BigTv News
September 10, 2025
Breaking News
ನೇಪಾಳದಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಲಕ್ಷಾಂತರ ಯುವಕರು ಕಾಠ್ಮಂಡುವಿನಲ್ಲಿ ಹಿಂಸಾಚಾರ ನಡೆಸಿ ಸಂಸತ್ತು, ಸರ್ವೋಚ್ಚ ನ್ಯಾಯಾಲಯ , ಪ್ರಧಾನಮಂತ್ರಿ ಮತ್ತು ಅನೇಕ ಮಂತ್ರಿಗಳ ಮನೆಗಳಿಗೆ ಬೆಂಕಿ ಹಚ್ಚಿದರು. ಇದರೊಂದಿಗೆ, ಮಾಜಿ ಪ್ರಧಾನಮಂತ್ರಿ ಶೇರ್ ಬಹದ್ದೂರ್ ದೇವುಬಾ, ಮಾಜಿ ವಿದೇಶಾಂಗ ಸಚಿವರಾಗಿದ್ದ ಅವರ ಪತ್ನಿ ಮತ್ತು ದೇಶದ ಹಣಕಾಸು ಮಂತ್ರಿಗಳಿಗೂ ಜನಸಮೂಹದಿಂದ ಅಮಾನುಷ ಹಲ್ಲೆ ನಡೆಸಿದ ವಿಡಿಯೋಗಳು ಹೊರಬಿದ್ದಿವೆ. ಅಲ್ಲಿನ ಎಲ್ಲಾ 42 ಸಂಸದರು ತಮ್ಮ ರಾಜೀನಾಮೆಗಳನ್ನು ನೀಡಿದ್ದಾರೆ. ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿ …
Read More »
BigTv News
September 10, 2025
Breaking News
ಹೋಬಳಿಯ ದೊಡ್ಡಬೆಲೆ ಗ್ರಾಮದಲ್ಲಿ 360 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಕಬಳಿಕೆ ಹಗರಣ ಬೆಳಕಿಗೆ ಬಂದಿದೆ. ಶಾಸಕರ ಆಪ್ತರು ನಕಲಿ ದಾಖಲೆಗಳ ಮೂಲಕ ಭೂಮಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಹೋರಾಟಗಾರರ ಅನುಮಾನಾಸ್ಪದ ಸಾವುಗಳ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.ನಾರಾಯಣಪ್ಪ ಮತ್ತು ಲಕ್ಕಪ್ಪ ಸಹೋದರರು ನಕಲಿ ದಾಖಲೆಗಳ ಆಧಾರದ ಮೇಲೆ 350 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಜಮೀನು ಕಬಳಿಸಿರುವ ಆರೋಪ ಹೊರಬಿದ್ದಿದೆ.
Read More »
BigTv News
September 10, 2025
Breaking News
ರಸ್ತೆ ಹಾಳಾಗಿದ್ದರಿಂದ ಕೆಂಭಾವಿ ಯಡಿಯಾಪುರ ಮಾರ್ಗವಾಗಿ ನಡಕೂರ ಗ್ರಾಮದಿಂದ ಸುರಪುರಕ್ಕೆ ತೆರಳುತ್ತಿದ್ದ ಏಕೈಕ ಬಸ್ ಸಂಚಾರ ಸ್ಥಗಿತಗೊಂಡಿದೆ. ಜನ, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಗೆ ಸಿಲುಕಿದ್ದಾರೆ.ಯಡಿಯಾಪುರ ಮತ್ತು ನಡಕೂರ ಗ್ರಾಮಗಳಿಂದ ಪ್ರತಿದಿನ ತಲಾ 30-35 ವಿದ್ಯಾರ್ಥಿಗಳು ಕೆಂಭಾವಿಯ ವಿವಿಧ ಶಾಲೆ- ಕಾಲೇಜುಗಳಿಗೆ ಬರುತ್ತಾರೆ. ನಿತ್ಯ 2 ಸಲ ಸಂಚರಿಸುತ್ತಿದ್ದ ಒಂದೇ ಬಸ್ ಅವರಿಗೆ ಅನುಕೂಲವಾಗಿತ್ತು.
Read More »
BigTv News
September 10, 2025
Breaking News
ದೆಹಲಿ ಬಿಜೆಪಿ ಸರ್ಕಾರ, ಪ್ರವಾಹ ಪೀಡಿತ ಪಂಜಾಬ್‌ಗೆ ₹ 5 ಕೋಟಿ ನೆರವನ್ನು ಮಂಗಳವಾರ ಬಿಡುಗಡೆ ಮಾಡಿದೆ. ಹಾಗೆಯೇ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರು, ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ಪಂಜಾಬ್ ಸಿಎಂ ಭಗವಂತ ಮಾನ್ ಅವರಿಗೆ ಭರವಸೆ ನೀಡಿದ್ದಾರೆ.ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗುಪ್ತಾ, ‘ಪಂಜಾಬ್‌ನಲ್ಲಿ ವಿನಾಶಕಾರಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ನೆರವಾಗುವುದಕ್ಕಾಗಿ ದೆಹಲಿ ಸರ್ಕಾರವು ಇಂದು ₹ 5 ಕೋಟಿ ನೆರವು …
Read More »
BigTv News
September 10, 2025
Breaking News
ಆಶರ್ ಡ್ಯಾನಿಶ್ ಬೊಕಾರೊ ಜಿಲ್ಲೆಯ ಪೆಟ್ವಾರ್ ಮೂಲದವನು.ದೆಹಲಿಯ ವಿಶೇಷ ಘಟಕ, ಜಾರ್ಖಂಡ್ ಎಟಿಎಸ್ ಮತ್ತು ರಾಂಚಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಾಂಚಿಯ ಇಸ್ಲಾಂ ನಗರದಲ್ಲಿ ಆತನನ್ನು ಬಂಧಿಸಲಾಗಿದೆ.ದೆಹಲಿಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ, ದೆಹಲಿ ವಿಶೇಷ ದಳದ ತಂಡವು ಬಹಳ ಸಮಯದಿಂದ ಆತನನ್ನು ಹುಡುಕುತ್ತಿತ್ತು. ಬಂಧಿತ ಶಂಕಿತ ಭಯೋತ್ಪಾದಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Read More »
BigTv News
September 10, 2025
Breaking News
ಭಾರತೀಯ ಸಿಮ್‌ಗಳ ದುರ್ಬಳಕೆ ಪ್ರಕರಣದಲ್ಲಿ ನೇಪಾಳ ಮೂಲದ ವ್ಯಕ್ತಿಯ ಬಂಧನ. ಐಎಸ್‌ಐ ಸೂಚನೆಯಂತೆ ಸೇನಾ ಮಾಹಿತಿ ಸಂಗ್ರಹ, ಸಿಮ್ ಕಾರ್ಡ್ ಪೂರೈಕೆ.ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐ ಸೂಚನೆಯ ಮೇರೆಗೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ 43 ವರ್ಷದ ನೇಪಾಳ ಮೂಲದ ಪ್ರಭಾತ್ ಕುಮಾರ್ ಚೌರಾಸಿಯಾ ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಚೌರಾಸಿಯಾ ಐಎಸ್‌ಐ ಕಾರ್ಯಕರ್ತರಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಪೂರೈಸುತ್ತಿದ್ದನೆಂಬ ಮಾಹಿತಿ ದೊರಕಿದ ನಂತರ ಅವನ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಯಿತು.ಕಠ್ಮಂಡುವಿನಲ್ಲಿ …
Read More »
BigTv News
September 10, 2025
Breaking News
ನಗರದ ಹೊರವಲಯದ ಬೈಕಂಪಾಡಿಯಲ್ಲಿರುವ ಅರೋಮೇಜನ್ ಸುಗಂಧ ದ್ರವ್ಯ ಕಾರ್ಖಾನೆಗೆ ಬುಧವಾರ ನಸುಕಿನಲ್ಲಿ ಬೆಂಕಿ ತಗುಲಿದ್ದು, ಅದರಲ್ಲಿ ದಾಸ್ತಾನು ಮಾಡಿದ್ದ ಸುಗಂಧದ್ರವ್ಯ ಹಾಗೂ ಅದನ್ನು ತಯಾರಿಸುವ ಸಾಮಗ್ರಿಗಳು ಸಂಪೂರ್ಣ ನಾಶವಾಗಿವೆ.ಕಾರ್ಖಾನೆಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಎಂಸಿಎಫ್ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು.ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ. ಈ ಬೆಂಕಿ ಅವಘಡದಿಂದ ಸುಮಾರು₹ 4 ಕೋಟಿ ನಷ್ಟ ಉಂಟಾಗಿರಬಹುದು ಎಂದು …
Read More »
BigTv News
September 10, 2025
Breaking News
ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ಸಮಯದಲ್ಲಿ ಗಲಭೆ ನಡೆದಿದ್ದು, ಅದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಗಲಭೆಗೆ ಕಾರಣರಾದವರನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿದ್ದು, ಈ ವಿಷಯದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.ಘಟನೆಯ ಕುರಿತು ಪ್ರತಾಪ್ ಸಿಂಹ ಅವರು ಮಾತನಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಯತ್ನಾಳ್, ಹಿಂದೂ ಯುವಕರನ್ನು ಬಂಧಿಸಿದ್ದರೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Read More »
BigTv News
September 10, 2025
Breaking News
ಗರ್ಭಿಣಿ ಪತ್ನಿ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಹೂಗಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಪತ್ನಿ ಗರ್ಭಿಣಿಯಾಗಿದ್ದರೂ ಈತನಿಗೆ ಬುದ್ದಿ ಬಂದಿರಲಿಲ್ಲ. ಪ್ರೀತಿಸಿ ಮದ್ವೆ ಆದ ಪ್ರದೀಪ್ ಆಂಟಿ ಮೋಹಕ್ಕೆ ಬಿದ್ದು ರಾಕ್ಷಸೀಯ ಕೃತ್ಯ ಎಸಗಿದ್ದಾನೆ. ಪತಿಯನ್ನು ಕಾರಿನಲ್ಲಿ ಟೆಸ್ಟ್ ಡ್ರೈವ್ ಗೆ ಅಂತ ಕರೆದುಕೊಂಡು ಹೋಗಿ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಪಕ್ಕದ ಮನೆಯ ಆಂಟಿ ಮೋಹಕ್ಕೆ ಬಿದ್ದು, …
Read More »
BigTv News
September 10, 2025
Breaking News
ಮಂಗಳವಾರ ನಡೆದ ಚುನಾವಣೆಯಲ್ಲಿ NDAಯ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ಭಾರತದ ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.ರಾಧಾಕೃಷ್ಣನ್ ಅವರು ವಿರೋಧ ಪಕ್ಷದ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ವಿರುದ್ಧ ಭಾರೀ ಪೈಪೋಟಿಯಿತ್ತು.ಸಿಪಿ ರಾಧಾಕೃಷ್ಣನ್ ಮಂಗಳವಾರ 152 ಮತಗಳಿಂದ ಗೆದ್ದು, ಭಾರತದ ಉಪರಾಷ್ಟ್ರಪತಿಯಾಗಲು 377 ಮತಗಳ ಅಗತ್ಯದ ಅಂತರವನ್ನು ದಾಟಿದರು.ರಾಧಕೃಷ್ಣನ್ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದಿದ್ದಾರೆ ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಮಂಗಳವಾರ ತಿಳಿಸಿದ್ದಾರೆ.
Read More »