ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಶಾಂತಿಕೆರೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರ ತೋಟದ ಮನೆಯ ಮೇಲೆ ಅರಣ್ಯ ಸಂಚಾರಿ ದಳ ದಾಳಿ ನಡೆಸಿ, ಸಾಗಾಟಕ್ಕೆ ಸಿದ್ಧವಾಗಿದ್ದ ಹೊನ್ನೆ, ಮತ್ತಿ, ಬೋಗಿ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ನಾಟಾಗಳನ್ನು ಜಪ್ತಿ ಮಾಡಿದೆ. ಎಂಪಿಎಂ ನಡುತೋಪು ವಲಯದ ಫಾರೆಸ್ಟ್ ವಾಚರ್ ಫಿಲಿಪ್ ಡಿಸೋಜಾ ಅವರ ಮನೆಯಲ್ಲಿ ನಾಟಾಗಳು ಪತ್ತೆಯಾಗಿವೆ. ಅಲ್ಲದೆ, ಅವರು 10 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡು ತೋಟ ನಿರ್ಮಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಡಿಆರ್‌ಎಫ್‌ಒ ಹರೀಶ್ ನಾಯ್ಕ್ ಅವರ ಬೆಂಬಲದೊಂದಿಗೆ ಅಕ್ರಮ ಮರ ದಂಧೆ ನಡೆಸಲಾಗುತ್ತಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

