Breaking News

Breaking News

ನಂಜನಗೂಡು: ಬೈಕ್ ಟೈರ್‌ ಸ್ಫೋಟ, ವಿದ್ಯಾರ್ಥಿನಿ ಸಾವು

ಬೈಕ್‌ನಲ್ಲಿ ಚಲಿಸುತ್ತಿದ್ದಾಗ ಟೈರ್ ಸ್ಫೋಟ ಆಗಿ ವಿದ್ಯಾರ್ಥಿನಿ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಗಣೇಶಪುರ ಗ್ರಾಮದ ಬಿಳಿ ಸಂಭವಿಸಿದೆ. ಮಡುವಿನಹಳ್ಳಿಯ ಮಹದೇವಸ್ವಾಮಿ ಎಂಬುವವರ ಪುತ್ರಿ ಸಿಂಚನಾ (16) ಮೃತರು. ಮಹದೇವಸ್ವಾಮಿ ಅವರು ಪತ್ನಿ, ಮಗಳು ಮತ್ತು ಮಗನ ಜತೆ ಬೈಕ್‌ನಲ್ಲಿ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಗಣೇಶಪುರ ಬಳಿ ಬೈಕ್‌ನ ಟೈರ್‌ ಸ್ಫೋಟವಾಗಿದೆ. ನಾಲ್ವರು ರಸ್ತೆಯಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ …

Read More »

ಬಹಿರಂಗವಾಯ್ತು ‘ರೇಪ್ ಅಕಾಡೆಮಿ’ಗಳ ಕರಾಳ ಮುಖ! ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಆನ್‌ಲೈನ್‌ನಲ್ಲಿ ತರಬೇತಿ!

ನವದೆಹಲಿ:ಅಂತರ್ಜಾಲದ ಕತ್ತಲೆ ಲೋಕದಲ್ಲಿ ಮಹಿಳೆಯರ ವಿರುದ್ಧದ ಭಯಾನಕ ಸಂಚೊಂದು ಬಯಲಾಗಿದೆ. ‘ರೇಪ್ ಅಕಾಡೆಮಿ’ ಎಂಬ ಹೆಸರಿನ ಗುಪ್ತ ಆನ್‌ಲೈನ್ ಗುಂಪುಗಳು ಸಕ್ರಿಯವಾಗಿದ್ದು, ಮಹಿಳೆಯರಿಗೆ ಅಮಲು ಪದಾರ್ಥ ನೀಡುವುದು ಮತ್ತು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು ಹೇಗೆ ಎಂಬ ಬಗ್ಗೆ ಪುರುಷರಿಗೆ ‘ತರಬೇತಿ’ ನೀಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಗುಂಪುಗಳಲ್ಲಿ ಮಹಿಳೆಯರ ಮೇಲೆ ದಾಳಿ ಮಾಡಲು ಸಂಚು ರೂಪಿಸುವುದು, ಅವರಿಗೆ ತಿಳಿಯದಂತೆ ಪಾನೀಯಗಳಲ್ಲಿ ಮಾದಕ ದ್ರವ್ಯ ಬೆರೆಸುವುದು ಮತ್ತು ಪಾರಾಗುವ …

Read More »

ಹಾಡಹಗಲೇ ಅಸಭ್ಯ ವರ್ತನೆ: ಹುಬ್ಬಳ್ಳಿನಲ್ಲಿ ರೋಡ್ ರೋಮಿಯೋಗಳ ದೌರ್ಜನ್ಯ

ಹುಬ್ಬಳ್ಳಿನಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದ್ದು, ಸಾರ್ವಜನಿಕ ರಸ್ತೆಗಳಲ್ಲೇ ಯುವತಿಯರ ಮೇಲೆ ಅಸಭ್ಯ ವರ್ತನೆ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದ ದೇಶಪಾಂಡೆ ನಗರದಲ್ಲಿ ನಡೆದ ಘಟನೆಯಲ್ಲಿ, ಒಂಟಿಯಾಗಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದ ಮೂವರು ಯುವಕರು ಹಾಡಹಗಲೇ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದಾರೆ. ಯುವತಿಯ ಹಿಂಭಾಗ ಮುಟ್ಟಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. …

Read More »

ಕತ್ತಲಲ್ಲಿ ಬಂದ್ರು, ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು! ಕಳ್ಳರ ಕೈ ಚಳಕದ ಹಿಂದಿದ್ಯಾ ಬೇರೆ ದಂಧೆ?

ಆನೆಕಲ್: ಎಲೆಕ್ಟ್ರಾನಿಕ್ ಸಿಟಿಯಲ್ಲಿ ಹಸು ಕಳ್ಳತನದ ಪ್ರಕರಣ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಆಗ್ಸ್ಟೈನ್ ಮತ್ತು ಪ್ರಸಾದ್ ಎಂಬ ಹಸು ಸಾಕಾಣಿಕಾರರ ಮನೆ ಪಾರ್ಕಿಂಗ್ ಪ್ರದೇಶದಿಂದ ಮೂರು ಹಸುಗಳು ಹಾಗೂ ಒಂದು ಕರು ಕಳ್ಳತನವಾಗಿವೆ. ಜರ್ಸಿ ಮತ್ತು ಎರಡು ಹೆಚ್‌ಎಫ್ ತಳಿಯ ಹಸುಗಳನ್ನು ರಾತ್ರಿ ವೇಳೆ ಕಾರಿನಲ್ಲಿ ಬಂದ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಸುಗಳಿಗೆ ಹುಲ್ಲು ಹಾಕಿ ಮಲಗಿದ್ದ ಮಾಲೀಕರು ಬೆಳಿಗ್ಗೆ ನೋಡಿದಾಗ ಅವು ಕಾಣೆಯಾಗಿದ್ದು …

Read More »

ಸಾಲ ಮಾಡಿ ತಂದಿದ್ದ ‘ಕನಸಿನ ಬೈಕ್’ ಕೊಂಡ ರಾತ್ರಿಯೇ ಕಳ್ಳತನ! ಕೆಟಿಎಂ ಬೈಕ್ ಕಳವಿನ ಕೃತ್ಯ ಸಿಸಿಟಿವಿಲಿ ಸೆರೆ

ನೆಲಮಂಗಲ: ಯುವಕನೊಬ್ಬ ಕಷ್ಟಪಟ್ಟು ಹಣ ಉಳಿಸಿ, ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಅದೇ ದಿನ ರಾತ್ರಿ ಕಳ್ಳತನವಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೈಕ್ ಮಾಲೀಕ ಚಂದು ಈಗ ಕಂಗಾಲಾಗಿದ್ದಾರೆ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಮನೆಯ ಮುಂದೆ ಚಂದು ತನ್ನ ಕೆಟಿಎಂ ಬೈಕ್ ಅನ್ನು ಸುರಕ್ಷಿತವಾಗಿ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಮಧ್ಯರಾತ್ರಿ ಬೇರೆ ಬೈಕ್‌ನಲ್ಲಿ ಬಂದ ಕಳ್ಳರ ಗ್ಯಾಂಗ್, ಯಾರ ಭಯವೂ ಇಲ್ಲದೆ ಕ್ಷಣಾರ್ಧದಲ್ಲಿ ಲಾಕ್ ಓಪನ್ …

Read More »

ಡಿಜಿ ಆರ್ಡರ್‌ಗೂ ತಲೆಕೆಡಿಸಿಕೊಳ್ಳದೇ, ರಸ್ತೆ ಮಧ್ಯೆ ದಂಡ ವಸೂಲಿ ಕೇಂದ್ರ” ಮಾಡಿದ್ದಾರೆಯೇ ಟ್ರಾಫಿಕ್ ಪೊಲೀಸರು..!

ಡಿಜಿ ಆರ್ಡರ್‌ಗೆ ಧಿಕ್ಕಾರ: ರಸ್ತೆ ಮೇಲೆ GST ವಸೂಲಿ’ ನಡೆಸುತ್ತಿರುವ ಟ್ರಾಫಿಕ್ ಪೊಲೀಸರು..! ರಿಂಗ್ ರೋಡ್, ಬೈಪಾಸ್‌ಗಳಲ್ಲಿ ದಂಧೆ ಜೋರಾ..? ಡಾಕ್ಯುಮೆಂಟ್ ನೆಪದಲ್ಲಿ ಹಣ ಕೀಳ್ತಿದ್ದಾರೆ ಎಂಬ ಗಂಭೀರ ಆರೋಪ..! ಜನರ ರಕ್ಷಕರುನಾ ಅಥವಾ ವಸೂಲಿ ಗ್ಯಾಂಗ್‌ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಸ್ಫೋಟ..! ಹೊರ ರಾಜ್ಯದ ವಾಹನ ಕಂಡಾಕ್ಷಣ ಕೆಲ ಟ್ರಾಫಿಕ್ ಪೊಲೀಸರ ಕಣ್ಣಲ್ಲಿ “ಕಾನೂನು” ಅಲ್ಲ, “ಕಲೆಕ್ಷನ್” ಮಾತ್ರ ಕಾಣುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಗಸ್ತು …

Read More »

ತೀರ್ಥಹಳ್ಳಿ ಮಹಿಳೆಗೆ 12.52 ಲಕ್ಷ ರೂ. ವಂಚನೆ |

ಶಿವಮೊಗ್ಗ:ಫೇಸ್‌ಬುಕ್‌ನಲ್ಲಿ ಪರಿಚಿತ ವ್ಯಕ್ತಿಯೊಬ್ಬ ಹಣಕಾಸಿನ ಸಹಾಯ ಮಾಡುವುದಾಗಿ ನಂಬಿಸಿ ತೀರ್ಥಹಳ್ಳಿಯ ಮಹಿಳೆಗೆ ಬರೋಬ್ಬರಿ 12.52 ಲಕ್ಷ ರೂ. ವಂಚಿಸಿದ್ದಾನೆ. ಫೇಸ್‌ಬುಕ್‌ನಲ್ಲಿ ಡಾ. ಅಲೆಕ್ಸ್ ಚಾರ್ಲ್ಸ್ ಎಂಬಾತ 44 ವರ್ಷದ ಮಹಿಳೆಗೆ ಫೇಸ್‌ಬುಕ್ ಮೂಲಕ ಪರಿಚಿತನಾಗಿದ್ದ. 110,000 ವಿದೇಶದ ನಂಬರ್‌ನಿಂದ ಮೆಸೇಜ್ ಮಾಡಿ ಹಣಕಾಸಿನ ಸಹಾಯ ಮಾಡುವುದಾಗಿ ನಂಬಿಸಿ ಮಹಿಳೆಯ ಯೂನಿಯನ್ ಬ್ಯಾಂಕ್‌ನ ಮಾಹಿತಿ ಪಡೆದಿದ್ದ. ಬಳಿಕ ಕ್ಯಾಪಿಟಲ್ ಸ್ಟರ್ಲಿಂಗ್ ಯುಕೆ ಬ್ಯಾಂಕ್‌ನ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವಂಚಕರು, …

Read More »

ಮಣಿಪಾಲ: ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ; ಅಪಾರ ನಷ್ಟ

ಮಣಿಪಾಲ ಎಪ್ರಿಲ್ 20: ಈಶ್ವರ ಮತ್ತೆ ನಗರದಲ್ಲಿರುವ ಕರ್ನಾಟಕ ಹಾಲು ಒಕ್ಕೂಟದ (KMF) ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಅಕಸ್ಮಿಕ ಸಂಭವಿಸಿದೆ. ಘಟಕದಲ್ಲಿ ನಡೆಯುತ್ತಿದ್ದ ವೆಲ್ಡಿಂಗ್ ಕೆಲಸದ ವೇಳೆ ಉಂಟಾದ ಕಿಡಿ ಬೆಂಕಿಗೆ ಕಾರಣವಾಗಿದ್ದು, ಘಟಕಕ್ಕೆ ಅಪಾರ ಹಾನಿಯಾಗಿದೆ ಎಂದು ತಿಳಿದುಬಂದಿದೆ.ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಘಟಕದಲ್ಲಿ ವೆಲ್ಡಿಂಗ್ ಕಾರ್ಯ ನಡೆಯುತ್ತಿತ್ತು.ಈ ಸಂದರ್ಭದಲ್ಲಿ ಹಾರಿದ ಬೆಂಕಿಯ ಕಿಡಿಯು ಸಮೀಪದಲ್ಲಿದ್ದ ಆಯಿಲ್ ಮೇಲೆ ಬಿದ್ದಿದೆ. …

Read More »

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಆರ್‌ಟಿಒ ಅಧಿಕಾರಿಗೆ ಜೀವ ಬೆದರಿಕೆ: ಪ್ರಕರಣ ದಾಖಲು

ಬೆಂಗಳೂರು : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಅಪರಿಚಿತನೊಬ್ಬ ಕರೆ ಮಾಡಿ ಮಹಾರಾಷ್ಟ್ರದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ(ಆರ್‌ಟಿಒ) ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.ಪ್ರಸಾದ್ ಶಿವದಾಸ್ ನಾಲ್ವಡೆ ಎಂಬವರು ನೀಡಿದ ದೂರಿನನ್ವಯ ಅಪರಿಚಿತನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಪ್ರಸಾದ್ ಶಿವದಾಸ್ ನಾಲ್ವಡೆ ನೀಡಿದ ದೂರಿನಂತೆ ಮಹಾರಾಷ್ಟ್ರದ ಕಾಶಿಗಾಂವ್ ಠಾಣೆಯ ಪೊಲೀಸರು ಶೂನ್ಯ …

Read More »

ಮನೆಯೊಳಗೆ ನುಗ್ಗಿ ಕೀ ಕದ್ದು ಸ್ಕೂಟರ್‌ನೊಂದಿಗೆ ಪರಾರಿಯಾದ ಕಳ್ಳರು!

ಕಾರ್ಕಳ, ಎ.20: ಮನೆಯೊಳಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿ, ಬಳಿಕ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿಕೊಂಡು ಹೋದ ಘಟನೆ ಕಾರ್ಕಳ ಕರಿಯಕಲ್ಲು ಎಂಬಲ್ಲಿ ನಡೆದಿದೆ.ಉಜಿರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ಶೆಟ್ಟಿ ಎಂಬವರು ಎ.16ರಂದು ಮನೆಗೆ ಬೀಗ ಹಾಕಿ ಹೋಗಿದ್ದು, ಎ.19ರಂದು ಬೆಳಗ್ಗೆ ಮನೆಯಲ್ಲಿ ಕಳವು ನಡೆದಿರುವುದು ಕಂಡುಬಂದಿದೆ. ಈ ಅವಧಿಯಲ್ಲಿ ಮನೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನೊಳಗಿದ್ದ ಬಟ್ಟೆಯನ್ನು ಚೆಲ್ಲಾಪಿಲ್ಲಿ ಮಾಡಿದ್ದು, ನಂತರ ಮನೆಯ ಒಳಗಡೆ …

Read More »