Breaking News

Breaking News

ಮೈಸೂರಲ್ಲಿ ಮಹಿಳೆಯರ ಮುಂದೆ ಶಿಕ್ಷಕ ಮೂತ್ರ ವಿಸರ್ಜನೆ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದ್ದಕ್ಕೆ, ತಂದೆ-ಮಗನಿಗೆ ಚಾಕು ಇರಿತ!

ಮಹಿಳೆಯರ ಮುಂದೆ ಶಿಕ್ಷಕ ಮೂತ್ರ ವಿಸರ್ಜನೆ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ, ಇದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಸಿಎಂ ಗೋಪಾಲ್ ಮತ್ತು ಆತನ ಪುತ್ರ ಅಭಿಷೇಕಗೆ ಚಾಕು ಇರಿಲಾಗಿದೆ. ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿಎಂ ಮಂಜುನಾಥನಿಂದ ಈ ಒಂದು ಕೃತ್ಯ ನಡೆದಿದೆ. ಸಿಎಂ ಗೋಪಾಲ ಸ್ಥಿತಿ ಗಂಭೀರವಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ಬೆಳಗಾವಿಯಲ್ಲಿ ಭೀಕರ ಮರ್ಡರ್ : ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಂದು, ಮರ್ಮಾಂಗ ಕತ್ತರಿಸಿದ ದುಷ್ಕರ್ಮಿಗಳು!

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಬಳಿ ಮೆಕ್ಕೆಜೋಳ ಗದ್ದೆಯಲ್ಲಿ ಕಲ್ಮೇಶ್ ಕೋಟಿ (50) ಭೀಕರವಾಗಿ ಕೊಲೆಯಾಗಿದ್ದಾರೆ. ಕಲ್ಮೇಶ ಹತ್ಯೆಯ ಬಳಿಕ ಮರ್ಮಾಂಗ ಕತ್ತರಿಸಿರುವ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ತುಮಕೂರಿನಲ್ಲಿ ಹೋಂ ಕೇರ್ ನಲ್ಲಿ ಕಲ್ಮೇಶ್ ಕೋಟಿ ಕೆಲಸ ಮಾಡುತ್ತಿದ್ದರು. ಹತ್ತು ದಿನಗಳ ಹಿಂದೆ ಅಷ್ಟೇ ಕಲ್ಮೇಶ್ ಗ್ರಾಮಕ್ಕೆ ಬಂದಿದ್ದರು. ಕೊಲೆಯಾದ ಕಲ್ಮೇಶ್ ಕೋಟಿ ವಿರುದ್ಧ ತಾಯಿಯೊಂದಿಗೆ ವಾಸವಿದ್ದ. 10 ವರ್ಷಗಳ ಹಿಂದೆ ಕಲ್ಮೇಶ್ ಪತ್ನಿ ಕೂಡ ಬಿಟ್ಟು …

Read More »

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರ ಅಪಘಾತ – ರಸ್ತೆಬದಿ ನಿಂತಿದ್ದ ಇಬ್ಬರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ರೆಹಳ್ಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಸ್ತೆಬದಿ ನಿಂತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೋವಾ ಕಾರು ದೋಷಗೊಂಡ ಹಿನ್ನೆಲೆಯಲ್ಲಿ ನಾಲ್ವರು ರಸ್ತೆಬದಿ ನಿಂತು ರಿಪೇರಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಅಪರಿಚಿತ ವಾಹನದ …

Read More »

ದಾವಣಗೆರೆಯಲ್ಲಿ ಭೀಕರ ಅಗ್ನಿ ಅವಘಡ : ಹೊತ್ತಿ ಉರಿದ ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್!

ದಾವಣಗೆರೆ : ಅಗ್ನಿ ಅವಘಡಕ್ಕೆ ಬೆಣ್ಣೆ ದೋಸೆ ಹೋಟೆಲ್ ಸುಟ್ಟು ಭಸ್ಮವಾಗಿದೆ. ಪ್ರಸಿದ್ದ ಶ್ರೀ ಕೊಟ್ಟೂರೇಶ್ವರ ಹೋಟೆಲ್, ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ದಾವಣಗೆರೆಯ ಡೆಂಟಲ್ ಕಾಲೇಜು ಬಳಿ ಈ ಒಂದು ಘಟನೆ ನಡೆದಿದೆ. ಹೋಟೆಲ್ ಕ್ಲೋಸ್ ಆಗಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹೋಟೆಲ್ ನಲ್ಲಿ ಇದ್ದಂತಹ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿವೆ. ದಾವಣಗೆರೆ ನಗರದಲ್ಲಿರುವ ಅತ್ಯಂತ ಹಳೆಯ ಹೋಟೆಲ್ ಎಂದು ಪ್ರಸಿದ್ಧವಾಗಿದ್ದು, ಕೊಟ್ಟೂರೇಶ್ವರ ಹೋಟೆಲ್ ಇದೀಗ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. …

Read More »

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಇಬ್ಬರ ಬಂಧನ

ಬಾಗಲಕೊಟೆ: ನಗರದ ಮಟನ್‌ ಮಾರುಕಟ್ಟೆ ಸಮೀಪ ಗಲಭೆ ಮಾಡುವ ಉದ್ದೇಶ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.ಅಶೋಕ ಬಾರಕೇರ, ಸಂದೀಪ ಘೆರಡೆ ಬಂಧಿದರು. ಬಾರಕೇರ ಒಡುವಾಗ ಬಿದ್ದು ಕೈಮುರಿದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಘೆರಡೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ದಕ್ಷಣ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯ ಪ್ರಮೋದ್ ಮುತಾಲಿಕ, ರಾಷ್ಟ್ರೀಯ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಅವರನ್ನು …

Read More »

ದೇವನಹಳ್ಳಿಯಲ್ಲಿ ಭೀಕರ ರಸ್ತೆ ಅಪಘಾತ; ಬೈಕ್ ಸವಾರ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದಾಬಸ್ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಡಿಯೋ ಮತ್ತು ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಎರಡು ಬೈಕ್‌ಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಅಪಘಾತದಲ್ಲಿ ನರಸಿಂಹಪ್ಪ ಎಂಬುವವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಮೃತ ನರಸಿಂಹಪ್ಪ ಅವರು ಮದುವೆ ಸಮಾರಂಭ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ, ದೇವನಹಳ್ಳಿಯ ಚಪ್ಪರದಕಲ್ಲು ಸಮೀಪ ಈ …

Read More »

ಪೋಕ್ಸೋ ಕೇಸ್ ದಾಖಲಿಸಿದಕ್ಕೆ ದ್ವೇಷ: ಮಹಿಳೆ ಸಾವು! ನಾಲ್ವರ ವಿರುದ್ಧ FIR ದಾಖಲು

ದೇವನಹಳ್ಳಿ: ಹಳೆ ವೈಷಮ್ಯದ ಹಿನ್ನೆಲೆ ನಡೆದ ಗಲಾಟೆಯಲ್ಲಿ ಮಹಿಳೆ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ನಡೆದಿದೆ. ರೇಣುಕಾ (37) ಮೃತ ಮಹಿಳೆಯಾಗಿದ್ದಾರೆ. ಆರೋಪಿ ರಂಜಿತ್ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಪೋಷಕರನ್ನು ಕೇಳಿದ್ದನು.ಆದರೆ ಬಾಲಕಿ ಇನ್ನೂ 18 ವರ್ಷ ಪೂರೈಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿ, ರಂಜಿತ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗಿದ ನಂತರ ರಂಜಿತ್ ಜೈಲಿಗೆ ಹೋಗಿ, …

Read More »

ಮಹಾಲಿಂಗಪುರ: ಕಲ್ಲು ತೂರಾಟ ಘಟನೆ ಖಂಡಿಸಿ ಪ್ರತಿಭಟನೆ

ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಪಟ್ಟಣದ ಅಕ್ಕಿಮರಡಿ-ಢವಳೇಶ್ವರ ಕೂಡು ರಸ್ತೆಯ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮುಖಂಡ ರವಿ ಜವಳಗಿ ಮಾತನಾಡಿ, ‘ಶಾಂತಿಯುತವಾಗಿ ನಡೆದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪೂರ್ವ ನಿಯೋಜಿತವಾಗಿ ಈ ಕೃತ್ಯ ನಡೆದಿದೆ. ಕಲ್ಲು ತೂರಾಟ ಮಾಡಿದ ಎಲ್ಲರನ್ನೂ ಬಂಧಿಸಿ ಅವರ ಮೇಲೆ ಕಾನೂನು ಕ್ರಮ …

Read More »

ಭದ್ರಾವತಿ: ಅಪಪ್ರಚಾರಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

ಇಲ್ಲಿನ ಹೊಸ ಸಿದ್ದಾಪುರದಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ವಾರ ಕಳೆಯುವುದರೊಳಗೆ ಅಪಪ್ರಚಾರಕ್ಕೆ ಮನನೊಂದು ಪತ್ನಿ ಸ್ವಾತಿ ಜೆ. (36) ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರ ಪತಿ ಜಗದೀಶ್ ಫೆ.14ರಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ವಾತಿ ತನ್ನ ತಾಯಿಗೆ ಮೊಬೈಲ್ ಫೋನಿನಲ್ಲಿ ಸಂದೇಶ ಕಳಿಸಿದ್ದು, ತನ್ನ ಪತಿಯ ಮರಣದ ನಂತರ ಮೋಹನ್ ಎಂಬ ಹೆಸರಿನ ಪೊಲೀಸ್ …

Read More »

ಗುಪ್ತಚರ ವರದಿ ಬೆನ್ನಲ್ಲೇ ಪಂಜಾಬ್‌ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿ ಪತ್ತೆ

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕ ದಾಳಿ ಮಾಡುವ ಬಗ್ಗೆ ಯೋಜನೆ ರೂಪಿಸಿದೆ ಎಂಬ ಗುಪ್ತಚರ ವರದಿ ಬೆನ್ನಲ್ಲೇ ಭದ್ರತಾ ಸಂಸ್ಥೆಗಳು ಹೈ ಅಲರ್ಟ್ ಘೋಷಿಸಿದ್ದು, ಪಂಜಾಬ್ ಮತ್ತು ಕಾಶ್ಮೀರದಲ್ಲಿ ಎರಡು ಐಇಡಿಗಳು ಪತ್ತೆಯಾಗಿವೆ. ಐಇಡಿ ಪತ್ತೆಯಾದ ಘಟನೆಯನ್ನು ಭಯೋತ್ಪಾದಕ ದಾಳಿಯ ಎಚ್ಚರಿಕೆಗೆ ಅಧಿಕಾರಿಗಳು ಸಂಬಂಧಿಸದಿದ್ದರೂ, ಘಟನೆಗಳ ಸಮಯವು ಕಳವಳವನ್ನುಂಟು ಮಾಡಿದೆ. ಪಂಜಾಬ್‌ನಲ್ಲಿ, ಶುಕ್ರವಾರ ಅಮೃತಸರದ ರಯಾ ಪೊಲೀಸ್ ಠಾಣೆ ಬಳಿ ಅನುಮಾನಾಸ್ಪದ ಚೀಲದಲ್ಲಿ ಐಇಡಿ …

Read More »