Breaking News

Breaking News

ಅಕ್ರಮ ಸಾಗಣೆ: ಎರಡು ಲಾರಿ ಸಹಿತ 500 ಕ್ವಿಂಟಲ್ ಅಕ್ಕಿ ಜಪ್ತಿ

ಕಾರವಾರ: 2 ಕಂಟೇನರ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 500 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿರುವ ಘಟನೆ ಹೊನ್ನಾವರದ ಆರೊಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ. ಅಕ್ರಮ ಸಾಗಣೆ: ಎರಡು ಲಾರಿ ಸಹಿತ 500 ಕ್ವಿಂಟಲ್ ಅಕ್ಕಿ ಜಪ್ತಿ ಹಾವೇರಿ ಜಿಲ್ಲೆಯ ಅಕ್ಕಿಆಲೂರು ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ, ತಪಾಸಣೆ ನಡೆಸಿ 500 ಕ್ವೀಂಟಲ್ ಅಕ್ಕಿ, ವಾಹನ ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. …

Read More »

ಮಳೆ ನೀರಿನ ರಭಸಕ್ಕೆ ಹರಿಹರದ ದೇವರಬೆಳಕೆರೆ ಪಿಕಪ್ ಡ್ಯಾಂ ತಡೆಗೋಡೆ ಬಿರುಕು

ಸಾಂದರ್ಭಿಕ ಚಿತ್ರ ದಾವಣಗೆರೆ: ಜಿಲ್ಲೆಯಲ್ಲಿ 4-5 ದಿನಗಳಿಂದ ಧಾರಾಕಾರ ಮಳೆಯಾಗಿದೆ. ಈ ಮಳೆಯಿಂದಾಗಿ ಕೆರೆ-ಕಟ್ಟೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದು ರೈತರ ಸಂತೋಷಕ್ಕೆ ಕಾರಣವಾಗಿದ್ದರೆ, ಇನ್ನೊಂದೆಡೆ ಬೆಳೆ ಹಾನಿ ಸಂಭವಿಸಿ ಅಪಾರ ನಷ್ಟವನ್ನುಂಟು ಮಾಡುತ್ತಿದೆ. ಈ ಮಧ್ಯೆಯೇ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕ್ ಅಪ್ ಡ್ಯಾಂ ತಡೆಗೋಡೆ ಬಿರುಕು ಬಿಟ್ಟಿದ್ದು, ರೈತರಲ್ಲಿ ಆತಂಕ ದ್ವಿಗುಣಗೊಳಿಸಿದೆ. ಡ್ಯಾಂಗೆ ನೀರಿನ ಹರಿವು ಹೆಚ್ಚಾದ ಕಾರಣ ತಡೆಗೋಡೆ ಬಿರುಕು ಬಿಟ್ಟಿದೆ ಎನ್ನಲಾಗಿದೆ. ಪಿಕಪ್​ …

Read More »

ಕನಕದಾಸರ ಭಾವಚಿತ್ರಕ್ಕೆ ಅವಮಾನ-ಒಂದು ಪೋಟೋ ಗತಿಯಿಲ್ಲ ಈ ಗ್ರಾಮ ಪಂಚಾಯ್ತಿಲಿ..?

ಧಾರವಾಡ :ದಾಸ ಶ್ರೇಷ್ಠ ಕನಕದಾಸರ ಜಯಂತಿಯ ದಿನದಂದು ಕನಕದಾಸರ ಭಾವಚಿತ್ರಕ್ಕೆ ಅವಮಾನ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನೆಡೆದಿದೆ. ನಾಡಿಗೆ ತಮ್ಮ ಕಿರ್ತನೆ,ಮೂಲಕ ಮತ್ತು 15 ಮತ್ತು 16 ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ತಪ್ಪಾಗಲಾರದು. ಇಂದು ಕನಕದಾಸ ಜಯಂತಿ ಪ್ರತಿವರ್ಷವೂ ಕೂಡ ಕನಕ ಜಯಂತಿಯನ್ನು ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಆಚರಿಸಬೇಕು ಮತ್ತು ಅವರ ಭಾವಚಿತ್ರವನ್ನು ಕಚೇರಿ ಒಳಗಡೆ …

Read More »

ಮೈಸೂರು-ಚಾಮರಾಜನಗರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಡಾ.ಡಿ.ತಿಮ್ಮಯ್ಯ ಕಣಕ್ಕೆ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆ ಕಣದಿಂದ ಕಾಂಗ್ರೆಸ್​ನ ಮತ್ತೋರ್ವ ಸದಸ್ಯ ಹಿಂದೆ ಸರಿದಿದ್ದಾರೆ. ಪ್ರಸ್ತುತ ಮೈಸೂರು-ಚಾಮರಾಜನಗರದಿಂದ ಕಾಂಗ್ರೆಸ್ ಎಂಎಲ್​ಸಿಯಾಗಿದ್ದ ಆರ್.ಧರ್ಮಸೇನ ಈ ಬಾರಿ ಸ್ಪರ್ಧಿಸದಿರಲು ತೀರ್ಮಾನ ಕೈಗೊಂಡಿದ್ದಾರೆ. ಇವರ ಬದಲಿಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ.ಡಿ.ತಿಮ್ಮಯ್ಯ ತಾವೇ ಈ ಬಾರಿ ಪರಿಷತ್ ಚುನಾವಣೆಯ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಇದುವರೆಗೂ 25 ಕ್ಷೇತ್ರಗಳಿಗೆ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿಲ್ಲ. ತಿಮ್ಮಯ್ಯ ಅವರು ಇಂದು ಬೆಂಗಳೂರಿಗೆ …

Read More »

ಸೈಯದ್‌ ಮುಸ್ತಾಕಲಿ ಟ್ರೋಫಿ-ಫೈನಲ್ ‘ಓವರ್​’ನಲ್ಲಿ ಎಡವಿದ ಕರ್ನಾಟಕ : ತಮಿಳುನಾಡು 3ನೇ ಬಾರಿ ಚಾಂಪಿಯನ್

ತಮಿಳುನಾಡು ತಂಡ ಚಾಂಪಿಯನ್ ನವದೆಹಲಿ : ಸೈಯದ್​ ಮುಷ್ತಾಕ್ ಅಲಿ ಟ್ರೋಫಿ ಫೈನಲ್​ನ ಕೊನೆಯ ಎಸೆತದಲ್ಲಿ ಶಾರುಖ್ ಖಾನ್ ಸಿಡಿಸಿದ ಅದ್ಭುತ ಸಿಕ್ಸರ್​ ನೆರವಿನಿಂದ ಕರ್ನಾಟಕ ವಿರುದ್ಧ ತಮಿಳುನಾಡು4 ವಿಕೆಟ್​ಗಳ ರೋಚಕ ಜಯ ಸಾಧಿಸಿ ಸತತ 2ನೇ ಹಾಗೂ ಒಟ್ಟಾರೆ ಮೂರನೇ ಬಾರಿಗೆ ಚಾಂಪಿಯನ್​ ಆಗಿ ಹೊರ ಹೊಮ್ಮಿದೆ. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕರ ವೈಫಲ್ಯದ ಹೊರತಾಗಿಯೂ 20 ಓವರ್​ಗಳಲ್ಲಿ …

Read More »

ಮನೆ ಸಂಪೂರ್ಣ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದ ಆದ ನಷ್ಟ ಅಷ್ಟಿಷ್ಟಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾನಿಯಾದ ರಸ್ತೆ ದುರಸ್ತಿಗೆ 500 ಕೋಟಿ ರೂ. ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ತಕ್ಷಣವೇ 1 ಲಕ್ಷ ರೂ. ಬಿಡುಗಡೆ ಮಾಡಲು ಸೂಚಿಸಿದ್ದೇವೆ. ಭಾಗಶಃ ಮನೆ ಹಾನಿಗೆ ಹಣ ಬಿಡುಗಡೆಗೆ ಆದೇಶಿಸಿದ್ದೇನೆ ಅಂತ ತಿಳಿಸಿದ್ದಾರೆ. ಬೆಳೆ ಸಮೀಕ್ಷೆ ಪರಿಹಾರ ಆ್ಯಪ್​ನಲ್ಲಿ …

Read More »

ರಾಜಧಾನಿಯಲ್ಲಿ ಇನ್ನು 2 ದಿನ ಮಳೆ-ಹವಾಮಾನ ಇಲಾಖೆ ಮಾಹಿತಿ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗುವ (Bangalore Rains) ಸಾಧ್ಯತೆಯಿದೆ ಅಂತ ಹವಾಮಾನ ಇಲಾಖೆ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು (ನ.22) ಬೆಳಗ್ಗೆ 26.5 ರಷ್ಟು ಗರಿಷ್ಟ ಉಷ್ಣಾಂಶವಿದ್ದು. 20.5 ಕನಿಷ್ಠ ಉಷ್ಣಾಂಶ ದಾಖಾಲಾಗಿದೆ. ನಗರದಲ್ಲಿ 5.2 ಮಿಲಿ ಮೀಟರ್ ಮಳೆಯಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 6.2 ಮಿಮೀ ಮಳೆಯಾಗಿದ್ದು, ಎಚ್ಎಎಲ್​ನಲ್ಲಿ 1.4 ಮಿಲಿ ಮೀಟರ್ ಮಳೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ 6.5 …

Read More »

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ಮಳೆಯಿಂದ ಜಿಲ್ಲೆಯಲ್ಲಿ ಒಂದಿಲ್ಲೊಂದು ಅಪಘಾತ

ತುಮಕೂರು: ಜಿಲ್ಲೆಯಲ್ಲಿ ಮಳೆಯಿಂದ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಲೇ ಇವೆ. ಅಕಾಲಿಕ ಮಳೆಯಿಂದ ಬೆಳೆಗಳು ನೆಲಕಚ್ಚಿವೆ. ಇನ್ನೊಂದೆಡೆ, ರಸ್ತೆ ಅಪಘಾತಗಳು ಕೂಡಾ ಸಂಭವಿಸುತ್ತಿವೆ.‌ ಗುಬ್ಬಿ ತಾಲೂಕಿನ ತೊರೆಹಳ್ಳದ ಕೆರೆಕೋಡಿ ಬಳಿ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದಿದೆ. ಈ ವೇಳೆ, ಕಾರಿನಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ ಹಳ್ಳದಲ್ಲಿ ಮುಳುಗಿದ್ದ ಕಾರನ್ನು ಹೊರತೆಗೆಯಲು ತಕ್ಷಣಕ್ಕೆ ಸಾಧ್ಯವಾಗಿರಲಿಲ್ಲ. ನಂತರ ಸ್ಥಳೀಯರ ಸಹಕಾರದಿಂದ ಕ್ರೇನ್ ಬಳಸಿ ಕಾರನ್ನು ಹಳ್ಳದಿಂದ ಮೇಲೆತ್ತಲಾಗಿದೆ. …

Read More »

21 ವರ್ಷಗಳ ನಂತರ ಬಂಧನಕ್ಕೊಳಗಾದ ಕಿಸೆಗಳ್ಳ- ಹು-ಧಾ ಪೋಲಿಸರಿಂದ ಯಶಸ್ವಿ ಕಾರ್ಯಾಚರಣೆ

ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಮಹಾನಗರದಲ್ಲಿ ಕಿಸೆಗಳ್ಳತನ ಮಾಡಿ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಕಳ್ಳನನ್ನು ಹುಬ್ಬಳ್ಳಿ ನಗರ ಠಾಣೆ ಪೊಲೀಸರು 21 ವರ್ಷಗಳ ಬಳಿಕ ಪತ್ತೆ ಹಚ್ಚಿ ಬಂಧಿಸಿರುವ ಘಟನೆ ನಡೆದಿದೆ. ಹುಬ್ಬಳ್ಳಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2000 ರಲ್ಲಿ ಹುಬ್ಬಳ್ಳಿಯ ಗಣೇಶಪೇಟೆ ಅಬ್ದುಲ್‌ ವಾಚಮೇಕರ್‌ ಎಂಬಾತನನ್ನು ಕಿಸೆಗಳ್ಳತನ ಪ್ರಕರಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನಂತರ ಅಬ್ದುಲ್ ಬೇಲ್‌ನಿಂದ ಹೊರಗಡೆ ಮರಳಿ ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ …

Read More »

ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

ಗದಗ: ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ (85) ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಕೇರಿ ಮಠದ ಪೀಠಾಧಿಪತಿ ಅಭಿನವ ಅನ್ನದಾನೇಶ್ವರ ಮಹಾ ಸ್ವಾಮೀಜಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆ ಉಸಿರೆಳೆದಿದ್ದಾರೆ. ಶಿವಯೋಗ ಮಂದಿರ ಅಧ್ಯಕ್ಷರು ಆಗಿದ್ದ ಸ್ವಾಮೀಜಿ ಅವರು ನವೆಂಬರ್ 8, 9, 10ರಂದು ಮಠಕ್ಕೆ ನೂತನ ಚಿರ ಪಟ್ಟಾಧಿಕಾರ ಕಾರ್ಯಕ್ರಮ ನಡೆಸಿದ್ದರು. ತಮ್ಮ ಸ್ಥಾನಕ್ಕೆ ನೂತನವಾಗಿ ಮುಪ್ಪಿನ …

Read More »