Breaking News

ರಾಯಚೂರಲ್ಲಿ ಆಟೋಗೆ ‘KKRTC’ ಬಸ್ ಡಿಕ್ಕಿಯಾಗಿ, ಸ್ಥಳದಲ್ಲೇ ಇಬ್ಬರ ಸಾವು, 12 ಜನರಿಗೆ ಗಾಯ!

ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕರಿಗುಡ್ಡ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಮೃತರನ್ನ ಮಲ್ಲಪ್ಪ (60) ಸ್ಥಳದಲ್ಲಿ ಸಾವನಪ್ಪಿದ್ದರೆ, ಇನ್ನು ರಿಮ್ಸ್ ನಲ್ಲಿ ದಾಖಲಾಗಿದ್ದ ಮೋನಮ್ಮ (35) ಎನ್ನುವವರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ. ಆ ರಭಸಕ್ಕೆ ಆಟೋ ಪಲ್ಟಿಯಾಗಿ ಬಿದ್ದಿದೆ. ಆಟೋದಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗೆ ಡಿಕ್ಕಿ ಹೊಡೆಸಿ ಬಸ್ ಚಾಲಕ ಮುಂದೆ ತೆರಳುತ್ತಿದ್ದ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *