BigTv News
April 25, 2026
Breaking News
ಉತ್ತರ ಕನ್ನಡದಲ್ಲಿ ಭೀಕರ ಕೊಲೆ ನಡೆದಿದ್ದು, ಹೋಟೆಲ್ ಗೆ ನುಗ್ಗಿ ಮೀಟರ್ ಬಡ್ಡಿಯ ದಂದೆಯ ಕಿಂಗ್ ಪಿನ್ ಅನ್ನು ಕೊಲೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಿನ್ನೆ ರಾತ್ರಿ ಒಂದು ಕೊಲೆ ನಡೆದಿದೆ. ಹೋಟೆಲ್ನಲ್ಲಿ ಬಡ್ಡಿ ದಂಧೆಕೋರ ಕಿಂಗ್ ಪಿನ್ ನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಎಂ ಎನ್ ಡಿ ಅಲಿಯಾಸ್ ಜಮೀರ್ ಅಹ್ಮದ್ ದರ್ಗಾ ವಾಲೆಯನ್ನು ಹತ್ಯೆಗೆದಿದ್ದಾರೆ. ಮೀಟರ್ ಬಡ್ಡಿ ದಂಧೆಯ ಕಿಂಗ್ ಪಿನ್ ಆಗಿದ್ದ …
Read More »
BigTv News
April 25, 2026
Breaking News
ಚನ್ನೈ: ಅಪ್ರಾಪ್ತ ವಯಸ್ಸಿನ್ನ 5 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯೊಬ್ಬನಿಗೆ ತಮಿಳುನಾಡಿನ ಕೋರ್ಟೊಂದು ಗಲ್ಲು ಶಿಕ್ಷೆ ವಿಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಗಲ್ಲು ಶಿಕ್ಷೆ ವಿಧಿಸುತ್ತಿರುವ ದೇಶದ ಮೊದಲ ಪ್ರಕರಣ ಇದಾಗಿದೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪೋಕ್ಸೋ ವಿಶೇಷ ಕೋರ್ಟ್ ಈ ತೀರ್ಪು ನೀಡಿದ್ದು, ಇದು ಅಪರೂಪದಲ್ಲಿ ಅಪರೂಪದ ಅಪರಾಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಐದೂ ಹೆಣ್ಣುಮಕ್ಕಳು ಸುಮಾರು 10 ವರ್ಷದವರು ಎಂದು ತಿಳಿದುಬಂದಿದ್ದು, ಶಿಕ್ಷೆಗೊಳಗಾದ ವ್ಯಕ್ತಿಯನ್ನು 45 ವರ್ಷದ …
Read More »
BigTv News
April 25, 2026
Breaking News
ರಾಜಧಾನಿ ಬೆಂಗಳೂರಲ್ಲಿ ಬೀದಿ ಕಾಮಣ್ಣರ ಸಂಖ್ಯೆ ಹೆಚ್ಚುತ್ತಿದ್ದು, ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ತೀರಾ ಕಾಮನ್ ಆಗಿದೆ. ಇದೀಗ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಇಬ್ಬರನ್ನು ಬೆಂಗಳೂರಿನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫುಡ್ ಡೆಲಿವರಿ ಬಾಯ್ ಹರೀಶ್, ಪ್ರಜ್ವಲ್ ಬಂಧಿತರು ಎಂದ್ ಗುರುತಿಸಲಾಗಿದೆ. ಬೆಂಗಳೂರಿನ ಕೋಗಿಲು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿತ್ತು. ಬೈಕ್ ನಲ್ಲಿ ತೆರಳುವಾಗ ಯುವತಿಯ ಜೊತೆಗೆ ಅನುಚಿತವಾಗಿ ಇಬ್ಬರೂ ವರ್ತಿಸಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಕೋಗಿಲು ರಸ್ತೆಯಲ್ಲಿ ನಡೆದ …
Read More »
BigTv News
April 25, 2026
Breaking News
ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯೊಬ್ಬ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದು ಜೈಲಿನ ಶೌಚಾಲಯದ ಕೆಟ್ಟಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಕೈದಿ ಮಹಾಂತೇಶ್ (29) ಆತ್ಮಹತ್ಯೆಗೆ ಶರಣಾಗಿದ್ದಾನೆ. ಪೋಕ್ಸೋ ಪ್ರಕರಣದಲ್ಲಿ ಗದಗ ಮೂಲದ ಮಹಾಂತೇಶ್ ಪೋಕ್ಸೋ ಕೇಸ್ ನಲ್ಲಿ ಜೈಲು ಸೇರಿದ್ದ. ಗದಗದಿಂದ ಧಾರವಾಡಕ್ಕೆ ಮಹಾಂತೇಶ ಕುಂಬಾರ ಶಿಫ್ಟ್ ಆಗಿದ್ದ. ನಿನ್ನೆ ಜಿಲ್ಲಾ ಸೆಷನ್ ಕೋರ್ಟ್ ಜಾಮೀನು …
Read More »
BigTv News
April 25, 2026
Breaking News
ಶಿವಮೊಗ್ಗ: ಪ್ರೀತಿ ನಿರಾಕರಿಸಿದ್ದಲ್ಲದೆ, ಯುವತಿ ಕುಟುಂಬದವರಿಂದ ಹಲ್ಲೆಗೊಳಗಾಗಿ ಮನನೊಂದ ಯುವಕನೊಬ್ಬ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿಕಾರಿಪುರ ತಾಲೂಕಿನ ಶಬರೀಶ್ (28) ಮೃತ ಯುವಕ. ಮೂಲತಃ ಶಿಕಾರಿಪುರದ ಶಬರೀಶ್ ತೀರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇಬ್ಬರ ಪ್ರೇಮಕ್ಕೆ ಮನೆಯವರ ವಿರೋಧವಿತ್ತು ಎನ್ನಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಯುವತಿಯು ಶಬರೀಶ್‌ಗೆ ಕರೆ ಮಾಡಿ ನಾನು ನಿನ್ನ ಬಳಿ ಮಾತನಾಡಬೇಕು. ಶಿವಮೊಗ್ಗದ ಕೆಎಸ್‌ಆರ್‌ಟಿಸಿ …
Read More »
BigTv News
April 25, 2026
Breaking News
ಕೋಟೆನಾಡು ಚಿತ್ರದುರ್ಗ ತಾಲೂಕು ಹಾಯ್ಕಲ್ ಗ್ರಾಮದಲ್ಲಿ ಪ್ರೇಮ ವಿವಾಹವಾಗಿ ಏಳು ತಿಂಗಳಲ್ಲೇ ನವವಿವಾಹಿತೆ ಅಸಹಜವಾಗಿ ಸಾವಿಗೀಡಾದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಪತಿ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೃತೆಯನ್ನು ತನುಜಾ ಎಂದು ಗುರುತಿಸಲಾಗಿದ್ದು, ಚಿತ್ರದುರ್ಗದ ಕಾಮನಬಾವಿ ಬಡಾವಣೆಯ ಮೀನಾಕ್ಷಿ ಮತ್ತು ಹೊನ್ನೂರಪ್ಪ ದಂಪತಿಯ ಪುತ್ರಿಯಾಗಿದ್ದಾರೆ. ತನುಜಾ ಹಾಗೂ ವೆಂಕಟೇಶ್ ನಡುವೆ ಪ್ರೇಮ ಸಂಬಂಧ ಬೆಳೆದು, ಕುಟುಂಬಗಳ ವಿರೋಧದ ನಡುವೆಯೇ ಏಳು ತಿಂಗಳ ಹಿಂದೆ ವಿವಾಹವಾಗಿದ್ದರು …
Read More »
BigTv News
April 24, 2026
Breaking News
ಹುಬ್ಬಳ್ಳಿ: ದೆಹಲಿಯಲ್ಲಿ ವ್ಯವಹಾರ ನಡೆಸಲು ಸಹಕರಿಸುವಂತೆ ನಗರದ ಗೋಕುಲ ರಸ್ತೆಯ ಬೆಲ್ಲದ ಕಂಪನಿಯವರನ್ನು ನಂಬಿಸಿ ₹50 ಲಕ್ಷ ಪಡೆದು ವಂಚಿಸಿದ ಉದ್ಯಮಿ ವಿರುದ್ಧ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೆಹಲಿಯ ಡಿಫೆನ್ಸ್ ಕಾಲೊನಿಯ ಉದ್ಯಮಿ ಮಹೇಂದ್ರಪಾಲ್ ಆರೋರ ವಿರುದ್ಧ, ಕಂಪನಿ ಉದ್ಯೋಗಿ ರಾಮಚಂದ್ರ ರಾವ್ ದೂರು ನೀಡಿದ್ದಾರೆ. ಮಹೇಂದ್ರಪಾಲ್ ಅವರು ಎರಡು ಬಾರಿ ಕಂಪನಿಗೆ ಭೇಟಿ ನೀಡಿ, ದೆಹಲಿಯಲ್ಲಿ ಉದ್ಯೋಗ ನಡೆಸಲು ತಮ್ಮ ಮಾರ್ಗದರ್ಶನ ಹಾಗೂ ಸಹಕಾರ …
Read More »
BigTv News
April 24, 2026
Breaking News
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಂತಕರ ಅಟ್ಟಹಾಸ ಮುಂದುವರಿದಿದ್ದು, ನೆಲಮಂಗಲದ ಗಂಗಮ್ಮನ ಗುಡಿ ವ್ಯಾಪ್ತಿಯ ಬಿಡಿಎ ಲೇಔಟ್‌ನಲ್ಲಿ ಅನಾಮಧೇಯ ವ್ಯಕ್ತಿಯ ಶವವೊಂದು ಪತ್ತೆಯಾಗಿರುವುದು ಇಡೀ ಬಡಾವಣೆಯನ್ನು ಬೆಚ್ಚಿಬೀಳಿಸಿದೆ. ಕಿರಾತಕರು ವ್ಯಕ್ತಿಯನ್ನು ಕೊಲೆ ಮಾಡಿ, ಶವವನ್ನು ಚೀಲದಲ್ಲಿ ತುಂಬಿ ಜನರಿಲ್ಲದ ಸಮಯದಲ್ಲಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದಾರೆ. ಇಂದು ಮುಂಜಾನೆ ದುರ್ನಾತ ಬೀರುತ್ತಿದ್ದ ಚೀಲವನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಚೀಲವನ್ನು ಬಿಚ್ಚಿದಾಗ ಕೊಳೆತ …
Read More »
BigTv News
April 24, 2026
Breaking News
ಕುಂದಾಪುರ: ಕಾಳಾವರ ನಿವಾಸಿ, ಪ್ರಸ್ತುತ ಕಟ್ ಬೆಲ್ತೂರು ಗ್ರಾಮದ ಇಂದಿರಾ ನಗರದಲ್ಲಿ ನೆಲೆಸಿರುವ ರಾಘವೇಂದ್ರ ಅವರ ಪತ್ನಿ ಅನಿತಾ ಆರ್. (36) ಅವರು ಮನೆಯಿಂದ ಎ.22 ರಂದು ಕೆಲಸಕ್ಕೆಂದು ಹೊರಟುವರು ಬಳಿಕ ನಾಪತ್ತೆಯಾಗಿದ್ದಾರೆ. ಅನಿತಾ ಅವರು ಕುಂದಾಪುರ ತಾ.ಪಂ. ಕಚೇರಿಯಲ್ಲಿ ಅರೆಕಾಲಿಕವಾಗಿ ಕೆಲಸ ಮಾಡಿಕೊಂಡಿದ್ದಾರೆ. ಎ.22ರ ಬೆಳಗ್ಗೆ ಮನೆಯಿಂದ ತನ್ನಿಬ್ಬರು ಮಕ್ಕಳನ್ನು ಕುಂದಾಪುರಕ್ಕೆ ಕರೆದುಕೊಂಡು ಬಂದಿದ್ದು, ಬಳಿಕ ಆ ಇಬ್ಬರು ಮಕ್ಕಳನ್ನು ಕಾಳಾವರದ ಅಜ್ಜಿ ಮನೆಗೆ ಹೋಗುವ ಬಸ್ಸಿನಲ್ಲಿ ಕಳುಹಿಸಿಕೊಟ್ಟಿದ್ದಾರೆ. …
Read More »
BigTv News
April 24, 2026
Breaking News
ಬೆಳಗಾವಿ: ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ಪ್ರಾಣಾಪಾಯದಿಂದ ಪಾರು ಮಾಡಲು ಹೋಗಿ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ. ಘಟನೆ ಸಂಭವಿಸಿದ ನಾಲ್ಕು ದಿನಗಳ ನಿರಂತರ ಶೋಧದ ನಂತರ ಬಾಲಕನ ಶವವು ಇಂದು ಪತ್ತೆಯಾಗಿದೆ. ಪಟ್ಟಣದ ಹನುಮಾನ ನಗರದ ನಿವಾಸಿಗಳಾದ ಲಕ್ಷ್ಮೀ ಸುಧಾಕರ ಕುಟೋಳಿ (27) ಹಾಗೂ ಅವರ ಪುತ್ರ ಸುಪ್ರೀತ (9) ಮೃತಪಟ್ಟ ದುರ್ದೈವಿಗಳು. ಕಳೆದ ನಾಲ್ಕು ದಿನಗಳ ಹಿಂದೆ …
Read More »