BigTv News
May 15, 2026
Breaking News
ಶಿವಮೊಗ್ಗ: ವಿಚಾರಣಾಧೀನ ಕೈದಿಗೆ ಜೀನ್ಸ್ ಪ್ಯಾಂಟ್‌ನ ಪಟ್ಟಿಯಲ್ಲಿ ಗಾಂಜಾ ಸಾಗಿಸಲು ಹೋಗಿ ಇಬ್ಬರು ಸಿಕ್ಕಿಬಿದ್ದಿರುವ ಘಟನೆ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಟಿಪ್ಪು ನಗರದ ನಿವಾಸಿಗಳಾದ ಖಿಜರ್ ಉಲಾ ಮತ್ತು ಇಬ್ರಾಹಿಂ ಜಬೀವುಲ್ಲಾ ಬಂಧಿತ ಆರೋಪಿಗಳು. ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಇಬ್ರಾಹಿಂ ಎಂಬಾತನನ್ನು ಕಾಣಲು ಟಿಪ್ಪು ನಗರದ ನಿವಾಸಿಗಳಾದ ಖಿಜರ್ ಉಲಾ ಮತ್ತು ಇಬ್ರಾಹಿಂ ಜಬವುಲಾ ಎಂಬುವವರು ಬಂದಿದ್ದರು. ಅವರು ಕೈದಿಗೆ ನೀಡಲು ತಂದಿದ್ದ ಬಟ್ಟೆಬರೆಗಳನ್ನು ಮುಖ್ಯದ್ವಾರದಲ್ಲಿ ತಪಾಸಣೆಗೊಳಪಡಿಸಿದಾಗ, ಒಂದು …
Read More »
BigTv News
May 15, 2026
Breaking News
ಬೆಂಗಳೂರು (ಮೇ.15): ಆನ್‌ಲೈನ್ ಗೇಮಿಂಗ್ ಹೆಸರಿನಲ್ಲಿ ಗ್ರಾಹಕರಿಗೆ ಭಾರಿ ಮೋಸ ಮಾಡಿದ್ದ ಕಂಪನಿಯಾದ ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿಗೆ ಸೇರಿದ್ದ ಬೆಂಗಳೂರು, ದೆಹಲಿಯ 17 ಸ್ಥಳಗಳ ಮೇಲೆ ಹಾಗೂ ನಿರ್ದೇಶಕರ ನಿವಾಸ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, 526 ಕೋಟಿ ರು.ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಕಂಪನಿಯ ಮೂವರನ್ನು ಬಂಧಿಸಿ 3.5 ಕೋಟಿ ರು. ಮೌಲ್ಯದ 2.5 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣ …
Read More »
BigTv News
May 15, 2026
Breaking News
ರಾಣೆಬೆನ್ನೂರು: ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ಬದಲಾಯಿಸಿ ವ್ಯಕ್ತಿಯೊಬ್ಬ ಖಾತೆಯಿಂದ 1.20 ಲಕ್ಷ ರೂ. ಡ್ರಾ ಮಾಡಿಕೊಂಡು ವಂಚಿಸಿರುವ ಘಟನೆ ನಗರದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ತಾಲೂಕಿನ ಮೈದೂರ ಗ್ರಾಮದ ಪ್ರವಿಣ ಮಲ್ಲಪ್ಪ ಹಟ್ಟಿ (45) ಎಂಬುವರಿಗೆ ಮೋಸ ಮಾಡಿರುವುದು. ಇವರು ಎಟಿಎಂನಲ್ಲಿ ಹಣ ಡ್ರಾ ಮಾಡಿಸಿಕೊಳ್ಳುವ ಸಲುವಾಗಿ ಬಂದಾಗ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಣ ಡ್ರಾ ಮಾಡಿಕೊಡುವುದಾಗಿ ನಂಬಿಸಿ ಕಾರ್ಡ್ ತೆಗೆದುಕೊಂಡಿದ್ದಾನೆ. ನಂತರ …
Read More »
BigTv News
May 14, 2026
Breaking News
ಮುದಗಲ್: ನಾಗರಾಳ ಕ್ರಾಸ್ ಬಳಿ ಮರಳು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಟಿಪ್ಪರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಳು ಅಕ್ರಮವಾಗಿ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ವೆಂಕಟೇಶ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ಟಿಪ್ಪರ್ ವಶ ಪಡಿಸಿಕೊಂಡಿದ್ದಾರೆ. ಚಾಲಕ ತಿಮ್ಮಣ್ಣ (23) ಹಾಗೂ ಟಿಪ್ಪರ್ ಮಾಲೀಕನ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »
BigTv News
May 14, 2026
Breaking News
ಉಳ್ಳಾಲ: ತಾಲ್ಲೂಕಿನ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಮೇಲ್ಸೇತುವೆ ಕೆಳಗೆ ಮಹೀಂದ್ರ ಪಿಕ್ ಆಪ್ ವಾಹನದಲ್ಲಿ ಪರವಾನಗಿ ಇಲ್ಲದೆಯೇ ಸಾಗಿಸುತ್ತಿದ್ದ ಮರಳನ್ನು ಉಳ್ಳಾಲ ಠಾಣೆಯ ಪೊಲಿಸರು ಮಂಗಳವಾರ ವಶಕ್ಕೆ ಪಡೆದಿದ್ದು, ಈ ಸಂಬಂಧ ಸೋಮೇಶ್ವರ ಗ್ರಾಮದ ಕುಂಪಲ ನಿವಾಸಿ ಅಶ್ವಿತ್ ರಾವ್ (37 ವರ್ಷ) ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಮರಳು ಅಕ್ರಮ ಸಾಗಣೆಗೆ ಬಳಸಿದ ಪಿಕಪ್ ವಾಹನ ಹಾಗೂ ಅದರಲ್ಲಿದ್ದ ಮರಳು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿದ ಸ್ವತ್ತುಗಳ ಅಂದಾಜು ಮೌಲ್ಯ …
Read More »
BigTv News
May 14, 2026
Breaking News
ಶ್ರೀನಿವಾಸಪುರ: ಪಟ್ಟಣದ ಹೊರವಲಯದಲ್ಲಿ ಗೋವುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟಾಟಾ ಎಸ್ಸಿ ಅಡ್ಡಗಟ್ಟಿದ ಪೊಲೀಸರು ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಟ್ಟಣ ಹೊರವಲಯದ ಮುಳಬಾಗಿಲು ರಸ್ತೆ ಮಾರ್ಗವಾಗಿ ಬರುತ್ತಿದ್ದ ಟಾಟಾ ಎಸ್ಸಿ ವಾಹನದಲ್ಲಿ 5 ಕರು ಮತ್ತು ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ಬಾರ್ ಸಮೀಪ ವಾಹನವನ್ನು ನಿಲ್ಲಿಸಿ ಮದ್ಯಪಾನಕ್ಕೆ ತೆರಳಿದ ಸಂದರ್ಭದಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಚಾಲಕನ ಸಹಿತ ವಾಹನವನ್ನು ವಶಪಡಿಸಿಕೊಂಡಿದ್ದು, ತನಿಖೇ ಕೈಗೊಂಡಿದ್ದಾರೆ.
Read More »
BigTv News
May 14, 2026
Breaking News
ಮಣಿಪಾಲ: ಯುವತಿಯೊಬ್ಬಳಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಆಕೆಯ ಚಿನ್ನದ ಸರ ಕಳವು ಮಾಡಿರುವ ಘಟನೆ ಮಣಿಪಾಲ ಶಾಂತಿನಗರ ಎಂಬಲ್ಲಿ ಮಂಗಳವಾರ ರಾತ್ರಿ ವೇಳೆ ನಡೆದಿದೆ. ಹಲ್ಲೆಗೆ ಒಳಗಾದವರನ್ನು ಅಂಕೋಲ ಮೂಲದ ಯೋಗೀತಾ(23) ಎಂದು ಗುರುತಿಸಲಾಗಿದೆ. ಯೋಗಿತಾ ತನ್ನ ಇಬ್ಬರು ಗೆಳತಿಯರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಅವರಿಬ್ಬರು ಮೇ 12ರಂದು ಸಂಜೆ ರಾತ್ರಿ ಪಾಳಿ ಕೆಲಕ್ಕೆ ಹೋಗಿದ್ದರು. ಅವರಿಬ್ಬರು ಬುಧವಾರ ಬೆಳಗ್ಗೆ ರೂಮಿಗೆ ಬಂದು ನೋಡಿದಾಗ ಯೋಗೀತಾ ಬಿದ್ದುಕೊಂಡಿರುವುದು ಕಂಡುಬಂದಿದೆ. ಅಪರಿಚಿತರು …
Read More »
BigTv News
May 14, 2026
Breaking News
ಕೋಲಾರ: ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳ್ಳ-ಖದೀಮರಿಗೆ ಪೊಲೀಸರೆಂದರೆ ಕಿಮ್ಚಿತ್ತೂ ಭಯ ಎಂಬುದು ಇಲ್ಲ. ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದ ಬೈಕ್ ಬಾಕ್ಸ್ ನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಬೈಕ್ ಬಾಕ್ಸ್‌ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಬೇತಮಂಗಲ ನ್ಯೂಟೌನ್ ನಿವಾಸಿ ರಮೇಶ್ …
Read More »
BigTv News
May 14, 2026
Breaking News
ಬಿಸಿಲ ಝಳ, ತಾಪಮಾನ ಏರಿಕೆ ನಡುವೆಯೇ ರಾಜ್ಯದಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ನಾಯಂಡಹಳಿ ಬಳಿಯ ಪ್ಲಾಸ್ಟಿಕ್ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಸಂಭವಿಸಿದ್ದು, ಮುಗಿಲೆತ್ತರಕ್ಕೆ ಬೆಂಕಿಯ ಜ್ವಾಲೆ ವ್ಯಾಪಿಸಿದೆ. ಸುತ್ತಮುತ್ತಲ ಪ್ರದೇಶದವರೆಗೂ ದಟ್ಟ ಹೊಗೆ ಆವರಿಸಿದೆ. ಈ ಭಾಗದಲಿ ಎಕರೆಗಟ್ಟಲೇ ಜಾಗದಲ್ಲಿ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಿ ಇಡಲಾಗಿದ್ದು, ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಧಗಧಗನೆ …
Read More »
BigTv News
May 14, 2026
Breaking News
ಎಟಿಎಂ ಕಾರ್ಡ್ ಬದಲಾಯಿಸಿ ಹಣ ಲಪಟಾಯಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ನವನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಜಮಖಂಡಿಯ ಸುಜ್ಜಿತ್ ಭಜಂತ್ರಿ ಬಂಧಿತ ಆರೋಪಿ. ಆರೋಪಿಯಿಂದ ₹60 ಸಾವಿರ ಜಪ್ತಿ ಮಾಡಲಾಗಿದೆ. ವಿದ್ಯಾಗಿರಿಯ ಎಸ್‌ಬಿಐ ಎಟಿಎಂ ಕೇಂದ್ರದಲ್ಲಿ ಹಣ ತೆಗೆದುಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಎಟಿಎಂ ಪಡೆದು, ಹಣ ತೆಗೆದುಕೊಟ್ಟ ನಂತರ ಬದಲಿ ಎಟಿಎಂ ಕಾರ್ಡ್ ಅನ್ನು ಅವರಿಗೆ ನೀಡಿದ್ದನು. ನಂತರದಲ್ಲಿ ಎಟಿಎಂ ಕಾರ್ಡ್ ಬಳಸಿ ₹85 ಸಾವಿರ ಹಣ ಡ್ರಾ ಮಾಡಿದ್ದನು. ಪೊಲೀಸರು ನೋಟಿಸ್ …
Read More »