BigTv News
August 29, 2025
Breaking News
ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನೂರಾರು ರೈತರು ಹೆಸರು ಫಸಲು ರಾಶಿ ಮಾಡಿ ದರ್ಗಾ ಆವರಣದಲ್ಲಿ ಒಣಗಲು ಹಾಕಿದ್ದರು. ಆದರೆ, ಇಡೀ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಕ್ಕದಲ್ಲಿದ್ದ ಬೃಹತ್ ಹಳ್ಳ ಉಕ್ಕಿ ಹರಿದು ದರ್ಗಾ ಆವರಣ ಸಂಪೂರ್ಣ ಜಲಾವೃತವಾಗಿದೆ. ಬೆಳೆ ನಷ್ಟದಿಂದ ಅನ್ನದಾತ ಬೇಸರಗೊಂಡಿದ್ದಾನೆ.ವರುಣಾರ್ಭಟಕ್ಕೆ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದು, ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 300 ಕ್ವಿಂಟಲ್‌ಗೂ ಅಧಿಕ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ಲಕ್ಷಾಂತರ …
Read More »
BigTv News
August 29, 2025
Breaking News
ಗಣೇಶೋತ್ಸವ ಹಿನ್ನೆಲೆಯಲ್ಲಿ ಶಿವಾಜಿ ಬ್ಯಾನರ್ ತೆರವಿಗೆ ಪೊಲೀಸರು ಮುಂದಾಗುತ್ತಿದಂತೆ ಗಲಾಟೆ ನಡೆದಿರ್ಯ್ವ ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆ ಜಿಲ್ಲೆಯ ಮಟಕಲ್ಲು ಪ್ರದೇಶದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಬ್ಯಾನರ್ ಗಳನ್ನು ತೆರವು ಮಾಡಲು ಪೊಲೀಸರು ಮುಂದಾಗಿದ್ದರು.ಶಿವಾಜಿ ಅಫ್ಜಲ್ ಖಾನ್ ನನ್ನು ಕೊಲ್ಲುವ ಫ್ಲೆಕ್ಸ್ ಅವಳವಡಿಸಲಾಗಿತ್ತು. ಇದು ಕೋಮು ಪ್ರಚೋದನೆಗೆ ಕಾರಣವಾಗುತ್ತದೆ ಎಂದು ಪೊಲೀಸರು ಫ್ಲೆಕ್ಸ್ ತೆರವು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಹಿಂದೂ ಯುವಕರ ಗುಂಪು ವಿರೋಧ ವ್ಯಕ್ತಪಡಿಸಿದೆ.ಸದ್ಯ ಸ್ಥಳದಲ್ಲಿ ಬಿಗುವಿನ …
Read More »
BigTv News
August 29, 2025
Breaking News
ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೂ ನನಗೂ ಒಂದು ಅವಿನಾಭಾವ ಸಂಬಂಧವಿದೆ. ನನಗೆ ಉದ್ಯೋಗ ಕೊಟ್ಟು ಅನ್ನಹಾಕಿದವರು ಇದೇ ಊರಿನವರು. ನನ್ನ ಪುಸ್ತಕ ಪ್ರಕಾಶನ ಮಾಡಿದ ಪ್ರಕಾಶಕರು ಇದೇ ಊರಿನವರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ರಾಣಿ ಚೆನ್ನಮ್ಮ ಮೈದಾನದ ಗಣಪತಿ ವಿಸರ್ಜನೆ ವೇಳೆ ಮಾತನಾಡಿದ ಅವರು, 1989ರ ನಂತರ ಕಾಶ್ಮೀರದಲ್ಲಿ ಮಸೀದಿ ಮೈಕ್ ಸೆಟ್ ನಲ್ಲಿ ಆಸ್ತಿಪಾಸ್ತಿ ಬಿಟ್ಟು, ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಬೇಕು ಎಂದು ಕರೆ ಬರ್ತಿತ್ತು. …
Read More »
BigTv News
August 28, 2025
Breaking News
ದೆಹಲಿ ಮೀರತ್ ಎಕ್ಸ್‌ಪ್ರೆಸ್ ವೇಯಲ್ಲಿ ಕಾರು ಡಿಕ್ಕಿಯಾಗಿ ಟ್ರಾಫಿಕ್ ಪೊಲೀಸ್ ಅಧಿಕಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸದ್ಯ ಈ ಘಟನೆಯ ವಿಡಿಯೋ ವೈರಲ್ ಆಗಿದೆ.ವಿಪಿನ್ ಕುಮಾರ್ ಎಂಬ ಸಂಚಾರ ಪೊಲೀಸ್ ಅಧಿಕಾರಿ ಗಾಳಿಯಲ್ಲಿ ಹಲವಾರು ಅಡಿಗಳಷ್ಟು ಮೇಲಕ್ಕೆ ಹಾರಿ ದೂರ ಬೀಳುತ್ತಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗುತ್ತದೆ, ಆದರೆ ಗಂಭೀರ ಅಪಘಾತದಲ್ಲಿ ಉಂಟಾದ ಗಾಯಗಳಿಂದಾಗಿ ಸಾವನ್ನಪ್ಪಿದ್ದಾರೆ.
Read More »
BigTv News
August 28, 2025
Breaking News
ಹಾಸನದಲ್ಲಿ ಕುಳಿತುಕೊಂಡು ದಾವಣಗೆರೆಯ ಶಾಲಾ ಶಿಕ್ಷಕಿಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ 22.40 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪದಲ್ಲಿ ದಾವಣಗೆರೆ ಸೆನ್ ಠಾಣೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತನ ಬ್ಯಾಂಕ್ ಖಾತೆಯಲ್ಲಿದ್ದ 1.90 ಲಕ್ಷ ಹಣ ಫ್ರೀಜ್ ಮಾಡಿದ್ದು, ಇನ್ನೂ ಇಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಫೆಬ್ರವರಿ 5ರಂದು ಶಿಕ್ಷಕಿಗೆ ಕರೆ ಮಾಡಿದ್ದ ವಂಚಕರು ತಮ್ಮ ಹೆಸರಿನಲ್ಲಿ ದುಬೈಗೆ ಕಳಿಸುತ್ತಿರುವ ಕೋರಿಯರ್‌ನಲ್ಲಿ ಮಾದಕ ದ್ರವ್ಯ ಪತ್ತೆಯಾಗಿದೆ.ನಕಲಿ ಕರೆ, ಮೆಸೇಜ್, …
Read More »
BigTv News
August 28, 2025
Breaking News
ಬಾರ್ ಮತ್ತು ಬೆಂಚ್ ವರದಿಯ ಪ್ರಕಾರ, ಮಹಿಳೆ ತನ್ನ ಪತಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯಿಂದ ಬಳಲುತ್ತಿದ್ದಾರೆ. ಅವರ ಜೊತೆ ಯಾವುದೇ ಶಾರೀರಿಕ ಸಂಬಂದ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಿದ್ದಳು. 90 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನೀಡುವಂತೆ ಮನವಿ ಸಲ್ಲಿಸಿದ್ದಳು.ಅರ್ಜಿದಾರಳು ತನ್ನ ಪತಿ ದುರ್ಬಲ, ಶಾರೀರಿಕ ಕ್ರಿಯೆ ನಡೆಸಲು ಅಸಮರ್ಥ, ನನಗೆ ಹಿಂಸೆ ನೀಡುತ್ತಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಅಲ್ಲದೆ 90 ಲಕ್ಷ ಶಾಶ್ವತ ಜೀವನಾಂಶಕ್ಕೆ ಅರ್ಹಳು ಎಂದು …
Read More »
BigTv News
August 28, 2025
Breaking News
ಗಣಪತಿ ವಿಸರ್ಜನೆ ವೇಳೆ ದುರಂತ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಯುವಕ ಸಾವನ್ನಪ್ಪೀರುವ ಘಟನೆ ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮದ ಗ್ರಾಮದ ಕೆರೆಯಲ್ಲಿ ಜರುಗಿದೆ.ಯರಹಳ್ಳಿ ಗ್ರಾಮದ ಪ್ರದೀಪ್( 28) ಮೃತ ಯುವಕ. ರಾತ್ರಿ ಬೇಲೂರು ಕೆರೆಯಲ್ಲಿ ಯುವಕರು ಗಣೇಶ ವಿಸರ್ಜನೆ ಮಾಡ್ತಿದ್ದರು.ಯುವಕರ ಜೊತೆ ನೀರಿಗಿಳಿದಿದ್ದ ಪ್ರದೀಪ್ ನೀರಿನಲ್ಲಿ ಮುಳುಗಿ ಸಾವ ನ್ನಪ್ಪಿದ್ದಾರೆ. ಪ್ರದೀಪ್ ಮದ್ಯಪಾನ ಮಾಡಿ ನೀರಿಗಿಳಿದಿದ್ದ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ, ಪ್ರದೀಪ್ ಮೃತ ದೇಹ …
Read More »
BigTv News
August 28, 2025
Breaking News
ಮಳೆಯಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೊಲ-ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ದಿನ ಬಳಕೆಯ ವಸ್ತುಗಳು ಸೇರಿದಂತೆ ವಿವಿಧ ಸಾಮಗ್ರಿಗಳು ನೀರು ಪಾಲಾಗಿವೆ. ಮನೆಯವರೆಲ್ಲರೂ ಬೆಳಗಾಗುವವರೆಗೂ ನಿದ್ದೆಗೆಟ್ಟು ನೀರು ಹೊರಹಾಕಲು ಪರದಾಡಿದ್ದಾರೆ. ಮಕ್ಕಳು, ವೃದ್ಧರು ಅಕ್ಕಪಕ್ಕದ ಮನೆಗಳಲ್ಲಿ ರಾತ್ರಿ ಕಳೆದಿದ್ದಾರೆ. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಪಕ್ಕದ ಜೋಪಡಪಟ್ಟಿ ಬಡಾವಣೆ, ಷಣ್ಮುಖ ಶಿವಯೋಗಿಗಳ ವಿರಕ್ತ …
Read More »
BigTv News
August 28, 2025
Breaking News
ವಡೋದರಾದಲ್ಲಿ ಗಣೇಶ ಚತುರ್ಥಿ ಆಚರಣೆ ವೇಳೆ ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಮೊಟ್ಟೆ ಎಸೆದಿದ್ದಾರೆ. ಸೋಮವಾರ ರಾತ್ರಿ ನಗರದ ಸತ್ಯವಿಸ್ತಾರ್ ಪ್ರದೇಶದಲ್ಲಿ ಮೆರವಣಿಗೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ಗಣೇಶ ವಿಗ್ರಹದ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ.ಬಂಧಿತ ವ್ಯಕ್ತಿಗಳಲ್ಲಿ ಸುಫಿಯಾನ್ ಅಲಿಯಾಸ್ ಗಾಮಾ ಸಲೀಂಬಾಯಿ ಮನ್ಸೂರಿ, ಶಹನವಾಜ್ ಅಲಿಯಾಸ್ ಬಾದ್ಬಾದ್ ಮೊಹಮ್ಮದ್ ಇರ್ಷಾದ್ ಖುರೇಷಿ ಮತ್ತು ಕಾನೂನಿನ ಸಂಘರ್ಷದಲ್ಲಿ ಭಾಗಿಯಾಗಿರುವ ಅಪ್ರಾಪ್ತ ವಯಸ್ಕ ಸೇರಿದ್ದಾರೆ.
Read More »
BigTv News
August 28, 2025
Breaking News
Kಒಬ್ಬ ಮಹಿಳೆ ಛಾವಣಿಯ ಅಂಚಿನಲ್ಲಿ ಅಪಾಯಕಾರಿಯಾಗಿ ಒರಗುತ್ತಾಳೆ ಮತ್ತು ಒಂದು ಕೈಯಲ್ಲಿ ಮಗುವನ್ನು ಹಿಡಿದಿದ್ದಾಳೆ. ಮುಂದಿನ ಕ್ಷಣದಲ್ಲಿ ಅವಳು ಮಗುವನ್ನು ಕೆಳಗಿನ ರಸ್ತೆಯ ಮೇಲೆ ನಿಂತಿದ್ದ ವ್ಯಕ್ತಿಯ ಕಡೆಗೆ ಎಸೆಯುತ್ತಾಳೆ, ಅವನು ಮಗುವನ್ನು ಹಿಡಿಯಲು ತನ್ನ ತೋಳುಗಳನ್ನು ಚಾಚಿದನು. ಅದೃಷ್ಟವಶಾತ್, ಆ ವ್ಯಕ್ತಿ ಸರಿಯಾದ ಸಮಯದಲ್ಲಿ ಮಗುವನ್ನು ಹಿಡಿಯುತ್ತಾನೆ. ಈ ದೃಶ್ಯವನ್ನು ನೋಡಿ, ಹತ್ತಿರದಲ್ಲಿ ನಿಂತಿದ್ದ ಜನರು ಸಹ ಆಶ್ಚರ್ಯಚಕಿತರಾಗುತ್ತಾರೆ.
Read More »