Breaking News

Breaking News

ಪಡುಬಿದ್ರಿ: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

ರಸ್ತೆ ದಾಟಲು ನಿಂತಿದ್ದ ಪಡುಬಿದ್ರಿ ನಡಾಲು ಗ್ರಾಮದ ಲಲಿತಾ ಶೆಟ್ಟಿ ಅವರು ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಪಡುಬಿದ್ರಿಯಲ್ಲಿ ಸಂಭವಿಸಿದೆ. ಮಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ಕಾರನ್ನು ಚಾಲಕ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದಿದ್ದು, ಅದು ಲಲಿತಾಗೆ ಢಿಕ್ಕಿ ಹೊಡೆಯಿತು.ರಸ್ತೆಗೆ ಬಿದ್ದ ಅವರ ಬಲಕೈ, ಎರಡೂ ಕಾಲುಗಳು ಹಾಗೂ ತಲೆಗೆ ಗಾಯ ವಾಯಿತು. ಪಡುಬಿದ್ರಿ ಸಿದ್ಧಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ವೈದ್ಯರ ಸೂಚನೆಯಂತೆ …

Read More »

ಗದರಿಕೆಗೆ ಬೆಲೆ ತೆತ್ತ ಕುಟುಂಬ: ‘ಕೆಲಸ’ದ ಕಾರಣಕ್ಕೆ ಬದುಕು ಕಳೆದುಕೊಂಡ ಬಾಲಕ

ಮೃತ ಬಾಲಕನನ್ನು ದಾವಣಗೆರೆಯ ಚಿಕ್ಕನಹಳ್ಳಿಯ ನಿವಾಸಿ ತರುಣ್ (16) ಎಂದು ಗುರುತಿಸಲಾಗಿದೆ.ತರುಣ್ ಇತ್ತೀಚೆಗೆ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿರುತ್ತಿದ್ದನು. ಈ ಕಾರಣಕ್ಕಾಗಿ ಪೋಷಕರು, “ಸುಮ್ಮನೆ ಗೆಳೆಯರ ಜೊತೆ ಸೇರಿ ಕೆಟ್ಟ ದಾರಿ ಹಿಡಿಯುವ ಬದಲು ಯಾವುದಾದರೂ ಕೆಲಸಕ್ಕೆ ಹೋಗು” ಎಂದು ಬುದ್ಧಿ ಹೇಳಿ ಗದರಿದ್ದರು ಎನ್ನಲಾಗಿದೆ. ಪೋಷಕರ ಈ ಮಾತುಗಳಿಂದ ತೀವ್ರವಾಗಿ ಮನನೊಂದ ತರುಣ್, ತಕ್ಷಣವೇ ಮನೆಯಿಂದ ಹೊರಟು ಹೋಗಿದ್ದ. ಆತನಿಗಾಗಿ ರಾತ್ರಿಯಿಡೀ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೆ, ಬೆಳಗ್ಗೆ ರೈಲು …

Read More »

ಆಂಧ್ರ ಸೇರಿ 10 ರಾಜ್ಯದ ಮೆಡಿಕಲ್‌ ಕಾಲೇಜುಗಳ ಮೇಲೆ ಇ.ಡಿ. ದಾಳಿ

ನವದೆಹಲಿ: ವೈದ್ಯಕೀಯ ಕಾಲೇಜುಗಳಿಗೆ ಶೈಕ್ಷಣಿಕ ಅನುಮತಿ ನೀಡಲು ಲಂಚ ಪಡೆದ ಆರೋಪದ ಮೇಲೆ ನಡೆದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಗುರುವಾರ 10 ರಾಜ್ಯಗಳಲ್ಲಿ ದಾಳಿ ನಡೆಸಿದೆ.ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಢ, ಗುಜರಾತ್, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ 7 ವೈದ್ಯಕೀಯ ಕಾಲೇಜುಗಳನ್ನೂ ಒಳಗೊಂಡಂತೆ 15 ಸ್ಥಳಗಳಲ್ಲಿ ದಾಳಿ ನಡೆಸಿದೆ.ಸಿಬಿಐ ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಇ.ಡಿ. ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಹಣ …

Read More »

ಕರೆಂಟ್ ಶಾಕ್ ಹೊಡೆದು ಯುವತಿ ಸಾವು: ಸಿಸಿ ಕ್ಯಾಮೆರಾದಲ್ಲಿ ದಾರುಣ ದೃಶ್ಯ ಸೆರೆ!

ಕರೆಂಟ್ ಶಾಕ್ ಹೊಡೆದು ಯುವತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಅಂಚಟಗೇರಿ ಓಣಿಯಲ್ಲಿ ನಡೆದಿದ್ದು, ಆ ದಾರುಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 23 ವರ್ಷದ ಯುವತಿ ಮೇಘನಾ ನೀರಿನ ಮೋಟರ್ ಆಫ್ ಮಾಡಲು ಹೋದಾಗ ದಿಢೀರ್‌ ಆಗಿ ಕರೆಂಟ್ ಶಾಕ್ ಹೊಡೆದು ಮೇಘನಾ ಚೀರಾಡಿದ್ದಾಳೆ.ಕರೆಂಟ್ ಶಾಕ್ ನಿಂದ ಕೋಮಾಗೆ ಹೋಗಿದ್ದ ಮೇಘನಾ, ಕಳೆದ 35 ದಿನಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ಸಾವು- ಬದುಕಿನ‌ ನಡುವೆ ಹೋರಾಡುತ್ತಿದ್ದಳು. ಆ ಯುವತಿ ಚಿಕಿತ್ಸೆ ಫಲಕಾರಿಯಾಗದೆ …

Read More »

ವಿಜಯಪುರದಲ್ಲಿ ಭಾರೀ ಅಗ್ನಿ ಅವಘಡ: 7 ಗೂಡಂಗಡಿ ಸುಟ್ಟು ಭಸ್ಮ

ಅಗ್ನಿ ಅವಘಡದಲ್ಲಿ 7 ಗೂಡಂಗಡಿಗಳು ಸುಟ್ಟು ಕರಗಲಾದ ಘಟನೆ ವಿಜಯಪುರದ ಚಾಲುಕ್ಯ ನಗರದ ಎಸ್‌ಬಿಐ ಬಳಿ ನಡೆದಿದೆ.ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದೆ. ಕಾಫಿ, ಟೀ, ಫುಡ್ ಸ್ಟಾಲ್ ಗಳು, ವಡಾ ಪಾವ್ ಶಾಪ್ ಗಳು ಸುಟ್ಟು ಕರಕಲಾಗಿವೆ.ಗೂಡಂಗಡಿಗಳಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳು ಕೂಡ ಸ್ಪೋಟಗೊಂಡಿವೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ನಾಪತ್ತೆಯಾಗಿದ್ದ ಯುವತಿ ಮದುವೆಯಾಗಿ ಹಾಜರು

ಬೆಳ್ತಂಗಡಿ: ಉಜಿರೆಗೆ ಕೆಲಸಕ್ಕೆ ಹೋಗಿ ನಾಪತ್ತೆಯಾಗಿದ್ದ ಬೆಳಾಲು ಕಡಂಬಿಲದ ಸವಿತಾ (26) ಅವರು ಮದುವೆಯಾಗಿ ಗುರುವಾರ ಪತಿಯ ಸಮೇತ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ತಾನು ನೆರಿಯದ ಗಂಡಿಬಾಗಿಲಿನ ನೆಡಿಂಜಾರು ನಿವಾಸಿ ಚಂದ್ರಕಾಂತ್ (26) ಅವರೊಂದಿಗೆ ಸುಳ್ಯದಲ್ಲಿ ನೋಂದಣಿ ಮಾಡಿಕೊಂಡು ನಡ ಗ್ರಾಮದ ಕುತ್ರೊಟ್ಟು ದೇವಸ್ಥಾನದಲ್ಲಿ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ.ಸವಿತಾ ನ. 24ರಂದು ಉಜಿರೆಗೆ ಕೆಲಸಕ್ಕೆ ಹೋದವರು ನಾಪತ್ತೆಯಾಗಿರುವ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಅವರ ಹೇಳಿಕೆಯನ್ನು ಪಡೆದುಕೊಂಡು …

Read More »

ಉಡುಪಿ: ಹೋಟೆಲ್‌ನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ

ಮಣಿಪಾಲದ ಆರ್‌ಎಸ್‌ಬಿ ಸಭಾಭವನದ ಸಮೀಪದ ಹೋಟೆಲ್‌ನಲ್ಲಿ ಗುರುವಾರ ಸಂಜೆ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು, ಹೋಟೆಲ್‌ ಹೊತ್ತಿ ಉರಿದಿದೆ.ಗ್ಯಾಸ್‌ ಸಿಲಿಂಡರ್‌ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ತಲುಪಿ ಬೆಂಕಿ ನಂದಿಸಿದ್ದಾರೆ.

Read More »

ಸರ್ಕಾರದಿಂದ ಇನಾಮು ಘೋಷಣೆ ಬೆನ್ನಲ್ಲೇ 41 ನಕ್ಸಲರು ಶರಣಾಗತಿ

ರಾಜ್ಯ ಸರ್ಕಾರ ಶರಣಾದ ನಕ್ಸಲರಿಗೆ ಪುನರ್ವಸತಿ ಹಾಗೂ ಇನಾಮು ಘೋಷಣೆ ಮಾಡಿರುವ ಬೆನ್ನಲ್ಲೇ ಛತ್ತೀಸ್ ಗಢದ ಬಿಜಾಪುರದಲ್ಲಿ ೪೧ ನಕ್ಸಲರು ಶರಣಾಗಿದ್ದಾರೆ.1.19 ಕೋಟಿ ಇನಾಮು ಘೋಷನೆಯಾಗಿದ್ದ 31 ಮಂದಿ ಸೇರಿ 41 ನಕ್ಸಲರು ಬಿಜಾಪುರದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ.ಶರಣಾದವರಲ್ಲಿ ನಾಲ್ವರು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ ಬೆಟಾಲಿಯನ್ ನಂ.1 ಹಾಗೂ ಮಾವೋವಾದಿ ಸಂಘಟನೆಗಳ ಸದಸ್ಯರು, ಪ್ರದೇಶ ಸಮಿತಿಯ ಮೂವರು, 11 ಜನ ಪ್ಲಟೂನ್ ಮತ್ತುಪ್ರದೇಶ ಸಮಿತಿ ಸದಸ್ಯರು, ಇಬ್ಬರು ಪಿಎಲ್ …

Read More »

ಅತೀವೇಗದಿಂದ ಬೇಕಾಬಿಟ್ಟಿ ಚಲಾಯಿಸುತ್ತಿದ್ದ ಸಿಟಿ ಬಸ್ ಪೊಲೀಸ್ ವಶಕ್ಕೆ

ಬುಧವಾರ ನಗರದ ಲಾಲ್‌ಭಾಗ್ ಕಡೆಯಿಂದ ಮಂಗಳಾದೇವಿಗೆ ಹೋಗುತ್ತಿದ್ದ ರೂಟ್ ನಂಬ್ರ 15ರ ಬಸ್ಸನ್ನು ಅದರ ಚಾಲಕ ಜಂಕ್ಷನ್‌ನಲ್ಲಿ ಯದ್ವಾತದ್ವಾ ಚಲಾಯಿಸಿಕೊಂಡು ಓವರ್‌ಟೇಕ್ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.ಈ ಸಂದರ್ಭ ಬಸ್ ಜಂಕ್ಷನ್‌ನಲ್ಲಿ ನಿಂತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಸ್ತೆಗೆ ಬಿದ್ದಿದ್ದರೆ, ಜಂಕ್ಷನ್‌ನಲ್ಲಿ ನಿಂತಿದ್ದ ಇತರರು ಯದ್ವಾತದ್ವಾ ಬಸ್ ಬರುತ್ತಿರುವುದನ್ನು ಕಂಡು ಆತಂಕಗೊಂಡರು.ಹಾಗೇ ಬಳಿಕ ಸಾರ್ವಜನಿಕರು ಬಸ್ ಚಾಲಕನನ್ನು ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿ ಆತನ ವಿರುದ್ಧ ಕ್ರಮಕ್ಕೆ …

Read More »

ಬಸ್ ನಿರ್ವಾಹಕ ಸಾವು

ಉಡುಪಿ: ಸಿಟಿ ಬಸ್ ನಿಲ್ದಾಣದ ಬಳಿ ಅಸ್ವಸ್ಥರಾಗಿ ಬಿದ್ದಿದ್ದ ಬಸ್ ನಿರ್ವಾಹಕ ರಾಘವೇಂದ್ರ ಪ್ರಭು (48) ಅವರು ಮೃತಪಟ್ಟಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಮದ್ಯ ಸೇವನೆಯ ಹವ್ಯಾಸ ಹೊಂದಿದ್ದು, ನ. 25ರಂದು ಅಸ್ವಸ್ಥರಾಗಿ ಬಿದ್ದಿದ್ದರು.ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿ ದಾರಿಯಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ.

Read More »