Breaking News

Breaking News

ಚಲಿಸುತ್ತಿರುವ ರಿಕ್ಷಾದೊಳಗೆ ಸಿಲುಕಿಕೊಂಡ ಕುದುರೆ. ಹೊರಬರಲು ಪರದಾಟ!

ಬೀದಿಯಲ್ಲಿ ಎರಡು ಕುದುರೆಗಳು ಕದಾಡಿಕೊಂಡು ಒಂದು ಕುದುರೆ ಚಲಿಸುತ್ತಿರುವ ರಿಕ್ಷಾದೊಳಗೆ ಸಿಲುಕಿ ಅವಾಂತರ ಸೃಸ್ಟಿಸಿರುವ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಬುಧವಾರ (ಜು.23) ನಡೆದಿದೆ.ಜಬಲ್ಪುರದ ನಾಗರತ್ ಚೌಕ್‌ನಲ್ಲಿರುವ ಆದಾಯ ತೆರಿಗೆ ಕಚೇರಿ ಬಳಿ ಈ ಘಟನೆ ನಡೆದಿದ್ದು ಇದರಿಂದ ರಿಕ್ಷಾ ಚಾಲಕ ಹಾಗೂ ಓರ್ವ ಪ್ರಯಾಣಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

Read More »

ಇಟಲಿಯಲ್ಲಿ ವಿಮಾನ ಪತನ: ಇಬ್ಬರು ಸಾವು!

ಬ್ರೆಸಿಯಾದಲ್ಲಿ ಬುಧವಾರ ಹೆದ್ದಾರಿಯ ಮಧ್ಯದಲ್ಲಿ ಅಪಘಾತಕ್ಕೀಡಾದ ಸಣ್ಣ ವಿಮಾನದಲ್ಲಿದ್ದ ಜನರು ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ, ಇದರಲ್ಲಿ ಸಣ್ಣ ಏರ್ ಕ್ರಾಫ್ಟ್ ಜನನಿಬಿಡ ರಸ್ತೆಯಲ್ಲಿ ಲಂಬವಾಗಿ ಡೈವಿಂಗ್ ಮಾಡಿ ಬಾಂಬ್ನಂತೆ ಸ್ಫೋಟಿಸುವುದನ್ನು ಕಾಣಬಹುದು

Read More »

ಬೆಂಗಳೂರು :ಪುತ್ರಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!!

ಮಹಾಲಕ್ಷ್ಮೀ ಎಂಬುವರು ತನ್ನ ಐದು ವರ್ಷದ ಪುತ್ರಿ ಸಿರಿಯನ್ನು ಕೊಂದು ತಾನೂ ಆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಬೆಂಗಳೂರಿನ ಲಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.ಇತ್ತೀಚೆಗೆ ಜಯರಾಮ್ ಹಾಗೂ ಮಹಾಲಕ್ಷ್ಮಿ ನಡುವೆ ಜಗಳ ಹೆಚ್ಚಾಗಿತ್ತು. ಇಂದು ಕೂಡ ಜಗಳವಾದ ನಂತ್ರ ಗಂಡನ ಮೇಲಿನ ಸಿಟ್ಟಿನಿಂದ ಪುತ್ರಿ ಸಿರಿ ಕೊಂದು, ತಾನೂ ಆತ್ಮಹತ್ಯೆ ಯತ್ನದಂತ ಘಟನೆ ನಡೆದಿದೆ ಎನ್ನಲಾಗುತ್ತಿದೆ.

Read More »

ಜಾತಿಗಳ ನಡುವೆ ಕಂದಕ ತರಲು ಜಾತಿ ಸಮೀಕ್ಷೆ: ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ

ಸುದ್ದಿಗಾರರೊರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಸರ್ಕಾರ ಕಾಟಾಚಾರಕ್ಕೆ ಜಾತಿ ಒಳಮೀಸಲು ಸಮೀಕ್ಷೆ ಮಾಡಿದೆ. ಸಿದ್ದರಾಮಯ್ಯ ಜಾತಿಗಳ ನಡುವೆ ಕಂದಕ ತರಲು ಗಣತಿ ಮಾಡಿಸಿದ್ದಾರೆ. ಈಗ ಹೊಸ ಗಣತಿ ಮಾಡಿಸುತ್ತಾರೆಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.

Read More »

ಬಾಲ್ಯ ವಿವಾಹ: ಇನ್ಮುಂದೆ ‘ನಿಶ್ಚಿತಾರ್ಥ ಮಾತುಕತೆ’ಯಲ್ಲಿ ಭಾಗಿಯಾದವರ ವಿರುದ್ಧವೂ ಕಾನೂನು ಕ್ರಮ

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ-2025ಕ್ಕೆ ಅನುಮೋದನೆ ನೀಡಲಾಗಿದೆ. ಈ ಕಾಯ್ದೆ ಸದನದಲ್ಲಿ ಮಂಡನೆಯಾಗಿ ಒಪ್ಪಿಗೆ ದೊರೆತರೇ ನಿಶ್ಚಿತಾರ್ಥ ಮಾತುಕತೆಯಲ್ಲಿ ಭಾಗಿಯಾದವರ ವಿರುದ್ಧವೂ ಕಾನೂನು ಕ್ರಮ ಆಗಲಿದೆ.ಇದಷ್ಟೇ ಅಲ್ಲದೇ ಬಾಲ್ಯ ವಿವಾಹಕ್ಕೆ ಕುಟುಂಬಸ್ಥರ ಒಪ್ಪಿಗೆ ಇದ್ದರೂ ಇನ್ಮುಂದೆ ಕಾನೂನು ಕ್ರಮ ಆಗಲಿದೆ. ತೊಟ್ಟಿಲು ಮದುವೆಯಾದರೂ ಶಿಕ್ಷೆಯನ್ನು ಕೈಗೊಳ್ಳುವಂತ ಅವಕಾಶವನ್ನು ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆಯಡಿ ಜಾರಿಗೆ …

Read More »

ಭಾರೀ ಮಳೆಗೆ ಕ್ಷಣಾರ್ಧದಲ್ಲಿ ಬೃಹತ್ ಬೆಟ್ಟ ಕುಸಿತ!

ರಾಜಸ್ಥಾನದ ಜುನ್ಜುನುವಿನಿಂದ ಆಘಾತಕಾರಿ ವೀಡಿಯೊವೊಂದು ಹೊರಬರುತ್ತಿದೆ, ಅಲ್ಲಿ ಭಾರೀ ಮಳೆಯ ನಡುವೆ ಬೆಟ್ಟವೊಂದು ನೆಲಕ್ಕೆ ಬಿದ್ದಿದ್ದು,.ಈ ವೀಡಿಯೊ ಹತ್ತಿರದ ಸ್ಥಳೀಯರು ಮತ್ತು ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತಿದೆ. ಗುಡ್ಡಗಾಡು ಪ್ರದೇಶ ಕುಸಿದು ಕೆಲವು ಸೆಕೆಂಡುಗಳಲ್ಲಿ ಭಯಾನಕ ಸ್ಫೋಟದೊಂದಿಗೆ ಅಪ್ಪಳಿಸುವ ದೃಶ್ಯವನ್ನು ಕ್ಯಾಮೆರಾ ಸೆರೆಹಿಡಿಯುತ್ತದೆ. ವೈರಲ್ ವೀಡಿಯೊ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.

Read More »

ಕಳಸಾ-ಬಂಡೂರಿಗೆ ಅಡ್ಡಿ : ರಾಜ್ಯಾದ್ಯಂತ ಗೋವಾ ವಿರುದ್ಧ ಭುಗಿಲೆದ್ದ ಆಕ್ರೋಶ!

ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ಧೋರಣೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಕೇಂದ್ರ ಸರ್ಕಾರ ಪ್ರತಿಬಾರಿಯೂ ಪ್ರತಿ ಚುನಾವಣೆಯಲ್ಲೂ ಕಳಸಾ ಬಂಡೂರಿ ಮತ್ತು ಮೇಕೆದಾಟು ಯೋಜನೆಗಳ ಬಗ್ಗೆ ಸಕಾರಾತಕವಾಗಿ ಮಾತನಾಡುತ್ತದೆ. ಮತದಾನ ಮುಗಿದ ಮೇಲೆ ವರಸೆ ಬದಲಾಯಿಸುತ್ತದೆ ಎಂದು ಆಕ್ಷೇಪಿಸಿದರು. ಶಾಸಕ ಕೋ.ನ.ರೆಡ್ಡಿ ಮಾತನಾಡಿ, ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಪರವಾಗಿ ತೀರ್ಪು ಬಂದಿದೆ. ಈಗಾಗಲೇ ಟೆಂಡರ್‌ ಕರೆದು ಯೋಜನೆಯ ಗುತ್ತಿಗೆ …

Read More »

ಗಂಭೀರವಾಗಿ ಗಾಯಗೊಂಡ ರಿಷಭ್ ಪಂತ್! ಕಾಲಿನಿಂದ ಹರಿಯಿತು ರಕ್ತ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದು ಅರ್ಧಕ್ಕೆ ಬ್ಯಾಟಿಂಗ್ ನಿಲ್ಲಿಸಿ ಕ್ರೀಸ್ ತೊರೆದಿದ್ದಾರೆ.ಚೆಂಡಿನ ವೇಗ ಎಷ್ಟಿತ್ತೆಂದರೆ ಪಂತ್ ಅವರ ಕಾಲಿಗೆ ಗಾಯವಾಗಿದ್ದು, ಅದರಿಂದ ರಕ್ತ ಸುರಿಯಲಾರಂಭಿಸಿದೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Read More »

ಹುಬ್ಬಳ್ಳಿ:ಅಸ್ಪೃಶ್ಯರು ಮೇಲೆ ಬರಬಾರದು ಅನ್ನೋ ಕೀಳು ಮನಸ್ಥಿತಿ ಕಾಂಗ್ರೆಸ್ ನಲ್ಲಿ ಇದೆ! ಸಂಸದ ಗೋವಿಂದ ಕಾರಜೋಳ ಹೇಳಿಕೆ.

ಇಂದು ಹುಬ್ಬಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ, ಒಳ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದೆ.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕೊಡುವುದಾಗಿ ಹೇಳಿತ್ತು.ಅಧಿಕಾರಕ್ಕೆ ಬಂದ್ರು ಮೀಸಲಾತಿ ನೀಡತ್ತಿಲ್ಲ.ಎರಡೂ ವರ್ಷಗಳಿಂದ ಮೀಸಲಾತಿ ಕೊಡುತ್ತಿಲ್ಲ.ಕೆಳ ವರ್ಗದ ಜನ ಮೇಲೆ ಬರಬಾರದೆಂದು ಸರ್ಕಾರ ರೀತಿ ಮಾಡುತ್ತಿದೆ.ಅಗಸ್ಟ್ 1 ರೊಳಗೆ ಸರ್ಕಾರ ತನ್ನ ನಿಲವು ಸ್ಪಷ್ಟಪಡಿಸಬೇಕು.ಮೀಸಲಾತಿ ಜಾರಿ ಮಾಡಬೇಕು.ಮಾಡದೇ ಹೋದ್ರೆ ಇದೇ ಅಗಸ್ಟ 1ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.ರಾಜ್ಯದಲ್ಲಿ ಅಗಸ್ಟ್ 16 …

Read More »

ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ `ಪುನೀತ ರಾಜ್ ಕುಮಾರ ಹೃದಯಜ್ಯೋತಿ ಯೋಜನೆ’ ವಿಸ್ತರಣೆ.

ರಾಜ್ಯದಲ್ಲಿ ಹೃದಯ ಖಾಯಿಲೆ ಪ್ರಕರಣಗಳಲ್ಲಿ ಹೆಚ್ಚಳವಿಲ್ಲ. ಆರೋಗ್ಯ ಇಲಾಖೆಯ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಪುನೀತ ರಾಜ್ಕುಮಾರ ಹೃದಯಜ್ಯೋತಿ ಯೋಜನೆಯನ್ನು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ ಗುಂಡೂರಾವ್ ಅವರು ಹೇಳಿದರು.ಜೂನ್ ಅಲ್ಲಿ ಬಿಡುಗಡೆಯಾದ ಗೃಹ ಆರೋಗ್ಯ ಎಂಬ ಯೋಜನೆಯು ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಚಾಲನೆ ನೀಡಲಾಗಿದೆ. ಇದು ನಮಗೆ ಮಹತ್ವಾಕಾಂಕ್ಷೆಯ ಯೋಚನೆಯಾಗಿತ್ತು. ಅದರ ಮಾಹಿತಿ ತಿಳಿದು …

Read More »