BigTv News
March 19, 2026
Breaking News
ಸರಕಾರಿ ಸೇವೆಯಲ್ಲಿದ್ದುಕೊಂಡೇ ಮಠ ಸ್ಥಾಪಿಸಿ, ಸ್ವಾಮೀಜಿಯಾಗಿದ್ದ ಮುಖ್ಯಗುರುವೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ತಾಲೂಕಿನ ಬಸ್ಸಾಪುರ (ಇಜೆ) ಗ್ರಾಮದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಮುಳ್ಳೂರು ಇಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ದೇವೆಂದ್ರಪ್ಪ (58) ಮೃತರು. ಸರಕಾರಿ ಶಿಕ್ಷಕನಾಗಿ ಸೇವೆಯಲ್ಲಿದ್ದ ದೇವೆಂದ್ರಪ್ಪ ಅವರು, ಕಳೆದ ಅನೇಕ ವರ್ಷಗಳಿಂದ ವೈರಾಗ್ಯ ಜೀವನದತ್ತ ಮುಖ ಮಾಡಿದ್ದರು ಎನ್ನಲಾಗಿದೆ. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮದ …
Read More »
BigTv News
March 19, 2026
Breaking News
ಬಜಪೆ: ತೆಂಕ ಎಡಪದವು ಗ್ರಾಮದ ಸಾಸ್ತಾವು ದೇವಸ್ಥಾನದ ಬಳಿ ಫಾರ್ಚೂನರ್ ಕಾರಿನಲ್ಲಿ ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಗಸ್ತು ನಿರತ ಬಜಪೆ ಪೊಲೀಸರು, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಾನುವಾರುಗಳನ್ನು ರಕ್ಷಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಕಾರಿನಲ್ಲಿ 4 ದನಗಳನ್ನು ಕೈ ಕಾಲು ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ದನಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು, ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಶಕ್ಕೆ ಪಡೆದ ಕಾರಿನ …
Read More »
BigTv News
March 19, 2026
Breaking News
ಸಾಗರ: ತಾಲ್ಲೂಕಿನ ಗೌತಮಪುರ ಗ್ರಾಮದ ಬಳಿ ಹಾಲು ಸಾಗಿಸುವ ಕ್ಯಾಂಟರ್ ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಿ ಮಾರುತಿ ಓಮಿನಿಗೆ ಡಿಕ್ಕಿ ಹೊಡೆಸಿ, ಅದರಲ್ಲಿದ್ದ ವ್ಯಕ್ತಿಯ ಸಾವಿಗೆ ಕಾರಣನಾದ ಚಾಲಕನಿಗೆ ಇಲ್ಲಿನ ಹಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ, ₹ 35 ಸಾವಿರ ದಂಡ ವಿಧಿಸಿದೆ. ಶಿಕಾರಿಪುರದ ಇನಾಮ್ ಅಗ್ರಹಾರ ಬಡಾವಣೆಯ ಶಿವಾನಂದ ಟಿ.ಟಿ. ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. 2024ರ ಸಾಲಿನ ಜೂನ್ …
Read More »
BigTv News
March 19, 2026
Breaking News
ಕರ್ನಾಟಕದ ಚಿಕ್ಕಬಳ್ಳಾಪುರದ ಯುವಕ ಪಡೆದಿದ್ದ ಯುಪಿಎಸ್‌ಸಿ ರ್‍ಯಾಂಕ್ ಅನ್ನು, ತನ್ನದೆಂದು ಸುಳ್ಳು ಹೇಳಿಕೊಂಡು ಸನ್ಮಾನ ಸ್ವೀಕರಿಸಿದ್ದ ಬಿಹಾರದ ಯುವಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಶೇಖ್‌ಪುರದ ನಿವಾಸಿ ರಂಜೀತ್ ಕುಮಾರ್ ಬಂಧಿತ. ಮಾ.6ರಂದು 2025ನೇ ಸಾಲಿನ ಯುಸಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಇದರಲ್ಲಿ 440ನೇ ರ್‍ಯಾಂಕ್ ಅನ್ನು ಚಿಕ್ಕಬಳ್ಳಾಪುರದ ರಂಜಿತ್ ಕುಮಾರ್ ಎಂಬುವವರು ಪಡೆದಿದ್ದರು. ಆದರೆ ಬಿಹಾರದ ರಂಜೀತ್ ತಾನೇ 440ನೇ ರ್‍ಯಾಂಕ್ ಪಡೆದಿದ್ದೇನೆ ಎಂದು ಊರವರನ್ನು ನಂಬಿಸಿದ್ದ. ಶಾಸಕರು, ಸ್ಥಳೀಯ ಮುಖಂಡರು …
Read More »
BigTv News
March 19, 2026
Breaking News
ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಸಮೀಪದ ಬಸರಿಹಾಳ ಗ್ರಾಮದ ಯುವಕ ಕುಮಾರಸ್ವಾಮಿ(22) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬಸರಿಹಾಳ ಗ್ರಾಮದ ಬಾಲಕಿಯನ್ನು ಆರೋಪಿ ಗಂಗಾವತಿ ತಾಲೂಕಿನ ವಿರುಪಾಪುರಗಡ್ಡಿ ಪರಿಸರಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪಿಐ ವಿ.ನಾರಾಯಣ ತಿಳಿಸಿದ್ದಾರೆ.
Read More »
BigTv News
March 19, 2026
Breaking News
ಉಡುಪಿ: ಸಂತೆಕಟ್ಟೆಯಲ್ಲಿ ಬುಧವಾರ ಸರಣಿ ಅಪಘಾತ ನಡೆದು ಹಲವರು ಗಾಯಗೊಂಡಿದ್ದಾರೆ. ಕುಂದಾಪುರದಿಂದ ಉಡುಪಿ ಕಡೆಗೆ ಬಲೆನೊ ಹಾಗೂ ಇಟಿಯೋಸ್ ಕಾರು ಬರುತ್ತಿತ್ತು. ಈ ವೇಳೆ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿದ್ದ ಬಲೆನೊ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ಉಡುಪಿಯಿಂದ ಕುಂದಾಪುರ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬಲೆನೊ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಜಗದೀಶ್ ತೋಳಾರ್ ಗಾಯಗೊಂಡಿದ್ದಾರೆ. ಇಟಿಯೋಸ್ ಕಾರಿನಲ್ಲಿದ್ದ …
Read More »
BigTv News
March 19, 2026
Breaking News
ದಕ್ಷಿಣಕನ್ನಡ : ಕರಾವಳಿ ಭಾಗದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ. ಹಿಂದೂ ವಿದ್ಯಾರ್ಥಿನಿಯರ ಜೊತೆಗೆ ಇದ್ದ ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈ ಒಂದು ಘಟನೆ ನಡೆದಿದೆ. ಜನಾರ್ಧನ ಸ್ವಾಮಿ ದೇಗುಲದ ಬ್ರಹ್ಮ ಕಳಶೋತ್ಸವ ಜಾತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. 17 ವರ್ಷದ ಮುಸ್ಲಿಂ ಬಾಲಕನ ದೂರಿನ ಮೇರೆಗೆ ಇದೀಗ ಕೇಸ್ ದಾಖಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ …
Read More »
BigTv News
March 19, 2026
Breaking News
ಹಾವೇರಿ: ಪ್ರೀತಿಸಿದ ಯುವತಿಗೆ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪಿ ವಿರುದ್ಧ ತಾಲೂಕಿನ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸೋಗಿ ಗ್ರಾಮದ ಮಂಜುನಾಥ ಮಲ್ಲಪ್ಪ ಜಂಗ್ಲಿ ಎಂಬುವನ ವಿರುದ್ಧ ದೂರು ದಾಖಲಾಗಿರುವುದು. ಯುವತಿಯು ಬಿ.ಎಡ್. ಓದುವಾಗ ಆಕೆಯನ್ನು ಪರಿಚಯ ಮಾಡಿಕೊಂಡ ಆರೋಪಿ ಮಂಜುನಾಥ ನನ್ನನ್ನು ಪ್ರೀತಿ ಮಾಡಬೇಕು. ಇಲ್ಲವಾದರೆ ನಾನು ಜೀವಂತ ಇರುವುದಿಲ್ಲ ಎಂದು ಹೆದರಿಸಿ ಪ್ರೀತಿ ಮಾಡುವಂತೆ ಮಾಡಿದ್ದ. ನಂತರ ಯುವತಿಯು …
Read More »
BigTv News
March 18, 2026
Breaking News
ಸಾಗರ: ಇಲ್ಲಿನ ನೆಹರು ನಗರದ ನವಾಯತ್ ಕಾಲೋನಿಯ ಮನೆಯೊಂದರಲ್ಲಿ ಸುಮಾರು 24 ಕೆಜಿ ಗೋಮಾಂಸ ಪತ್ತೆಯಾಗಿದೆ. ಪೇಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವೀಳ್ಯದೆಲೆ ಮಾರಾಟ ಮಾಡುವ ಎಲೆ ಫಾರೂಕ್ ಎಂಬುವವರ ಮನೆಯಲ್ಲಿ ದನದ ಮಾಂಸ ಸಿಕ್ಕಿದೆ. ನೆಹರು ನಗರದ ಅವರ ಮನೆಯಲ್ಲಿ ಭದ್ರಾವತಿಯಿಂದ ಅಥವಾ ಶಿವಮೊಗ್ಗದ ತುಂಗಾ ನಗರದಿಂದ 80 ಕೆಜಿ ದನದ ಮಾಂಸ ತರಿಸಿ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ …
Read More »
BigTv News
March 18, 2026
Breaking News
ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದ ಮದುವೆಯಾಗಿ 15 ದಿನಕ್ಕೆ ಹೆಂಡತಿಯು ಮನೆಯಲ್ಲಿದ್ದ ಒಡವೆ ಎತ್ತಿಕೊಂಡು ಗಂಡನ ಮನೆಯಿಂದ ಪರಾರಿಯಾಗಿರುವ ಘಟನೆ ನಡೆದಿದೆ. ನೇತ್ರ ಗಂಡನಿಗೆ ಕೈಕೊಟ್ಟು ಪರಾರಿಯಾದ ಪತ್ನಿ. ಆಂದ್ರದ ಮದನಪಲ್ಲಿ ಬಾಸ್ಕರ್ ಆಕೆಯ ಪತಿ. ಬ್ರೋಕರ್‌ಗಳನ್ನು ನಂಬಿ ಒಂದೇ ದಿನ ನೋಡಿ ವಿವಾಹವಾಗಿದ್ದ ಭಾಸ್ಕರ್, ಅರಿವಿಲ್ಲದೆ ವಿವಾಹಿತ ಮಕ್ಕಳ ತಾಯಿಯನ್ನು ಮದುವೆಯಾಗಿದ್ದಾನೆ ಎನ್ನಲಾಗಿದೆ. ಈ ಜೋಡಿಗಳು ಚಿಂತಾಮಣಿ ತಾಲ್ಲೂಕಿನ ಗೌನಿಚೆರುವುಪಲ್ಲಿಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಮಾವ ವೆಂಕಟರವಣರೆಡ್ಡಿ …
Read More »