BigTv News
March 8, 2026
Breaking News
ಹುಬ್ಬಳ್ಳಿ: ರೊಟ್ಟಿ ಕೇಂದ್ರದ ಲೈಸೆನ್ಸ್‌ಗೆ ಲಂಚ ಪಡೆಯುವ ವೇಳೆ ಹು-ಧಾ ಮಹಾನಗರ ಪಾಲಿಕೆ ವಲಯ 1ರ ಆರೋಗ್ಯ ನಿರೀಕ್ಷಕಿ ಹೀನಾ ಕೌಸರ್ ಕುರಹಟ್ಟಿ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಳೆಪ್ಪ ತಳವಾರ ಎನ್ನುವವ ವ್ಯಕ್ತಿ ತಮ್ಮ ಪತ್ನಿ ಹೆಸರಿನಲ್ಲಿ ರೊಟ್ಟಿ ಕೇಂದ್ರ ತೆರೆಯಲು ಉದ್ದೇಶಿಸಿದ್ದರು. ವಲಯ 1ರ ಆರೋಗ್ಯ ನಿರೀಕ್ಷಕಿ ಹೀನೌ ಕೌಸರ್ ಅವರನ್ನು ಭೇಟಿಯಾಗಿದ್ದರು. ಕೇಂದ್ರ ತೆರೆಲಯ ಲೈಸೆನ್ಸ್ ಪಡೆಯಬೇಕು. ಅದಕ್ಕೆ 4,500 ರೂ. ಲಂಚ ಹಣ ಕೊಡಬೇಕು …
Read More »
BigTv News
March 8, 2026
Breaking News
ಮಂಗಳೂರು: ಉರ್ವ ಮಾರಿಗುಡಿ ಬಳಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಒಟ್ಟು 12.46 ಗ್ರಾಂ ತೂಕದ 1,24,600 ರೂ. ಅಂದಾಜು ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ಗೊಲ್ತಮಜಲು ಮೂಲದ ಅಶೋಕನಗರ ವೇಲ್ಸ್ ಪೇಟೆಯ ತಿಲಕ್ ರಾಜ್ (31) ಮತ್ತು ಬಜಪೆ ಭಟ್ರಕೆರೆ ಮೂಲದ ಕುದ್ರೋಳಿ ನಡುಪಳ್ಳಿ ಬಳಿಯ ಶೇಕ್ ಮೊಹಮ್ಮದ್ ಹ್ಯಾರಿಸ್ ಅಲಿಯಾಸ್ ಜಿಗರ್ (32) ಬಂಧಿತ …
Read More »
BigTv News
March 8, 2026
Breaking News
ಯಾದಗಿರಿ: ತವರು ಮನೆಯಿಂದ ಹಣ ತರುವಂತೆ ಬೆದರಿಸಿ ಗೃಹಿಣಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಆಕೆಯ ಪತಿ ಸೇರಿ ನಾಲ್ವರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುಮಠಕಲ್ ತಾಲ್ಲೂಕಿನ ಕೇಶ್ವಾರ ಗ್ರಾಮದ ನಿವಾಸಿ, ಕೊಂಕಲ್ ಪಿಎಚ್‌ಸಿಯ ಆರೋಗ್ಯ ಸುರಕ್ಷಣಾಧಿಕಾರಿಯಾದ ಸುನಿತಾ ವಿಶ್ವನಾಥ ಅವರು ನೀಡಿದ ದೂರಿನ ಅನ್ವಯ ಪತಿ ವಿಶ್ವನಾಥ ಸಾಬಣ್ಣ ನಿರೇಟಿ, ಶಿವಕಾಂತ ಸಾಬಣ್ಣ ನಿರೇಟಿ, ಶರಣಮ್ಮ ನರಸಿಂಹುಲು ನಿರೇಟಿ ಮತ್ತು ಶಿವಕುಮಾರ ನರಸಿಂಹುಲು ನಿರೇಟಿ …
Read More »
BigTv News
March 8, 2026
Breaking News
ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಬಂದ ಯುಸಿಒ ಪೆನ್ಷನ್ ಕಾರ್ಡ್ ಜಾಹೀರಾತುಳ್ಳ ಎಪಿಕೆ ಫೈಲ್ ಡೌನ್ ಲೋಡ್ ಮಾಡಿದ ನಗರದ ವ್ಯಕ್ತಿಯೊಬ್ಬರು ವಂಚಕರ ಬಲೆಗೆ ಬಿದ್ದು, 5.99 ಲಕ್ಷ ರೂ. ಕಳೆದುಕೊಂಡಿದ್ದಾರೆ. ಅರುಣ ಕೆ. ವಂಚನೆಗೆ ಒಳಗಾದವರು. ಫೇಸ್‌ಬುಕ್ ನೋಡುವಾಗ ಯುಸಿಒ ಪೆನ್ಷನ್ ಕಾರ್ಡ್ ಬಗ್ಗೆ ಮಾಹಿತಿ ಬಂದಿದೆ. ಯುಸಿಒ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿದ್ದ ಅರುಣ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ. ನಂತರ ಅಮಿತಕುಮಾರ ಎಂಬಾತ ವಾಟ್ಸ್‌ಆಯಪ್ ಮೂಲಕ ಸಂಪರ್ಕಿಸಿ, ಎಪಿಕೆ ಫೈಲ್ …
Read More »
BigTv News
March 7, 2026
Breaking News
ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ನಿತಿನ್(26) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಹೇಳಲಾಗಿದೆ. ದಿನಸಿ ವರ್ತಕ ಬೆಲ್ಲದ ಕೃಷ್ಣಪ್ಪ ಅವರ ಮೊಮ್ಮಗ ಹಾಗೂ ನಾಗರಾಜ್ ಅವರ ಪುತ್ರ ನಿತಿನ್ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಮೈಸೂರಿನಿಂದ ತಾಳಗುಪ್ಪಕ್ಕೆ ತೆರಳುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ರೈಲ್ವೆ ಪೊಲೀಸರು …
Read More »
BigTv News
March 7, 2026
Breaking News
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ 16 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಡಬ ನಿವಾಸಿ ವಿನೋದ್ ಯಾನೆ ಜಾರ್ಜ್ ಕುಟ್ಟಿ ಸೆಬಾಸ್ಟಿಯನ್ ಎಂಬಾತನನ್ನು ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡ ಎಂಬಲ್ಲಿಂದ ಬಂಧಿಸಲಾಗಿದ್ದು, ಈತನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Read More »
BigTv News
March 7, 2026
Breaking News
ಪಶ್ಚಿಮ ಬಂಗಾಳದ ನೋಂದಾಯಿತ ಬೈಕ್‌ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಸಂಚರಿಸುತ್ತಿದ್ದ ಪ್ರಕರಣವನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ಪತ್ತೆಹಚ್ಚಿದ್ದಾರೆ. ಮಾರ್ಚ್5ರಂದು ಸಂತೆಕಟ್ಟೆ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್ ಇಲ್ಲದೆ CRT 9988 ನಂಬರ್ ಹೊಂದಿದ RX100 ಬೈಕ್‌ನಲ್ಲಿ ಬಂದ ಕಳಿಯ ಗ್ರಾಮದ ನವಾಜ್ (19) ಎಂಬ ಯುವಕನನ್ನು ಪೊಲೀಸರು ತಡೆದು ಪರಿಶೀಲಿಸಿದರು. ಪರಿಶೀಲನೆಯ ವೇಳೆ ಬೈಕ್‌ನ ನಂಬರ್, ದಾಖಲೆಗಳು ಹಾಗೂ ಚಾಸಿಸ್-ಇಂಜಿನ್ ಸಂಖ್ಯೆಗಳು ಹೊಂದಿಕೆಯಾಗಿಲ್ಲ. ಹೆಚ್ಚಿನ ವಿಚಾರಣೆ …
Read More »
BigTv News
March 7, 2026
Breaking News
ಯಲ್ಲಾಪುರ :ತಾಲೂಕಿನ ಪ್ರವಾಸಿ ತಾಣ ಜೇನುಕಲ್ಲು ಗುಡ್ಡದ ಮೇಲಿನಿಂದ ಜಿಗಿದು ಧಾರವಾಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಧಾರವಾಡದ ಹೊಸಯಲ್ಲಾಪುರದ ನಿವಾಸಿ ಶ್ರೀನಿಧಿ ಕಡಕೋಳ (23) ಎಂಬ ಯುವಕ ಮನೆಯಲ್ಲಿ ಸ್ಕೂಟಿಯಲ್ಲಿ ಗೋಕರ್ಣ ಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದನುನನ್ನ ಮಗ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ, ಇದು ಆತ್ಮಹತ್ಯೆಯೇ, ನಮಗೆ ಯಾವ ಸಂಶಯವೂ ಇಲ್ಲ ಎಂದು ಮೃತನ ತಂದೆ ಕೃಷ್ಣ ಕಡಕೋಳ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದ್ದಾರೆ. ಪಿ ಎಸ್ …
Read More »
BigTv News
March 7, 2026
Breaking News
ಬೆಂಗಳೂರು : ಪತ್ನಿ ತವರಿಗೆ ಹೋಗುತ್ತಿದ್ದಂತೆ ಪ್ರೇಯಸಿಯೊಂದಿಗೆ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಪತ್ನಿಗೆ ತವರು ಕಳಿಸಿ ಒಂದು ವರ್ಷದಿಂದ ದೇವನಹಳ್ಳಿ ಮನೆಯಲ್ಲಿ ಇದ್ದಾರೆ. ಪತ್ನಿ ವಾಪಸ್ ಬರುತ್ತಿದ್ದಂತೆ ಮನೆಯಿಂದ ತೆರಳುವಂತೆ ತಾಕಿದ್ದು ಮಾಡಿದ್ದಾನೆ. ಆದರೆ ಮನೆಯಿಂದ ತೆರಳದೆ ಮದುವೆಯಾಗುವಂತೆ ಮಹಿಳೆ ನಿರ್ಮಲ ಪಟ್ಟು ಹಿಡಿದಿದ್ದಾಳೆ. ಆಗ ಹಗ್ಗದಿಂದ ಕತ್ತು ಹಿಸುಕಿ ನಿರ್ಮಲಾಳನ್ನು ಕಿಡಿಗೇಡಿ ಮೌನೇಶ್ ಕೊಲೆ ಮಾಡಿದ್ದಾನೆ. ಎರಡು ದಿನ ಬಳಿಕ ಶವವನ್ನು ಚರಂಡಿಗೆ ಎಸೆದು ಬೆಂಕಿ ಹಚ್ಚಿ …
Read More »
BigTv News
March 7, 2026
Breaking News
ಬಿಡುವಿನ ಅವಧಿಯಲ್ಲಿ ಆನ್‌ಲೈನ್ ಮೂಲಕ ಕೆಲಸ ಮಾಡಿ ಹಣ ಗಳಿಸುವ ಸಂದೇಶ ನಂಬಿದ ಇಲ್ಲಿನ ಹೈಚರ್ಚ್ ರಸ್ತೆಯ ನಿವಾಸಿಯೊಬ್ಬರು ₹7.02 ಲಕ್ಷ ಕಳೆದುಕೊಂಡಿದ್ದಾರೆ.ವರ್ಷಾ ರೇವಣಕರ (52) ವಂಚನೆಗೆ ಒಳಗಾದ ಮಹಿಳೆ. ಈಚೆಗೆ ತಮ್ಮ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸಂದೇಶ ನಂಬಿದ್ದ ಅವರು ವಂಚಕರ ಮಾತಿಗೆ ಮರುಳಾಗಿ ಹಣ ಹೂಡಿಕೆ ಮಾಡಿದ್ದರು. ಫೆ.27ರಿಂದ ಮಾರ್ಚ್ 2ರ ಅವಧಿಯಲ್ಲಿ ಹಂತ ಹಂತವಾಗಿ ಹೂಡಿಕೆ ಮಾಡಿಸಿದ ಅಪರಿಚಿತರು ನಂತರ ಹಣ ಮರಳಿಸದೆ, ಸಂಪರ್ಕಕ್ಕೂ …
Read More »