Breaking News

Breaking News

ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿಯನ್ನು ಹೊತ್ತೊಯ್ದ ಚಿರತೆ : ಮೃತದೇಹ ಪತ್ತೆ.!

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವಪುರ ಸಮೀಪದ ನವಿಲುಗುಡ್ಡದ ಬಂಡೆಯ ಬಳಿ ತೋಟದ ಮನೆಯ ಎದುರು ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಚಿರತೆ ಹೊತ್ತೊಯ್ದ ಘಟನೆ ನಡೆದಿದೆ.ಬೆಂಗಳೂರಿನ ರಾಮಚಂದ್ರಪ್ಪ ಎಂಬುವರಿಗೆ ಸೇರಿದ ಅಡಿಕೆ ತೋಟದಲ್ಲಿ ಧಾರವಾಡದ ಈ ದಂಪತಿ ಕೆಲಸ ಮಾಡಿಕೊಂಡಿದ್ದಾರೆ.ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದಿದ್ದು, ಸದ್ಯ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಸವರಾಜ ಮತ್ತು ರೇಣುಕಾ ದಂಪತಿಯ ಪುತ್ರಿ ಸಾನ್ವಿಯನ್ನು ಚಿರತೆ ಹೊತ್ತೊಯ್ದಿದಿತ್ತು. ಇದೀಗ ಪೊಲೀಸರು ಮತ್ತು ಅರಣ್ಯಇಲಾಖೆ …

Read More »

ಒಳ ಉಡುಪಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಜೈಲು ಸಿಬ್ಬಂದಿ ಅರೆಸ್ಟ್

ಜೈಲಿನೊಳಗೆ ಗಾಂಜಾ ತಂದಿದ್ದ ಜೈಲಿನ ಸಿಬ್ಬಂದಿಯನ್ನು ಗುರುವಾರ ಬಂಧಿಸಲಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ದ್ವಿತೀಯ ದರ್ಜೆ ಸಹಾಯಕ ಸಾತ್ವಿಕ್(25) ಬಂಧಿತ ಆರೋಪಿ.ಸಾತ್ವಿಕ್ ನಿಂದ 170 ಗ್ರಾಂ ಮಾದಕ ವಸ್ತು ಗಾಂಜಾ ವಶಕ್ಕೆ ಪಡೆಯಲಾಗಿದೆ. ಕರ್ತವ್ಯಕ್ಕೆ ಹಾಜರಾಗಲು ಜೈಲಿಗೆ ಆಗಮಿಸಿದ ಸಾತ್ವಿಕ್ ಅವರನ್ನು ಜೈಲಿನ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಒಳ ಉಡುಪಿನಲ್ಲಿ ಗಮ್ ಟೇಪ್ ನಲ್ಲಿ ಸುತ್ತಿರುವ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ.ಈ ಬಗ್ಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ …

Read More »

ಕಾರು ಪಂಚರ್ ಮಾಡಿ 23.90 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ಬೆಂಗಳೂರು ದರೋಡೆ ಪ್ರಕರಣ ಬೆನ್ನಲ್ಲೇ ಜಿಲ್ಲೆಯ ಬಸವಕಲ್ಯಾಣದಲ್ಲಿ ಮತ್ತೊಂದು ದರೋಡೆ ಕೇಸ್ ಬೆಳಕಿಗೆ ಬಂದಿದೆ. ಸಸ್ತಾಪುರ ಬಂಗ್ಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಗುಂತಕರ ಗುಂಪು ಕಾರು ಪಂಚರ್ ಮಾಡಿ ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ಲೂಟಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮಹಾರಾಷ್ಟ್ರದ ಸಾಂಗವಿ ಜಿಲ್ಲೆಯ ಯೇಥಗಾಂವ್ ಗ್ರಾಮದ ಆರು ಜನರು ತಮ್ಮ ಸಂಬಂಧಿಕರ ಮದುವೆ ರಿಶಪ್ಶನ್‌ಗಾಗಿ ಹೈದ್ರಾಬಾದ್‌ಗೆ ಕಾರಿನಲ್ಲಿ ತೆರಳುತ್ತಿದ್ದರು. ಪ್ರವೀಣ …

Read More »

ಬಿಎಂಟಿಸಿ ಬಸ್ ಗೆ ವೃದ್ಧೆ ಬಲಿ: ಕಿಲ್ಲರ್ BMTCಗೆ ಒಂದೇ ದಿನ ಇಬ್ಬರು ಸಾವು

ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ. ಬೆಳಿಗ್ಗೆಯಷ್ಟೇ 70 ವರ್ಷದ ವೃದ್ಧರೊಬ್ಬರ ಮೇಲೆ ಬಿಎಂಟಿಸಿ ಬಸ್ ಹರಿದು ಹೋಗಿತ್ತು. ಈ ಘಟನೆ ಬೆನ್ನಲ್ಲೇ ಮತ್ತೊಂದು ಅಪಘಾತ ಸಂಭವಿಸಿದ್ದು, ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.ಬೆಂಗಳೂರಿನ ಗೋವಿಂದರಾಜನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ 60 ವರ್ಷದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರ್ವಜ್ಞ ಸ್ಕೂಲ್ ಬಳಿ ಈ ದುರಂತ ಸಂಭವಿಸಿದೆ. ಸುಶೀಲಾ ಮೃತ ಮಹಿಳೆ. ಬೆಳಿಗ್ಗೆ ಮಡಿವಾಳ ಬಸ್ ನಿಲ್ದಾಣದ ಬಳಿ …

Read More »

ಬೆಂಗಳೂರು: ರಾಬರಿಗೂ ಮುನ್ನ ಸ್ಥಳ ಪರಿಶೀಲಿಸಿ ಬಾರ್‌ಗೆ ಬಂದಿದ್ದ ಆರೋಪಿಗಳು ಸಿಸಿಟಿವಿಯಲ್ಲಿ ಸೆರೆ!

ರಾಬರಿ ಪ್ರಕರಣದಲ್ಲಿ ಪೊಲೀಸ್ ತನಿಖೆ ವೇಳೆ ಮತ್ತೆರಡು ಸಿಸಿಟಿವಿ ಲಭ್ಯವಾಗಿದ್ದು, ರಾಬರ್ಸ್ ಎಟಿಎಂ ರಾಬರಿಗೆ ಮುನ್ನ ನಗರದಲ್ಲಿ ಸ್ಥಳ ಪರಿಶೀಲನೆ ಮಾಡಿರೋದು ಪತ್ತೆಯಾಗಿದೆ. ಕೃತ್ಯದ ಹಿಂದಿನ ದಿನ ಸ್ಥಳ ಪರಿಶೀಲನೆ ಮಾಡಿರೋದು ಪತ್ತೆಯಾಗಿದ್ದು, ಅಂದರೆ 18 ನೇ ತಾರೀಕು ಬಾರ್ ಹಾಗೂ ಡೈರಿ ಸರ್ಕಲ್ ಫ್ಲೈ ಓವರ್ ಬಳಿ ರಾಬರ್ಸ್ ಕಂಡಿರುವುದು ಬೆಳಕಿಗೆ ಬಂದಿದೆ.ಬಾರ್ ನಲ್ಲಿ ಎಣ್ಣೆ ಖರೀದಿ ಮಾಡಿರೋ ಸಿಸಿಟಿವಿ ಲಭ್ಯವಾಗಿದ್ದು, ದಕ್ಷಿಣ ವಿಭಾಗದ ಪೊಲೀಸರ ಸಿಸಿಟಿವಿ ತಪಾಸಣೆ …

Read More »
Featured Video Play Icon

BREAKING : 7.11 ಕೋಟಿ ದರೋಡೆ ಕೇಸ್ : ‘CCB’ ಪೊಲೀಸರಿಂದ ಇಬ್ಬರು ಆರೋಪಿಗಳು ಅರೆಸ್ಟ್.!

ಬೆಂಗಳೂರಿನಲ್ಲಿ 7.11 ಕೋಟಿ ರೂ. ದರೋಡೆ ಕೇಸ್ ಗೆ ಸಂಬಂಧಿಸಿದಂತೆ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ… ಆಂಧ್ರದ ತಿರುಪತಿಯಲ್ಲಿ ದರೋಡೆಗೆ ಬಳಸಿದ್ದ ಕಾರು ಪತ್ತೆಯಾಗಿದ್ದು. ಈ ಬೆನ್ನಲ್ಲೇ ಬಾಣಸವಾಡಿಯ ಕಲ್ಯಾಣಗರದ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆದರೆ ಪ್ರಮುಖ ಆರೋಪಿಗಳು ಇನ್ನೂ ಕೂಡ ಪತ್ತೆಯಾಗಿಲ್ಲ.ದರೋಡೆಕೋರರ ಗ್ಯಾಂಗ್ ತಿರುಪತಿಯಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ತಿರುಪತಿ ಪೊಲೀಸರ ಜೊತೆ ಬೆಂಗಳೂರಿನ ದಕ್ಷಿಣ ವಿಭಾಗದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.. ಆರ್ ಬಿ …

Read More »

ತಂದೆ ಮಾಡಿದ ಸಾಲದ ತಪ್ಪಿಗೆ 10 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿ

ತಂದೆ ಮಾಡಿದ ಸಾಲದ ತಪ್ಪಿಗೆ 10 ವರ್ಷದ ಮಗಳ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯವೆಸಗಿರುವ ನೀಚ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.ಮತೀನ್ ಎಂಬಾತ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ತಂದೆ ಸಂಘದಿಂದ ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡದೇ ಸತಾಯಿಸುತ್ತಿದ್ದನಂತೆ. ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಲು ಆರೋಪಿ ಮತೀನ್, ಬಾಲಕಿ ಮನೆಬಳಿ ಹೋಗಿದ್ದಾನೆ. …

Read More »

ಬೆಂಗಳೂರು ದರೋಡೆ ಕೇಸ್‌ನಲ್ಲಿ ಪೊಲೀಸ್‌ ಕೈವಾಡದ ಅನುಮಾನ?

ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖ ಪ್ರದೇಶದಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಕೇಸ್‌ನಲ್ಲಿ ಪೊಲೀಸರ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರಾಬರಿ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸುತ್ತಿದ್ಧಂತೆ ವಿವಿಧ ವಿಚಾರಗಳು ಬಹಿರಂಗವಾಗುತ್ತಿದೆ.ದರೋಡೆಕೋರರ ಜೊತೆ ಸೇರಿ 7.11 ಕೋಟಿ ರೂಪಾಯಿ ಹಣವನ್ನು ದೋಚಲು ಪ್ಲ್ಯಾನ್‌ ಮಾಡಲಾಗಿತ್ತೇ ಎನ್ನುವ ಅನುಮಾನ ಬಂದಿದೆ. ಅಣ್ಣಪ್ಪ ನಾಯಕ ಗೋವಿಂದಪುರ ಪೊಲೀಸ್‌ ಠಾಣೆಯಲ್ಲಿ ಕ್ರೈಮ್‌ ಪಿಸಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Read More »

ಸಾಲದ ವಿಚಾರ.. ಸೊಸೆಯ ಜೀವವನ್ನೇ ತೆಗೆದ ಮಾವನ ಬಂಧನ!

ಹೊಂಗಸಂದ್ರದಲ್ಲಿ ನಡೆದಿದ್ದ ಗಾರ್ಮೆಂಟ್ಸ್ ನೌಕರೆ ಹತ್ಯೆ ಪ್ರಕರಣವನ್ನು ಬೊಮ್ಮನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಪ್ರಮೋದಾ ಕೊಲೆ ಪ್ರಕರಣ ಸಂಬಂಧ ಮೃತಳ ಮಾವನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಂದಣ್ಣ ಎಂಬಾತನ ಬಂಧನವಾಗಿದ್ದು, ಮನೆಯಲ್ಲಿ ಪ್ರಮೋದಾಳ ಕುತ್ತಿಗೆ ಚಾಕುವಿನಿಂದ ಇರಿದು ಭಾನುವಾರ ರಾತ್ರಿ ಕೊಂದು ಆರೋಪಿ ಪರಾರಿಯಾಗಿದ್ದ.ಪ್ರಮೋದಾಳ ಕುತ್ತಿಗೆಗೆ ಅಡುಗೆ ಮನೆಯಿಂದ ಚಾಕು ತಂದು ಇರಿದು ಕೊಂದು ಮಂದಣ್ಣ ಪರಾರಿಯಾಗಿದ್ದ. ಸದ್ಯ ತನಿಖೆ ನಡೆಸಿ ಸೊಸೆ …

Read More »

ಶಿಕ್ಷಕರ ಕಿರುಕುಳಕ್ಕೆ ಬಾಲಕ ಆತ್ಮಹತ್ಯೆ – ಹೆಚ್‌ಎಂ ಸೇರಿದಂತೆ ನಾಲ್ವರು ಸಸ್ಪೆಂಡ್!

ದಾಖಲಾಗಿರುವ ಎಫ್‌ಐಆರ್‌ನಲ್ಲಿ ಬಾಲಕನ ತಂದೆ ಪ್ರದೀಪ್ ಪಾಟೀಲ್, ಶಾಲೆಯ 5 ರಿಂದ 10 ನೇ ತರಗತಿಯ ಮುಖ್ಯೋಪಾಧ್ಯಾಯರಾದ ಅಪರಾಜಿತಾ ಪಾಲ್ ಮತ್ತು ಶಿಕ್ಷಕಿಯರಾದ ಜೂಲಿ ವರ್ಗೀಸ್, ಮನು ಕಲ್ರಾ ಮತ್ತು ಯುಕ್ತಿ ಅಗರ್ವಾಲ್ ಮಹಾಜನ್ ಅವರ ಹೆಸರನ್ನು ಉಲ್ಲೇಖಿಸಿದ್ದು, ಅವರು ತಮ್ಮ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.ಶೌರ್ಯ ತನ್ನ ಆತ್ಮಹತ್ಯೆ ಪತ್ರದಲ್ಲಿ, ಕ್ಷಮಿಸಿ ಮಮ್ಮಿ, ಅಪ್ಪ , ನಾನು ತುಂಬಾ ಸಹ ನಿಮಗೆ ನೋವನ್ನ ಕೊಟ್ಟಿದ್ದೇನೆ. ಈಗ …

Read More »