Breaking News

Breaking News

ಎಡಗಾಲಿನ ಬದಲು ಬಲಗಾಲಿಗೆ ರಾಡ್ ಅಳವಡಿಸಿದ ವೈದ್ಯ!

ಹಾಸನದಲ್ಲಿ ಜಿಲ್ಲಾ ಆಸ್ಪತ್ರೆ ವೈದ್ಯರ ಮಹಾ ಎಡವಟ್ಟು ಮಾಡಿದ್ದು, ಎಡಗಾಲು ಬದಲು ಬಲಗಾಲಿಗೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಲಗಾಲು ಕೊಯ್ದಿರುವ ಜಿಲ್ಲಾಸ್ಪತ್ರೆಯ ವೈದ್ಯ ಸಂತೋಷ, ಜ್ಯೋತಿ ಅನ್ನುವವರ ಬಲಗಾಲು ಕುಯ್ದಿದ್ದಾರೆ. ಅಪಘಾತ ಹಿನ್ನೆಲೆಯಲ್ಲಿ ಜ್ಯೋತಿ ಅವರ ಎಡಗಾಲಿಗೆ ರಾಡ್ ಅಳವಡಿಕೆ ಮಾಡಿದ್ದಾರೆ.ಬಳಿಕ ತಮ್ಮ ತಪ್ಪಿನ ಅರಿವಾದ ನಂತರ ಎಡಗಾಲಿನ ರಾಡ್ ತೆಗೆದು ಮತ್ತೆ ಇದೀಗ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ವೈದ್ಯರ ಎಡವಟ್ಟಿಗೆ ಮಹಿಳೆ ಜ್ಯೋತಿ ಆಘಾತಕ್ಕೆ ಒಳಗಾಗಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ …

Read More »

ವಿಜಯಪುರಕ್ಕೆ ಬಂತು 24 ಕೋಟಿಯ ‘ರೋಸೆನ್‌ಬಾವರ್ ಪ್ಯಾಂಥರ್’ ಅಗ್ನಿಶಾಮಕ ವಾಹನ; ಏನಿದರ ವಿಶೇಷತೆ?

ನಗರದ ವಾಯು ಸಂಪರ್ಕದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವು ಉದ್ಘಾಟನೆಗೆ ಸಜ್ಜಾಗುತ್ತಿದ್ದು, ಅದರ ಸುರಕ್ಷತಾ ವ್ಯವಸ್ಥೆಗೆ ವಿಶ್ವದರ್ಜೆಯ ಬಲ ಬಂದಿದೆ. ಅಂದಾಜು 24 ಕೋಟಿ ರೂಪಾಯಿ ಮೌಲ್ಯದ, ಆಸ್ಟ್ರಿಯಾ ಮೂಲದ ‘ರೋಸೆನ್‌ಬಾವರ್’ ಕಂಪನಿ ನಿರ್ಮಿತ ಎರಡು ಅತ್ಯಾಧುನಿಕ ‘ಪ್ಯಾಂಥರ್’ ಮಾದರಿಯ ಅಗ್ನಿಶಾಮಕ ವಾಹನಗಳು ವಿಮಾನ ನಿಲ್ದಾಣವನ್ನು ತಲುಪಿವೆ.ಇದರ ಮೇಲ್ಭಾಗದಲ್ಲಿರುವ ‘ವಾಟರ್ ಟರ್ರೆಟ್’ (ಫಿರಂಗಿ), ತುರ್ತು ಸಂದರ್ಭಗಳಲ್ಲಿ 160 ಮೀಟರ್ (ಸುಮಾರು 525 ಅಡಿ) ದೂರದವರೆಗೆ ನೀರು …

Read More »

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿರೋಧಿಸಿ ಶಿಕ್ಷಕರಿಂದ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ

ರಾಜ್ಯ ಸರ್ಕಾರದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಆದಾಗ್ಯೂ ರಾಜ್ಯಾದ್ಯಂತ ಸಮೀಕ್ಷೆ ಆರಂಭವಾಗಿದೆ. ಈ ನಡುವೆ ಸಮೀಕ್ಷೆಗೆ ನಡೆಸಬೇಕಾದ ಶಿಕ್ಷಕರೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪ್ಡಿಸಿ ಪ್ರತಿಭಟನೆ ನಡೆಸಿದ್ದಾರೆ.ಅಂಗವಿಕಲ ಶಿಕ್ಷಕರನ್ನು, ನಿವೃತ್ತಿಯಾಗಿರುವ ಶಿಕ್ಷಕರನ್ನೂ, ಅಪಾಘಾತದಲ್ಲಿ ಕಾಲು ಸಮಸ್ಯೆಯಿಂದಾಗಿ ನಡೆದಾಡಲು ಸಾಧ್ಯವಾಗದಂತಹ ಶಿಕ್ಷಕರನ್ನು, 6 ತಿಂಗಳ ಅಂಗವಿಕಲ ಗರ್ಭಿಣಿ, ನಿವೃತ್ತಿ ಅಂಚನಲ್ಲಿರುವ ಶಿಕ್ಷಕರನ್ನು, ಅನಾರೋಗ್ಯದಿಂದ ರಜೆ ಹಾಕಿರುವ ಶಿಕ್ಷಕರನ್ನು, ಗರ್ಭಿಣಿ ಶಿಕ್ಷಕಿಯರನ್ನೂ ಸರ್ವೆ ಕೆಲಸಕ್ಕೆ ನೇಮಿಸಿದ್ದು, ಸರ್ಕಾರದ …

Read More »

ಐನಾಪುರದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಅಪಘಾತ!

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದರಾಬಾದ್ ಗೆ ಲಾರಿ ತುಂಬಿಕೊಂಡು ಗೋಮಾಂಸ ಸಾಗಿಸುತ್ತಿರುವ ಮಾಹಿತಿ ಪಡೆದ ಸಾರ್ವಜನಿಕರು ಐನಾಪುರ ಗ್ರಾಮದ ಉಗಾರ ರಸ್ತೆಯ ಶ್ರೀ ಸಿದ್ದೇಶ್ವರ ಗುಡಿ ಹತ್ತಿರ ರಾತ್ರಿ 10 ಗಂಟೆ ಸುಮಾರಿಗೆ ಲಾರಿ ತಡೆ ಹಿಡಿದಿದ್ದಾರೆ.ಚಾಲಕನನ್ನು ವಿಚಾರಿಸಿ ನಂತರ ಲಾರಿಯನ್ನು ಪರಿಶೀಲಿಸಿದಾಗ ಅಪಾರ ಪ್ರಮಾಣದಲ್ಲಿ ಗೋಮಾಸ ಇರುವುದು ಕಂಡುಬಂದಿದೆ. ಆಗ ರೊಚ್ಚಿಗೆದ್ದ ಸಾರ್ವಜನಿಕರು ಲಾರಿಗೆ ಬೆಂಕಿ ಹಚ್ಚಿದ್ದಾರೆ.ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಲಾರಿ ಬೆಂಕಿಗಾಹುತಿಯಾಗಿತ್ತು. ಲಾರಿಯಲ್ಲಿ ಸುಮಾರು ಐದು …

Read More »

ಖೋಟಾ ನೋಟು ಚಲಾವಣೆ ಪ್ರಕರಣ: 30 ವರ್ಷಗಳ ನಂತರ ಮೂವರು ಆರೋಪಿಗಳ ಬಂಧನ

ತಮಿಳುನಾಡಿನ ಶಿವಕಾಶಿಯ ರವಿ ನಾಡರ್, ಮಹೀಂದ್ರನ್ ನಾಡರ್, ಪಾಂಡಿ ನಾಡರ್ ಬಂಧಿತರು. 1994-95ರಲ್ಲಿ ದಾಖಲಾಗಿದ್ದ ಮೂರು ಖೋಟಾ ನೋಟು ಚಲಾವಣೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ಮೂವರು ಆರೋಪಿಗಳು ತಲೆಮರಿಸಿಕೊಂಡಿದ್ದರು.‌ ತಮಿಳುನಾಡಿಗೆ ನಮ್ಮ ತಂಡದವರು ಹೋಗಿ ಅವರನ್ನು ಪತ್ತೆ ಹಚ್ಚಿದ್ದಾರೆ’ ಎಂದು ಕ್ಯಾಂಪ್ ಠಾಣೆ ಇನ್ ಸ್ಪೆಕ್ಟರ್ ಆನಂದ್ ಒನಕುದ್ರೆ ತಿಳಿಸಿದರು.

Read More »

ಬೆಳಗಾವಿಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ: ರೂಮ್​​ನಲ್ಲಿ ಸಿಕ್ಕ ಡೆತ್​ ನೊಟ್!!

ನರ್ಸಿಂಗ್ ವಿದ್ಯಾರ್ಥಿನಿ  ನೇಣುಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ ಬೆಳಗಾವಿಯ ಸದಾಶಿವನಗರದ ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಗ್ರಾಮದ ಸುಮಿತ್ರಾ ಗೋಕಾಕ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಸುಮಿತ್ರಾ ತಂದೆ, ಸಂಬಂಧಿಕರ ಸಮ್ಮುಖದಲ್ಲಿ ಹಾಸ್ಟೆಲ್ ರೂಮ್ ಡೋರ್ ಓಪನ್ ಮಾಡಲಾಗಿದ್ದು, ಮಗಳ ನೇಣು ಬಿಗುದುಕೊಂಡಿರುವುದನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 25 ಸಾವಿರ ರೂ. ಸಾಲಮಾಡಿ ಮಗಳನ್ನು ಕಾಲೇಜಿಗೆ ಸೇರಿಸಿದ್ದೆ. ನನ್ನ ಮಗಳಿಗೆ ಏನಾಗಿದೆ …

Read More »

ಹೈಕೋರ್ಟ್‌ನಿಂದ ಕೊಲೆ ಆರೋಪಿಗೆ ವಿಭಿನ್ನ ಶಿಕ್ಷೆ: ಬೇವಿನ ಸಸಿ ಪೋಷಿಸಲು ನ್ಯಾಯಾಲಯದ ಆದೇಶ!

ಕೊಲೆ ಅಪರಾಧಿಯೊಬ್ಬ ತನ್ನ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೆ ಪ್ರತಿಜ್ಞೆ ಮಾಡುವುದಾಗಿ ಭರವಸೆ ನೀಡಿದ್ದಾನೆ, ಮಧ್ಯಪ್ರದೇಶ ಹೈಕೋರ್ಟ್ ಅಸಾಮಾನ್ಯ ಮಧ್ಯಮ ಮಾರ್ಗವನ್ನು ತಂದಿತು.ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ 2021 ರ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹೇಶ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮತ್ತು ಜಾಮೀನು ನೀಡುವಂತೆ ಕೋರಿ ಅವರು ಅರ್ಜಿ ಸಲ್ಲಿಸಿದ್ದರು

Read More »

ಹಾಸನದಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಮುಸುಕುಧಾರಿ ಮಹಿಳೆ ಅರೆಸ್ಟ್!!

ಬೇಲೂರಲ್ಲಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗೆ ಹಾಕಿದ್ದು ಓರ್ವ ಮುಸುಕುಧಾರಿ ಮಹಿಳೆ ಎಂಬುದಾಗಿ ತಿಳಿದು ಬಂದಿತ್ತು. ಇಂತಹ ಮುಸುಕುಧಾರಿ ಮಹಿಳೆಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದಂತ ಮುಸುಕುಧಾರಿ ಮಹಿಳೆಯನ್ನು ಪಿಎಸ್‌ಐ ಸುರೇಶ್ ಹಾಗೂ ಶೋಭಾ ನೇತೃತ್ವದ ತಂಡವು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ.

Read More »

ರಾಮನಗರ: ಹಿಂದೂ-ಮುಸ್ಲಿಂ ಪ್ರೇಮಿಗಳ ಅರ್ಧ ತಲೆ ಬೋಳಿಸಿದ ಐವರ ಬಂಧನ.

ಹಿಂದೂ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ಪ್ರೇಮಿಗಳಿಬ್ಬರ ಮೇಲೆ ಗುಂಪೊಂದು ಚಪ್ಪಲಿಯಿಂದ ಹಲ್ಲೆ ನಡೆಸಿದೆ. ಇಬ್ಬರ ತಲೆಯನ್ನು ಅರ್ಧ ಬೋಳಿಸಿ ಮತೀಯ ಗೂಂಡಾಗಿರಿ ಪ್ರದರ್ಶಿಸಿದೆ.ಘಟನೆಗೆ ಸಂಬಂಧಿಸಿದಂತೆ ಮಹೇಶ್ ಮತ್ತು ಆಸಿನ್ ನೀಡಿರುವ ಪ್ರತ್ಯೇಕ ದೂರಿನ ಮೇರೆಗೆ ಆಸಿನ್ ಕಡೆಯವರಾದ ಶೇಕ್ ಕಬೀರ್, ಸುಹೇಲ್ ಷರೀಫ್, ಸೈಯದ್ ನಯಾಜ್, ನವಾಜ್ ಖಾನ್, ಸಾಜಿದಾ ಬೇಗಂ, ಸಯಿದಾ ಸೇರಿ 7 ಮಂದಿ ವಿರುದ್ದ ಕನಕಪುರ ಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ …

Read More »

ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನ ಆರೋಪ: ಆಸ್ಪತ್ರೆಗೆ ನುಗ್ಗಿ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ.

ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕೋಟೆ ಓಣಿಯಲ್ಲಿ ವೈದ್ಯನ ಮೇಲೆ ಹಲ್ಲೆ ನಡೆಸಲಾಗಿದೆ.ರಾಜೇಶ್ವರಿ ನಗರದ ನಿವಾಸಿ ಡಾ. ಗುರುಮೂರ್ತಯ್ಯ ರಾಚೋಟಿಮಠ ಅವರ ಮೇಲೆ ಹಲ್ಲೆ ನಡೆಸಲಾಗಿದೆ/ ಗುರುಮೂರ್ತಯ್ಯನ ಕ್ಲಿನಿಕ್ ಗೆ ನುಗ್ಗಿದ 20 ರಿಂದ 30 ಜನ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.

Read More »