Breaking News

Breaking News

ತುಮಕೂರಿನಲ್ಲಿ ಮನಕಲಕುವ ಘಟನೆ: 5 ದಿನಗಳ ಮಗುವನ್ನು ಬ್ಯಾಗ್‌ನಲ್ಲಿ ಬಿಟ್ಟು ಹೋದ ತಾಯಿ!

ತುಮಕೂರು ಜಿಲ್ಲೆಯ ಯಡಿಯೂರು ತಾಲ್ಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕೇವಲ 5 ದಿನಗಳ ಹಸುಗೂಸು ಗಂಡು ಮಗುವನ್ನು ರಾತ್ರಿ ಸಮಯದಲ್ಲಿ ಬ್ಯಾಗ್‌ನೊಳಗೆ ಇಟ್ಟು ಬೀದಿಯಲ್ಲಿ ಬಿಟ್ಟು ಹೋದ ತಾಯಿಯ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ದುಃಖವನ್ನುಂಟುಮಾಡಿದೆ. ದೇವಾಲಯ ಸಮೀಪದ ವಿದ್ಯಾರ್ಥಿ ನಿಲಯದ ರಸ್ತೆಯಲ್ಲಿ ಮಗುವನ್ನು ಪತ್ತೆಹಚ್ಚಲಾಗಿದೆ. ರಾತ್ರಿ ಸಮಯದಲ್ಲಿ ಮಗು ಅಳುವ ಶಬ್ದ ಕೇಳಿ ಬಂದ ಸ್ಥಳೀಯ ವ್ಯಕ್ತಿಯೊಬ್ಬರು ನೋಡಲು ಹೋದಾಗ ಬ್ಯಾಗ್‌ನೊಳಗೆ ಅಳುತ್ತಿರುವ ನವಜಾತ ಶಿಶುವನ್ನು ಕಂಡರು. ತಕ್ಷಣವೇ …

Read More »

ಮನೆ ಬಳಕೆ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ

ಹುಬ್ಬಳ್ಳಿ: ನಗರದ ಹೊರ ವಲಯದ ಕುಸುಗಲ್ ರಸ್ತೆಯ ಝಡೀಕೋ ಗೋದಾಮಿಗೆ ಭಾನುವಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ್ದು, ಮನೆ ಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಉಣಕಲ್‌ನ ರವಿ ಜೈನ್ ಎಂಬುವವರಿಗೆ ಈ ಎಲೆಕ್ಟ್ರಾನಿಕ್ ಗೋದಾಮು ಸೇರಿದೆ. ಮುಗಿಲೆತ್ತರಕ್ಕೆ ದಟ್ಟ ಹೊಗೆ ಹಾಗೂ ಬೆಂಕಿ ಆವರಿಸಿದ ಪರಿಣಾಮ ಕೆಲ ಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಲಾಯಿತು.

Read More »

ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ

ಮಂಗಳೂರು: ನಗರದ ಹೊಯ್ಗೆ ಬಜಾರ್ ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರೇಖಾ ಈಬಕ್ಕನವರ್ (40) ಎಂಬವರು ನಾಪತ್ತೆಯಾಗಿದ್ದರೆ. ಫೆ.18ರಂದು ಬೆಳಗ್ಗೆ 6ಗಂಟೆಗೆ ಆಕೆ ಕೆಲಸ ಮಾಡುತ್ತಿದ್ದ ಅಪಾರ್ಟ್ ಮೆಂಟ್ ಗೆ ಗಂಡ ಬಿಟ್ಟು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಅನಂತರ ಆಕೆಗೆ ಕರೆ ಮಾಡಿದಾಗ ಕೆಲಸ ಮಾಡುತ್ತಿರುವುದಾಗಿ ಹೇಳಿ ಕರೆ ಕಟ್ ಮಾಡಿದ್ದಾಳೆ.9.30ಕ್ಕೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಆಕೆ ಕೆಲಸ ಮಾಡುತ್ತಿದ್ದ ಮನೆಗೆ ಹೋಗಿ ವಿಚಾರಿಸಿದಾಗ ಈ …

Read More »

ಸಿಗರೇಟ್ ಹಣ ಕೇಳಿದ್ದಕ್ಕೆ ಪುಂಡರ ಅಟ್ಟಹಾಸ: ಅಂಗಡಿ ಮಾಲೀಕ, ಗ್ರಾಹಕನ ಮೇಲೆ ಹಲ್ಲೆ, ಕಾಂಡಿಮೆಂಟ್ಸ್ ಧ್ವಂಸ

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದೆ. ರಾತ್ರಿ 9.30 ರ ಸುಮಾರಿಗೆ ಗ್ಯಾಲಕ್ಸಿ ಕಾಂಟಿಮೆಂಟ್ಸ್ ಬಳಿ ಬಂದಿದ್ದ ಮಂಜೇಶ್ ಅಲಿಯಾಸ್ ಬೆಣ್ಣೆ ಮತ್ತು ಸ್ನೇಹಿತ ಕಾಂಡಿಮೆಂಟ್ಸ್ ಮಾಲೀಕನ ಬಳಿ ಸಿಗರೇಟ್ ಕೇಳಿದ್ದಾರೆ. ಆದರೆ ಹಣ ಕೊಡದೆ ಅವಾಜ್ ಹಾಕಿದ್ದಾರೆ. ಈ ವೇಳೆ ಬಂದ ಗ್ರಾಹಕ ಬೆಣ್ಣೆಯ ಸ್ನೇಹಿತನನ್ನು ನೋಡಿದ್ದರು. ಇಷ್ಟಕ್ಕೆ ಗುರಾಯಿಸುತ್ತೀಯಾ ಎಂದು ಗ್ರಾಹಕನ ಮೇಲೆ ಹಲ್ಲೆ ಮಾಡಲಾಗಿದೆ. ರಸ್ತೆಯಲ್ಲಿ ಎಳೆದಾಡಿ ಪುಂಡರು ಹಲ್ಲೆ ನಡೆಸಿದ್ದಾರೆ. ನಂತರ ಕಾಂಡಿಮೆಂಟ್ಸ್ …

Read More »

ಬೆಂಗಳೂರು: ಹೆಡ್ ಕಾನ್‌ಸ್ಟೆಬಲ್‌ ಕೈಯಲ್ಲಿದ್ದ ಮೊಬೈಲ್ ದೋಚಿ ಪರಾರಿ

ಸಂಜಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ನಿಂತಿದ್ದ ಸಿಬಿಐ ಕಚೇರಿಯ ಹೆಡ್ ಕಾನ್‌ಸ್ಟೆಬಲ್‌ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಕಳ್ಳರಿಬ್ಬರು ಪರಾರಿಯಾಗಿದ್ದಾರೆ. ಗಂಗಾ ನಗರ ನಿವಾಸಿ, ಹೆಡ್‌ಕಾನ್‌ಸ್ಟೆಬಲ್ ಎನ್.ಕೃಷ್ಣ ಅವರು ನೀಡಿದ ದೂರಿನ ಮೇಲೆ ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ. ಕೆಲಸದ ನಿಮಿತ್ತ ದೆಹಲಿಗೆ ತೆರಳಲು ಎನ್.ಕೃಷ್ಣ ಅವರು ಫೆಬ್ರುವರಿ 16ರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಿ.ಬಿ.ಎಸ್ ಬಸ್ ಸ್ಟಾಪ್ ಹತ್ತಿರ …

Read More »

ಚಿಂತಾಮಣಿ: ಕಾಣೆಯಾಗಿದ್ದ ಕನಿಶೆಟ್ಟಹಳ್ಳಿ ಗ್ರಾಮದ ಬಾಲಕನ ಶವ ಪತ್ತೆ

ಚಿಂತಾಮಣಿ: ತಾಲ್ಲೂಕಿನ ಕನಿಶೆಟ್ಟಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಣೆಯಾಗಿದ್ದ ಬಾಲಕ ಕರುಣಾಕರ (3)ನ ಶವ ಮನೆಯ ಸಮೀಪಸ ಕೃಷಿ ಹೊಂಡದಲ್ಲಿ ಭಾನುವಾರ ಪತ್ತೆಯಾಗಿದೆ. ಮನೆ ಬಳಿ ಆಟವಾಡುತ್ತಿದ್ದ ಬಾಲಕ ಶನಿವಾರ ಸಂಜೆ ಕಾಣೆಯಾಗಿದ್ದ. ಮನೆಯವರು ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅನುಮಾನಗೊಂಡು ಭಾನುವಾರ ಅಗ್ನಿಶಾಮಕದಳಕ್ಕೆ ದೂರು ನೀಡಿ ಮನೆಯ ಸಮೀಪದಲ್ಲೇ ಇರುವ ಕೃಷಿಹೊಂಡದಲ್ಲಿ ಹುಡುಕಾಡಿಸಿದಾಗ ಬಾಲಕನ ಶವ ದೊರೆತಿದೆ. ಬಾಲಕ ಆಟವಾಡುವಾಗ ಆಕಸ್ಮಿಕವಾಗಿ ಕೃಷಿಹೊಂಡಕ್ಕೆ ಬಿದ್ದು ಮೃತಪಟ್ಟಿರಬಹುದು ಎನ್ನಲಾಗಿದೆ.

Read More »

ಹೆತ್ತ ಮಕ್ಕಳಿಂದ ನಿರ್ಲಕ್ಷ್ಯ: ಸಾವಿನ ಕದ ತಟ್ಟಿದ ವೃದ್ಧ ದಂಪತಿ

ಹಾಸನ: ಜೀವನದ ಸಂಧ್ಯಾಕಾಲದಲ್ಲಿ ಹೆತ್ತ ಮಕ್ಕಳು ನೋಡಿಕೊಳ್ಳಲಿಲ್ಲವೆಂದು ವೃದ್ಧ ದಂಪತಿ ಸಾವಿನ ಕದ ತಟ್ಟಿದ್ದಾರೆ. ರೈಲಿಗೆ ಸಿಲುಕಿ ವೃತ್ತ ದಂಪತಿ ಸಾವನ್ನಪ್ಪಿದ ಘಟನೆ ಹಾಸನದಲ್ಲಿ ಶನಿವಾರ ರಾತ್ರಿ ನಡೆದಿದೆ. ಸೋಮವಾರಪೇಟೆ ತಾಲೂಕು ಹಾರೆಹೊಸೂರು ಗ್ರಾಮದ ಡೇನಿಯಲ್(80), ಮೇರಿ(73) ಮೃತಪಟ್ಟವರು. ಹಾಸನದ ಕರಿಗೌಡ ಕಾಲೋನಿ ಸಮೀಪ ರೈಲಿಗೆ ತಲೆ ಕೊಟ್ಟಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಡೇನಿಯಲ್ ಅವರಿಗೆ ಇಬ್ಬರು ಪುತ್ರರಿದ್ದು ಇಬ್ಬರಿಗೂ ಮದುವೆಯಾಗಿದೆ. ಒಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಮತ್ತೊಬ್ಬರು ಹಾರೆಹೊಸೂರಿನಲ್ಲಿ …

Read More »

ಡ್ಯೂಟಿ ನೀಡದಿದ್ದಕ್ಕೆ ಕೆಎಸ್ಸಾರ್ಟಿಸಿ ಚಾಲಕ ನೇಣಿಗೆ ಶರಣು

ಸವಣೂರು: ಬೇಡಿಕೆಗೆ ಅನುಗುಣವಾಗಿ ಡ್ಯೂಟಿ ನೀಡದ ಹಿನ್ನೆಲೆಯಲ್ಲಿ ಮನನೊಂದು ಕೆಎಸ್‌ಆರ್‌ಟಿಸಿ ಚಾಲಕ ಮಹಾದೇವಪ್ಪ ಫಕ್ಕಿರಪ್ಪ ಯರೇಶಿಮಿ (49) ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಬಸ್ ನಿಲ್ದಾಣದ ಡೀಸೆಲ್ ಪಂಪ್ ಕಚೇರಿಯಲ್ಲಿ ನಡೆದಿದೆ. ಹಾವೇರಿ ವಲಯ ಸಾರಿಗೆ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಸವಣೂರ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಚಾಲಕನಾಗಿ ನೇಮಕವಾಗಿದ್ದ ಮಹಾದೇವಪ್ಪ ಅವರನ್ನು ಚಾಲಕರಿಗೆ ತರಬೇತಿ ಜತೆಗೆ ಇಂಧನ ವಿಭಾಗದಲ್ಲಿ ನಿಯೋಜಿಸಲಾಗಿತ್ತು. ಚಾಲಕನಾಗಿ ನೇಮಕ ಆಗಿದ್ದರಿಂದ …

Read More »

ನಾಗಮಂಗಲ ಮಾಜಿ ಶಾಸಕ ಸುರೇಶ್‌ಗೌಡ ಕಾರು ಅಪಘಾತ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು

ಮಂಡ್ಯ: ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ ಪ್ರಯಾಣಿಸುತ್ತಿದ್ದ ಕಾರು ಬಸರಾಳು ಗ್ರಾಮದ ಸಮೀಪ ಭೀಕರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಸುರೇಶ್‌ಗೌಡ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭವೊಂದನ್ನು ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಜಖಂಗೊಂಡಿದೆ. ಸುರೇಶ್‌ಗೌಡ ಅವರ ಕೈ ಬೆರಳುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಕಾರಿನಲ್ಲಿದ್ದ ಚಾಲಕ ಶೇಖರ್‌, ಬಿಂಡಿನಹಳ್ಳಿ ಪ್ರಸನ್ನ, ಗನ್‌ಮ್ಯಾನ್​ಗೂ ಸಹ ಗಂಭೀರ …

Read More »

ಬೆಂಗಳೂರಲ್ಲಿ ಎಟಿಎಂ ಮಷಿನ್ ದರೋಡೆಗೆ ಯತ್ನ, ನೇಪಾಳದ ಯುವಕನ ಬಂಧನ

ನಗರದ ಇಂದಿರಾನಗರದಲ್ಲಿ ನಡೆದಿದ್ದ ಎಟಿಎಂ ದರೋಡೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ 23 ವರ್ಷದ ರಾಜೇಂದ್ರ ಸಿಂಗ್ ಎಂಬ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 10ರ ಮಧ್ಯರಾತ್ರಿ, ಇಂದಿರಾನಗರ ಡಬಲ್ ರೋಡ್ ಸಮೀಪದ ಬ್ಯಾಂಕ್ ಆಫ್ ಬರೋಡಾ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಈತ ಯತ್ನಿಸಿದ್ದ. ಆರೋಪಿ ಶಟ್ಟರ್ ಬಂದ್ ಮಾಡಿ ಒಳಗೆ ಪ್ರವೇಶಿಸಿ, ಕಟ್ಟಿಂಗ್ ಮಷೀನ್ ಬಳಸಿ ಯಂತ್ರ ಒಡೆದು ಹಣ ಕಸಿಯಲು ಯತ್ನಿಸಿದ್ದಾನೆ. ಅಲ್ಲದೆ, …

Read More »