Breaking News

Breaking News

ಮಹಿಳೆಗೆ ಲೈಂಗಿಕ ಕಿರುಕುಳ: ಖಾಸಗಿ ಕಂಪನಿ ಮಾಲೀಕನ ವಿರುದ್ಧ ದೂರು

ಮೈಸೂರು: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಕಂಪನಿ ಮಾಲೀಕನ ವಿರುದ್ಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪನಿಯ ಮಾಲೀಕ ಮುರಳೀಧರ್ ವಿರುದ್ಧ ಅದೇ ಕಂಪನಿಯ ಮಹಿಳಾ ಉದ್ಯೋಗಿ ದೂರು ನೀಡಿದ್ದಾರೆ.ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಕೆಲಸದ ವೇಳೆ ಕಂಪನಿ ಮಾಲೀಕ ಮುರಳಿಧರ್ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ಮಹಿಳೆ ಕೆಲಸ ಬಿಟ್ಟು ಮನೆಯಲ್ಲಿದ್ದರು. ಮಹಿಳೆಯ ಮನೆಗೂ ಬಂದಿದ್ದ ಆರೋಪಿ ಕೆಲಸಕ್ಕೆ …

Read More »

ಕರ್ನಾಟಕಕ್ಕೆ ಬೇಕಾಗಿದ್ದ ಕ್ರಿಮಿನಲ್‌ ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್‌

ಮುಜಾಫರ್‌ನಗರ: ಹಲವು ಪ್ರಕರಣಗಳಲ್ಲಿ ಕರ್ನಾಟಕ ಪೊಲೀಸರು ಹುಡುಕುತ್ತಿದ್ದ ಕುಖ್ಯಾತ ಕ್ರಿಮಿನಲ್‌ವೊಬ್ಬ ಉತ್ತರ ಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈತನ ತಲೆಗೆ 50000 ರೂ. ಬಹುಮಾನ ಘೋಷಿಸಲಾಗಿತ್ತು. ಇಟ್ಟಿಗೆ ಗೂಡೊಂದರ ಬಳಿ ಡಕಾಯಿತರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆಸಿದರು.ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಎನ್‌ಕೌಂಟರ್‌ನಲ್ಲಿ ಕ್ರಿಮಿನಲ್‌ ಸಮಯ್‌ದೀನ್‌ (35) ಮೃತಪಟ್ಟಿದ್ದಾನೆ. ಆದರೆ ಆತನ 5 ಮಂದಿ ಸಹಚರರು ತಪ್ಪಿಸಿಕೊಂಡರು. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು …

Read More »

ಸಾರ್ವಜನಿಕರ ‘ವಾಹನ ತಪಾಸಣೆ’ ವೇಳೆ ದುರ್ನಡತೆ ತೋರುವ ರಾಜ್ಯದ Traffic ಪೊಲೀಸರಿಗೆ ಖಡಕ್ ಸೂಚನೆ.!

ವಾಹನ ತಪಾಸಣಾ/ಪರೀಶೀಲನೆ ಸಮಯದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವಾಹನ ಚಾಲಕರಿಗೆ ಕಿರುಕುಳ ಹಲ್ಲೆ. ಅವಾಚ್ಯ ಶಬ್ದಗಳ ಬಳಕೆ ಮಾಡಿ ದುರ್ನಡತೆ ತೋರುವುದನ್ನು ಕಡಿವಾಣ ಹಾಕಲು ಸೂಕ್ತ ಸುತ್ತೋಲೆ/ಆದೇಶ ನೀಡುವ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ…ಈ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ರಾಜ್ಯ ಪೊಲೀಸ್ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು ಕೆಲವು ಅಧಿಕಾರಿ ಸಿಬ್ಬಂದಿಗಳು ತೋರುತ್ತಿರುವ ದುರ್ನಡತೆ, ಅಧಿಕಾರ ದುರ್ಬಳಕೆಯಿಂದ ಸಂಪೂರ್ಣ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿದ್ದು ಕಾಲಕಾಲಕ್ಕೆ ಇಲಾಖೆಯಿಂದ ಹಲವಾರು ಸುತ್ತೋಲೆ ಜ್ಞಾಪನಗಳನ್ನು …

Read More »

ತೋವಿನಕೆರೆ: ನೇಣು ಬಿಗಿದುಕೊಂಡು ಶಿಕ್ಷಕ ಆತ್ಮಹತ್ಯೆ

ಕೊರಟಗೆರೆ ತಾಲ್ಲೂಕು ಕುರಂಕೋಟೆ ಗ್ರಾಮದ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ದೇವರಾಜು (56) ಎಂಬುವರು ಸೋಮವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶಾಲೆ ವಿದ್ಯಾರ್ಥಿನಿ ಜತೆಗೆ ದೇವರಾಜು ಅಸಭ್ಯವಾಗಿ ವರ್ತಿಸಿದ್ದರು ಎನ್ನಲಾಗಿದೆ.ಈ ಸಂಬಂಧ ಕೆಲವು ಹಿರಿಯರು ಸೇರಿಕೊಂಡು ವಿದ್ಯಾರ್ಥಿನಿ ಕುಟುಂಬದವರ ಜತೆಗೆ ರಾಜಿ ಸಂಧಾನ ನಡೆಸಿದ್ದರು. ಇದರ ನಡುವೆ ಕೆಲವು ಮಧ್ಯವರ್ತಿಗಳು, ಯೂಟೂಬ್ ಪತ್ರಕರ್ತರು ಎಂದು ಹೇಳಿಕೊಂಡವರು ಹಣಕ್ಕಾಗಿ ಪೀಡಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ …

Read More »

ಹೈದರಾಬಾದ್‌: ಮೂರು ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ

ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಆರ್‌ಜಿಐಎ) ಬರುತ್ತಿದ್ದ ಮೂರು ವಿಮಾನಗಳಲ್ಲಿ ಬಾಂಬ್‌ ಇರಿಸಿರುವುದಾಗಿ ದುಷ್ಕರ್ಮಿಗಳು ಬೆದರಿಕೆ ಸಂದೇಶ ಕಳುಹಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಸಂದೇಶ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ.ಬ್ರಿಟನ್‌ನ ಹೀಥ್ರೋದಿಂದ ಬರುತ್ತಿದ್ದ ಬ್ರಿಟಿಷ್‌ ಏರ್‌ವೇಸ್‌ನ ವಿಮಾನ (ಬಿಎ277) ಹಾಗೂ ಫ್ರಾಂಕ್‌ಫರ್ಟ್‌ನಿಂದ ಆಗಮಿಸುತ್ತಿದ್ದ ಲುಫ್ತಾನ್ಸಾ (ಎಲ್‌ಎಚ್‌ 752), ಕಣ್ಣೂರಿನಿಂದ ಬರುತ್ತಿದ್ದ ಇಂಡಿಗೊ (6ಇ 7178) ವಿಮಾನಗಳಲ್ಲಿ …

Read More »

*ಗ್ಯಾಸ್ ಗೀಸರ್ ಸೋರಿಕೆ: ತಾಯಿ-ಮಗು ಸಾವು*

ಗ್ಯಾಸ್ ಗೀಸರ್ ಸೋರಿಕೆಯಾಗಿ ತಾಯಿ ಹಾಗೂ ಮಗು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಚಾಂದಿನಿ (26) ಯುವಿ (4) ಎಂದು ಗುರುತಿಸಲಾಗಿದೆ. ಸ್ನಾನಕ್ಕೆ ಹೋಗಿದ್ದ ವೇಳೆ ಗ್ಯಾಸ್ ಗೀಸರ್ ಸೋರಿಕೆಯಾಗಿದ್ದು, ತೀವ್ರ ಅವಸ್ಥರಾಗಿದ್ದ ತಾಯಿ-ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರುಯಾಗದೇ ಇಬ್ಬರೂ ಸಾವನ್ನಪ್ಪಿದ್ದಾರೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಅಪರಿಚಿತ ವಾಹನ ಢಿಕ್ಕಿ; ವ್ಯಕ್ತಿಗೆ ತೀವ್ರ ಗಾಯ

ಪಡುಬಿದ್ರಿ: ತೆಂಕ ಗ್ರಾಮದ ನಾರಾಳ್ತಾಯ ಗುಂಡದ ಬಳಿ ಡಿ. 7ರಂದು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದುಹೋಗಿರುವ ರಾ. ಹೆ. 66ರ ಏಕಮುಖ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಢಿಕ್ಕಿಯಾಗಿ ತೆಂಕ ಗ್ರಾಮದ ಮನೋಜ್ ಕುಮಾರ್(42) ಎಂಬವರು ತಲೆಗೆ ತೀವ್ರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಡ್ಯಾನ್ಸ್ ಕ್ಲಾಸ್ ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೆದ್ದಾರಿಯ ಪೂರ್ವ ಬದಿಯಿಂದ ಪಶ್ಚಿಮ ಬದಿಗೆ ದಾಟುತ್ತಿದ್ದ ವೇಳೆ ಈ ಘಟನೆ …

Read More »

ವಾಹನದಿಂದ ಜಿಗಿದು ಹಸು ಸಾವು; ಚಾಲಕನ ಮೇಲೆ ಪ್ರಕರಣ ದಾಖಲು

ಹೊಸನಗರ ತಾಲೂಕಿನ ಬ್ರಹ್ಮವರದಿಂದ ಚಿಂತಾಮಣಿಗೆ ಟಾಟಾ ಏಸ್‌ನಲ್ಲಿ ಸಾಗಿಸುತ್ತಿದ್ದ ಐದು ಹಸುಗಳ ಪೈಕಿ ಒಂದು ವಾಹನದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಾವನಪ್ಪಿದ್ದು, ಚಾಲಕನ ನಿರ್ಲಕ್ಷತನ ಹಾಗೂ ಅನುಮತಿ ಇಲ್ಲದೆ ಗೋವು ಸಾಕಾಣಿಕೆ ಸಾಗಾಣಿಕೆ ಮಾಡಿದ ಆರೋಪದಡಿ ಪಿಎಸ್‌ಐ ರಾಜು ರೆಡ್ಡಿ ಅವರು ಭಾನುವಾರ ಸ್ವಯಂ ದೂರು ದಾಖಲಿಸಿಕೊಂಡು ವಾಹನ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ‍ಪ್ರಕರಣ ದಾಖಲಿಸಿದ್ದಾರೆಬಂಧಿತ ಆರೋಪಿಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮದ ಅನಿಲ್(27) ಹಾಗೂ …

Read More »

5 ಸಾವಿರ ಸಾಲ ವಾಪಸ್ ಕೊಡುವಂತೆ ಕಿರುಕುಳ; ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನ!

ಮೈಸೂರು : 5 ಸಾವಿರ ಸಾಲ ವಾಪಸ್ ಕೊಡುವಂತೆ ಕಿರುಕುಳ ನೀಡಿದ್ದು, ಸೆಲ್ಫಿ ವಿಡಿಯೋ ಮಾಡಿ ಸಾಲ ನೀಡಿದ್ದ ವ್ಯಕ್ತಿಯ ಮನೆ ಮುಂದೆ ವಿಷ ಸೇವನೆ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಿವಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮಹದೇವನಗರದ ರವಿ ಕಿರುಕುಳ ಕೊಟ್ಟ ಆರೋಪಿ. ಸಂಜೆ ಸ್ನೇಹಿತನ ಬೈಕ್ ತೆಗೆದುಕೊಂಡು ಶಿವಕುಮಾರ್ ಹೋಗಿದ್ದನು. ಈ ಸಮಯದಲ್ಲಿ ರವಿ ಬೈಕ್ ಕಸಿದುಕೊಂಡಿದ್ದಾನೆ. …

Read More »

ಚಾಲಕನ ಎಡವಟ್ಟಿನಿಂದ ಡಿವೈಡರ್‌ಗೆ ಗುದ್ದಿದ ಸ್ಕೂಲ್‌ ಬಸ್‌ | ಕೂದಲೇಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಚಾಲಕನ ಎಡವಟ್ಟಿನಿಂದ ಖಾಸಗಿ ಶಾಲಾ ಬಸ್ಸೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಕೂದಲೇಳೆ ಅಂತದರಲ್ಲಿ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ನಗರದ ಹೆಣ್ಣೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ಈ ಅವಘಡ ಸಂಭವಿಸಿದ್ದು, ಈ ಅಪಘಾತದಲ್ಲಿ ಬಸ್‌, ಬೈಕ್‌ ಸವಾರನಿಗ ಗುದ್ದಿದ್ದು, ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ.ಆದರೆ ಬಸ್‌ನಲ್ಲಿದ್ದ ಶಾಲಾ ಮಕ್ಕಳು ಅದೃಷ್ಟವಶತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಅತಿವೇಗದ …

Read More »