Breaking News

Breaking News

ಮೋದಿಯವರಿಗೆ ದೇವರು ದೀರ್ಘಾಯುಷ್ಯ ನೀಡಲು ಎಂದು ಮೃತ್ಯಂಜಯ ಮಂತ್ರ ಪಠಣ

ಧಾರವಾಡ : ನಗರದ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಧಾರವಾಡ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮಹಾ ಮೃತ್ಯಂಜಯ ಮಂತ್ರ ಪಠಣ ಕಾರ್ಯಕ್ರಮ ನಡೆಯಿತು. ಪ್ರಧಾನ ಮಂತ್ರಿ ಗಳಾದ ನರೇಂದ್ರ ಮೋದಿ ಯವರ ದೀರ್ಘಾಯುಷ್ಯಕ್ಕಾಗಿ ಈ ಪಠಣ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಎಲ್ಲ ಬಿಜೆಪಿ ಕಾರ್ಯಕರ್ತರು ಭಾಗವಹಿಸಿ ಮಹಾ ಮೃತ್ಯುಂಜಯ ಮಂತ್ರ ಪಠಣ ಮಾಡಿ ನರೇಂದ್ರ ಮೋದಿ ಯವರಿಗೆ ದೇವರು ದೀರ್ಘಾಯುಷ್ಯ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

Read More »

ಭಾರಿ ಕಲೆಕ್ಷನ್ ಮಾಡಿದ ‘ಬಡವ ರಾಸ್ಕಲ್​

ಡಾಲಿ ಧನಂಜಯ​ ಅವರು ಮೊದಲ ನಿರ್ಮಾಣದಲ್ಲೇ ಯಶಸ್ಸು ಪಡೆದಿದ್ದಾರೆ. ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.ಧನಂಜಯಗೆ ಸಿಕ್ಕ ಈ ಗೆಲುವು ಅವರ ವೃತ್ತಿ ಜೀವನದ ದೃಷ್ಟಿಯಿಂದ ಬಹಳ ಮಹತ್ವ ಪಡೆದುಕೊಂಡಿದೆ. ಈ ಚಿತ್ರ ಒಟ್ಟೂ ಮಾಡಿದ ಗಳಿಕೆ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ‘ಬಡವ ರಾಸ್ಕಲ್​’ 15 ಕೋಟಿ ಕಲೆಕ್ಷನ್​ ಮಾಡಿದೆ ಎನ್ನುವ ಸುದ್ದಿ ಗಾಂಧಿ ನಗರದ ಅಂಗಳದಲ್ಲಿ ಹರಿದಾಡಿತ್ತು. ಹಾಸನ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ …

Read More »

ನೈಟ್ ಕರ್ಫ್ಯೂ ಇಲ್ಲ ಸುಡುಗಾಡು ಇಲ್ಲ : ಈಶ್ವರಪ್ಪ

ಬೆಂಗಳೂರು : ಶಿವಮೊಗ್ಗದಲ್ಲಿ ನಾನು 3 ದಿನ ಇದ್ದೆ, ಅಲ್ಲಿ ನೈಟ್ ಕರ್ಫ್ಯೂ ಇಲ್ಲ ಸುಡುಗಾಡು ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿ ಸರಕಾರವನ್ನು ಮತ್ತೆ ಮುಜುಗರಕ್ಕೆ ಸಿಲುಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಒಂದೇ ರೀತಿ ನಿಯಮ ಇಲ್ಲ.ಶಿವಮೊಗ್ಗ ದಲ್ಲಿ ನಾನು 3 ದಿನ ಇದ್ದೆ ಅಲ್ಲಿ ನೈಟ್ ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ ಎಂದರು. ರಾಜ್ಯವ್ಯಾಪಿ ರಾತ್ರಿ ಕರ್ಫ್ಯೂ ಗೆ ವಿರೋಧ ವ್ಯಕ್ತಪಡಿಸಿದ್ದ ಈಶ್ವರಪ್ಪ ಬೆಂಗಳೂರಿನಲ್ಲಿ ನಿಯಮ …

Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೇಲೆ ಕೊರೋನಾ ಕರಿಛಾಯೆ

ಮಂಗಳೂರು; ಕರ್ನಾಟಕದಲ್ಲಿ ಜನಸಂದಣಿ ಸೇರುವನ್ನು ತಡೆಯಲು ಅನೇಕ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹೊಸ ಕೋವಿಡ್ ಪ್ರಕರಣ ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದರಿಂದಾಗಿ ಈ ನಿಯಮಗಳ ಪ್ರಭಾವ ದೇವಾಲಯಗಳ ಮೇಲೂ ಬಿದ್ದಿದೆ. ದೇವಸ್ಥಾನಗಳಲ್ಲೂ ಕೇವಲ ದರ್ಶನ ಮಾತ್ರ ಎಂಬ ನಿಯಮ ತಂದಿದೆ. ಈ ಹಿನ್ನಲೆಯಲ್ಲಿ  ಜಿಲ್ಲೆಯ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ಜನವರಿ 16ರವರೆಗೆ ಕೇವಲ‌ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಗ್ಗೆ ದೇವಸ್ಥಾನದ‌ …

Read More »

ಸಿದ್ದರಾಮಯ್ಯ ವಿರುದ್ಧ ಪಿ.ರಾಜೀವ್ ಕಿಡಿ

ಬೆಂಗಳೂರು: ಸಿದ್ದರಾಮಯ್ಯನವರು ರಾಷ್ಟ್ರ ಹಾಗೂ ರಾಜ್ಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಗಾಂಧಿ ಮನೆತನವನ್ನು, ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನು ಹೊಗಳುವುದಷ್ಟೇ ತಿಳಿದುಕೊಂಡಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಅವರಿಗೆ ಬುದ್ದಿ ಇಲ್ಲ ಅಂದಿದ್ದಾರೆ. ಆದರೆ ಇವರ ಬಳಿ ಇರುವುದು ಯಾವ ಬುದ್ದಿ? ಒಳ್ಳೆಯ ಬುದ್ದಿ ಕೆಟ್ಟ ಬುದ್ದಿ ಎರಡಿರುತ್ತದೆ. ಸಿದ್ಧರಾಮಯ್ಯ ಹತ್ತಿರ ಯಾವ ಬುದ್ದಿ ಇದೆ? ಬಿಜೆಪಿಯವರಿಗೆ …

Read More »

ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್

ಬೆಳಗಾವಿ : ಮಹಾರಾಷ್ಟ್ರದಲ್ಲಿ ಪೊಲೀಸರು ಪ್ರತಿ ವಾಹನವನ್ನೂ ತಪಾಸಣೆಗೆ ಒಳಪಡಿಸಿದ ನಂತರವೇ ರಾಜ್ಯ ಪ್ರವೇಶಿಸಲು ಅನುವು ಮಾಡಿಕೊಡುತ್ತಿದ್ದಾರೆ.ಕೋವಿಡ್ ಪ್ರಕರಣಗಳು ಹೆಚ್ಚಳಗೊಂಡಿದ್ದು ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಇದೆ. ಬೆಳಗಾವಿ ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ, ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಚೆಕ್​ಪೋಸ್ಟ್​ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.

Read More »

ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್

ಬೆಳಗಾವಿ : ಮಹಾರಾಷ್ಟ್ರದಲ್ಲಿ ಪೊಲೀಸರು ಪ್ರತಿ ವಾಹನವನ್ನೂ ತಪಾಸಣೆಗೆ ಒಳಪಡಿಸಿದ ನಂತರವೇ ರಾಜ್ಯ ಪ್ರವೇಶಿಸಲು ಅನುವು ಮಾಡಿಕೊಡುತ್ತಿದ್ದಾರೆ.ಕೋವಿಡ್ ಪ್ರಕರಣಗಳು ಹೆಚ್ಚಳಗೊಂಡಿದ್ದು ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಇದೆ. ಬೆಳಗಾವಿ ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ, ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಚೆಕ್​ಪೋಸ್ಟ್​ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.

Read More »

ಭದ್ರತೆಯ ಲೋಪ : ಎಡಿಜಿಪಿ ಪತ್ರದಿಂದ ಮಾಹಿತಿ ಬಹಿರಂಗ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಲೋಪವು ಗುಪ್ತಚರ ವೈಫಲ್ಯ ಅಥವಾ ದೊಡ್ಡ ಪಿತೂರಿಯ ಭಾಗವಾಗಿದೆ. ಈ ಕುರಿತು ಹಲವು ಪ್ರಶ್ನೆಗಳಿದ್ದು, ಉತ್ತರಗಳನ್ನು ಹುಡುಕಲಾಗುತ್ತಿದೆ. ಪಂಜಾಬ್‌ನ ಎಡಿಜಿಪಿಯ ಪತ್ರದಿಂದ ದೊಡ್ಡ ಮಾಹಿತಿ ಬಹಿರಂಗವಾಗಿದೆ ಮತ್ತು ಪಂಜಾಬ್ ಸರ್ಕಾರದ ವೈಫಲ್ಯ ಬಹಿರಂಗವಾಗಿವೆ. ಎಡಿಜಿಪಿ(Punjab ADGP)ಯವರ ಪತ್ರದ ಪ್ರಕಾರ ಪಂಜಾಬ್ ಸರ್ಕಾರಕ್ಕೆ ರೈತರ ಸಾಧನೆ ಮೊದಲೇ ತಿಳಿದಿತ್ತು. 5ರಂದು ಮಳೆಯಾಗುವ ಮುನ್ಸೂಚನೆಯೊಂದಿಗೆ ರೈತರ ಧರಣಿ ಸತ್ಯಾಗ್ರಹವಿದ್ದು, ವಿಶೇಷ ಭದ್ರತಾ ವ್ಯವಸ್ಥೆ ಮಾಡಬೇಕು …

Read More »

ಕ್ಯಾಬಿನೆಟ್​ ಸಭೆಯಲ್ಲಿ ಹತ್ತಾರು ಮಹತ್ತರ ನಿರ್ಧಾರ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕ್ಯಾಬಿನೆಟ್​ ಸಭೆಯಲ್ಲಿ ಹತ್ತಾರು ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲ ಕಡೆ ಕೋವಿಡ್​ ಪ್ರೋಟೋಕಾಲ್​ ಬೇಕಾ? ಅಂತ ಸಚಿವರು ಕೇಳಿದ್ದಾರೆ. ಹೀಗಾಗಿ ನಾಲ್ಕೈದು ದಿನ ಬಿಟ್ಟು ತಜ್ಞರ ಜತೆ ಚರ್ಚಿಸಿ ಇತರ ನಗರಗಳಿಗೆ ರಿಲೀಫ್​ ಮಾಡಲು ನಿರ್ಧರಿಸಲಾಗಿದೆ. ಆಯುಷ್ ಶುಶ್ರೂಷಕರ 80 ಹುದ್ದೆಗೆ ನೇರ ನೇಮಕ. ಗುತ್ತಿಗೆ ನೌಕರರಿಗೆ ವರ್ಷಕ್ಕೆ ಎರಡು ಕೃಪಾಂಕ ಕೊಡಲು ನಿರ್ಧಾರ. ಅಂಬರೀಷ್ ಸ್ಮಾರಕ‌ ನಿರ್ಮಿಸಲು 12 …

Read More »

ಊರಿಗೆ ಹೊರಟ ಸಿಲಕಾನ್ ಸಿಟಿ ಜನ

ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಒಮಿಕ್ರಾನ್ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ಏರುತ್ತಲೇರಿವುದು ಜನರ ನಿದ್ದೆಗೆಡಸಿದೆ. ಸಿಲಕಾನ್ ಸಿಟಿ ಜನ ಭಯ ಬೀತರಾಗಿ ಊರು ಬಿಡುತ್ತಿದ್ದಾರೆ. ಈಗ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಆದರೆ ಮುಂದೆ ಲಾಕ್ ಡೌನ್ ಜಾರಿ ಮಾಡಿದರೆ ಹೇಗೆ ಬದುಕುವುದು ಎಂದು ರಾತ್ರೊ ರಾತ್ರಿ ತಮ್ಮ ಊರುಗಳತ್ತ ಗುಳೆ ಹೊರಟಿದ್ದಾರೆ. ಈಗಾಗಲೇ ರಾಜ್ಯ ಸರಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ, ಮುಂದೆ ಲಾಕ್ ಡೌನ್ ಮಾಡಿದರು …

Read More »