Breaking News

ನಿವೃತ್ತ ನೌಕರರು ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಿವೃತ್ತ ನೌಕರರು ಹಾಗೂ ಇಪಿಎಸ್-95 ನೌಕರರ ಪಿಂಚಣಿಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ನಿವೃತ್ತ ನೌಕರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದೇಶದ ಎಲ್ಲ 78 ಲಕ್ಷ ಇಪಿಎಸ್ ನಿವೃತ್ತ ನೌಕರರಿಗೆ 1 ಸಾವಿರದಿಂದ 3 ಸಾವಿರ ಮಾತ್ರ ಮಾಸಿಕ ಪಿಂಚಣಿ ನೀಡಲಾಗುತ್ತಿದೆ. ಈ ಪಿಂಚಣಿಯಲ್ಲಿ ಜೀವನ ನಡೆಸುವುದೇ ದುರ್ಬರವಾಗಿದೆ. ಆದ್ದರಿಂದ ಭಗತ್‌ಸಿಂಗ್‌ ಕೋಶ್ಯಾರಿ ವರದಿಯನ್ನು ಜಾರಿ ಮಾಡಬೇಕು ಎಂದು ನಿವೃತ್ತ ನೌಕರರು ಒತ್ತಾಯಿಸಿದರು.

ಇಪಿಎಸ್ ನಿವೃತ್ತ ನೌಕರರ ಪಿಂಚಣಿಯನ್ನು 9 ಸಾವಿರಕ್ಕೆ ಹೆಚ್ಚಳ ಮಾಡಬೇಕು, ಬೆಲೆ ಸೂಚ್ಯಂಕದ ಪ್ರಕಾರ 2 ತುಟ್ಟಿ ಭತ್ಯೆ ನೀಡಬೇಕು, ಅಲ್ಲದೇ ಇಪಿಎಸ್ ನಿವೃತ್ತ ನೌಕರರು ಮತ್ತು ಅವರ ಕುಟಂಬಕ್ಕೆ ವೈದ್ಯಕೀಯ ಸೌಲಭ್ಯ ನೀಡಬೇಕು ಎಂದು ನಿವೃತ್ತ ನೌಕರರು ಒತ್ತಾಯಿಸಿದರು.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *