BigTv News
October 7, 2025
Breaking News
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪದಿಂದ ತಮಿಳುನಾಡಿಗೆ ತೆರಳುತ್ತಿದ್ದ ಲಾರಿಯು ಬೆಂಕಿಗೆ ಆಹುತಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ರಾಜ್ಯದ ಗಡಿಭಾಗವಾದ ಬರಗೂರು ಸಮೀಪ ನಡೆದಿದೆ.ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಸೈಯದ್ ಸಲ್ಮಾನ್ ಅವರಿಗೆ ಸೇರಿದ 16 ಚಕ್ರದ ಲಾರಿ ಇದಾಗಿದ್ದು ಸಕ್ಕರೆ ತುಂಬಿದ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
Read More »
Shaikh BigTv
October 7, 2025
Breaking News, Business, Crime, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ರಾಜ್ಯ ಸರ್ಕಾರ ಆಡಳಿತ ಯಂತ್ರದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 131 ಜನ ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಹಿತ ಅನೇಕ ಪೊಲೀಸ್ ಠಾಣೆಗೆ ವಿವಿಧ ಇನ್ಸ್ಪೆಕ್ಟರ್ ಗಳ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಯಾವ ಠಾಣೆಗೆ ಯಾರು ಠಾಣಾ ಮುಖ್ಯಾಧಿಕಾರಿಗಳು ಅಂತಾ ನೋಡೋದಾದ್ರೆ.ವಿದ್ಯಾನಗರ …
Read More »
BigTv News
October 5, 2025
Breaking News
ಉತ್ತರ ಪ್ರದೇಶದ ಬರೇಲಿಯಲ್ಲಿ ‘ಐ ಲವ್ ಮೊಹಮ್ಮದ್’ ಎಂದು ಬರೆದ ಫಲಕಗಳನ್ನು ಹಿಡಿದುಕೊಂಡು ಗಲಭೆ ಸೃಷ್ಟಿಸಿದ ಘಟನೆಗೆ ಸಂಬಂಧಪಟ್ಟಂತೆ ಗಲಭೆಯ ಮಾಸ್ಟರ್ ಮೈಂಡ್ ಮೌಲಾನಾ ತೌಕೀರ್ ಮತ್ತು ಆತನ ಆಪ್ತ ಸಹಚರರ ವಿರುದ್ಧ ಬುಲ್ಡೋಜರ್ ಕ್ರಮ ಆರಂಭವಾಗಿದೆ.ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ, ಬರೇಲಿ ಅಭಿವೃದ್ಧಿ ಪ್ರಾಧಿಕಾರ ಬುಲ್ಡೋಜರ್ ಕ್ರಮ ಆರಂಭಿಸಿದೆ.
Read More »
BigTv News
October 5, 2025
Breaking News
ಬಳ್ಳಾರಿ ರಸ್ತೆಯ ಕೆಂಚಗಾರಪೇಟೆಗೆ ಹೋಗುವ ಮಾರ್ಗದ ಎಡಬದಿಯಲ್ಲಿರುವ ಕೋಟ್ಯಂತರ ಬೆಲೆ ಬಾಳುವ ಸುಮಾರು 23 ಸೆಂಟ್ಸ್ ನಿವೇಶನವನ್ನು ವಕ್ಫ್‌ಬೋರ್ಡ್ ವತಿಯಿಂದ ಸರ್ವೇ ನಡೆಸುವ ಕೆಲಸ ಶನಿವಾರ ನಡೆದಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.ಸರ್ವೇಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಶನಿವಾರ ಪ್ರತಿಭಟನೆ ನಡೆಸಿದರು. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಎ.ಶಿವಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿದರು.
Read More »
BigTv News
October 5, 2025
Breaking News
ತಂದೆಯೊಬ್ಬ ನಾಲ್ಕು ತಿಂಗಳ ಮಗನನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅರ್ಧ ನೀರು ತುಂಬಿರುವ ಡ್ರಮ್ನಲ್ಲಿ ಮಗುವನ್ನು ಎಸೆಯಲಾಗಿತ್ತು.ತಂದೆ ಅಮೋಲ್ ಸೋನಾವಾನೆ ತನ್ನ ಮಗನನ್ನು ಅರ್ಧ ನೀರು ತುಂಬಿದ ಡ್ರಮ್‌ಗೆ ಎಸೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿ ಡೈಪರ್ ಧರಿಸಿದ್ದ ಮಗು ನೀರಿನಲ್ಲಿ ಮುಖ ಕೆಳಗಾಗಿ ಮಲಗಿತ್ತು, ಪಕ್ಕದಲ್ಲಿ ಪ್ಲಾಸ್ಟಿಕ್ ಗುಲಾಬಿ ಮಗ್ ತೇಲುತ್ತಿರುವುದನ್ನು …
Read More »
BigTv News
October 5, 2025
Breaking News
ಈಗಾಗಲೇ ಮೂವರು ಮಕ್ಕಳಿದ್ದಾರೆ ಇನ್ನೊಂದಾದರೆ ಖಂಡಿತವಾಗಿಯೂ ತಾವು ಕೆಲಸವನ್ನು ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ ಆಗ ತಾನೆ ಹುಟ್ಟಿದ್ದ, ಇನ್ನೂ ಕಣ್ಣು ತೆರೆಯದ ಕಂದಮ್ಮನನ್ನು ಕಾಡಿನಲ್ಲಿ ಬಿಟ್ಟು ಪೋಷಕರು ಪರಾರಿಯಾಗಿದ್ದರು.72 ಗಂಟೆಗಳ ಕಾಲ ಹೇಗೋ ಉಸಿರು ಬಿಗಿ ಹಿಡಿದುಕೊಂಡು ಮಗು ಬದುಕುಳಿದಿತ್ತು, ಒಂದು ಕಡೆ ತಣ್ಣನೆಯ ವಾತಾವರಣ, ಕೀಟಗಳ ಕಾಟ, ಕಲ್ಲಿನಡಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದರೂ ಉಸಿರಿತ್ತು. ಗ್ರಾಮಸ್ಥರು ಮಗುವನ್ನು ಪತ್ತೆ ಮಾಡಿದ್ದರು. ಜನರು ಕಲ್ಲುಗಳ ನಡುವೆ ರಕ್ತಸಿಕ್ತವಾಗಿದ್ದ ಮಗುವನ್ನು ರಕ್ಷಿಸಿದ್ದಾರೆ.
Read More »
BigTv News
October 5, 2025
Breaking News
ಮೇಟಿಕುರ್ಕೆ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೋಟ್ನಳ್ಳಿತ ಮಲ್ಲಮ್ಮ, ಸರೋಜಮ್ಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಿರ್ಮಾಲಾ ಪುತ್ರಿ ಸುಪ್ರಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.ಮಲ್ಲಮ್ಮ ಪತಿ ಶಾಂತರಾಜ್, ಪುತ್ರಿ ಸಿಂಚನಾ ಹಾಗೂ ಸರೋಜಮ್ಮ ಪತಿ ಮಲ್ಲಿಕಾರ್ಜುನ ಜಿಂಗಿ ಸೇರಿ ಏಳು ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read More »
BigTv News
October 5, 2025
Breaking News
ಖುಸ್ನುಮಾ ಮನೆ ಬಿಟ್ಟು ಹೋಗಿದ್ದು ಇದು ಐದನೇ ಬಾರಿ. ಅವಳು ಹೋಗುವಾಗ, “ನಿನಗೆ ಏನು ಬೇಕಾದರೂ ಮಾಡು, ನಾನು ಇನ್ನು ಮುಂದೆ ನಿನ್ನೊಂದಿಗೆ ಇರುವುದಿಲ್ಲ” ಎಂದು ಹೇಳಿದಳು. ಇದು ಸಲ್ಮಾನ್‌ನನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತು. ಘಟನೆಯ ಮೊದಲು, ಸಲ್ಮಾನ್ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ, “ಇದು ನನ್ನ ಕೊನೆಯ ವಿಡಿಯೋ. ನಾನು ಏನಾದರೂ ತಪ್ಪುಗಳನ್ನು ಮಾಡಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಹೆಂಡತಿ ಮತ್ತು ಅವಳ ಪ್ರೇಮಿ ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ” …
Read More »
BigTv News
October 5, 2025
Breaking News
2 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ದಂತ ವೈದ್ಯಕೀಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಚಂದ್ರಶೇಖರ್ ಪಡೆಯುತ್ತಿದ್ದರು.ಕರ್ನಾಟಕ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ ಅವರ ಹತ್ಯೆ ಪ್ರಕರಣ ಮರೆಯಾಗುವ ಮುನ್ನವೇ ಡಲ್ಲಾಸ್ ನಗರದಲ್ಲಿ ಮತ್ತೋರ್ವ ಭಾರತೀಯನ ಹತ್ಯೆಯಾದಂತಾಗಿದೆ. ಏತನ್ಮಧ್ಯೆ, ಚಂದ್ರಶೇಖರ್ ಸಾವಿಗೆ ಸಂತಾಪ ಸೂಚಿಸಿರುವ ತೆಲಂಗಾಣ ಮುಖ್ಯ ಮಂತ್ರಿ ರೇವಂತ್ ರೆಡ್ಡಿ, ಮೃತದೇಹವನ್ನು ಸ್ವದೇಶಕ್ಕೆ ತರಿಸಲು ನೆರವಾಗುವ ಭರವಸೆಯನ್ನು ನೀಡಿದ್ದಾರೆ. ಬಿಆರ್‌ಎಸ್ ಶಾಸಕ, ತೆಲಂಗಾಣ ಮಾಜಿ ಸಚಿವ ಟಿ.ಹರೀಶ್ ರಾವ್ ಕೂಡ ವಿದ್ಯಾರ್ಥಿಯ ಪೋಷಕರನ್ನು ಭೇಟಿ …
Read More »
BigTv News
October 5, 2025
Breaking News
ಭೂಗತಪಾತಕಿ ಕಲಿ ಯೋಗೀಶ್ ಸಹಚರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮುಲ್ಕಿ ಚಿತ್ರಾಪು ನಿವಾಸಿ ಶ್ರೀನಿವಾಸ್ ಶೆಟ್ಟಿ ಯಾನೆ ಶೀನು (45) ಎಂಬಾತನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Read More »