BigTv News
October 1, 2025
Breaking News
ತೆಲಂಗಾಣದ ಮಹಬೂಬ್ ನಗರ ಜಿಲ್ಲೆಯ ಮಿಡ್ಜಿಲ್ ಮಂಡಲ ಕೇಂದ್ರದಲ್ಲಿ ಘಟನೆ ನಡೆದಿದೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಡ್ಚರ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು.ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತನ ಪತ್ನಿ ಮಂಜುಳಾ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಐ ಶಿವನಾಗೇಶ್ವರ ನಾಯ್ಡು ತಿಳಿಸಿದ್ದಾರೆ. ರೈತನ ಹೊಲಕ್ಕೆ ಕೀಟನಾಶಕ ಸಿಂಪಡಿಸಲು ಹೋಗುತ್ತಿದ್ದ ರೈತ ಮಿಡ್ಜಿಲ್ ಗ್ರಾಮದ ರಘುಲಾ ಬಾಲಸ್ವಾಮಿ (38) ಸಾವನ್ನಪ್ಪಿದ್ದಾರೆ.
Read More »
BigTv News
October 1, 2025
Breaking News
ತಮಿಳುನಾಡಿನ ಪೊನ್ನೇರಿ ಸಮೀಪದ ಎಣ್ಣೋರ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ನಿರ್ಮಾಣ ಕಾಮಗಾರಿ ಸಂದರ್ಭ ಕಬ್ಬಿಣದ ಸಾರುವೆ ಕುಸಿದು ಅಸ್ಸಾಂನ 9 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಥಾವರದಲ್ಲಿ ಬಿಎಚ್‌ಇಎಲ್ ಕೈಗೊಂಡಿರುವ ನಿರ್ಮಾಣ ಕಾಮಗಾರಿ ಸಂದರ್ಭ ಮಂಗಳವಾರ ಸಂಜೆ ದುರಂತ ಸಂಭವಿಸಿದೆ.ಗಾಯಗೊಂಡ ಒಬ್ಬ ಕಾರ್ಮಿಕನನ್ನು ಚೆನ್ನೈನ ಸ್ಟ್ಯಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.
Read More »
Shaikh BigTv
October 1, 2025
Breaking News, Crime, ಕರ್ನಾಟಕ, ರಾಜಕೀಯ ಸುದ್ದಿ
40 ವರ್ಷಗಳಿಂದ ಪಕ್ಷ ಕಟ್ಟಿದವರು.. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿ ಹಂಚುವ ನಾಯಕ ಸಲೀಂ ಅಹ್ಮದ್
Read More »
BigTv News
October 1, 2025
Breaking News
ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯನ್ನು ಕೊಲೆ ಮಾಡಿ, ಆಕೆಯ ಪ್ರಿಯಕರನ ಕಾಲು ಮುರಿದ ಘಟನೆ ನಗರಕ್ಕೆ ಸಮೀಪದ ಮೂಕನಹಳ್ಳಿ ಎಂಬಲ್ಲಿ ಸೆ.30ರ ಮಂಗಳವಾರ ನಡೆದಿದೆ.ಆರೋಪಿ ವಿಜಯ್ ಅವರ ಪತ್ನಿ ಗೀತಾ (29) ಕೊಲೆಯಾದಾಕೆ, ಈತನ ಪ್ರಿಯಕರ ದಿಲೀಪ್ ತೀವ್ರಗಾಯಗೊಂಡು ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ.
Read More »
BigTv News
October 1, 2025
Breaking News
ತಡರಾತ್ರಿ ಫಿಲಿಪೈನ್ಸ್ ನಲ್ಲಿ ಸಂಭವಿಸಿದ 6.9 ತೀವ್ರತೆಯ ಪ್ರಬಲ ಭೂಕಂಪದ ನಂತರ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಇದು ಈ ವರ್ಷದ ದೇಶದ ಅತ್ಯಂತ ವಿನಾಶಕಾರಿ ವಿಪತ್ತುಗಳಲ್ಲಿ ಒಂದಾಗಿದೆ.ಮಂಗಳವಾರ ರಾತ್ರಿ ಸ್ಥಳೀಯ ಸಮಯ ರಾತ್ರಿ 10 ಗಂಟೆ ಸುಮಾರಿಗೆ ಮಧ್ಯ ಫಿಲಿಪೈನ್ಸ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಪಲೊಂಪನ್‌ನ ಪಶ್ಚಿಮಕ್ಕೆ ಸಮುದ್ರದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ …
Read More »
BigTv News
October 1, 2025
Breaking News
ಹುಡುಗಿಯರನ್ನು ಚುಡಾಯಿಸಿದ ಆರೋಪ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಥೇಟ್ ಸಿನಿಮೀಯ ರೀತಿಯಲ್ಲಿ ಗಲಾಟೆ ನಡೆದಿದೆ. ಗದಗ ಜಿಲ್ಲೆ ನರಗುಂದ ಪಟ್ಟಣದ ಕೊರವರ ಓಣಿಯಲ್ಲಿ ಘಟನೆ ನಡೆದಿದ್ದು, ಮಾರಾಮಾರಿ ವೇಳೆ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಪರಸ್ಪರ ದೂರು ಆಧರಿಸಿ 75ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಘಟನೆ ಸಂಬಂಧ ಎರಡೂ ಕಡೆಯವರು ಸೇರಿ 6 ಜನರನ್ನ ಪೊಲೀಸರು ಬಂಧಿಸಿದ್ದಾರೆ.
Read More »
BigTv News
October 1, 2025
Breaking News
. ಹೊರಗೆ ಒಣಗಲೆಂದು ಹಾಕಲಾಗ್ತಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ವ್ಯಕ್ತಿಯೋರ್ವನನ್ನು ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ನಗರದ ತಂತಿ ನಗರದ ನಿವಾಸಿ, ಸೌಂಡ್ ಸಿಸ್ಟಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂದು ಗರುತಿಸಲಾಗಿದೆ.ವಿಷಯ ಬೆಳಕಿಗೆ ಬರ್ತಿದ್ದಂತೆ ಆರೋಪಿ ವಿರುದ್ಧ ಸ್ಥಳೀಯರು ಬೆಂಡಿಗೇರಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಕಾರ್ತಿಕ್ ನನ್ನು ಈಗ ಬಂಧಿಸಲಾಗಿದೆ. ಸೈಕೋಪಾತ್ ಕಂಬಿ …
Read More »
BigTv News
October 1, 2025
Breaking News
ಕುಡಿದ ನಶೆಯಲ್ಲಿ ಕಂಡ ಕಂಡವರ ಮೇಲೆ ಮಚ್ಚು ಬೀಸುತ್ತಿದ್ದವನನ್ನು ವಿವಿಪುರ ಪೊಲೀಸರು ಬಂಧಿಸಿದ್ದಾರೆ. ಚಂದನ್ ಬಂಧಿತ ಆರೋಪಿಯಾಗಿದ್ದು, ಚಂದನ್ ಜೊತೆಗೆ ಲಾಂಗ್ ಬೀಸಿದ್ದ ಒರ್ವ ಕಾನೂನು ಸಂಘರ್ಷಕ್ಕೆ ಒಳಗಾದವನ ಮೇಲೆ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗಿದೆ.ವಿವಿಪುರಂ ಬಳಿಯ ಜೆಪ್ಟೊ ಗೋಡನ್ ಬಳಿ ಮಚ್ಚು ಬೀಸಿದ್ದನು. ಏಕಾಏಕಿ ನೇರವಾಗಿ ಬಂದು ಲಾಂಗ್ ಬೀಸಿದ್ದು, ಘಟನೆ ಬಳಿಕ ವಿವಿಪುರ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
Read More »
BigTv News
October 1, 2025
Breaking News
ಧಾರವಾಡದ ಸಪ್ತಾಪೂರ ಬಾವಿ ಬಳಿಯ ಮಾಜಿ ಸೈನಿಕರೊಬ್ಬರ ‘ಸೈನಿಕ್ ಮೆಸ್’ನಲ್ಲಿ ಇತ್ತೀಚೆಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಉಪನಗರ ಠಾಣೆ ಎಎಸ್‌ಐ ವಿದ್ಯಾನಂದ ಸುಬೇದಾರ್ ಹಾಗೂ ಕಾನ್‌ಸ್ಟೆಬಲ್ ರಾಚಪ್ಪ ಕಣಬೂರು ಅವರನ್ನು ಅಮಾನತುಗೊಳಿಸಲಾಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
Read More »
BigTv News
October 1, 2025
Breaking News
ಹುಬ್ಬಳ್ಳಿ-ಧಾರವಾಡ ನಗರದ ಪೊಲೀಸ್ ಆಯುಕ್ತರ ಕಚೇರಿ ವತಿಯಿಂದ ನಗರದ ಮಗದುಮ್ಮ ಆನಂದ ಕಲ್ಯಾಣ ಮಂಟಪದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಭಾನುವಾರ ಆಯೋಜಿಸಿದ್ದ ವಿಶೇಷ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಶ್ರದ್ಧೆ, ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿ ಪರೀಕ್ಷೆ ಎದುರಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ’ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.
Read More »