ಶಿವಮೊಗ್ಗದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ತಡೆಗೋಡೆಗೆ ರಭಸವಾಗಿ ಆಟೋವೊಂದು ಢಿಕ್ಕಿಯಾಗಿದ್ದು, ಮಹಿಳೆಯ ರುಂಡ-ಮುಂಡ ಬೇರ್ಪಟ್ಟಿದೆ.ತೀರ್ಥಹಳ್ಳಿಯ ನಾಲೂರು ಗ್ರಾಮದ ಬಳಿ ಅಪಗಾತ ಸಂಭವಿಸಿದೆ. ಮೃತರಾದ ನಿಶ್ಮಿತಾ ಶೆಟ್ಟಿ, ಪತಿ ಸುದರ್ಶನ್ ಶೆಟ್ಟಿ ಹಾಗೂ ಮಗ ಸಂಚಿತ್ ಜತೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ತೀರ್ಥಹಳ್ಳಿ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಸಮೀಪ ಇರುವ ಶಬರಿ ಹೊಟೇಲ್‌ನಲ್ಲಿ ಸುದರ್ಶನ್ ಮತ್ತು ಫ್ಯಾಮಿಲಿ ಸಂಬಂಧಿಕರ ಮನೆಗೆ ಗೃಹಪ್ರವೇಶಕ್ಕಾಗಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಬರುವಾಗ ಅಪಘಾತ ಸಂಭವಿಸಿದೆ. ಡಿವೈಡರ್ ಆಟೋಗೆ ಡಿಕ್ಕಿಯಾಗಿದ್ದು, ಮಹಿಳೆಯ ರುಂಡ-ಮುಂಡ ಬೇರ್ಪಟ್ಟಿದೆ. ಮಗು ಹಾಗೂ ಪತಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

