BigTv News
August 14, 2025
Breaking News
ರಾಜ್ಯದಲ್ಲಿ ರಾಸಾಯನಿಕ ಮಿಶ್ರಿತ ಶೇಂದಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ತಿಳಿಸಿದ್ದಾರೆ.ಕಳೆದ 3 ವರ್ಷಗಳಲ್ಲಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಶೇಂದಿ ಕಳ್ಳಸಾಗಾಣಿಕೆಗೆ ಸಂಬಂಧಿಸಿದಂತೆ 140 ಪ್ರಕರಣಗಳನ್ನು ದಾಖಲಿಸಿ, 160 ಆರೋಪಿಗಳನ್ನು ಬಂಧಿಸಲಾಗಿದೆ. 1,691 ಲೀ. ಶೇಂದಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಅವರು ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ತಿಳಿಸಿದರು.
Read More »
BigTv News
August 14, 2025
Breaking News
Lಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಗುರುವಾಗ ಭಾರೀ ಮೇಘಸ್ಫೋಟ ಘಟನೆ ಸಂಭವಿಸಿದ್ದು ಭಾರೀ ಸಾವು ನೋವುಗಳಾಗಿವೆ. ಕಿಶ್ತಾವಾರ್ ಜಿಲ್ಲೆಯ ಪದ್ದರ್ ತಶೋತಿ ಎಂಬಲ್ಲಿ ಭಾರೀ ಮಳೆಯಿಂದ ಪ್ರವಾಹ ಸಂಭವಿಸಿದೆ. ಈ ಪ್ರಕೃತಿ ವಿಕೋಪ ದುರ್ಘಟನೆಯಲ್ಲಿ 38ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಇದೆ.ರಾಷ್ಟ್ರಪತಿ ದ್ರೌಪದಿ ಮುರ್ಮು, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮೊದಲಾದವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
Read More »
BigTv News
August 14, 2025
Breaking News
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ , ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ.ಬೇಲ್ ರದ್ದುಗೊಳಿಸಿದ ತೀರ್ಪು ಹೊರಬರುತ್ತಿದ್ದಂತೆ ಕೊಲೆಯಾದ ರೇಣುಕಾಸ್ವಾಮಿ ಅವರ ಕುಟುಂಬ ಭಾವುಕರಾಗಿದ್ದಾರೆ. ನಮಗೆ ಕಾನೂನಿನ ಮೇಲೆ ನಂಬಿಕೆ ಇನ್ನೂ ಹೆಚ್ಚಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ರೇಣುಕಾಸ್ವಾಮಿ ಅವರ ಪತ್ನಿ ಸಹನಾ ಪ್ರತಿಕ್ರಿಯೆ ನೀಡಿ, ಯಾರು ತಪ್ಪು ಮಾಡಿದ್ದಾರೊ ಅವರಿಗೆ ಶಿಕ್ಷೆ ಆಗಲಿ. ಕಾನೂನಿನಲ್ಲಿ ಏನು ಶಿಕ್ಷೆ ಕೊಡುತ್ತಾರೋ …
Read More »
BigTv News
August 14, 2025
Breaking News
ಕೆಲ ದಿನಗಳ ಹಿಂದೆ ಕೊಲೆಯಾದ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕಿಯ ತಾಯಿ ಮತ್ತು ಸಹೋದರಿಯರು ನನ್ನ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಲಾಗಿದೆ ಮತ್ತು ನನಗೆ ಬೆದರಿಕೆ ಹಾಕಲಾಗಿದೆ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿ ಧರಣಿ ಕುಳಿತಿದ್ದಾರೆ.ಅಪ್ರಾಪ್ತಳಾದ ನನ್ನ ಮಗಳ ಮೇಲೆ ಆದ ಅತ್ಯಾಚಾರಕ್ಕೆ ನ್ಯಾಯ ಕೊಡಿಸಿ ಮತ್ತು ಈ ಅತ್ಯಾಚಾರಕ್ಕೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕಠಿಣ ಶಿಕ್ಷೆ ವಿಧಿಸಬೇಕು” …
Read More »
BigTv News
August 14, 2025
Breaking News
ಉತ್ತರ ಪ್ರದೇಶದಲ್ಲಿ ಮೂವರು ಮನೆಯೊಂದಕ್ಕೆ ನುಗ್ಗಿ ಕಳ್ಳತನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.ದರೋಡೆ ನಡೆಯುವಾಗ ರಿತಿಕ್ ಎಚ್ಚರವಾಗಿರುತ್ತಿದ್ದರೆ, ಕಳ್ಳ ರಾಡ್ ನಿಂದ ಅವನ ತಲೆಯನ್ನು ಹೊಡೆದು ಹಾಕುತ್ತಿದ್ದ. ರಿತಿಕ್ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದ. ದೇವರು ಅವನನ್ನು ರಕ್ಷಿಸಿದನೆಂದು ಹೇಳಬಹುದು. ಈಗ, ಕಳ್ಳರು ಮನೆಯಿಂದ 5 ಲಕ್ಷ ನಗದು ಮತ್ತು ಚಿನ್ನಾಭರಣಗಳನ್ನು ಕದ್ದಿದ್ದಾರೆ. ದರೋಡೆ ನಡೆಯುವ ಸಮಯದಲ್ಲಿ ಮನೆಯ ಹೊರಗೆ ಭದ್ರತಾ ಸಿಬ್ಬಂದಿ ಇದ್ದರು. ಆದರೆ, ಕಳ್ಳರು …
Read More »
BigTv News
August 12, 2025
Breaking News
ಭಾಸೆಲ್ ಮಿಷನ್ ಟ್ರಸ್ಟಿ ಬಲವಂತಕುಮಾರ ಗುಂಡಮಿ ಅವರಿಗೆ, ಅವರ ಸಂಬಂಧಿ ಉಜ್ವಲ ಗುಂಡಮಿ ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಜ್ವಲ್, ಕುಡಿದ ಅಮಲಿನಲ್ಲಿ ಬಲವಂತಕುಮಾರ ಅವರ ಮನೆಗೆ ಬಂದು ಟ್ರಸ್ಟ್‌ನ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಶೂಟ್ ಮಾಡುವುದಾಗಿ ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
Read More »
BigTv News
August 12, 2025
Breaking News
ಟೇಕ್ ಮಾಡುವಾಗ ಬೈಕ್ ಗೆ ಟಚ್ ಆಗಿದೆ ಎಂದು ಆರೋಪಿಸಿ ಪೋಲಿಸ್ ಹೆಡ್ ಕಾನ್ಸ್ ಸ್ಟೇಬಲ್ ಓರ್ವ ಕರ್ತವ್ಯ ನಿರತ ಸಾರಿಗೆ ಬಸ್ ಚಾಲಕನ ಮೇಲೆ ಚಪ್ಪಲಿ, ಹೆಲ್ಮೆಟ್ ನಿಂದ ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಕೂಡ್ಲಿಗಿಯಲ್ಲಿ ನಡೆದಿದೆ.ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೂಡ ಹಲ್ಲೆ ನಡೆಸಿರುವುದು ಖಂಡನೀಯ, ಈ ಕೂಡಲೇ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಕೆಲಸದಿಂದ ವಜಾ ಮಾಡಬೇಕು …
Read More »
BigTv News
August 12, 2025
Breaking News
ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ್ದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ಆದೇಶ ಹೊರಡಿಸಿದ್ದಾರೆ.ಆಗಸ್ಟ್ 7ರಂದು ಹರಿಹರದಿಂದ ಬಳ್ಳಾರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಕೊಟ್ಟೂರು ತಾಲ್ಲೂಕಿನ ಗಜಾಪುರ ಬಳಿ ತಮ್ಮ ಬೈಕಿಗೆ ತಾಗಿದೆ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ, ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು.
Read More »
BigTv News
August 12, 2025
Breaking News
ಫತೇಹ್‌ಪುರ ಜಿಲ್ಲೆಯಲ್ಲಿರುವ 200 ವರ್ಷದ ಹಳೆಯ ‘ಮಕ್‌ಬಾರ’ (ಸಮಾಧಿ) ಹಾಗೂ ಎರಡು ‘ಮಜಾರ್’ (ದೇಗುಲ)ಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸೋಮವಾರ ಹಾನಿಗೊಳಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಪೊಲೀಸ್ ಮೂಲಗಳ ಪ್ರಕಾರ, ‘ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕಾರ್ಯಕರ್ತರು ಸಮಾಧಿ ಮುಂದೆ ಸೇರಿದ್ದರು. ಈ ವೇಳೆ ಅಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು, ‘ನವಾಬ್ ಅಬ್ದೂಸ್ ಸಮಾಧಿ’ಗೆ ತೆರಳಿ ಆರತಿ ಹಾಗೂ ಪೂಜೆ ಸಲ್ಲಿಸಿದರು.ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಮಕ್‌ಲಾಲ್ …
Read More »
BigTv News
August 12, 2025
Breaking News
ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ದಿನವಾದ ಸೋಮವಾರ ನಗರದ ವಿವಿಧ ಮಠಗಳಲ್ಲಿ ರಥೋತ್ಸವ, ಧಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಭಕ್ತರು ರಾಯರ ನಾಮ ಸ್ಮರಣೆ ಮಾಡಿ ಪುನೀತರಾದರು. ವಿವಿಧ ಮಠಗಳಲ್ಲಿ ವಿದ್ಯುದ್ದೀಪಾಲಂಕಾರ ಭಕ್ತರ ಸೆಳೆಯಿತು.ಭವಾನಿ ನಗರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಾವಿರಾರು ಭಕ್ತರು ರಾಯರ ಅಲಂಕೃತ ಬೃಂದಾವನದ ದರ್ಶನ ಪಡೆದರು. ಪ್ರಹ್ಲಾದ ರಾಜರಿಗೆ ಕನಕಾಭಿಷೇಕ ಸೇವೆ ಸಲ್ಲಿಸಿದರು.ಹುಬ್ಬಳ್ಳಿಯ ಶಕ್ತಿ …
Read More »