Breaking News

Breaking News

ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮಹಿಳೆ, ಸಾಕು ನಾಯಿಯ ಮೃತದೇಹ ಪತ್ತೆ!

ಶಿವಮೊಗ್ಗ ಜಿಲ್ಲೆಯ ರವೀಂದ್ರ ನಗರದಲ್ಲಿ ಮನಕಲಕುವ ಘಟನೆ ನಡೆದಿದ್ದು, ಮನೆಯೊಂದರಲ್ಲಿ 57 ವರ್ಷದ ಪ್ರಭಾವತಿ ಹಾಗೂ ಅವರ ಸಾಕು ನಾಯಿಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹಲವು ದಿನಗಳ ಹಿಂದೆಯೇ ಮಹಿಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಆಕೆಯ ಸಾವಿನ ಬಳಿಕ ಮನೆಯೊಳಗೇ ಇದ್ದ ನಾಯಿ ಕೂಡ ಆಹಾರ ಮತ್ತು ಆರೈಕೆ ಸಿಗದೆ ಸಾವನ್ನಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ …

Read More »

ಬಾಗಲಕೋಟೆಯಲ್ಲಿ ಬಸ್-ಲಾರಿ ಅಪಘಾತ: ಇಬ್ಬರ ಸಾವು

ಬಾಗಲಕೋಟೆ: ಜಿಲ್ಲೆಯ ಸುನಗ ಕ್ರಾಸ್ ಬಳಿ ಬಸ್, ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಬಸ್‌ನ ಹಿಂಭಾಗದ ಅರ್ಧ ಭಾಗ ಕಿತ್ತುಹೋಗಿದೆ. ಬಸ್‌ನಲ್ಲಿದ್ದ ವಾಣಿ ದೇಸಾಯಿ (26), ಶಿವಕುಮಾರ್ ಕಡ್ಲಿವಾಡ (25) ಮೃತಪಟ್ಟಿದ್ದಾರೆ. ವಾಣಿ ದೇಸಾಯಿ ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಗ್ರಾಮದ ನಿವಾಸಿ. ಶಿವಕುಮಾರ ಕಡ್ಲಿವಾಡ ಗದಗ ಜಿಲ್ಲೆಯ ನರಗುಂದ ಮೂಲದವರು. ಬಸ್ ವಿಜಯಪುರ ಕಡೆ ಹೊರಟಿದ್ದರೆ, ಲಾರಿ ವಿಜಯಪುರ ಕಡೆಯಿಂದ ಬಾಗಲಕೋಟೆ ಕಡೆ ಬರುತ್ತಿತ್ತು. ಬೀಳಗಿ …

Read More »

ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಘೋರ ದುರಂತ : ಶಾಲಾ ಬಸ್ ಹರಿದು ಮಗಳ ಕಣ್ಣೆದುರೇ ತಾಯಿ ಸಾವು.!

ಬೆಂಗಳೂರು ವೈಟ್‌ಫೀಲ್ಡ್ ಪ್ರದೇಶದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಮಹಿಳೆಯೊಬ್ಬರು ಶಾಲಾ ಬಸ್‌ಗೆ ಡಿಕ್ಕಿಯಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಾಂತ ಎಂಬ ಮಹಿಳೆ ತಮ್ಮ ಮಗಳು ನೇಹಾ ಅವರನ್ನು ಕಾಲೇಜಿಗೆ ಬಿಡಲು ತೆರಳಿದ್ದಾಗ ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಮಹಿಳೆ ಬಸ್ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆವನ್ನು ಮಗಳು ಕಣ್ಣಾರೆ ನೋಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಸ್ಥಳದಲ್ಲಿದ್ದವರನ್ನೂ ಕಂಬನಿ ಮಿಡಿಯುವಂತೆ ಮಾಡಿದೆ. ಘಟನೆಗೆ ಶಾಲಾ …

Read More »

ಸಸ್ಪೆಂಡ್ ಶಾಕ್.. ಜೈಲರ್ ಆತ್ಮಹತ್ಯೆ..! ಧಾರವಾಡ ಕೇಂದ್ರ ಕಾರಾಗೃಹದಲ್ಲಿ ದಾರುಣ ಅಂತ್ಯ..

ಧಾರವಾಡ ಕೇಂದ್ರ ಕಾರಾಗೃಹದ ಜೈಲರ್ ಸಿದ್ದರಾಮಪ್ಪ ವಡ್ಡರ್ (33) ಅವರು ಕಾರಾಗೃಹ ವಸತಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿನ ಘಟನೆ ಸಂಚಲನ ಮೂಡಿಸಿದೆ. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಢ ನಿವಾಸಿಯಾಗಿದ್ದ ಅವರು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಕಾರಾಗೃಹದಲ್ಲಿ ನಡೆದಿದ್ದ ಕಾನೂನುಬಾಹಿರ ಚಟುವಟಿಕೆ ಪ್ರಕರಣದ ಹಿನ್ನೆಲೆ ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದರೂ, ಅಮಾನತು ಆದೇಶ ಮುಂದುವರಿದಿದ್ದರಿಂದ ಅವರು ಮಾನಸಿಕ …

Read More »

ದೇವಸ್ಥಾನಗಳಿಗೆ ಕನ್ನ – ಖತರ್ನಾಕ್ ತಂದೆ-ಮಕ್ಕಳ ಅರೆಸ್ಟ್!

ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಗ್ಯಾಂಗ್ ಅನ್ನು ದೊಡ್ಡಬೆಳವಂಗಲ ಪೊಲೀಸರು ಬಂಧಿಸಿದ್ದಾರೆ. ಮಹೇಶ್, ರಘು ಜಿ. ಮತ್ತು ಅಂಜನ್ ಕುಮಾರ್ ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿ ಗಂಗಾರೆಡ್ಡಿ ತಲೆಮರೆಸಿಕೊಂಡಿದ್ದಾನೆ. ವಿಶೇಷವೆಂದರೆ, ಈ ಗ್ಯಾಂಗ್‌ನಲ್ಲಿ ತಂದೆ ಮತ್ತು ಮಕ್ಕಳೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಜಾತ್ರೆ ಹಾಗೂ ವಿಶೇಷ ಉತ್ಸವಗಳು ನಡೆಯುವ ಗ್ರಾಮಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ರಾತ್ರಿ ವೇಳೆ ದೇವಸ್ಥಾನಗಳ ಬಾಗಿಲು ಮುರಿದು ಹುಂಡಿ ಹಣ ಹಾಗೂ ಬೆಳ್ಳಿ-ಬಂಗಾರದ …

Read More »

ರಾಜ್ಯದಲ್ಲಿ ಆಘಾತಕಾರಿ ಘಟನೆ ; ಇಬ್ಬರು ಮಕ್ಕಳನ್ನ ನೇಣು ಬಿಗಿದು ಕೊಂದು ತಾಯಿ ಆತ್ಮಹತ್ಯೆಗೆ ಯತ್ನ.!

ಮೈಸೂರಿನಲ್ಲಿ ತಾಯಿಯೊಬ್ಬರು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಕೊಂದು ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರಿಯಾಂಕಾ (26) ಅವರು ತಮ್ಮ ಮಕ್ಕಳಾದ ಧೃತಿ (3) ಮತ್ತು ದಿಶಾ (1.5) ಅವರನ್ನು ಹತ್ಯೆಗೈದು, ನಂತರ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಕಲಹ ಮತ್ತು ಇತರೆ ವೈಯಕ್ತಿಕ ಕಾರಣಗಳು ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು …

Read More »

ಪಿ.ಐ.ಟಿ, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮಾದಕ ದ್ರವ್ಯ ಸಾಗಾಟ ಪ್ರಕರಣದ ಆರೋಪಿ ಬಂಧನ

ಉಡುಪಿ: ಮಾದಕ ದ್ರವ್ಯ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಬೆಟ್ಟು ನಿವಾಸಿ ಜಗದೀಶ ಪೂಜಾರಿ ಎಂಬಾತನನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್.‌ ಕಾಯ್ದೆಯಡಿ ಬಂಧಿಸಲಾಗಿದೆ. ಎನ್.ಡಿ.ಪಿ.ಎಸ್.‌ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದರು. ಬಂಧಿತ ಜಗದೀಶ್‌ ಪೂಜಾರಿ ವಿರುದ್ಧ ಉಡುಪಿ ಜಿಲ್ಲೆಯ ಮಣಿಪಾಲ ಮತ್ತು ಸೆನ್‌ ಅಪರಾಧ ಪೊಲೀಸ್‌ ಠಾಣೆಗಳಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಪ್ರಕರಣ ಹಾಗೂ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ …

Read More »

ಎನರ್ಜಿ ಡ್ರಿಂಕ್ ಸೇವಿಸಿ ಯುವಕ ಸಾವು – ಅಂಗಡಿಯಲ್ಲಿದ್ದ ದಾಸ್ತಾನು ಧ್ವಂಸ!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಎನರ್ಜಿ ಡ್ರಿಂಕ್ಸ್ ಅತಿಯಾಗಿ ಸೇವಿಸಿದ್ದರಿಂದ 18 ವರ್ಷದ ಬಾಲು ದೇಸಾಯಿ ಮೃತಪಟ್ಟಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಯುವಕ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಎನರ್ಜಿ ಡ್ರಿಂಕ್ಸ್ ಸೇವಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಘಟನೆಯ ಬಳಿಕ ಗ್ರಾಮಸ್ಥರು ಒಟ್ಟಾಗಿ ಸೇರಿ, ಇನ್ಮುಂದೆ ಗ್ರಾಮದಲ್ಲಿ ಎನರ್ಜಿ ಡ್ರಿಂಕ್ಸ್ ಸೇವನೆ ಹಾಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಅಲ್ಲದೆ, ಅಂಗಡಿಗಳಲ್ಲಿದ್ದ ಎನರ್ಜಿ …

Read More »

ಯುವತಿ ಅಪಹರಿಸಿ ಅತ್ಯಾಚಾರ – ಭಾರತೀಯನಿಗೆ ಲಂಡನ್ ನಲ್ಲಿ 34 ವರ್ಷ ಜೈಲು!

ಲಂಡನ್‌ನಲ್ಲಿ 24 ವರ್ಷದ ಯುವತಿಯನ್ನು ಅಪಹರಿಸಿ ಬಂಧನದಲ್ಲಿಟ್ಟು ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಭಾರತೀಯ ಮೂಲದ ಗಗನ್‌ದೀಪ್ ಸಿಂಗ್ (34)ಗೆ ಬ್ರಿಟನ್ ನ್ಯಾಯಾಲಯ 34 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಪಹರಣ, ಬಲವಂತದ ಬಂಧನ, ಲೈಂಗಿಕ ದೌರ್ಜನ್ಯ ಹಾಗೂ ತೀವ್ರ ಹಲ್ಲೆ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ. 2024ರ ಜೂನ್‌ನಲ್ಲಿ ಥೈಲ್ಯಾಂಡ್‌ನಿಂದ ಬ್ರಿಟನ್‌ಗೆ ಸೂಟ್‌ಕೇಸ್ ತಲುಪಿಸುವಂತೆ ಕೇಳಿದ್ದನ್ನು ಯುವತಿ ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಆಕೆಯನ್ನು ಬರ್ಮಿಂಗ್‌ಹ್ಯಾಮ್ ವಿಮಾನ …

Read More »

KSRTC ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ – ಡಿಪೋ ಮ್ಯಾನೇಜರ್ ಸೇರಿ ಐವರ ವಿರುದ್ಧ FIR

ರಾಮನಗರ ಜಿಲ್ಲೆಯ ಕನಕಪುರ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಚಾಲಕ ಶಿವಕುಮಾರ್ ಮೇಲೆ ಡಿಪೋ ಮ್ಯಾನೇಜರ್ ಸಚಿನ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಟ್ರಿಪ್ ಮುಗಿಸಿ ಡಿಪೋಗೆ ಬಂದ ವೇಳೆ ಜಗಳ ನಡೆದು, ಹಲವರು ಸೇರಿ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆ ವೇಳೆ ಶಿವಕುಮಾರ್ ಅವರನ್ನು ಡಿಪೋ ಆವರಣದಲ್ಲೇ ಅಟ್ಟಾಡಿಸಿಕೊಂಡು ಹೋಗಿ ಕೆಳಗೆ ಬಿದ್ದ ಬಳಿಕವೂ ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಜಗಳ ಬಿಡಿಸಲು ಬಂದ ಟ್ರಾಫಿಕ್ …

Read More »