Breaking News

Breaking News

ಬುದ್ದಿ ಮಾತು ಹೇಳಿದ್ದಕ್ಕೆ ಕೊಲೆ! ಹುಬ್ಬಳ್ಳಿಯಲ್ಲಿ ಸಂಬಂಧಿಯ ಕೈಯಲ್ಲಿ ವ್ಯಕ್ತಿ ಹತ್ಯೆ

ಹುಬ್ಬಳ್ಳಿ ನಗರದಲ್ಲಿ ಶಾಕ್ ನೀಡುವಂತಹ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬುದ್ದಿ ಮಾತು ಹೇಳಿದ್ದಕ್ಕೆ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಗೌಶಿಯಾ ಟೌನ್‌ನಲ್ಲಿ ಕಳೆದ ರಾತ್ರಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಅಹ್ಮದ್ ರಜಾಕ್ ಶಹಪೂರ್ (48) ಎಂದು ಗುರುತಿಸಲಾಗಿದ್ದು, ಅವರು ಹಳೆ ಹುಬ್ಬಳ್ಳಿ ನಿವಾಸಿಯಾಗಿದ್ದು, ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆರೋಪಿ ಸದ್ದಾಂ ಎಂಬಾತ ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿಯಾಗಿದ್ದು, ಪತ್ನಿಯನ್ನು ಕರೆದುಕೊಂಡು …

Read More »

ಟೀ ಅಂಗಡಿಯೊಂದರ ಮುಂದೆ ವಾಗ್ವಾದ | ಚಾಕು ಇರಿತ : ಇಬ್ಬರ ಬಂಧನ

ಗುಂಡ್ಲುಪೇಟೆ: ಪಟ್ಟಣದ ಟೀ ಅಂಗಡಿಯೊಂದರ ಮುಂದೆ ಮಂಗಳವಾರ ರಾತ್ರಿ ಗುಂಪೊಂದು ಪಟ್ಟಣದ ಮಹದೇವಪ್ರಸಾದ್ ನಗರದ ನಿವಾಸಿ ಸಾಬಿರ್ ಪಾಷ(22) ಎಂಬವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದೆ.ಪ್ರಕರಣಕ್ಕೆ ಸಂಬಂಧಿಸಿ ಧನು ಮತ್ತು ಈಶ್ವರ್ ಎಂಬ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರು ಪರಾರಿಯಾಗಿದ್ದಾರೆ. ಘಟನೆ ವಿವರ: ಟೀ ಕುಡಿಯುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಆರು ಜನರ ಗುಂಪು ಸಾಬಿರ್ ಪಾಷ ಮುಖ ಹಾಗೂ ಬೆನ್ನಿಗೆ ಇರಿದು ಪರಾರಿಯಾಗಿತ್ತು. ಗಾಯಾಳು ಸಾಬಿರ್ ಪಾಷನನ್ನು ಮೈಸೂರಿನ ಆಸ್ಪತ್ರೆಗೆ …

Read More »

ಸುಳ್ಯ | ಬಾಲಕಿಯ ಮಾನಭಂಗಕ್ಕೆ ಯತ್ನ: ಆರೋಪಿಗೆ 5 ವರ್ಷ ಜೈಲು ಶಿಕ್ಷೆ

ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣದಲ್ಲಿ ಸೆಲ್ವಕುಮಾರ್‌ ಎಂಬಾತನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 5 ವರ್ಷಗಳ ಸಾಧಾರಣ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿದೆ. ಸೆಲ್ವಕುಮಾರ್ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ ಮತ್ತೆ ಆರು ತಿಂಗಳ ಸಾಧಾರಣ ಶಿಕ್ಷೆ ಅನುಭವಿಸಬೇಕು ಎಂದು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಡಿ.ಅವರು ಆದೇಶದಲ್ಲಿ ತಿಳಿಸಿದ್ದಾರೆ. ಸೆಲ್ವ ಕುಮಾರ್ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ …

Read More »

ದೆಹಲಿಯ ಬೀದಿಯಲ್ಲಿ ವ್ಯಕ್ತಿಯನ್ನು ಬೆನ್ನಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಪುರುಷರ ಗುಂಪು

ದೆಹಲಿಯ ಮಂಗೋಲ್​ಪುರಿಯಲ್ಲಿ ವ್ಯಕ್ತಿಯೊಬ್ಬನನ್ನು ಪುರುಷರ ಗುಂಪೊಂದು ಬೆನ್ನಟ್ಟಿ ರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ನಾಲ್ಕೈದು ಜನರ ಗುಂಪೊಂದು 25 ವರ್ಷದ ಯುವಕನನ್ನು ಇರಿದು ಕೊಂದಿದ್ದಾರೆ.ಆತ ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಅವರು ಆತನನ್ನು ಹಿಂಬಾಲಿಸಿ ಬಂದು ಕೊಲೆ ಮಾಡಿದ್ದಾರೆ. ಪಕ್ಕದಲ್ಲಿದ್ದ ಜನರು ಹಲ್ಲೆ ನಡೆಯುತ್ತಿರುವುದನ್ನು ನೋಡುತ್ತಿದ್ದಾರೆಯೇ ವಿನಃ ಯಾರೂ ಕೂಡ ಅವರನ್ನು ಬದುಕಿಸುವ ಪ್ರಯತ್ನ ಮಾಡಲಿಲ್ಲ. ಮೃತರನ್ನು …

Read More »

ಬಾರ್ ನ ಗಲಾಟೆ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯ

ಬಾರ್ ನ ಗಲಾಟೆ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯತೇಜು (40) ಮೃತ ವ್ಯಕ್ತಿ. ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರಿ ಕಾರ್ಮಿಕರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ತೇಜು ಎಂಬಾತನಿಗೆ ಹೊಡೆದು ಬಳಿಕ ಆತನನ್ನು 1 ಕಿ.ಮೀ.ದೂರದ ಗ್ರೌಂಡ್ ನಲ್ಲಿ ಎಸೆದಿದ್ದರು. ಹೊಡೆದ ಬಳಿಕ ಮೈದಾನಕ್ಕೆ ಬಿಹಾರಿ ಕಿಡಿಗೇಡಿಗಳು ಪಟಾಕಿ ಎಸೆದಿದ್ದರು ಎನ್ನಲಾಗಿದೆ. ಬೆಳಗ್ಗೆ ಆಟೋ ಚಾಲಕ ನೋಡಿದಾಗ ತೇಜು ಉಸಿರಾಡುತ್ತಿದ್ದ ಎಂದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ …

Read More »

ದೇವನಹಳ್ಳಿ | ರ‍್ಯಾಗಿಂಗ್‌: ಮೂವರು ವಿದ್ಯಾರ್ಥಿಗಳ ಬಂಧನ

ಪಟ್ಟಣದ ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ರ‍್ಯಾಗ್‌ ಮಾಡಿದ ಆರೋಪದ ಮೇಲೆ 23 ಹಿರಿಯ ವಿದ್ಯಾರ್ಥಿಗಳ ವಿರುದ್ಧ ದೇವನಹಳ್ಳಿ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದೂರು ಆಧರಿಸಿ ಬಿಲಾಲ್‌, ಝಿರಿಲ್‌ ಮತ್ತು ಮಿಶಾಲ್‌ ಎಂಬ ಮೂವರು ಹಿರಿಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.ದೂರು ದಾಖಲಾಗುತ್ತಲೇ ತಲೆ ಮರೆಸಿಕೊಂಡಿರುವ ಉಳಿದ ವಿದ್ಯಾರ್ಥಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಮದ್ಯ, ಸಿಗರೇಟ್ ತರಲು ತಮ್ಮನ್ನು ಬಳಸಿಕೊಳ್ಳುತ್ತಿದ್ದರು. ಪುಸ್ತಕಗಳನ್ನು ಹಿಡಿದು …

Read More »

ಲೈಂಗಿಕ ದೌರ್ಜನ್ಯ: ಯುವಕನಿಗೆ 20 ವರ್ಷ ಕಠಿಣ ಶಿಕ್ಷೆ

ಶಿವಮೊಗ್ಗ: ತಾಲ್ಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ 21 ವರ್ಷದ ಯುವಕನಿಗೆ ಪೋಕ್ಸೊ ಅಡಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಮಂಗಳವಾರ ಆದೇಶಿಸಿದೆ.ದಂಡ ಪಾವತಿಸಲು ವಿಫಲವಾದಲ್ಲಿ ಮೂರು ವರ್ಷ ಹೆಚ್ಚುವರಿ ಸಾದಾ ಸೆರೆವಾಸ ಶಿಕ್ಷೆ ವಿಧಿಸಿದೆ. 2022ರಲ್ಲಿ ಪ್ರಕರಣ ನಡೆದಿತ್ತು. ಕುಂಸಿ ಠಾಣೆಯ …

Read More »

ಬೆಂಗಳೂರಿನ ಬೈಕ್ ಶೋರೂಂ ನಲ್ಲಿ ಅಗ್ನಿ ಅವಘಡ : 13 ‘ಎಲೆಕ್ಟ್ರಿಕಲ್ ಬೈಕ್’ ಸುಟ್ಟು ಭಸ್ಮ.!

ಬೈಕ್ ಶೋರೂಂ ನಲ್ಲಿ ಅಗ್ನಿ ಅವಘಡ ಸಂಭವಿಸಿ 13 ಎಲೆಕ್ಟ್ರಿಕಲ್ ಬೈಕ್ ಸುಟ್ಟು ಭಸ್ಮವಾದ ಘಟನೆ ಕೆ ಆರ್ ಪುರದ ಟಿಸಿ ಪಾಳ್ಯ ಸಿಗ್ನಲ್ ಬಳಿ ನಡೆದಿದೆ.ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದ್ದು,ಬುಧವಾರ ರಾತ್ರಿ 9:30 ರ ಸುಮಾರಿಗೆ ಅವಘಡ ನಡೆದಿದೆ .ಬೆಂಕಿ ತಗುಲುತ್ತಿದ್ದಂತೆ ಸಿಬ್ಬಂದಿ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ. ಬೆಂಕಿ ಕೆನ್ನಾಲಿಗೆಗೆ ಸಿಲುಕಿ 13 ಬೈಕ್ ಗಳು ಸುಟ್ಟು ಕರಕಲಾಗಿದೆ. ಬೆಂಕಿ ತಗುಲಿದ …

Read More »

ಗಣರಾಜ್ಯೋತ್ಸವಕ್ಕೆ ಉಗ್ರ ದಾಳಿ ನಡೆಸಲು ಪಾಕ್, ಜೈಶ್‌ ಯೋಜನೆ?

ನವದೆಹಲಿ: ಗಣರಾಜ್ಯೋತ್ಸವ ಅಥವಾ ಅದಕ್ಕಿಂತ ಮೊದಲು ಭಾರತದಲ್ಲಿ ಉಗ್ರ ದಾಳಿಗಳನ್ನು ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಯೋಜನೆ ರೂಪಿಸಿವೆ ಎಂದು ಗುಪ್ತಚರ ಮೂಲಗಳನ್ನುಲ್ಲೇಖಿಸಿ ಎನ್‌ಡಿಟೀವಿ ವರದಿ ಮಾಡಿದೆ. ಅಲ್ಲದೇ ಈ ದಾಳಿಗೆ ’26 26′ ಎಂಬ ಕೋಡ್‌ನೇಮ್‌ ಇಡಲಾಗಿದೆ ಎಂದು ವರದಿ ತಿಳಿಸಿದೆ. ದೆಹಲಿ, ಅಯೋಧ್ಯೆ, ಜಮ್ಮುಕಾಶ್ಮೀರ ಸೇರಿದಂತೆ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಭವವಿದೆ. ಅಯೋಧ್ಯೆ ರಾಮಮಂದಿರ, ಜಮ್ಮು …

Read More »

ಭಾರತ-ಪಾಕ್ ಸೈನಿಕರಿಂದ ಗುಂಡಿನ ಚಕಮಕಿ

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರನ್ ವಲಯದಲ್ಲಿ ಮಂಗಳವಾರ-ಬುಧವಾರ ರಾತ್ರಿ ಭಾರತ ಮತ್ತು ಪಾಕಿಸ್ತಾನಿ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಗಡಿ ಭದ್ರತೆಯನ್ನು ಬಿಗಿಗೊಳಿಸುವುದು ಮತ್ತು ನಿಯಂತ್ರಣ ರೇಖೆಯಲ್ಲಿನ ಅಗೋಚರ ಸ್ಥಳಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆರನ್‌ ನ ಬಾಲಾ ಪ್ರದೇಶದಲ್ಲಿ ಹೆಚ್ಚಿನ ಸಾಮರ್ಥ್ಯದ ನಿಗಾ ಕ್ಯಾಮೆರಾಗಳನ್ನು 6 ರಾಷ್ಟ್ರೀಯ ರೈಫಲ್ಸ್ ಸೈನಿಕರು ಅಳವಡಿಸುತ್ತಿದ್ದಾಗ ಘರ್ಷಣೆ ನಡೆದಿದೆ. ಕ್ಯಾಮೆರಾ ಅಳವಡಿಕೆಯನ್ನು ತಡೆಯುವ ಉದ್ದೇಶದಿಂದ …

Read More »