Breaking News

Breaking News

ಹಾಡಹಗಲೇ 11 ವರ್ಷದ ಬಾಲಕಿಗೆ ವೃದ್ಧನಿಂದ ಲೈಂಗಿಕ ಕಿರುಕುಳ.

ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧನೊಬ್ಬ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಕುಟುಂಬ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.ಉತ್ತರಪ್ರದೇಶದ ಛುತ್ಮಲ್ಪುರದ ಅಲವಲ್ಪುರ ರಸ್ತೆಯಲ್ಲಿ ನಡೆದಿದೆ ಎನ್ನಲಾದ ಘಟನೆಯ ಒಂದು ಗೊಂದಲಮಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.ಘಟನೆಯ ಬಗ್ಗೆ ತಿಳಿದ ಸಂತ್ರಸ್ತೆಯ ಕುಟುಂಬವು ತಕ್ಷಣವೇ ಪೊಲೀಸರಿಗೆ ವರದಿ ಮಾಡಿದೆ.

Read More »

ವಿವಾಹಿತ ಮಹಿಳೆಗೆ ಬಲವಂತದ ಮತಾಂತರ, ನಕಲಿ ದಾಖಲೆ ಸೃಷ್ಟಿಸಿ ನಿಖಾಹ್: ಮೂವರ ಬಂಧನ.

ಆರು ವರ್ಷದ ಮಗುವಿನ ತಾಯಿಯಾಗಿದ್ದ 28 ವರ್ಷದ ಮಹಿಳೆಯನ್ನು ಪ್ರೀತಿಯ ಬಲೆಗೆ ಬೀಳಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ್ದಲ್ಲದೇ, ನಕಲಿ ‘ನಿಖಾಹ್ ನಾಮ’ ಸೃಷ್ಟಿಸಿ ವಿವಾಹವಾದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರಾಜಾ ಮಿಯಾನ್ ಅಲಿಯಾಸ್ ಎಹ್ಸಾನ್ ಸೇರಿದಂತೆ ಮೂವರನ್ನು ನೋಯ್ಡಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

Read More »

ಅಫಜಲಪುರ | ಬಾಲಕಿ ಮೇಲೆ ಅತ್ಯಾಚಾರ: ಯುವಕನ ಬಂಧನ.

ದೇವಲ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮಾತು ಬಾರದ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ 18 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ. ‘ಪಕ್ಕದ ಮನೆಯ ಯುವಕನು ಭಾನುವಾರ ಮಧ್ಯಾಹ್ನ ನಮ್ಮ ಮಗಳನ್ನು ಜಮೀನಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.ಬಳಿಕ ಆಕೆ ಅಳುತ್ತಿದ್ದಾಳೆ ಎಂದು ಆತನೇ ಕರೆದುಕೊಂಡು ಬಂದು ಮನೆಯ ಮುಂದೆ ಬಿಟ್ಟು ಹೋಗಿದ್ದಾನೆ’ ಎಂದು ಬಾಲಕಿಯ ಪೋಷಕರು ಗಾಣಗಾಪುರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Read More »

ಯಲಬುರ್ಗಾ | ಗರ್ಭಿಣಿಯಾದ ಬಾಲಕಿ: ಯುವಕನ ಬಂಧನ.

ತಾಲ್ಲೂಕಿನ ಗ್ರಾಮ ವೊಂದರ ಪ್ರೌಢಶಾಲೆಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದ್ದರಿಂದ ಆಕೆ ಗರ್ಭಿಣಿಯಾಗಿದ್ದು, ಈ ಸಂಬಂಧ ಯುವಕನೊಬ್ಬನನ್ನು ಬಂಧಿಸಲಾಗಿದೆಮಗಳ ಮೇಲೆ ಅತ್ಯಾಚಾರ ನಡೆಸಿದ್ದರಿಂದ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ಸಂತ್ರಸ್ತ ಬಾಲಕಿಯ ಪೋಷಕರು ಗೋಕಾಕ ತಾಲ್ಲೂಕಿನ ನಾಗನೂರು ಗ್ರಾಮದ ಯುವನ್‌ ತಳಗಡೆ (19) ವಿರುದ್ಧ ದೂರು ನೀಡಿದ್ದರು.ಪ್ರೀತಿ-ಪ್ರೇಮದ ಹೆಸರಿನಲ್ಲಿ ಮಕ್ಕಳು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ. ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳಲ್ಲಿ ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು …

Read More »

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪ್ರಿಯಕರ ಜತೆ ಸೇರಿ ಪತಿಯನ್ನೆ ಕೊಂದ ಪತ್ನಿ.

ಪ್ರಿಯಕರನೊಂದಿಗೆ ಇರುವ ಅಕ್ರಮ ಸಂಬಂಧ ಪ್ರಶ್ನಿಸಿ ಸೇಡಂ ಪೊಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದ ಪತಿಯನ್ನೇ ಪತ್ನಿ ಮತ್ತು ಪ್ರಿಯಕರ ಇಬ್ಬರು ಸೇರಿ ಕೊಂದ ಘಟನೆ ಪಟ್ಟಣದ ಊಡಗಿ ಕ್ರಾಸ್ ಬಳಿ ಮಂಗಳವಾರ ನಸುಕಿನ 3.30ರ ಹೊತ್ತಿಗೆ ನಡೆದಿದೆ.ಪಟ್ಟಣದ ನಿವಾಸಿ ಶೇಖ ರಿಯಾಜೊದ್ದಿನ್ (40) ಕೊಲೆಯಾದವರು.ಈ ಕುರಿತು ಕೊಲೆಯಾದ ವ್ಯಕ್ತಿ ಪತ್ನಿ ರಿಯಾನಾಬೇಗಂ ಹಾಗೂ ಮಹ್ಮದ್‌ಜಹೀರ್ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತಮ್ಮನ ಹೆಂಡತಿಗೆ 20ಕ್ಕೂ ಹೆಚ್ಚು ಬಾರಿ ಚಾಕು ಇರಿದು ಕೊಂದ ರೌಡಿಶೀಟರ್!

ಬೆಳಗಾವಿಯಲ್ಲಿ ನಿವೇಶನಕ್ಕಾಗಿ ಮಹಿಳೆಯ ಬರ್ಬರ ಕೊಲೆಯಾಗಿದ್ದು, ನಿವೇಶನಕ್ಕಾಗಿ ರೌಡಿ ಶೀಟರ್ ತನ್ನ ತಮ್ಮನ ಹೆಂಡತಿಗೆ 20ಕ್ಕೂ ಹೆಚ್ಚು ಬಾರಿ ಚಾಕು ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಟಿಳಕವಾಡಿಯಲ್ಲಿ ನಡೆದಿದೆ.ಬೆಳಗಾವಿ ನಗರದ ಟಿಳಕವಾಡಿಯ ಗೀತಾ ಗವಳಿ (45) ಎನ್ನುವ ಮಹಿಳೆಯನ್ನು ಗಣೇಶ ಎನ್ನುವ ವ್ಯಕ್ತಿ 20ಕ್ಕೂ ಹೆಚ್ಚು ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ.

Read More »

ಅಕ್ರಮ ಸಂಬಂಧದ ಅನುಮಾನಕ್ಕೆ ಪ್ರೀತಿಯನ್ನೇ ಕೊಂದ!

ಯಲಹಂಕ ಉಪನಗರದಲ್ಲಿ ನಡೆದ ಪತ್ನಿಯನ್ನು ಕೊಂದ ಪ್ರಕರಣದಲ್ಲಿ ಆರೋಪಿ ಪತಿ ಸೈದುಲ್‌ ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಅಮೀನಾ ಜೊತೆ ಜಗಳವಾಡಿ ಅಕ್ರಮ ಸಂಬಂಧದ ಬಗ್ಗೆ ಅನುಮಾನಗೊಂಡಿದ್ದು ವೈವಾಹಿಕ ಕಲಹವೇ ಈ ಘಟನೆಯ ಕಾರಣವಾಗಿದೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.ಆರೋಪಿ ಸೈದುಲ್ ಸ್ಥಳದಿಂದ ಪರಾರಿಯಾಗಿ ರಾಜಮಂಡ್ರಿಗೆ ಓಡಿಹೋದ. ಇದಾದ ನಂತರ ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದರು. ಕೊನೆಗೆ ಆತನನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ಯಶಸ್ವಿಯಾದರು. …

Read More »

ಮೂರು ದಿನಗಳ ಕಾಲ ಮಧ್ಯಂತರ ಜಾಮೀನು ಕೋರಿ ವಿನಯ್‌ ಕುಲಕರ್ಣಿ ಅರ್ಜಿ

ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್‌ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಮಧ್ಯಂತರ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲರು, ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದರೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಜಾಮೀನು ನೀಡದಂತೆ ಮನವಿ ಮಾಡಿದರು. ಬಳಿಕ ನ್ಯಾಯಾಲಯವು ಸಿಬಿಐಗೆ ನೋಟಿಸ್‌ ಜಾರಿಗೊಳಿಸಿ ಸೆ.9ಕ್ಕೆ ವಿಚಾರಣೆ ಮುಂದೂಡಿದೆ.

Read More »

ಮನೆ ಕೆಲಸದವಳಾಗಿ ಬಂದ ಖತರ್ನಾಕ್ ಕಳ್ಳಿಯ ಬಂಧನ!

ಆಶುತೋಷ್ ಮತ್ತು ಪೂಜನ್ ದಿವೇದಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ಕಳೆದ ಜುಲೈನಲ್ಲಿ ವಾಟ್ಸಾಪ್ ಗ್ರೂಪ್ ರೆಫರೆನ್ಸ್ ಮೂಲಕ ಮನೆಗೆಲಸಕ್ಕೆ ಸೇರಿಕೊಂಡಿದ್ದಳು.ನೇಪಾಳದ ಮೂಲದ ಪೂಜಾ(26) ಬಂಧಿತ ಮಹಿಳೆ.ಜುಲೈನಲ್ಲಿ ಕೊನೆಯ ಬಾರಿ ಆಭರಣ ನೋಡಿದ್ದ ಮಾಲೀಕರು ಅದಾದ ಬಳಿಕ ಮೂರು ಜನ ಮನೆಗೆಲಸದವರು ಕೆಲಸ ಮಾಡಿದ್ದರು. ಪೊಲೀಸರು ದೂರಿನ ಆಧಾರದ ಮೇಲೆ ಮೂವರಿಗೂ ನೋಟಿಸ್ ನೀಡಿದ್ದರು. ನೋಟೀಸ್ ನೀಡುತ್ತಿದ್ದಂತೆ ಪೂಜಾ ಮನೆ ಖಾಲಿ ಮಾಡಿ ಪರಾರಿ ಆಗಿದ್ದಳು, ಪೊಲೀಸರು ಇನ್ನಿಬ್ಬರ ವಿಚಾರಣೆ …

Read More »

ಭೀಕರ ಅಪಘಾತ: ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆ ಮೇಲೆಯೇ ಹರಿದ ಲಾರಿ: ಸ್ಥಳದಲ್ಲೇ ಸಾವು .

ಗುಂಡಿಮಯ ರಸ್ತೆಯಲ್ಲಿ ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆ ಮೇಲೆಯೇ ಕ್ಯಾಂಟರ್ ಲಾರಿ ಹರಿದು ಹೋಗಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಕೂಳೂರು ರಾಯಲ್ ಓಕೆ ಶೋರೂಂ ಮುಂಭಾಗ ಈ ಅಪಘಾತ ಸಂಭವಿಸಿದೆ. ಮಾಧವಿ ಮೃತ ಮಹಿಳೆ.ಆಯತಪ್ಪಿ ಕೆಳಗೆ ಬಿದ್ದ ಮಾಧವಿ ಮೇಲೆಯೇ ಕ್ಯಾಂಟರ್ ಲಾರಿ ಹರಿದು ಹೋಗಿದೆ.ಸ್ಥಳದಲ್ಲೇ ಮಾಧವಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ಮಡೆಸಿದ್ದಾರೆ.

Read More »