Breaking News

Breaking News

ಶೂಟಿಂಗ್ ವೇಳೆ ನಟಿ ಉಮಾಶ್ರಿಗೆ ಗಾಯ

ಬೆಂಗಳೂರು: ನಟಿ ಉಮಾಶ್ರಿಗೆ  ಅವರುಪುಟ್ಟಕ್ಕನ ಮಕ್ಕಳು ಧಾರವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಬಿಸಿ ನೀರು ಕಾಲಿಗೆ ಬಿದ್ದಿದ್ದರಿಂದಬೆಂಗಳೂರಿನ ತಲಘಟ್ಟಪುರದ ಶಂಕರ್ ಸ್ಟೆಷ್ಟಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶೂಟಿಂಗ್ ವೇಳೆ ಕಾಲಿಗೆ ಗಾಯವಾದ ಘಟನೆ ನಡೆದಿದೆ.  ಹೀಗಾಗಿ ಗಾಯಕ್ಕೆ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಪಾದಯಾತ್ರೆಯಲ್ಲಿ ಉಮಾಶ್ರೀ ಭಾಗಿಯಾಗಿದ್ದು, ಸದ್ಯ ಕಾಲಿಗೆ ಗಾಯವಾದ ಕಾರಣ ಪಾದಯಾತ್ರೆಗೂ ಸಹ ಗೈರಾಗಿದ್ದಾರೆ.

Read More »

ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚನೆ

ಬೆಂಗಳೂರು : ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತು ರಾಜ್ಯ ಸರ್ಕಾರದ ಕಾರ್ಯದರ್ಶಿ ಸಿ.ಎಸ್ ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ. ಪಾದಯಾತ್ರೆಯ ವಾಹನ ಸಂಚಾರ,ಜನಸಂಚಾರ ನಿಷೇಧಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಉಲ್ಲಂಘಿಸಿ ಪಾದಯಾತ್ರೆ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

Read More »

ಒಂದು ವೇಳೆ ಚೀನ ಜತೆಗೆ ಯುದ್ಧ ನಡೆದರೆ ಗೆಲ್ಲುವುದು ನಾವೇ

ನವದೆಹಲಿ: “ಒಂದು ವೇಳೆ ಚೀನ ಜತೆಗೆ ಯುದ್ಧ ನಡೆದರೆ ಗೆಲ್ಲುವುದು ನಾವೇ’. ಗಡಿ ಪ್ರದೇಶದಿಂದ ಸೇನೆಯನ್ನು ಆಂಶಿಕವಾಗಿ ವಾಪಸ್‌ ಪಡೆಯಲಾಗಿದ್ದರೂ, ಆ ದೇಶದಿಂದ ಎದುರಾಗಲಿರುವ ಭೀತಿ ಏನೇನೂ ಕಡಿಮೆಯಾಗಿಲ್ಲಎಂದು  ಭೂಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಹೇಳಿದರು. ಬುಧವಾರ ಮಾತನಾಡಿದ ಅವರು, ಯುದ್ಧ ಎನ್ನುವುದು ಕೊನೆಯ ಆಯ್ಕೆಯಾಗಿರಲಿದೆ ಎಂದೂ ಹೇಳಿದ್ದಾರೆ.  ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಎದುರಾಗಿರುವ ಸ್ಥಿತಿಯನ್ನು ಸಮರ್ಥವಾಗಿ ಎದುರಿಸಲಾಗುತ್ತದೆ. “ಅತ್ಯಂತ ಗರಿಷ್ಠ ಪ್ರಮಾಣದ ಎಚ್ಚರಿಕೆಯನ್ನು ಸೇನೆ ಕಾಪಾಡಿಕೊಂಡು ಬರುತ್ತಿದೆ. ಇದರ ಜತೆಗೆ …

Read More »

ಬೆಂಗಳೂರುನಲ್ಲಿ 15,617 ಕೋವಿಡ್ ದೃಢ

ಬೆಂಗಳೂರು:  ನಗರದಲ್ಲಿ  15,617 ಸೇರಿದಂತೆ ರಾಜ್ಯಾಧ್ಯಂತ 21,390 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ರಾಜ್ಯದಲ್ಲಿ ಮತ್ತೆ ಇಂದು ಕೊರೋನಾ  ಮಹಾಸ್ಪೋಟವೇ ಉಂಟಾಗಿದೆ. ಈ ಕುರಿತಂತೆ ಟ್ವಿಟ್ಟರ್ ನಲ್ಲಿಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 1,95,047 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.ಇವರಲ್ಲಿ ಬೆಂಗಳೂರಿನಲ್ಲಿ 15,617 ಸೇರಿದಂತೆ ರಾಜ್ಯದಲ್ಲಿ 21,390 ಜನರಿಗೆ ಕೋವಿಡ್ ದೃಢಪಟ್ಟಿರೋದಾಗಿ ತಿಳಿಸಿದೆ.

Read More »

ಶಿವಮೊಗ್ಗದ ಜಿಲ್ಲಾಧಿಕಾರಿ ವರ್ಗಾವಣೆ

ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ಸ್ಫೋಟದ ನಡುವೆ ಎಲ್ಲರೂ ಬೇಸುತ್ತು ಹೋಗಿದ್ದಾರೆ.  ಅದರ ನಡುವೆ ಶಿವಮೊಗ್ಗ ಜನತೆಗೆ ಮತ್ತೊಂದು ವಿಷಯ ಅಘಾತಕಾರಿಯಾಗಿ ಸಂಭವಿಸಿದೆ.  ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್​ ಅವರನ್ನು ವರ್ಗಾವಣೆ ಮಾಡಿ ರಾಜ್ಯಸರ್ಕಾರ‌ ಆದೇಶ ಹೊರಡಿಸಿದೆ. ಶಿವಮೊಗ್ಗದ ನೂತನ ಜಿಲ್ಲಾಧಿಕಾರಿಯಾಗಿ ಡಾ.ಸೆಲ್ವಮಣಿ ಆರ್ ಅವರನ್ನು ನೇಮಕ ಮಾಡಲಾಗಿದೆ.

Read More »

ಓಮಿಕ್ರಾನ್ ಸಾಮಾನ್ಯ ಶೀತವಲ್ಲ

ನವದೆಹಲಿ : ‘ಓಮಿಕ್ರಾನ್ ಸಾಮಾನ್ಯ ಶೀತವಲ್ಲ, ಅದನ್ನ ನಿಧಾನಗೊಳಿಸುವುದು ನಮ್ಮ ಜವಾಬ್ದಾರಿ. ನಾವು ಮಾಸ್ಕ್ ಧರಿಸಿ ಲಸಿಕೆ ಹಾಕಿಸಕೊಳ್ಳಿ. ಲಸಿಕೆಗಳು ಒಂದು ಮಟ್ಟಿಗೆ ಸಹಾಯಕವಾಗಿವೆ ಎಂಬುದು ವಾಸ್ತವ.ಒಮಿಕ್ರಾನ್ ಕೋವಿಡ್ ರೂಪಾಂತರವು ಸಾಮಾನ್ಯ ಶೀತವಲ್ಲ ಮತ್ತು ಅದನ್ನ ಲಘುವಾಗಿ ಪರಿಗಣಿಸಬಾರದು ಎಂದು ಕೇಂದ್ರ ಹೇಳಿದೆ. ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಅವರು, ಲಸಿಕೆ ಪಡೆಯುವುದು ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಮುಖ್ಯ …

Read More »

ಕಲಬುರಗಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗೆ ಕೋವಿಡ್ ದೃಢ

ಕಲಬುರಗಿ: ದಿನೇ ದಿನೇ ಮಹಾಮಾರಿ ತನ್ನ ಅಟ್ಟಹಾಸ ವನ್ನು ಮುಂದುವರೆಸುತ್ತೇಲೆ ಇದೆ. ಈಗಾಗಲೇ ವಿಕೆಂಡ್ ಲಾಕ್ ಕೂಡಾ ಮಾಡಲಾಗಿದ್ದು,  ಯಾವುದೇ ಇಳಿಕೆ ಕ್ರಮ ಕಾಣುತ್ತೀಲ್ಲಾ. ಅಷ್ಟೇ ಅಲ್ಲದೇ ನಗರದ.  ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್ ತಗುಲಿದೆ. ಕೆಮ್ಮು, ಶೀತ, ಜ್ವರದಿಂದ ಬಳಲುತ್ತಿದ್ದ ಈ ಬಾಲಕನನ್ನು ಆತನ ಪಾಲಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದಾಗ ಕೋವಿಡ್ ದೃಢಪಟ್ಟಿದೆ.ಈ ಶಾಲೆಯ ಇನ್ನೂ ಕೆಲ ಮಕ್ಕಳು ಶೀತದಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More »

ಕೊರೋನಾ ಏರಿಕೆ : ಶಾಲೆ ಬಂದ್ ಮಾಡಲು ಜಿಲ್ಲಾಧಿಕಾರಿಗಳ ನಿರ್ಧಾರ

: ಬೆಂಗಳೂರು: ಬೆಳಗಾವಿ ಮತ್ತು ಮೈಸೂರಿನಲ್ಲಿ ಶಾಲೆಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿನ ಶಾಲೆಗಳು, ವಸತಿ ಶಾಲೆಗಳು, ಹಾಸ್ಟೆಲ್ ಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ತೀವ್ರ ಏರಿಕೆ ಕಾಣುತ್ತಿದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.   1 ರಿಂದ 9ನೇ ತರಗತಿ ಬಂದ್ ಆಗಿರುವುದರಿಂದ ಮಕ್ಕಳಿಗೆ ಕಲಿಕೆ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಚಂದನವಾಹಿನಿಯಲ್ಲಿ ನಾಳೆಯಿಂದ ವಿಡಿಯೋ ಪಾಠ ಪ್ರಸಾರ ಮಾಡಲಾಗುತ್ತದೆ.

Read More »

ಸಂಕ್ರಾಂತಿ ಹಬ್ಬಕ್ಕೆ ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ

ಬೆಂಗಳೂರು: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಮುಂದಾಗಿರುವ ಸರ್ಕಾರ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಲಿದೆ ಎಂದು  ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯದ 4 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಒಂದೆರಡು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಡಬೇಕು. ಸಂಕ್ರಾಂತಿ ಹಬ್ಬಕ್ಕೆ ಸಿಹಿ ಸುದ್ದಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Read More »

ಮೇಕೆದಾಟು ಪಾದಯಾತ್ರೆ : ಕೆಪಿಸಿಸಿಯನ್ನ ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಕೋವಿಡ್ ಹೆಚ್ಚುತ್ತಿರುವ ವೇಳೆಯಲ್ಲಿ ಪಾದಯಾತ್ರೆ ನಡೆಸುತ್ತಿದ್ದೀರಾ, ಪಾದಯಾತ್ರೆಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ ಎಂದು ಕೆಪಿಸಿಸಿ ನಾಯಕರನ್ನ ಪ್ರಶ್ನಿಸಿರುವ ವಿಭಾಗೀಯ ಪೀಠ, ಈ ಬಗ್ಗೆ ಉತ್ತರಿಸಲು ನಾಳೆವರೆಗೆ ಕಾಲಾವಕಾಶ ನೀಡಿದೆ. ಮೇಕೆದಾಟು ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಿಸಿದ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠ ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿಯನ್ನ ತರಾಟೆಗೆ ತೆಗೆದುಕೊಂಡಿದೆ. ಪಿಐಎಲ್ ವಿಚಾರಣೆ ವೇಳೆ ಪಾದಯಾತ್ರೆ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆ ಚರ್ಚೆ ನಡೆಸಿದ್ದು. …

Read More »