Breaking News

Breaking News

ಸಲಿಂಗರತಿ ಕಿರುಕುಳ; ಫೋಕ್ಸೋ ದೂರು ದಾಖಲು

ಮುಳ್ಳೇರಿಯ: ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಸಂಬಂಧಿಕರೋರ್ವರ ಮನೆಗೆ ರಜೆಯಲ್ಲಿ ಬಂದಿದ್ದ 13 ರ ಹರೆಯದ ಬಾಲಕನಿಗೆ 16 ರ ಹರೆಯದ ಬಾಲಕ ಸಲಿಂಗರತಿ ಕಿರುಕುಳ ನೀಡಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.ಘಟನೆಗೆ ಸಂಬಂಧಿಸಿದಂತೆ 16 ರ ಬಾಲಕನ ವಿರುದ್ಧ ಫೋಕ್ಸೋ ಕೇಸು ದಾಖಲಿಸಲಾಗಿದೆ.ಕೊಯಿಲಾಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮೂಲತ: ದೂರು ನೀಡಿದಾತನ ಮನೆಯಿಂದ ಕಳೆದ ರಜೆಯಲ್ಲಿ ಆದೂರಿಗೆ ತಲುಪಿದ್ದ. ಈ ಸಮಯದಲ್ಲಿ ಸಂಬಂಧಿಕನಾದ 16 ರ ಹರೆಯದ ಬಾಲಕನ …

Read More »

ಮೈಸೂರು ಪೋಲೀಸರ ಭರ್ಜರಿ ಕಾರ್ಯಾಚರಣೆ: 2 ಕೆಜಿ ಗಾಂಜಾ, 7 ಲಕ್ಷ ನಗದು ಸೀಜ್ – ಇಬ್ಬರು ಅರೆಸ್ಟ್

ಮೈಸೂರು ಪೊಲೀಸ್ ಇಲಾಖೆಯ ಭರ್ಜರಿ ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದ ವಸ್ತುಗಳು ವಶವಾಗಿವೆ.ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪೊಲೀಸರು 2 ಕೆಜಿ ಗಾಂಜಾ, ₹7.30 ಲಕ್ಷ ನಗದು, 10 ತಲ್ವಾರ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಈ ಪ್ರಕರಣದ ಸಂಬಂಧ ಫೀರ್ಧೋಶ್ ಮತ್ತು ರೋಷನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರೂ ಮಾಲು ಸಮೇತ ಸಿಕ್ಕಿಬಿದ್ದಿರುವುದು ಪೊಲೀಸರು ತಿಳಿಸಿದರು. ಬಂಧಿತರಿಗೆ ವಿರುದ್ಧವಾಗಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. …

Read More »

ಪ್ರವಾಸದ ವೇಳೆ ಬಸ್ ಪಲ್ಟಿ ಪ್ರಕರಣ: ಮೈಸೂರಿಗೆ ಆಗಮಿಸಿದ ಪ್ರವಾಸಕ್ಕೆ ತೆರಳಿದ್ದ ಮಕ್ಕಳು

ಮೈಸೂರು: ಶಾಲಾ ಮಕ್ಕಳ ಪ್ರವಾಸದ ವೇಳೆ ಬಸ್ ಪಲ್ಟಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ 3 ಗಂಟೆಗೆ ಮಕ್ಕಳೆಲ್ಲಾ ಮೈಸೂರಿಗೆ ಆಗಮಿಸಿದ್ದಾರೆ‌.ಎರಡು ದಿನದ ಹಿಂದೆ ಬಸ್ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮೃತ ಬಾಲಕನ ಮೃತ ದೇಹವನ್ನು ನಿನ್ನೆಯೇ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ‌.ಪ್ರವಾಸಕ್ಕೆ ತೆರಳಿದ್ದ ಎಲ್ಲಾ ಮಕ್ಕಳು ಬಂದಿದ್ದಾರೆ. ಈ ಪೈಕಿ ನಾಲ್ಕು ಮಕ್ಕಳಿಗೆ ಸಣ್ಣ ಪುಟ್ಟ ಗಾಯವಾಗಿರುವ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಬರುವಿಕೆಗಾಗಿ ಕಾಯುತ್ತಿದ್ದ ಎಲ್ಲಾ …

Read More »

ಹಿರ್ಗಾನ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ, ಮೂವರಿಗೆ ಗಾಯ

ಕಾರ್ಕಳದಿಂದ ಹೆಬ್ರಿ ಕಡೆಗೆ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದ‌ ಘಟನೆ ಮಂಗಳವಾರ ಸಂಭವಿಸಿದೆ.ಕಾರ್ಕಳದ ಪಂಚಾಯತ್‌ರಾಜ್ ವಿಭಾಗದ ಎಂಜಿನಿಯರ್ ಸದಾನಂದ ನಾಯ್ಕ್ ಹಾಗೂ ಪತ್ನಿ ಮಗು ಗಾಯಗೊಂಡವರು.ಹಿರ್ಗಾನ ಗ್ರಾಮದ ಮೂರೂರು ಬಳಿ ಸದಾನಂದ ನಾಯ್ಕ್ ತನ್ನ ಕಾರಿನಲ್ಲಿ ಪತ್ನಿ ಹಾಗೂ ಮಗುವಿನ ಜತೆಗೆ ತಮ್ಮ ಮನೆ ಬ್ರಹ್ಮಾವರದ ಚಾಂತಾರಿಗೆ ಹೊರಟಿದ್ದರು. ಮುರೂರು ಬಳಿ ಏಕಾಏಕಿ ಸೈಕಲ್ ಸವಾರ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿತು. …

Read More »

ಕಳಚಿ ಬಿದ್ದ ಟ್ರ್ಯಾಕ್ಟರ್ ಟ್ರೈಲರ್: ಇಬ್ಬರು ಸಾವು, 8 ಮಂದಿಗೆ ಗಾಯ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ -ಶಿಕಾರಿಪುರ ರಸ್ತೆಯ ಹಳೆಜೋಗ -ಜಯನಗರ ಗ್ರಾಮದ ಮಧ್ಯೆ ಟ್ರ್ಯಾಕ್ಟರ್ ಟ್ರೈಲರ್ ಕಳಚಿ ಇಬ್ಬರು ಸಾವನ್ನಪ್ಪಿದ್ದು, ಎಂಟು ಜನ ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ ಟ್ರೈಲರ್ ಕಳಚಿ ಬಿದ್ದು ಅಪಘಾತ ಸಂಭವಿಸಿದೆ.ಶಿಕಾರಿಪುರ ತಾಲೂಕು ಅತ್ತಿಬೈಲು ಗ್ರಾಮದ ಕೂಲಿ ಕಾರ್ಮಿಕರಾದ ಗುತ್ಯಪ್ಪ(50), ದುರ್ಗಮ್ಮ(53) ಮೃತಪಟ್ಟವರು. ಅಪಘಾತದಲ್ಲಿ ಲೋಕಮ್ಮ, ಜಯಮ್ಮ, ಮಂಜಮ್ಮ, ನೀಲಪ್ಪ, ಕರಿಯಮ್ಮ, ಕಲ್ಪನಾ, ಕರಿಬಸಪ್ಪ, ದುರ್ಗಮ್ಮ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯಾಮತಿ …

Read More »

ಬ್ರಹ್ಮಾವರ: ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ

ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಪ್ಪಿನಕೋಟೆಯ ನಡುಹಿತ್ಲು ನಿವಾಸಿ ಶ್ರೇಯಾ(21) ಎಂಬವರಿಗೆ ನ.24ರಂದು ಟೆಲಿಗ್ರಾಂ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬ ಲಿಂಕ್ ಕಳುಹಿಸಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು.ಅದರಂತೆ ಶ್ರೇಯಾ ತನ್ನ ಖಾತೆಯಿಂದ ಆರೋಪಿ ತಿಳಿಸಿದ ಖಾತೆಗೆ ಒಟ್ಟು 1,05,000ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಆರೋಪಿ …

Read More »

ಬೆಂಗಳೂರು: ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾವು

ಸಿದ್ದಾಪುರದ ನಿವಾಸಿ ಅಬ್ದುಲ್‌ ಹುಸೇನ್ ಅವರು ಮಾವನ ಪುತ್ರಿಯನ್ನು ಪ್ರೀತಿಸುತ್ತಿದ್ದರು. ಪುತ್ರಿ ಮದುವೆ ಮಾಡಿಕೊಡುವಂತೆ ಮಾವನ ಬಳಿ ಹುಸೇನ್‌ ಮನವಿ ಮಾಡಿದ್ದರು. ಅದಕ್ಕೆ ಮಾವ ಒಪ್ಪಿರಲಿಲ್ಲ. ಈ ಮಧ್ಯೆ ಆರು ತಿಂಗಳ ಹಿಂದೆ ಕುಟುಂಬ ಸಮೇತರಾಗಿ ಮಾವ ಅಂದ್ರಹಳ್ಳಿಗೆ ಸ್ಥಳಾಂತರಗೊಂಡಿದ್ದರು. ಗೋದಾಮು ಬಾಡಿಗೆ ಪಡೆದು ಗುಜರಿ ವ್ಯಾಪಾರ ಮಾಡುತ್ತಿದ್ದರು. ಇತ್ತೀಚೆಗೆ ಆ ಗೋದಾಮಿಗೆ ಬೆಂಕಿ ಬಿದ್ದು ನಷ್ಟವಾಗಿತ್ತು. ಅದಾದ ಮೇಲೆ ಯುವಕ, ಮಾವನ ಜತೆಗೆ ಸೇರಿಕೊಂಡು ಗುಜರಿ ವ್ಯಾಪಾರ ಆರಂಭಿಸಿದ್ದರು. …

Read More »

ಕಂದಕಕ್ಕೆ ಉರುಳಿದ ಸರ್ಕಾರಿ ಬಸ್: ಐವರು ಗಂಭೀರ, ಹಲವರಿಗೆ ಸಣ್ಣಪುಟ್ಟ ಗಾಯ

ಗದಗ:- ಜಿಲ್ಲೆಯ ಶಿರಹಟ್ಟಿ ತಾಲೂಕು ಮಜ್ಜುರ ಬಳಿ ಇಂದು ಬೆಳಿಗ್ಗೆ ನಡೆದ ಅಪಘಾತ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಗದಗದಿಂದ ಶಿರಹಟ್ಟಿ ಮೂಲಕ ಕೇರಳ್ಳಿ ತಾಂಡಾಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದೆ.ಈ ದುರಂತದಲ್ಲಿ 5 ಜನ ಗಂಭೀರವಾಗಿ ಗಾಯಗೊಂಡಿದ್ದು, 15 ಮಂದಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳೀಯರ ಪ್ರಕಾರ ಚಾಲಕನ ಅಜಾಗರೂಕ ಚಾಲನೆ ಕಾರಣವಾಗಿರಬಹುದೆಂಬ ಆರೋಪಗಳು ಕೇಳಿ …

Read More »

ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 4.5 ಕೋಟಿ ಮೌಲ್ಯದ ಗಾಂಜಾ ವಶ : ಓರ್ವ ಅರೆಸ್ಟ್.!

ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 4.5 ಕೋಟಿ ಮೌಲ್ಯದ ಗಾಂಜಾವನ್ನು ಸಿಬ್ಬಂದಿಗಳು ವಶಕ್ಕೆ ಪಡೆದುಕೊಂಡಿದ್ದು, ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಗಳು ನಿಜಾಮುದ್ದೀನ್ ಅಬೂಬಕರ್ ಎಂಬಾತನನ್ನ ಬಂಧಿಸಿದ್ದಾರೆ. 4.5 ಕೋಟಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.ಈತ ಏರ್ ಏಷ್ಯಾ ವಿಮಾನದಲ್ಲಿ ಗಾಂಜಾ ತಂದಿದ್ದನು. ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುವಾಗ ಸಿಕ್ಕಿಹಾಕಿಕೊಂಡಿದ್ದಾನೆ. 4.5 ಕೋಟಿ ಮೌಲ್ಯದ ಹೈಡ್ರೋಪೋನಿಕಲ್ ಗಾಂಜಾ ವಶಪಡಿಸಿಕೊಂಡ ಭದ್ರತಾ ಸಿಬ್ಬಂದಿಗಳು ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

Read More »

ಅಪ್ರಾಪ್ತೆ ಮೇಲೆ ಅತ್ಯಾಚಾರ: ಇಬ್ಬರು ಯುವಕರ ಬಂಧನ

ಸವದತ್ತಿ/ಯರಗಟ್ಟಿ: ಮುರಗೋಡ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿದ ಘಟನೆ ನ.23ರಂದು ನಡೆದಿದೆ. ಮಣಿಕಂಠ ಮಹಾಂತೇಶ ದಿನ್ನಿಮನಿ (28) ಹಾಗೂ ಈರಣ್ಣ ಮಹಾಂತೇಶ ಸಂಕಮ್ಮನವರ (26) ಆರೋಪಿತರು. ಗಿರಣಿಗೆ ಹೊರಟಿದ್ದ ಬಾಲಕಿಯನ್ನು ಬಲವಂತದಿಂದ ಕಬ್ಬು ಬೆಳೆದ ಜಮೀನಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.ಅಲ್ಲದೇ ಈ ವಿಷಯ ಇತರರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ತಾಯಿ ಮುರಗೋಡ ಠಾಣೆಗೆ ದೂರು ನೀಡಿದ್ದಾರೆ. ಇಬ್ಬರೂ …

Read More »