BigTv News
January 3, 2026
Breaking News
ಶಿವಮೊಗ್ಗ: ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಡ್ರೈವರ್, ಕ್ಲೀನರ್‌ಗೆ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ, ಮೊಬೈಲ್ ಮತ್ತು ನಗದು ದರೋಡೆ ಮಾಡಿಕೊಂಡು ಹೋಗಿರುವ ಘಟನೆ ನಗರದ ಸಾಗರ ರಸ್ತೆಯಲ್ಲಿ ನಡೆದಿದೆ. ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್ ಹಿತೇಶ್ ನಾಯಕ ಎಂಬವರನ್ನು ಬೆದರಿಸಲಾಗಿದೆ.ಇಬ್ಬರೂ ಬಾಡಿಗೆಗಾಗಿ ಕಾಯುತ್ತ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದರು. ಬೆಳಗಿನ ಜಾವ 4.30ರ ಹೊತ್ತಿಗೆ ಲಾರಿಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ …
Read More »
BigTv News
January 3, 2026
Breaking News
ತುಮಕೂರಿನ ಸಿದ್ದಗಂಗಾ ಮಠದ ಹೆಸರಿನಲ್ಲಿ ಕಿಡಿಗೇಡಿಗಳು ಸಾರ್ವಜನಿಕರಿಗೆ ವಂಚನೆ ಎಸಗಿದ ಘಟನೆ ನಡೆದಿದೆ. ಬಂಜೆತನಕ್ಕೆ ನಕಲಿ ಔಷಧಿ ಕೊಟ್ಟು ಜನರಿಂದ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.ಸಿದ್ದಗಂಗಾ ಮಠದ ಹೆಸರು ದುರುಪಯೋಗಪಡಿಸಿಕೊಂಡು ಕಿಡಿಗೇಡಿಗಳು ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎನ್ನುವ ಆರೋಪ ನಗರದಲ್ಲಿ ಕೇಳಿ ಬಂದಿದೆ. ಮಠದ ಹೆಸರಿನಲ್ಲಿ ಬಂಜೆತನಕ್ಕೆ ನಕಲಿ ಔಷಧಿ ವಿತರಣೆ ಮಾಡಿ ಜನರಿಂದ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ …
Read More »
BigTv News
January 3, 2026
Breaking News
ಬೆಳಗಾವಿ: ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನ ಮೇಲೆ ಆಕೆಯ ಪತಿ ಹಾಗೂ ಪತಿಯ ಸಹೋದರ ಸೇರಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.ಮೂರು ಮಕ್ಕಳ ತಾಯಿಯ ಜೊತೆಗೆ ಕಳೆದ ನಾಲ್ಕು ವರ್ಷದಿಂದ ಈ ಯುವಕ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಅಕ್ಷಯ ಕಲ್ಲಟಗಿ ತೀವ್ರವಾಗಿ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿವಾಹಿತ ಮಹಿಳೆ ಅಕ್ಷಯ್ಗೆ …
Read More »
BigTv News
January 3, 2026
Breaking News
ಎರಡು ಬೈಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಕನೂರು ತಾಲೂಕಿನ ಬನಾಪುರ ಕ್ರಾಸ್ ಬಳಿ ನಡೆದಿದೆ.ಮೃತರನ್ನು ಭಾನಾಪುರ ಗ್ರಾಮದ ಶ್ರೀಶೈಲ್ ಹಿರೇಮಠ (30) ಹಾಗೂ ಕೊಪ್ಪಳ ತಾಲೂಕಿನ ಹ್ಯಾಪಿ ಮುಂಡರಗಿ ಗ್ರಾಮದ ಮಾರುತಿ ಶಿವಪ್ಪನವರ (50) ಎಂದು ಗುರುತಿಸಲಾಗಿದೆ.ಭಾನಾಪುರದ ಕಾವೇರಿ ಪೆಟ್ರೋಲ್ ಬಂಕ್ ಎದುರು ಈ ಘಟನೆ ಸಂಭವಿಸಿದೆ. ಮಾರುತಿ ಶಿವಪ್ಪನವರ ಅವರು ಕೊಪ್ಪಳದಿಂದ ಕುಕನೂರು ಕಡೆಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ಶ್ರೀಶೈಲ್ ಹಿರೇಮಠ …
Read More »
BigTv News
January 3, 2026
Breaking News
ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಮಹರ್ಷಿ ಪ್ರತಿಮೆ ಪ್ರತಿಷ್ಠಾಪನೆ ವೇಳೆ ನಡೆದ ಹಿಂಸಾಚಾರ ಹಾಗೂ ಕಲ್ಲು ತೂರಾಟದ ಘಟನೆಗೆ ಸಂಬOಧಿಸಿದOತೆ ಕರ್ತವ್ಯ ಲೋಪದ ಆರೋಪದಡಿ ಬಳ್ಳಾರಿ ಜಿಲ್ಲಾ ಎಸ್ಪಿಯಾಗಿದ್ದ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಲಾಗಿದೆ ಗಲಭೆ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲರಾಗಿದ್ದು, ಘಟನೆಯನ್ನು ಸರಿಯಾಗಿ ನಿಭಾಯಿಸಿಲ್ಲ.ಅಲ್ಲದೆ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದಿಲ್ಲ ಎಂದು ಡಿಜಿ-ಐಜಿಪಿ ವರದಿ ನೀಡಿದ್ದು, ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು …
Read More »
BigTv News
January 2, 2026
Breaking News
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ.ರಾಮರಾಜನ್ ಗುರುವಾರ ರಾತ್ರಿ ಅಧಿಕಾರ ಸ್ವೀಕರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಜನಸ್ನೇಹಿ ಆಡಳಿತ ನೀಡಲಾಗುವುದು. ತಮಗಾದ ಅನ್ಯಾಯದ ಕುರಿತು ಸಮಸ್ಯೆ ಹೇಳಿಕೊಳ್ಳಲು ಹಾಗೂ ದೂರು ನೀಡಲು ಪೊಲೀಸ್ ಇಲಾಖೆ ಎಲ್ಲ ಕಚೇರಿಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗುವುದು’ ಎಂದರು.ಜನರಿಗೆ ಕಾನೂನಿನ ಭಯವಿರಬೇಕೇ ಹೊರತು, ಪೊಲೀಸರ ಭಯವಲ್ಲ. ಅಂಥ ವಾತಾವಾರಣವನ್ನು ಜಿಲ್ಲೆಯಲ್ಲಿ ಸೃಷ್ಟಿಸಲಾಗುವುದು’ ಎಂದರು. ‘ಜಿಲ್ಲೆಯ ಠಾಣೆಗಳಲ್ಲಿ ಯಾವುದೇ ಪ್ರಕರಣದ ಕುರಿತು …
Read More »
BigTv News
January 1, 2026
Breaking News
ಹಾವೇರಿ: ತಂದೆಯ ಅಂತ್ಯಕ್ರಿಯೆ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ ನಡೆದಿದೆ.ಹಾವೇರಿ ತಾಲೂಕಿನ ಹೊಂಬರಡಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಂಜುನಾಥ್ ಮುದ್ದಿನವರ(40) ಕೊಲೆ ಮಾಡಲಾಗಿದೆ.ಎಣ್ಣೆ ನಶೆಯಲ್ಲಿ ಸ್ನೇಹಿತನನ್ನೇ ಶಿವಕುಮಾರ್ ಶಿವಪುರ ಕೊಲೆ ಮಾಡಿದ್ದಾನೆ. ಡಿಸೆಂಬರ್ 30ರಂದು ಹೃದಯಾಘಾತದಿಂದ ಮಂಜುನಾಥ ತಂದೆ ರಾಜೇಂದ್ರ ನಿಧನರಾಗಿದ್ದು, ತಂದೆ ಅಂತ್ಯಕ್ರಿಯೆ ಮುಗಿಸಿಸಿಕೊಂಡು ಬರುತ್ತಿದ್ದ ಮಂಜುನಾಥ್ ಸ್ನೇಹಿತ …
Read More »
BigTv News
January 1, 2026
Breaking News
ಬಾಗಲಕೋಟೆ : ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬಸ್ ಚಾಲಕನ ಕಾಲು ತುಂಡಾಗಿರುವ ಜೊತೆಗೆ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲೋಕಾಪುರ ಹೊರವಲಯದಲ್ಲಿ ನಡೆದಿದೆ.ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ನಡೆದಿರುವ ಈ ಅಪಘಾತದಲ್ಲಿ ಗಾಯಗೊಂಡವರನ್ನು ಲೋಕಾಪೂರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಲಾರಿಯ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »
BigTv News
January 1, 2026
Breaking News
ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮಾಚರಣೆ ಮುಗಿದ ಕೆಲವೇ ಹೊತ್ತಿನಲ್ಲಿ ಯುವಕರ ನಡುವೆ ಭಾರೀ ಮಾರಾಮಾರಿ ನಡೆದ ಘಟನೆ ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ವರದಿಯಾಗಿದೆ. ಖಾಸಗಿ ಹೋಟೆಲ್ ಎದುರು ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೆಲವೇ ಕ್ಷಣಗಳಲ್ಲಿ ಹೊಡೆದಾಟಕ್ಕೆ ತಿರುಗಿದೆ. ಪರಸ್ಪರ ಕೊರಳ ಪಟ್ಟಿ ಹಿಡಿದು ಯುವಕರು ಕೈಕಾಲು ಚಾಚಿಕೊಂಡಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಗುಂಪುಗಳ ಜಗಳವನ್ನು ಶಮನಗೊಳಿಸಿದ್ದಾರೆ. ಯಾವುದೇ ಗಂಭೀರ ಗಾಯಗಳ …
Read More »
BigTv News
December 31, 2025
Breaking News
ಕಾಲಡಿಯಿಂದ ಕಾಸರಗೋಡಿಗೆ ಬಂದಿದ್ದ ವೃದ್ಧ ದಂಪತಿಗಳು ನಾಪತ್ತೆಯಾಗಿರುವ ಘಟನೆ ನಡೆದಿದೆ.ಮನೆಯಿಂದ ತಂದೆ ಷಣ್ಮುಗಂ, ತಾಯಿ ರಮಣಿ ಅವರನ್ನು ಪುತ್ರ ಹೊರ ಹಾಕಿದ್ದು, ಇದರಿಂದ ಕುಂಬಳೆಯಲ್ಲಿರುವ ಪುತ್ರಿಯ ಮನೆಗೆಂದು ಕಾಲಡಿಯಿಂದ ರೈಲಿನಲ್ಲಿ ಬಂದು ಕಾಸರಗೋಡು ರೈಲು ನಿಲ್ದಾಣದಲ್ಲಿ ಇಳಿದಿದ್ದರು.ಅಲ್ಲಿಂದ ಇವರಿಗೆ ಆರ್‌ಪಿಎಫ್ ಹಾಗು ಸಮಾಜ ಸೇವಾ ಸಂಘಟನೆಗಳು ಕುಂಬಳೆಗೆ ಹೋಗಲೆಂದು ವ್ಯವಸ್ಥೆ ಮಾಡಿದ್ದರು. ಆದರೆ ಅವರು ಕಂಡು ಬರಲಿಲ್ಲ. ಬಳಿಕ ಹುಡುಕಿದಾಗ ಮಾವುಂಗಾಲಿನ ಆಶ್ರಮಕ್ಕೆ ತಲುಪಿದರು ಎಂಬ ಮಾಹಿತಿ ಲಭಿಸಿತ್ತು. ಅಲ್ಲಿ …
Read More »