟು 121.47 ಕೋಟಿ ರೂ. ಗೌರವಧನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Read More »

ವೃದ್ಧಾಪ್ಯದಲ್ಲಿ ಆಸರೆಯಾದ 65 ವರ್ಷದ ಮಹಿಳೆ : ಮೈಸೂರುಲ್ಲಿ ಅಪರೂಪದ ನಿಖಾ

ಮೈಸೂರು: ಪತ್ನಿಯನ್ನು ಕಳೆದುಕೊಂಡಿರುವ ಅಪ್ಪನಿಗೆ ವೃದ್ಧಾಪ್ಯದಲ್ಲಿ ಆಸರೆ ಬೇಕೆಂಬ ಕಾರಣಕ್ಕೆ ಮಕ್ಕಳು, ಮೊಮ್ಮಕ್ಕಳು ಸೇರಿ 85 ವರ್ಷದ ವೃದ್ಧನಿಗೆ65 ವರ್ಷದ ಮಹಿಳೆ ಮದುವೆ ಮಾಡಿಸಿದ್ದಾರೆ.ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿ, ಕುರಿ ವ್ಯಾಪಾರಿಯಾಗಿರುವ ಹಾಜಿ ಮುಸ್ತಫಾ ಅವರನ್ನು ಮೊಮ್ಮಕ್ಕಳು ಮುಂದೆ ನಿಂತು ಮದುವೆ ಮಾಡಿಸಿರುವ  ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ. ಮುಸ್ತಫಾಗೆ ಸದ್ಯ 9 ಜನ ಮಕ್ಕಳು. ಎಲ್ಲರಿಗೂ ಮದುವೆಯಾಗಿದ್ದು, ಮೊಮ್ಮಕ್ಕಳೂ ಇದ್ದಾರೆ. ಎಲ್ಲರೂ ಬೇರೆ ಬೇರೆ ಕೆಲಸದಲ್ಲಿ ಇರುವ ಕಾರಣ …

Read More »

ಕರ್ತವ್ಯ ನಿರತ ಅರಣ್ಯಾಧಿಕಾರಿ ನಿಧನ

ಶಿವಮೊಗ್ಗ: ಕರ್ತವ್ಯ ನಿರತ ಅರಣ್ಯಾಧಿಕಾರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದ ಬಳಿ ನಡೆದಿದೆ. ಶನಿವಾರ ಕರ್ತವ್ಯಕ್ಕೆಂದು ತೆರಳುವಾಗ ಬೈಕ್​​ನಿಂದ ಬಿದ್ದ ಲೋಕನಾಥ್​ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಸ್ಥಳೀಯರು ಅವರನ್ನು ಸಾಗರದ ಆಸ್ಪತ್ರೆಗೆ ದಾಖಲಿಸಿದ್ದರು. ಇವರ ನಿಧನಕ್ಕೆ ಅರಣ್ಯಾ ಇಲಾಖೆ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಎಸ್ ಎಂ ಕೃಷ್ಣಗೆ ನಾಚಿಗೆಯಾಗಬೇಕು : ಹಿರೇಮಠ ಆರೋಪ

ರಾಯಚೂರು : ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರ ಮಧ್ಯೆ ನಂಟಿದೆ. ಅತೀ ಭ್ರಷ್ಟ ವ್ಯಕ್ತಿ ಅಂದ್ರೆ ಅದು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು. ಪಾಪದ ಹಣದಿಂದ ಕೆಫೆ ಕಾಫಿ ಡೇ ಮಾಡಿದರು. ಅದೇ ಕಾಫಿ ಡೇ ಮಾಲೀಕನನ್ನು ಬಲಿ ಪಡಿಯಿತು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಎಸ್ ಎಂ ಕೃಷ್ಣ ಇಡೀ ಜೀವನವನ್ನು ಕಾಂಗ್ರೆಸ್​ನಲ್ಲಿ ಕಳೆದ್ರು. ಈಗ ಅಕ್ರಮ …

Read More »

ಸೋಮಶೇಖರ್‌ ವಿರುದ್ಧ ಹರಿಹಾಯ್ದ ಮಂಜುನಾಥ್‌

ಮೈಸೂರು: ‘ಸಚಿವ ಎಸ್.ಟಿ.ಸೋಮಶೇಖರ್‌ ಅವರು ಕೇವಲ ಬಾವುಟ ಹಾರಿಸಲು ಮೈಸೂರು ಜಿಲ್ಲೆಗೆ ಬಂದು ಹೋಗುವ ಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅನುದಾನ ಬಿಡುಗಡೆ ಮಾಡಿ, ಶಂಕುಸ್ಥಾಪನೆ ನೆರವೇರಿಸಿದ್ದ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ’ ಎಂದು ಹುಣಸೂರು ಶಾಸಕ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಹರಿಹಾಯ್ದರು. ‘ಸಚಿವರು ಜಿಲ್ಲೆಗೆ ಇದುವರೆಗೆ ಯಾವುದೇ ಕೊಡುಗೆ ನೀಡಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಗೆ ₹ 22,365 ಕೋಟಿ ವಿಶೇಷ ಅನುದಾನ ನೀಡಿ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಮೈಸೂರು ಮಹಾನಗರಕ್ಕೇ ₹ 3,800 ಕೋಟಿ ನೀಡಿದ್ದಾರೆ. …

Read More »

ರಾಯಚೂರು ಜಿಲ್ಲೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ

ರಾಯಚೂರು: ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಜಿಲ್ಲೆ ಈಗ ಪೌಷ್ಟಿಕ ವಿಚಾರದಲ್ಲಿ ಪ್ರಗತಿ ಸಾಧಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು ಶೇ70 ಪ್ರತಿಶತದಷ್ಟು ಇದ್ದ ಪೌಷ್ಟಿಕತೆ ಈಗ ಶೇ 97 ಪ್ರತಿಶತದಷ್ಟಾಗಿದೆ. ಇದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿ ಹಾಗೇ ಹಾಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್‌ರನ್ನೂ ಪ್ರಧಾನಿ ಶ್ಲಾಘಿಸಿದರು.

Read More »

ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ಶಾಸಕ

ಧಾರವಾಡ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಇಲ್ಲಿನ ಧಾರವಾಡ ಹೋಟೆಲ್ ಬಳಿಯಿಂದ ಮಂದಾರ ಹೋಟೆಲ್ ವರೆಗೆ ₹25ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲು ಬೆಲ್ಲದ ಅವರು ಶುಕ್ರವಾರ ರಾತ್ರಿ 8ಕ್ಕೆ ಬರಬೇಕಿತ್ತು.ಆದರೆ ಅವರು ಬರುವ ಹೊತ್ತಿಗೆ 10 ಆಗಿತ್ತು.ಆ ಹೊತ್ತಿನಲ್ಲಿಯೇ ಶಾಸಕ ಅರವಿಂದ ಬೆಲ್ಲದ ಅವರು ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೆದರೆ, ಸುಕಂನರಾಜ …

Read More »

ಹೈಕೋರ್ಟ್ ನಿ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ವಿಧಿವಶ

ಬೆಂಗಳೂರು: ತಡರಾತ್ರಿ ಹೃದಯಾಘಾತದಿಂದ ಹೈಕೋರ್ಟ್ ನಿ. ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ವಿಧಿವಶರಾಗಿದ್ದಾರೆ. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನ್ಯಾ. ಮಂಜುನಾಥ್ ನಿಧನರಾಗಿದ್ದು, ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

Read More »

ಪ್ರಕಾಶ್ ಟ್ರಾವೆಲ್ಸ್​ಬಸ್ ನ ಮಾಲೀಕರಾದ ಪ್ರಕಾಶ್ ಕಾಣೆ : ಕಾರು ಸೇತುವೆ ಬಳಿ ಪತ್ತೆ

ಶಿವಮೊಗ್ಗ: ಪ್ರಕಾಶ್ ಟ್ರಾವೆಲ್ಸ್​ಬಸ್ ನ ಮಾಲೀಕರಾದ ಪ್ರಕಾಶ್ ಎಂಬುವರು ಕಾಣೆಯಾಗಿದ್ದು, ಅವರ ಕಾರು ಹಾಗೂ ಮೊಬೈಲ್ ಹೊಸನಗರದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿದೆ. ಸಾಗರ ನಿವಾಸಿಯಾಗಿರುವ ಪ್ರಕಾಶ್, ಮೊನ್ನೆ ಸಂಜೆ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಮನೆಗೆ ವಾಪಸ್ ಆಗಿರಲಿಲ್ಲ. ಮೊಬೈಲ್ ಮಾತ್ರ ರಿಂಗ್ ಆಗ್ತಾ ಇತ್ತು.‌ ಇನ್ನು ಕಾರು ಬೆಳಗ್ಗೆಯಿಂದ ಪಟಗುಪ್ಪೆ ಸೇತುವೆ ಮೇಲೆ‌ ನಿಂತಿದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ …

Read More »

ಈ ಸಲ ಕೊರೋನಾ ಪಾಸ್ ಇಲ್ಲ, ಕಡ್ಡಾಯವಾಗಿ SSLC ಪರೀಕ್ಷೆ ಬರೆಯಬೇಕು

ಬೆಂಗಳೂರು : ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಮಾಹಿತಿ ನೀಡಿದ್ದು, ಕಳೆದ ವರ್ಷದಂತೆ ಈ ವರ್ಷ ಕೊರೋನಾ ಪಾಸ್ ಇರುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಹಿನ್ನೆಲೆಯಲ್ಲಿ 2020-21 ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ವಿದ್ಯಾರ್ಥಿಗಳು ಮತ್ತು ಶಾಲೆಗಳು ತೀವ್ರವಾದ ಕೋವಿಡ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಕಳೆದ ವರ್ಷ …

Read More »