BigTv News
December 9, 2025
Breaking News
ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಮದ್ಯ ಸೇವನೆ ಮಾಡಿ, ಹೆಡ್‌ಲೈಟ್ ಹಾಕದೆ ಅತೀವೇಗದಲ್ಲಿ ವಾಹನ ಚಲಾಯಿಸಿದ ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದ ಬಿಲ್ಸರ್ ಸಿಂಗ್ ಸೆಹರಾ ಎಂಬಾತನನ್ನು ಸಂಚಾರ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿದ್ದಾರೆ.ಆತ ಸಾಸ್ತಾನದಿಂದ ರಾ.ಹೆ.ಯಲ್ಲಿ ನಿಯಂತ್ರಣವಿಲ್ಲದೆ ವಾಹನ ಚಲಾಯಿಸಿಕೊಂಡು ಬರುತ್ತಿದ್ದ.ಕೂದಲೆಳೆಯ ಅಂತರದಲ್ಲಿ ಹಲವಾರು ಅಪಘಾತಗಳು ತಪ್ಪಿ ಹೋಗಿದ್ದು, ಈ ಬಗ್ಗೆ ಮತ್ತೊಂದು ವಾಹನದಲ್ಲಿದ್ದವರು ವೀಡಿಯೋ ಚಿತ್ರೀಕರಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು …
Read More »
BigTv News
December 9, 2025
Breaking News
ಹಾಸನ: ಅರಕಲಗೂಡು ತಾಲ್ಲೂಕಿನ ಕೊಣನೂರು ಗ್ರಾಮದಲ್ಲಿ ಬೈಕ್ ಹಾಗೂ ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.ಅರಕಲಗೂಡು ತಾಲೂಕು ಕೆರೆಕೋಡಿ ಗ್ರಾಮದ ಅನಿಲ್ (28) ಹಾಗೂ ಹೊನ್ನೇಗೌಡ (30) ಎಂಬವರು ಮೃತ ದುರ್ದೈವಿಗಳು.ಕೊಣನೂರು ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗದಲ್ಲಿ ಸಾರಿಗೆ ಸಂಸ್ಥೆ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸಕ್ಕೆ ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡ …
Read More »
BigTv News
December 9, 2025
Breaking News
ಮಂಗಳೂರು: ಪದವು ಗ್ರಾಮ ಶಕ್ತಿನಗರದ ಸಾರ್ವಜನಿಕ ಖಾಲಿ ಜಾಗದಲ್ಲಿ ಇಸ್ಪಿಟ್ ಎಲೆಗಳನ್ನು ಬಳಸಿ ಉಲಾಯಿ ಪಿದಾಯಿ ಎಂಬ ಜುಗಾರಿ ಆಟ ಆಡುತ್ತಿದ್ದ ಐವರು ವಿರುದ್ಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಂಧಿತರಿಂದ 4,200 ರೂ.ನಗದು ಮತ್ತು ಆಟಕ್ಕೆ ಬಳಸಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಶಕ್ತಿನಗರ ನಿವಾಸಿಗಳಾದ ಅರುಣ್ ಲೋಬೋ (49), ಸೆಬೆಸ್ಟಿಯನ್ ಲೋಬೋ (45), ಸ್ಟ್ಯಾನಿ ವಾಲ್ಟರ್ ಲೋಬೊ (50), ರವಿ ಕಿರಣ್ (35) ಮತ್ತು ಪಡುಶೆಡ್ಡೆ ಪಚ್ಚನಾಡಿ ನಿವಾಸಿ ಅಶೋಕ …
Read More »
BigTv News
December 9, 2025
Breaking News
ಗದಗ: ಭ್ರಷ್ಟ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಬೆಳ್ಳಂಬೆಳ್ಳಿಗೆ ಲೋಕಾಯುಕ್ತರು ದಾಳಿ ಮಾಡಿದ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿ ತಾಲೂಕು ಪಶು ವೈದ್ಯಾಧಿಕಾರಿ ನಿಂಗಪ್ಪ ಓಲೇಕಾರ ಎಂಬ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ದಾಳಿಯಾಗಿದೆ.ಅಕ್ರಮ ಆಸ್ತಿ ಗಳಿಕೆ ಆರೋಪದ ದೂರಿನ ಮೇರೆಗೆ ಲೋಕಾಯುಕ್ತರು ಎರಡು ಕಡೆ ದಾಳಿ ಮಾಡಿದ್ದಾರೆ. ಲೋಕಾಯುಕ್ತ ಗದಗ ಡಿವೈಎಸ್ಪಿ ವಿಜಯ್ ಬಿರಾದಾರ ಹಾಗೂ ಇನ್ಸ್ಪೆಕ್ಟರ್ ವೆಂಕಟೇಶ್ ಯಡಹಳ್ಳಿ ನೇತೃತ್ವದಲ್ಲಿ ದಾಳಿ …
Read More »
BigTv News
December 9, 2025
Breaking News
ಹಾಸನ: ಡ್ರಗ್ಸ್ ಅಮಲಿನಲ್ಲಿ ಯುವಕನನ್ನು ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ದುಷ್ಕರ್ಮಿಗಳು, ಹತ್ಯೆಯ ಬಳಿಕ ಮೃತದೇಹದ ಎದುರು ನಿಂತು ವಿಡಿಯೋ ಚಿತ್ರೀಕರಿಸಿರುವ ಅಮಾನವೀಯ ಕೃತ್ಯ ಹಾಸಗ ನಗರದ ಹೊರವಲಯದಲ್ಲಿ ನಡೆದಿದೆ.ಹೊಳೆನರಸೀಪುರ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಕೊಲೆ ನಡೆದಿದೆ.ಕೊಲೆಯಾದವನ ಗುರುತು ಪತ್ತೆಯಾಗಿಲ್ಲ. ವೈರಲ್ ವೀಡಿಯೊದಲ್ಲಿ ನಾವು ಕೊಲೆ ಮಾಡಿದ್ದೇವೆ ಎಂದು ಯುವಕನೋರ್ವ ಮೃತದೇಹವನ್ನು ತೋರಿಸುತ್ತಿರುವುದು ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು …
Read More »
BigTv News
December 9, 2025
Breaking News
ಮನೆಗಳ್ಳತನ ಸೇರಿದಂತೆ ಕಾರು ಬೈಕ್ ಗಳು ಕಳುವಾಗಿರುವ ಸಾಕಷ್ಟು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿರುತ್ತವೆ. ಆದ್ರೆ ಬೆಂಗಳೂರಿನಲ್ಲಿ ಲಾರಿಗಳ ಕಳ್ಳತನವಾಗಿದೆ. ಹೌದು ನಗರದಲ್ಲಿ ಸುಮಾರು 10ಕ್ಕೂ ಹೆಚ್ಚು ಲಾರಿ ಮಾಲೀಕರು ತಮ್ಮ 25ಕ್ಕೂ ಅಧಿಕ ಲಾರಿಗಳು ಕಳ್ಳತನ ಆಗಿದೆ ಎಂದಿದ್ದಾರೆ.ಕೆಲಸಕ್ಕೆ ಬರುವ ನೆಪದಲ್ಲಿ ಒಂದಷ್ಟು ದಿನ ಜೊತೆಗಿದ್ದು, ಆ ಬಳಿಕ ಖದೀಮರು ಲಾರಿ ಕದ್ದು ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಲಾರಿ ಮಾಲೀಕರು …
Read More »
BigTv News
December 9, 2025
Breaking News
ಪ್ರೀತಿ ಹೆಸರಲ್ಲಿ ಸಲುಗೆಯಿಂದ ವರ್ತಿಸಿ, ನಂತರ ನನ್ನ ಖಾಸಗಿ ಫೋಟೋಗಳನ್ನು ತೋರಿಸಿ, ಹೆದರಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಹಿನ್ನಲೆ ಯುವತಿಯೊಬ್ಬಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ವಿಭೂತಿಕೆರೆ ಗ್ರಾಮದ ಯುವತಿ 22 ವರ್ಷದ ವರ್ಷಿಣಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ತುಮಕೂರಿನ ಕುಣಿಗಲ್ ಮೂಲದ ಅಭಿ ಎಂಬಾತನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.
Read More »
BigTv News
December 9, 2025
Breaking News
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕ್ರಮ್ ಮತ್ತು ಶ್ವೇತಾಂಬರಿ ಸೇರಿದಂತೆ ಇತರ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದಾಗ ಅವರು ಈ ಹಿಂದೆ ತಮ್ಮ ವಿರುದ್ಧ ಮಾತನಾಡಿದ್ದರು. ಉದಯಪುರದಲ್ಲಿ ಮುರ್ದಿಯಾ ಸಲ್ಲಿಸಿದ ದೂರಿನಲ್ಲಿ, ಚಲನಚಿತ್ರ ನಿರ್ಮಾಪಕ ಮತ್ತು ಅವರ ಸಹಚರರು ಆರ್ಥಿಕ ಅಕ್ರಮ ಮತ್ತು ಸುಳ್ಳು ಭರವಸೆಗಳ ಆರೋಪ ಹೊರಿಸಿದ್ದಾರೆ. ತನ್ನ ದಿವಂಗತ ಪತ್ನಿಯ ಜೀವನವನ್ನು ಆಧರಿಸಿದ ಚಿತ್ರಕ್ಕೆ ಹಣಕಾಸು ಒದಗಿಸುವಂತೆ ಮನವೊಲಿಸಲಾಗಿತ್ತು ಎಂದು ಮುರ್ದಿಯಾ ಆರೋಪಿಸಿದ್ದಾರೆ, ಈ ಉದ್ಯಮವು ಸುಮಾರು 200 …
Read More »
BigTv News
December 9, 2025
Breaking News
ಬಮೂಲ್ ಅಧ್ಯಕ್ಷ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಕೋಟ್ಯಂತರ ರು. ವಂಚನೆ ಪ್ರಕರಣ ಸಂಬಂಧ ಚಲನಚಿತ್ರ ನಟ ಧರ್ಮ ಅವರಿಗೆ ಧ್ವನಿ ಪರೀಕ್ಷೆಯ ಸಂಕಷ್ಟ ಎದುರಾಗಿದೆ.ವಂಚನೆ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿ ವನಿತಾ ಜತೆ ಮಾಜಿ ಸಂಸದ ಸುರೇಶ್ ಎಂದು ಹೇಳಿಕೊಂಡು ಧರ್ಮ ಮಾತನಾಡಿದ್ದರು ಎಂಬ ಆರೋಪವಿದೆ. ಈ ಬಗ್ಗೆ ಬಹಿರಂಗವಾದ ಆಡಿಯೋದಲ್ಲಿ ಪುರುಷ ದನಿ ಇದೆ. ಹೀಗಾಗಿ ಆಡಿಯೋದಲ್ಲಿರುವ ದನಿ, ಧರ್ಮ ಅವರ …
Read More »
BigTv News
December 9, 2025
Breaking News
ಸ್ತ್ರೀರೋಗ ತಜ್ಞೆ ಡಾ. ಲಲಿತಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಠಾಣೆ ಪೋಲೀಸರು ನೇಪಾಳ ಮೂಲದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಮನೆ ಕೆಲಸಕ್ಕೆ ಸೇರಿಕೊಂಡಿದ್ದ ನೇಪಾಳದ ದಂಪತಿ ಮನೆಯ ನೆಲಮಹಡಿಯಲ್ಲಿ ವಾಸವಾಗಿದ್ದರು. ಡಾ. ಲಲಿತಾ ಅವರ ಪತಿ ಕೂಡ ವೈದ್ಯರಾಗಿದ್ದಾರೆ. ಪುತ್ರ ಎಂಬಿಬಿಎಸ್ ಓದುತ್ತಿದ್ದು, ವೈದ್ಯ ದಂಪತಿಯ ಮನೆಯಲ್ಲಿ ಹೆಚ್ಚಿನ ಹಣ, ಚಿನ್ನಾಭರಣ ಇರುವ ಮಾಹಿತಿ ತಿಳಿದುಕೊಂಡಿದ್ದ …
Read More »