Breaking News

Breaking News

ರೈಲಿನಲ್ಲಿ ಇಬ್ಬರು ಯುವಕರಿಂದ ಗಾಂಜಾ ಸೇವನೆ: ಪ್ರಯಾಣಿಕರಲ್ಲಿ ಆತಂಕ

ಹುಬ್ಬಳ್ಳಿ: ಹಜರತ್ ನಿಜಾಮುದ್ದೀನ್-ಯಶವಂತಪುರ ನಡುವೆ ಸಂಚರಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12650) ನಲ್ಲಿ ಇಬ್ಬರು ಯುವಕರು ಬಹಿರಂಗವಾಗಿ ಗಾಂಜಾ ಸೇವನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಪ್ರಯಾಣದ ವೇಳೆ ಸಿಗರೇಟ್‌ನಲ್ಲಿ ಗಾಂಜಾ ಸೇರಿಸಿ ಸೇದುತ್ತಾ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ ದೃಶ್ಯಗಳು ಕಂಡುಬಂದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಪ್ರಯಾಣಿಕರ ಭಯವಿಲ್ಲದೆ ರೈಲಿನೊಳಗೇ ಅಸಭ್ಯವಾಗಿ ವರ್ತಿಸಿದ ಯುವಕರ ಕೃತ್ಯವನ್ನು ಸಹಪ್ರಯಾಣಿಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಇದೀಗ ವಿಡಿಯೋ ಸಾಮಾಜಿಕ …

Read More »

ಪಂಜಾಬಲ್ಲಿ ಉಗ್ರ ಜಾಲ ಬಯಲು: ಇಬ್ಬರ ಬಂಧನ, ಸ್ಫೋಟಕ ವಶ

ಚಂಡೀಗಢ: ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ‘ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್’ ಭಯೋತ್ಪಾದಕ ಜಾಲವನ್ನು ಭೇದಿಸಿರುವ ಪಂಜಾಬ್‌ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬಂಧಿತರನ್ನು ಗುರ್ದಾಸ್‌ಪುರದ ಆಕಾಶ್ ಮಸಿಹ್ ಮತ್ತು ಜಬ್ಲಾನ್ ಎಂದು ಗುರುತಿಸಲಾಗಿದೆ. ಇಬ್ಬರೂ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಪಂಜಾಬ್‌ನಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಭಾರಿ ಪ್ರಮಾಣದ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಬಂಧಿತರಿಂದ ಗ್ರೆನೇಡ್‌, ಡಿಟೋನೇಟರ್‌, 1 ಕೆಜಿ ಸ್ಫೋಟಕ ಸಾಮಾಗ್ರಿ …

Read More »

ತೋಟದ ಬಳಿ ಯುವಕನ ಮೃತದೇಹ ಪತ್ತೆ

ಶಿವಮೊಗ್ಗ : ನಗರದ ತುಂಗಾನಗರ ಸಮೀಪದ ಕಾಮತ್ ಲೇಔಟ್‌ನ ತೋಟವೊಂದರ ಬಳಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ. ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಮೃತಪಟ್ಟವರು ಎಂದು ತಿಳಿದು ಬಂದಿದೆ. ಮಂಜುನಾಥ್ ಅಡಿಕೆ ಆರಿಸುವ ಹಾಗೂ ಮೂಟೆ ಹೊರುವ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮನೆಯಲ್ಲಿದ್ದರು. ಬುಧವಾರ ಬೆಳಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಹೋದವರು ಗುರುವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಕುರಿತಾಗಿ ಮಂಜುನಾಥ್ …

Read More »

ಅಂಗವಿಕಲನ ಪೆಟ್ಟಿಗೆ ಅಂಗಡಿಗೆ ದುಷ್ಕರ್ಮಿಗಳ ಬೆಂಕಿ

ಮಾಗಡಿ: ಪಟ್ಟಣದ ಎನ್‌ಇಎಸ್ ವೃತ್ತದ ಬಳಿ ಅಂಗವಿಕಲ ವ್ಯಕ್ತಿಯೊಬ್ಬರ ಪೆಟ್ಟಿಗೆ ಅಂಗಡಿಗೆ ಬುಧವಾರ ರಾತ್ರಿ ಬೆಂಕಿ ಹಚ್ಚಲಾಗಿದೆ. ಬುಧವಾರ ರಾತ್ರಿ ಅಪರಿಚಿತ ವ್ಯಕ್ತಿಗಳು ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಸಿಬ್ಬಂದಿ ಬೆಂಕಿ ನಂದಿಸಿದರು. ಅಂಗಡಿಯಲ್ಲಿದ್ದ ಸುಮಾರು ₹2 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ ಎಂದು ಅಂಗಡಿ ಮಾಲೀಕ ಕೃಷ್ಣಮೂರ್ತಿ ತಿಳಿಸಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಟ್ಟಣದ ತಿರುಮಲೆ …

Read More »

ಒಡಿಶಾ ಮೂಲದ ಯುವಕ ನಾಪತ್ತೆ

ಮಂಗಳೂರು: ಕೇರಳದ ಕುಂಬಳೆಯಿಂದ ಮಂಗಳೂರಿನ ಲಾಲ್ ಬಾಗ್ ಗೆ ಮೊಬೈಲ್ ಖರೀದಿಗಾಗಿ ಬಂದಿದ್ದ ಒಡಿಶಾ ಮೂಲದ ಚಂದನ್ ಮಾಝಿ (19) ನಾಪತ್ತೆಯಾಗಿದ್ದಾರೆ. ಅವರು ಕುಂಬಳೆ ಆನಂದಪುರಂ ಎಂಬಲ್ಲಿ ಫ್ಲೈವುಡ್ ಕೆಲಸ ಮಾಡಿಕೊಂಡಿದ್ದರು. 2025ರ ಆ.24ರಂದು ಮೊಬೈಲ್ ಖರೀದಿಗಾಗಿ ಮಂಗಳೂರಿಗೆ ಬಂದಿದ್ದರು. ಊರಿನಿಂದ ಆತನನ್ನು ಕರೆದುಕೊಂಡು ಬಂದಿದ್ದ ಭರತ್ ಚಂದ್ರ ಬೆಹರ್ ಅವರು ಮಂಗಳೂರಿಗೆ ಬಂದು ಎಲ್ಲ ಕಡೆ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಈ ಬಗ್ಗೆ ಆತನ ತಂದೆ ಬಿದ್ಯಾಧರ್ ಮಾಝಿಗೆ …

Read More »

ಕೇರಳದಿಂದ ಅಕ್ರಮ ಕೆಂಪುಕಲ್ಲು ಸಾಗಾಟ

ಪುತ್ತೂರು: ಕರ್ನಾಟಕದ ಪರವಾನಿಗೆ ಹಿಡಿದು ಕೇರಳದಿಂದ ಕೆಂಪುಕಲ್ಲು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಪಡವನ್ನೂರು ಗ್ರಾಮದ ಸುಳ್ಯಪದವು ಚೆಕ್ ಪೋಸ್ಟ್ ನಲ್ಲಿ ತಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ಭವಿತ್ ಎಂಬಾತ ಕೇರಳ ಭಾಗದಿಂದ ಲಾರಿಯಲ್ಲಿ ಕೆಂಪುಕಲ್ಲು ತುಂಬಿಕೊಂಡು ಆಗಮಿಸಿದ್ದು, ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಸಿಬಂದಿ ಶಿವಪುತ್ರಮ್ಮ ಹಾಗೂ ಬಿಸ್ಮಿಲ್ಲಾ ಅವರು ಲಾರಿಯನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೆ ಮುಂದೆ ಹೋಗಿ ನಿಲ್ಲಿಸಿದ್ದಾನೆ. ಬಳಿಕ ವಿಚಾರಿಸಿದಾಗ …

Read More »

ಬೆಂಗಳೂರಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ – ಆರೋಪಿ ಬಂಧನ!

ಬೆಂಗಳೂರೂ : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ ಮಾರಾಟ ಮಾಡುತ್ತಿದ್ದ ಆರೋಪ ಸಂಬಂಧ ಶಿವಾಜಿನಗರದ ನಿವಾಸಿ ಸೈಯದ್ ಸಜ್ಜಾದ್ (50)ರನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯ ಅಂಬೇಡ್ಕರ್ ಕಾಲೇಜು ಬಳಿ ವಿದ್ಯಾರ್ಥಿಗಳಿಗೆ ಕೊಕೇನ್ ಮಾರಾಟ ಮಾಡಲು ಮುಂದಾಗಿದ್ದ ವೇಳೆ ಪೊಲೀಸರಿಗೆ ಪಕ್ಕಾ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರಿಗೆ 1 ಕೆಜಿ 100 ಗ್ರಾಂ ಕೊಕೇನ್ ಸಿಕ್ಕಿದ್ದು, ಕೂಡಲೇ …

Read More »

ಶಿವಮೊಗ್ಗ: ತಡೆಗೋಡೆ ನಿರ್ಮಾಣದ ವೇಳೆ ಭೀಕರ ದುರಂತ; ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುರುವಾರ ಗುಡ್ಡ ಕುಸಿದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಕಾರ್ಮಿಕರನ್ನು ರಾಘವೇಂದ್ರ(37), ರಾಜು(30) ಮತ್ತು ಶಬ್ಬೀರ್(40) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹುಲಿಕಲ್ ಘಾಟ್‌ನಲ್ಲಿ ವಾಹನ ಸವಾರರ ಸುರಕ್ಷತೆಗಾಗಿ ತಡೆಗೋಡೆ ನಿರ್ಮಾಣ ಕೆಲಸ ನಡೆಯುತ್ತಿತ್ತು. ಗುತ್ತಿಗೆದಾರ ಚಂದ್ರಶೇಖರ್ …

Read More »

ಬಾಲ ಬಿಚ್ಚಿದರೆ ಗಡೀಪಾರು: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ರೌಡಿಗಳಿಗೆ ಕಮಿಷನರ್ ಖಡಕ್ ಎಚ್ಚರಿಕೆ

ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪುಡಿ ರೌಡಿಗಳ ಉಪಟಳ ಮತ್ತು ಚಾಕು ಇರಿತದಂತಹ ಕೃತ್ಯಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.ನಗರದ ಹಳೆ ಸಿಎಆರ್ ಮೈದಾನದಲ್ಲಿ ಇಂದು ನಡೆದ ಬೃಹತ್ ರೌಡಿ ಪರೇಡ್‌ನಲ್ಲಿ 450ಕ್ಕೂ ಹೆಚ್ಚು ರೌಡಿ ಶೀಟರ್‌ಗಳು ಭಾಗಿಯಾಗಿದ್ದರು. ನೆತ್ತಿ ಸುಡುವ ಬಿಸಿಲಿನಲ್ಲಿ ನಡೆದ ಈ ಪರೇಡ್‌ನಲ್ಲಿ ಒಬ್ಬೊಬ್ಬರ ಹಳೆಯ ಇತಿಹಾಸ ಕೆದಕಿದ ಕಮಿಷನರ್, ಸಾರ್ವಜನಿಕರ ಶಾಂತಿ …

Read More »

*ಬೆಳಗಾವಿ ಪೊಲೀಸರಿಂದ ಅಕ್ರಮ ಸಾರಾಯಿ ಅಡ್ಡೆ ಮೇಲೆ ದಾಳಿ; ಆರೋಪಿ ಪರಾರಿ*

ಬೆಳಗಾವಿ ನಗರದ ಗ್ಯಾಂಗ್‌ವಾಡಿಯ ಸ್ಪಂದನಾ ಆಸ್ಪತ್ರೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿರುವ ಮಾಳಮಾರುತಿ ಠಾಣೆಯ ಪೊಲೀಸರು ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ. ಡಾನ್ ಮೇತಾಜಿ ಚೌಗಲೆ ಈ ಪ್ರಕರಣದ ಆರೋಪಿಯಾಗಿದ್ದು, ಪೊಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ.‌ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ವಿವಿಧ ಕಂಪನಿಯ ಸರಾಯಿ ಮಾರಾಟ ಮಾಡುತ್ತಿದ್ದಾಗ ಮಾಳಮಾರುತಿ ಠಾಣೆಯ ಎಎಸ್‌ಐ ಎಂ ಯು ಹಿರೇಮಠ. ಹಾಗೂ …

Read More »