BigTv News
February 6, 2026
Breaking News, Crime
ಬಳ್ಳಾರಿ : ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 3.2 ಕೆ.ಜಿ. ಗಾಂಜಾವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸಂಡೂರು ತಾಲೂಕಿನ ವಡ್ಡು ಗ್ರಾಮದ ಬಳಿ ಇತ್ತೀಚೆಗೆ ವಶಪಡಿಸಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಅಧಿಕಾರಿಗಳನ್ನು ಕಂಡು ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ರಸ್ತೆಯ ಮಧ್ಯೆದಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಮೆಹಬೂಬ್ ಬಾಷ್ ಎಂಬುದಾಗಿ ಗುರುತಿಸಲಾಗಿದೆ. 3.20 ಲಕ್ಷ ರೂ. ಮೌಲ್ಯದ ಗಾಂಜಾ, ಬೈಕ್ ವಶಕ್ಕೆ ಪಡೆದು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
Read More »
Shaikh BigTv
February 6, 2026
Breaking News, Crime, ಕರ್ನಾಟಕ
ಡಿಜಿ ಆರ್ಡರ್‌ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವೇ..? ಇವರಿಗಷ್ಟೇ ಕಾನೂನು ದಂಡ, ಟ್ರಾಫಿಕ್ ಪೊಲೀಸ್ರೇ ವ್ಹಾ..! ವ್ಹಾ…! ಪೊಲೀಸ್ ಮಹಾ ನಿರ್ದೇಶಕರ ಆದೇಶಕ್ಕೂ, ಸರ್ಕಾರದ ಸೂಚನೆಗಳಿಗೂ ಈಗ ಕವಡೆ ಕಾಸಿನ ಕಿಮ್ಮತ್ತೇ ಇಲ್ಲವೇ..? ಹೌದು… ಡಿಜಿ ಆರ್ಡರ್‌ಗಳನ್ನು ಗಾಳಿಗೆ ತೂರಿ,ಖಡಕ್ ಅಧಿಕಾರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡು,ರಸ್ತೆಮೇಲೆ ನಿಂತ್ರಾ ಟ್ರಾಫಿಕ್ ಪೊಲೀಸರ ಹಣದ ಆಟ ನಡೆಯುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ.. ಸಿಕ್ಕಸಿಕ್ಕ ವಾಹನ ಸವಾರರ ಗೋಳು ಕೇಳೋರು ಯಾರು…? ಗಸ್ತು …
Read More »
BigTv News
February 6, 2026
Breaking News
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಟ್ಯಂತರ ರೂಪಾಯಿ ಚಿನ್ನಾಭರಣ, ವಜ್ರಾಭರಣಗಳು ಕಳ್ಳತನವಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನಿಮ್ದ ದುಬೈಗೆ ತೆರಳುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, ವಜ್ರ ಕಳ್ಳತನವಾಗಿದೆ. ಮಹಿಳೆ ಚೆಕ್ ಇನ್ ನಲ್ಲಿ ಚಿನ್ನ ತೋರಿಸಿ ಬ್ಯಾಗ್ ಗೆ ಟ್ಯಾಗ್ ಮಾಡಿದ್ದರು. ಲಗೇಜ್ ಬ್ಯಾಗ್ ನಲ್ಲಿಟ್ಟಿದ್ದ ಚಿನ್ನ ದುಬೈಗೆ ಹೋಗುವಷ್ಟರಲ್ಲಿ ಮಾಯವಾಗಿದೆ. ಏರ್ …
Read More »
BigTv News
February 6, 2026
Breaking News
ಮಂಗಳೂರಿನ ಪಚ್ಚನಾಡಿ ಪರಿಸರದ ರೈಲ್ವೇ ಹಳಿಯ ಬಳಿ ಅಪರಿಚಿತ ಯುವಕನ ಮೃತದೇಹವೊಂದು ಇಂದು ಪತ್ತೆಯಾಗಿದೆ. ಸ್ಥಳೀಯರು ಮೃತದೇಹವನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾವಿನ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಪ್ರಕರಣವು ಸಂಶಯಾಸ್ಪದವಾಗಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಲ್ಲಿ ಬ್ಯಾಗ್ ಸೇರಿದಂತೆ ಮೃತನಿಗೆ ಸೇರಿದ್ದ ಇತರ ವಸ್ತುಗಳು ಪತ್ತೆಯಾಗಿದ್ದು, ಇದು ಚಲಿಸುವ ರೈಲಿನಿಂದ ಬಿದ್ದು ಸಂಭವಿಸಿದ ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.. ಸ್ಥಳಕ್ಕೆ …
Read More »
BigTv News
February 6, 2026
Breaking News
ಶಿಕಾರಿಪುರ: ನಾಡ ಬಂದೂಕು ತಯಾರಿಸಿ ಮಾರಾಟಕ್ಕಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಸಮೀಪದ ಭದ್ರಾಪುರ ಗ್ರಾಮದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಲಕ್ಷ್ಮಣಪ್ಪ (67) ಬಂಧಿತ ಆರೋಪಿ. ಬಡಗಿ ವೃತ್ತಿ ಮಾಡುವ ಅವರು ಮನೆಯಲ್ಲಿ ನಾಡ ಬಂದೂಕು ತಯಾರಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದಾಗ ಸಿದ್ಧವಾಗಿರುವ 7ಬಂದೂಕು, ಮರದಲ್ಲಿ ಸಿದ್ಧಪಡಿಸುತ್ತಿರುವ ಮೂರು ಆಕೃತಿ, ಕಬ್ಬಿಣದ ನಳಿಕೆ ಸೇರಿ ಹಲವು ಪರಿಕರ ವಶಕ್ಕೆ ಪಡೆದಿದ್ದಾರೆ. ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ …
Read More »
BigTv News
February 6, 2026
Breaking News
ಬೆಂಗಳೂರು :ರಾಜ್ಯದಲ್ಲಿ ಮತ್ತೊಂದು ಖಾಸಗಿ ಬಸ್ ವೊಂದು ಹೊತ್ತಿ ಉರಿದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸಂಜನಾ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ಹೊತ್ತಿ ಉರಿದಿದೆ. ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹನುಮಂತಪುರ ಗೇಟ್ ಬಳಿ ಬಸ್ ಹೊತ್ತಿ ಉರಿದಿದ್ದು, ಬೆಂಕಿಯಿಂದ ಖಾಸಗಿ ಬಸ್ ಸಂಪೂರ್ಣ ಸುಟ್ಟು …
Read More »
BigTv News
February 6, 2026
Breaking News
ಬಲೂಚಿಸ್ತಾನದಲ್ಲಿ ಬಲೂಚ್ ಬಂಡುಕೋರರ ದಾಳಿ ಪಾಕಿಸ್ತಾನ ಸರ್ಕಾರವನ್ನು ಕಷ್ಟಕ್ಕೆ ಸಿಲುಕಿಸಿದೆ. ಪಾಕಿಸ್ತಾನ ಸರ್ಕಾರದ ಮೇಲೆ ಭಾರೀ ರಾಜಕೀಯ ಹಾಗೂ ಭದ್ರತಾ ಒತ್ತಡ ಉಂಟುಮಾಡಿದೆ. ಪಾಕಿಸ್ತಾನದ ಒಳನಾಡಿನ ಭದ್ರತಾ ಸ್ಥಿತಿ ಸಂಪೂರ್ಣವಾಗಿ ಹಾಳಾಗಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ಪಾಕಿಸ್ತಾನದ ಒಟ್ಟು ಭೂವಿಸ್ತೀರ್ಣದ ಶೇ.40 ರಷ್ಟು ಭಾಗ ನಮ್ಮ ನಿಯಂತ್ರಣದಿಂದ ತಪ್ಪಿಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಬಂಡುಕೋರರ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಅತ್ಯಾಧುನಿಕ ರೈಫಲ್‌ಗಳು …
Read More »
Shaikh BigTv
February 6, 2026
Breaking News, Crime
ನಕಲಿ ಪತ್ರಕರ್ತರ ಬ್ಲ್ಯಾಕ್‌ಮೇಲ್ ಜಾಲ: ಮಹಿಳಾ ಅಧಿಕಾರಿಗೆ ಬೆದರಿಕೆ, ಮೂವರು ಅರೆಸ್ಟ್… ಬೆಳಗಾವಿ : ಸರಕಾರಿ ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳ ವೀಡಿಯೊ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಪತ್ರಕರ್ತರ ಸೋಗಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್ (32), ಅಬ್ದುಲ್ …
Read More »
BigTv News
February 6, 2026
Breaking News
ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಸಮೀಪದ ಕೀರ್ತಿನಗರ ಐದನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿ ತೆಂಗಿನ ತೋಟಕ್ಕೆ ಗುರುವಾರ ಸಂಜೆ ಬೆಂಕಿ ತಗುಲಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆಅಗ್ನಿ ಶಾಮಕ ದಳದವರು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಅನೇಕ ಮರಗಿಡಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಸಮೀಪದ ತೆಂಗಿನ ತೋಟಕ್ಕೂ ಬೆಂಕಿ ಆವರಿಸಿಕೊಂಡಿದೆ. ತೋಟದ ಬಹುಭಾಗಕ್ಕೆ ಹಾನಿಯಾಗಿದೆ. ರಾತ್ರಿಯ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ …
Read More »
BigTv News
February 6, 2026
Breaking News
ಇಲ್ಲಿನ ಶಿರವಾಡದಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಸೇರಿದಂತೆ ಘನ ತ್ಯಾಜ್ಯಗಳನ್ನು ವಿಲೇವಾರಿಗೆ ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ಬೆಂಕಿ ಆವರಿಸಿದೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತ್ಯಾಜ್ಯ ವಿಲೇವಾರಿ ಘಟಕದ ಸಿಬ್ಬಂದಿ ತಿಳಿಸಿದ್ದಾರೆ. ಹತ್ತಾರು ಟನ್ ತ್ಯಾಜ್ಯ ದಾಸ್ತಾನು ಇದ್ದ ಜಾಗದಲ್ಲಿ ಬೆಂಕಿ ಆವರಿಸಿದೆ. ಬೆಂಕಿ ನಂದಿಸಲು ಕಾರವಾರ, ಅಂಕೋಲಾ, ಬಿಣಗಾದಲ್ಲಿರುವ ಬಿರ್ಲಾ …
Read More »