BigTv News
February 11, 2026
Breaking News
ಮಂಗಳೂರು : ಮಂಗಳೂರಲ್ಲಿ ಆನ್ಲೈನ್ ಮ್ಯಾಟ್ರಿಮೋನಿ ಹೆಸರಲ್ಲಿ ವಂಚನೆ ಮಾಡ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನ ವಂಚನೆಗೆ ಸಾಥ್ ನೀಡಿದ್ದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಸುಶಾಂತ್ ತನ್ನ ಅಳಿಯ ಎಂದು ಹೇಳಿ ಸಂತ್ರಸ್ತೆಯ ಕುಟುಂಬದವರಿಗೆ ನಂಬಿಕೆ ಮೂಡಿಸಲು ಭಾಸ್ಕರ್ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದಾನೆ. ಮದುವೆಯ ಹೆಸರಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಯುವತಿಯರನ್ನು ಸುಶಾಂತ್ ವಂಚಿಸಿದ್ದಾನೆ. ಈ ಪೈಕಿ ಇಬ್ಬರು …
Read More »
BigTv News
February 11, 2026
Breaking News
ಬೆಂಗಳೂರು: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ವಾಸವಾಗಿದ್ದ ಒಬ್ಬ ಮಹಿಳೆ ಸೇರಿದಂತೆ 8 ಮಂದಿ ವಿದೇಶಿ ಪ್ರಜೆಗಳನ್ನು ಸಂಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕ್ಯಾಮರೂನ್ ದೇಶದ ಐವರು ಹಾಗೂ ಸೂಡಾನ್ ದೇಶದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 4 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ವಿದೇಶಿ ಪ್ರಜೆಗಳು, ವೀಸಾ ಅವಧಿ ಮುಕ್ತಾಯಗೊಂಡಿದ್ದರು. ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದರು. ಈ ಹಿಂದೆ ನಗರದ ಗಡಿಭಾಗದಲ್ಲಿವಾಸವಾಗಿದ್ದ ಆರೋಪಿಗಳು, ಇತ್ತೀಚೆಗೆ ಸಂಜಯನಗರದ …
Read More »
BigTv News
February 10, 2026
Breaking News
ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿ, ಮುಸ್ಲಿಂ ಯುವಕ ಸೈಯದ್ ಇಮ್ತಿಯಾಜ್ ಹಿಂದೂ ಯುತಿಯನ್ನು ಪ್ರೀತಿಸಿ ಮದುವೆ ನಾಟಕವಾಡಿ ಇಸ್ಲಾಂಗೆ ಮತಾಂತರ ಮಾಡಿ ಮಗುವನ್ನೂ ಕೈಗೆ ಕೊಟ್ಟು ಈಗ ಎಸ್ಕೇಪ್ ಆಗಿದ್ದಾನೆ. ಕೋಲ್ಕತ್ತಾ ಮೂಲದ ಬ್ರಾಹ್ಮಣ ಯುವತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದ ಸೈಯದ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದನು. ನಂತರ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿ, ಜೈನಬ್ ಎಂದು ಹೆಸರನ್ನು ಬದಲಿಸಿದ್ದನು. 2025ರ …
Read More »
BigTv News
February 10, 2026
Breaking News
ಉತ್ತರ ಕರ್ನಾಟಕ,ಸೇವಾ ಭಾರತೀಯ ವಿದ್ಯಾವಿಕಾಸ ಪ್ರಕಲ್ಪದ ಅಡಿಯಲ್ಲಿ ನಡೆಯುತ್ತಿರುವ ಹಿಂದುಳಿದ ಬಸ್ತಿಗಳ ಮಕ್ಕಳ ಉಚಿತ ಮನೆಪಾಠ ಕಾರ್ಯಕ್ರಮದ ವಾರ್ಷಿಕೋತ್ಸವ ಭಾನುವಾರ ಜರುಗಿತು. ಸಂಸ್ಕಾರ, ವಿದ್ಯೆ ಮತ್ತು ಶಿಸ್ತು ಈ ಮೂರು ಅಂಶಗಳನ್ನು ಒಳಗೊಂಡ ಈ ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಮಕ್ಕಳು, 100ಕ್ಕೂ ಹೆಚ್ಚು ಶಿಕ್ಷಕಿಯರು ಮತ್ತು ಪಾಲಕರು ಪಾಲ್ಗೊಂಡಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾವಿಕಾಸ ಪ್ರಕಲ್ಪದ ರಾಜ್ಯ ಅಧ್ಯಕ್ಷೆ ಶೀಮತಿ ಭಾರತಿ ನಂದಕುಮಾರ ಅವರು, ಉತ್ತರ ಕರ್ನಾಟಕದ ವಿವಿಧ ನಗರಗಳಲ್ಲಿ 300ಕ್ಕೂ …
Read More »
BigTv News
February 10, 2026
Breaking News
ಪುತ್ತೂರು: ಚಲಿಸುತ್ತಿದ್ದ ರೈಲಿನಿಂದ ಬಿದ್ದು 25ರ ಹರೆಯದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಮುಂಜಾನೆ ಚನ್ನರಾಯಪಟ್ಟಣ ಬಳಿ ನಡೆದಿದೆ. ಮೃತರನ್ನು ಪುಣಚ ನಿವಾಸಿ ನಿಶಿತ್ ನಾಯ್ಕ್ ಎಂದು ಗುರುತಿಸಲಾಗಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಅವರು ಬೆಂಗಳೂರಿನ ಕಲ್ಯಾಣ್ ಜ್ಯುವೆಲರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಿಶಿತ್ ಸೋಮವಾರ ರಾತ್ರಿ ಬೆಂಗಳೂರಿನಿಂದ ತನ್ನ ಊರಿಗೆ ತೆರಳಲು ರೈಲಿನಲ್ಲಿ ತೆರಳಿದ್ದರು. ಮೂಲಗಳ ಪ್ರಕಾರ, ಅವರು ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ …
Read More »
BigTv News
February 10, 2026
Breaking News
ಶಿವಮೊಗ್ಗದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ತಡೆಗೋಡೆಗೆ ರಭಸವಾಗಿ ಆಟೋವೊಂದು ಢಿಕ್ಕಿಯಾಗಿದ್ದು, ಮಹಿಳೆಯ ರುಂಡ-ಮುಂಡ ಬೇರ್ಪಟ್ಟಿದೆ.ತೀರ್ಥಹಳ್ಳಿಯ ನಾಲೂರು ಗ್ರಾಮದ ಬಳಿ ಅಪಗಾತ ಸಂಭವಿಸಿದೆ. ಮೃತರಾದ ನಿಶ್ಮಿತಾ ಶೆಟ್ಟಿ, ಪತಿ ಸುದರ್ಶನ್ ಶೆಟ್ಟಿ ಹಾಗೂ ಮಗ ಸಂಚಿತ್ ಜತೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವ ಶಬರಿ ಹೊಟೇಲ್‌ನಲ್ಲಿ ಸುದರ್ಶನ್ ಮತ್ತು ಫ್ಯಾಮಿಲಿ ಸಂಬಂಧಿಕರ ಮನೆಗೆ ಗೃಹಪ್ರವೇಶಕ್ಕಾಗಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಬರುವಾಗ …
Read More »
BigTv News
February 10, 2026
Breaking News
ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕರಿಗುಡ್ಡ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಮೃತರನ್ನ ಮಲ್ಲಪ್ಪ (60) ಸ್ಥಳದಲ್ಲಿ ಸಾವನಪ್ಪಿದ್ದರೆ, ಇನ್ನು ರಿಮ್ಸ್ ನಲ್ಲಿ ದಾಖಲಾಗಿದ್ದ ಮೋನಮ್ಮ (35) ಎನ್ನುವವರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಆ …
Read More »
BigTv News
February 10, 2026
Breaking News
ಕನಕಪುರ:ರಾಮನಗರ & ಚಿಕ್ಕೇನಹಳ್ಳಿ ರಸ್ತೆಯಲ್ಲಿ ಬಳಿ ಬೊಲೆರೋ ಹಾಗೂ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಾಲೂಕಿನ ಚಿಕ್ಕೇನಹಳ್ಳಿ ಸಮೀಪದ ಕೆಂಬರಲು ಗ್ರಾಮದ ಸಾಗರ್(24) ಮೃತ. ರಾಮನಗರ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಬೊಲೆರೋ ಡಿಕ್ಕಿಯಾದ್ದು, ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಕಾಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ …
Read More »
BigTv News
February 10, 2026
Breaking News
ಉಡುಪಿ: ಕಾಪು ತಾಲೂಕಿನ ಶಿರ್ವ ಎಂಬಲ್ಲಿ ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಚಾಲಕ ಸೇರಿದಂತೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಶಿರ್ವ ಕಡೆ ಬರುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರು ಕಾರಿನಿಂದ ಇಳಿಯುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕಾರು ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದೆ. ಬೆಂಕಿಯೂ ಎಂಜಿನ್ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಹೊಗೆ ಬಂದಿದೆ. ಇದನ್ನು ನೋಡಿ ಚಾಲಕ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾನೆ. …
Read More »
BigTv News
February 10, 2026
Breaking News
ವಿಜಯಪುರ: ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 11.43ಕ್ಕೆ ಲಘು ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 2.6 ಭೂಕಂಪನದ ತೀವ್ರತೆ ದಾಖಲಾಗಿದೆ. ಭೂಮಿ ಒಳಗಿನಿಂದ ಸ್ಪೋಟದ ಸದ್ದು ಕೇಳಿಬಂದಿಂದೆ. ಭೂಮಿ ಕಂಪಿಸಿದ್ದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ‘ಭೂಕಂಪನ ತೀವ್ರತೆ ಕಡಿಮೆಯಿದ್ದು, ಈ ರೀತಿಯ ಭೂಕಂಪವು ಸ್ಥಳೀಯರಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಭೂಕಂಪನ ಕೇಂದ್ರಬಿಂದುವು ಭೂಕಂಪನ ವಲಯ ಮೂರರಲ್ಲಿ ಬರುವುದರಿಂದ ಜನರು ಭಯಭೀತರಾಗಬೇಕಾಗಿಲ್ಲ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ …
Read More »