Breaking News

Breaking News

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ ಪತ್ತೆ : ಆರೋಪಿ ಅರೆಸ್ಟ್!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ ಪತ್ತೆಯಾಗಿದೆ. ದುಬೈನಿಂದ ಬಂದಿದ್ದ ಪ್ರಯಾಣಿಕನ ಬಳಿ 899.50 ಗ್ರಾಂ ಚಿನ್ನ ಪತ್ತೆಯಾಗಿದೆ. 1.337 ಕೋಟಿ ಮೌಲ್ಯದ 899.50 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ.4 ಕ್ಯಾಪ್ಸುಲ್ ಗಳಲ್ಲಿ ಚಿನ್ನದ ಪೇಸ್ಟ್ ಅಡಗಿಸಿ ತಂದಿದ್ದ ಪ್ರಯಾಣಿಕ ಅನುಮಾನಸ್ಪದ ವರ್ತನೆ ಹಿನ್ನಲೆ ಕಸ್ಟಮ್ಸ್ ಅಧಿಕಾರಿಗಳಿಂದ ತಪಾಸಣೆ ನಡೆಸಿದರು. ಈ ವೇಳೆ 899.50 ಗ್ರಾಂ 24 ಕ್ಯಾರಾಟ್ …

Read More »

ಬಸವಾಪಟ್ಟಣ ಗ್ಯಾಂಗ್ ರೇಪ್ ಕೇಸ್.. ದಾವಣಗೆರೆ SP ಗೆ ಮಹಿಳಾ ಆಯೋಗ ಪತ್ರ

ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 41 ವರ್ಷದ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ರಾಜ್ಯ ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆಗೆ ಸೂಚಿಸಿದೆ. ಜೂನ್ 3ರಂದು ಸಹಾಯ ಮಾಡುವ ನೆಪದಲ್ಲಿ ಮಹಿಳೆಗೆ ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪಿಸಿ, ಸಮೀಪದ ಜಮೀನಿಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಆರೋಪಿಗಳು ಘಟನೆಯ ವಿಡಿಯೋ ಹಾಗೂ ಫೋಟೋಗಳನ್ನು ಚಿತ್ರೀಕರಿಸಿ ಬಳಿಕ ಹರಿಬಿಟ್ಟಿದ್ದರಿಂದ ಪ್ರಕರಣ …

Read More »

ಒಡಹುಟ್ಟಿದ ತಮ್ಮನನ್ನೇ ದೊಣ್ಣೆಯಿಂದ ಹೊಡೆದು ಕೊಂದ ಅಣ್ಣ!

ಆನಂದಪುರ: ಬ್ಯಾಂಕ್ ಸಾಲದ ನೋಟಿಸ್ ವಿಚಾರವಾಗಿ ಉಂಟಾದ ದ್ವೇಷದ ಹಿನ್ನೆಲೆಯಲ್ಲಿ ಅಣ್ಣನೇ ತಮ್ಮನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಮಾದರಸನಕೊಪ್ಪ ಗ್ರಾಮದಲ್ಲಿ ನಡೆದಿದೆ. ಮೇ 23ರಂದು ನಡೆದ ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಘವೇಂದ್ರ (39) ಚಿಕಿತ್ಸೆ ಫಲಿಸದೆ ಜೂನ್ 9ರಂದು ಮೃತಪಟ್ಟಿದ್ದಾರೆ. ಅಣ್ಣ ಮಹೇಶ್ (49) ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ …

Read More »

ಬಳ್ಳಾರಿ ಗಡಿಯಲ್ಲಿ ಲಾರಿ-ಟ್ಯಾಂಕರ್ ಮಧ್ಯ ಭೀಕರ ಅಪಘಾತ : ಚಾಲಕ ಸಜೀವ ದಹನ!

ಬಳ್ಳಾರಿ ಗಡಿ ಭಾಗದಲ್ಲಿ ಲಾರಿ ಮತ್ತು ಟ್ಯಾಂಕರ್ ನಡುವೆ ಭೀಕರವಾದ ಅಪಘಾತ ಸಂಭವಿಸಿದ್ದು, ಬೆಂಕಿಯಿಂದ ಎರಡು ವಾಹನಗಳು ಹೊತ್ತಿ ಉರಿದಿವೆ. ಘಟನೆಯಲ್ಲಿ ಓರ್ವ ಚಾಲಕ ಸಜೀವ ದಹನಗೊಂಡಿದ್ದಾನೆ. ಅನಂತಪುರ ಜಿಲ್ಲೆಯ ಡಿ ಹಿರೇಹಾಳ ಮಂಡಲದಲ್ಲಿ ಈ ಒಂದು ಘಟನೆ ಸಂಭವಿಸಿದೆ.ಜಾಜರಕಲ್ ಟೋಲ್ ಪ್ಲಾಜಾ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಪಂಚರಾಗಿ ಟ್ಯಾಂಕರ್ ರಸ್ತೆ ಬದಿ ನಿಂತಿತ್ತು. ಈ ವೇಳೆ ರಾಂಪುರಂ ಕಡೆಯಿಂದ ಲಾರಿ ವೇಗವಾಗಿ ಬಂದಿದೆ. ಲಾರಿ …

Read More »

ಅಪ್ರಾಪ್ತನಿಗೆ ಸಿಗರೇಟ್ ಕಲಿಸಿ, ಫೋಟೋ‌ ತೆಗೆದು ಬ್ಲಾಕ್ ಮೇಲ್ – 120 ಗ್ರಾಂ ಚಿನ್ನ ವಸೂಲಿ!

ಕೊಪ್ಪಳ: ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಅಭ್ಯಾಸ ಮಾಡಿಸಿ, ಬಳಿಕ ವಿಡಿಯೋ ತೋರಿಸಿ ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಕುಷ್ಟಗಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಸವರಾಜ್ ಅಂಗಡಿ ಹಾಗೂ ನವೀನ್, ಬಾಲಕ ಸಿಗರೇಟ್ ಸೇದುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು, ಪೋಷಕರಿಗೆ ತೋರಿಸುವುದಾಗಿ ಬೆದರಿಸಿ ಹಣಕ್ಕಾಗಿ ಪೀಡಿಸುತ್ತಿದ್ದರು. ಭಯಗೊಂಡ ಬಾಲಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಂತ ಹಂತವಾಗಿ ಕದ್ದು ಆರೋಪಿಗಳಿಗೆ ನೀಡಿದ್ದಾನೆ. ಮನೆಯಲ್ಲಿ ಚಿನ್ನ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೋಷಕರು …

Read More »

ಬೆಂಗಳೂರಿನ ಉದ್ಯಮಿ ಮನೆಯಲ್ಲಿ 25 ಲಕ್ಷ ಕಳ್ಳತನ: ಪರಾರಿಯಾಗಿದ್ದ ದಂಪತಿ ಅರೆಸ್ಟ್!

ಬೆಂಗಳೂರು: ಉದ್ಯಮಿ ಮನೆಯಲ್ಲೇ ಕೆಲಸ ಮಾಡುತ್ತಿದ್ದ ದಂಪತಿ ₹25 ಲಕ್ಷ ನಗದು ಕಳವು ಮಾಡಿದ ಆರೋಪದಲ್ಲಿ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ನೇಪಾಳ ಮೂಲದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ. ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಹಣ ಇಟ್ಟಿದ್ದ ಸ್ಥಳ ಹಾಗೂ ಕೀಲಿಯ ಮಾಹಿತಿ ತಿಳಿದುಕೊಂಡು, ಮನೆಯವರ ಗೈರುಹಾಜರಿಯಲ್ಲಿ ಕಬೋರ್ಡ್‌ನಿಂದ ₹25 ಲಕ್ಷ ನಗದು ಕಳವು ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಅಮೃತಹಳ್ಳಿ ಪೊಲೀಸರು ಆರೋಪಿಗಳನ್ನು ಬೆಂಗಳೂರು …

Read More »

ತೀರ್ಥಹಳ್ಳಿ: ಕಾರಿನಲ್ಲಿ ದನ ಕಳ್ಳತನಕ್ಕೆ ಯತ್ನ: ಡ್ಯಾಶ್‌ಕ್ಯಾಮ್‌ನಲ್ಲಿ ಕಳ್ಳರ ಕೃತ್ಯ ಸೆರೆ

ತೀರ್ಥಹಳ್ಳಿ: ಗಡಿಕಲ್ ಪ್ರದೇಶದಲ್ಲಿ ತಡರಾತ್ರಿ ದನ ಕಳ್ಳತನಕ್ಕೆ ಯತ್ನಿಸಿದ ಘಟನೆ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಕಳ್ಳರು ದನವನ್ನು ಕಾರಿನೊಳಗೆ ತುಂಬಲು ಯತ್ನಿಸುತ್ತಿದ್ದ ವೇಳೆ ಎದುರಿನಿಂದ ವಾಹನ ಬರುತ್ತಿರುವುದನ್ನು ಕಂಡು, ದನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಲೂಕಿನಲ್ಲಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Read More »

ವಾಹನ ತಪಾಸಣೆ ಹೆಸರಲ್ಲಿ ಕಿರುಕುಳಕ್ಕೆ ಕೊನೆ ಯಾವಾಗ..? ಹುಬ್ಬಳ್ಳಿ-ಧಾರವಾಡ ಟ್ರಾಫಿಕ್ ವ್ಯವಸ್ಥೆ ಬಗ್ಗೆ ಭಾರೀ ಆಕ್ರೋಶ..

ಠಾಣೆ ಅಧಿಕಾರಿ ಅಲ್ಲ, ಇಲಾಖೆಯಲ್ಲಿ ‘ಹವಾ’ ಇರುವ ಪೊಲೀಸರಿಗೇ ದಿನನಿತ್ಯ ಹಣ ಹೋಗ್ತಿದೆಯಾ..? ‘ಪ್ರತಿದಿನ ಜಿಎಸ್‌ಟಿ’ ಹೆಸರಲ್ಲಿ ನಡೆಯುತ್ತಿರುವ ಆರೋಪಗಳ ಸತ್ಯಾಸತ್ಯತೆ ಏನು..? ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಟ್ರಾಫಿಕ್ ಜಾಮ್ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ, ಅದನ್ನು ಕ್ಲಿಯರ್ ಮಾಡುವ ಬದಲು ವಾಹನ ತಪಾಸಣೆ ಹೆಸರಲ್ಲಿ ಜನರಿಗೆ ಕಿರುಕುಳ ಹೆಚ್ಚಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.. ರಸ್ತೆಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಇದ್ದರೂ ಅದನ್ನು ನಿಯಂತ್ರಿಸುವ ಬದಲು, …

Read More »

ಬೆಳಗಾವಿ ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರ – ಬೆಳ್ಳಂಬೆಳಗ್ಗೆ ಮನೆ ಮೇಲೆ ರೇಡ್!

ಗೋಕಾಕ್: ರೌಡಿಶೀಟರ್‌ಗಳ ವಿರುದ್ಧ ಬೆಳಗಾವಿ ಜಿಲ್ಲೆಯ ಗೋಕಾಕ್ ಪೊಲೀಸರು ಬುಧವಾರ ಮುಂಜಾನೆ ದಿಢೀರ್ ಕಾರ್ಯಾಚರಣೆ ನಡೆಸಿ 10ಕ್ಕೂ ಹೆಚ್ಚು ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಡಿವೈಎಸ್ಪಿ ನೇತೃತ್ವದ ವಿಶೇಷ ತಂಡಗಳು ರೌಡಿಶೀಟರ್‌ಗಳ ಮನೆಗಳನ್ನು ಪರಿಶೀಲಿಸಿ, ಅವರ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಿವೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಹೊರಗಿರುವವರ ಮೇಲೆ ನಿಗಾ ಇಡುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ …

Read More »

ರಾಯಚೂರು: ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; ‘ಕಣ್ಣು ಮಂಜಾಗಿ’ ಹತ್ತಿಸಿದ ಎಂದ ಭೂಪ!

ರಾಯಚೂರು: ಮದ್ಯಪಾನ ಮಾಡಿ ಅತಿವೇಗವಾಗಿ ಕಾರು ಚಲಾಯಿಸಿದ್ದ ವ್ಯಕ್ತಿಯೊಬ್ಬ ಡಿವೈಡರ್‌ಗೆ ಡಿಕ್ಕಿ ಹೊಡೆದು ಅವಾಂತರ ಸೃಷ್ಟಿಸಿದ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲಾ ಪಂಚಾಯತ್ ಕಚೇರಿ ಎದುರು ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಮೇಲೇರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ವಿಚಾರಿಸಿದಾಗ ಚಾಲಕ ಶ್ರೀನಿವಾಸ ಗೌಡ, “ಕಣ್ಣು ಮಂಜಾಗಿ ಕಾರು ಡಿವೈಡರ್ ಮೇಲೆ ಹತ್ತಿಸಿದೆ” ಎಂದು …

Read More »