ಬೆಂಗಳೂರಿ. ಗೋಕಾಕ್ ನಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ ಫ್ಯಾಕ್ಟರಿ ಸಲುವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೋಟ್ಯಾಂತರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದು ಇದೀಗ ಸಾಲವನ್ನು ಮರುಪಾವತಿ ಮಾಡದೆ ಇದ್ದಿದ್ದರಿಂದ ಬೆಂಗಳೂರಿನ ವಿವಿ ಪುರಂ ಠಾಣೆಯಲ್ಲಿ ಸಾಹುಕಾರ್ ವಿರುದ್ಧ FIR ದಾಖಲಾಗಿದೆ.ಸೌಭಾಗ್ಯ ಲಕ್ಷ್ಮಿ ಮೈ ಶುಗರ್ ಕಂಪನಿ ಅಧ್ಯಕ್ಷರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಜಾರಕಿಹೊಳಿ ಈ ಒಂದು ಕಂಪನಿಯಲ್ಲಿ ವಸಂತ ಪಾವಡೆ ಹಾಗೂ ಶಂಕರ ಪಾವಡೆ ನಿರ್ದೇಶಕರಾಗಿ ಕೆಲಸ

ಮಾಡುತ್ತಿದ್ದಾರೆ.ಚಾಮರಾಜಪೇಟೆ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಷೆ ಬ್ಯಾಂಕ್ ನಲ್ಲಿ 2013ರಿಂದ 2017 ರ ವರೆಗೂ ಕೂಡ ಹಂತ ಹಂತವಾಗಿ ಜಾರಕಿಹೊಳಿ 239. 87 ಲಕ್ಷಗಳನ್ನು ಸಾಲವಾಗಿ ಹಂತವಾಗಿ ಪಡೆದಿರುತ್ತಾರೆ.ನಂತರ 2013ರ ವರೆಗೆ 430 ಕೋಟಿ 7 ಲಕ್ಷ ರೂಪಾಯಿ ಸಾಲ ಬಾಕಿ ಇರುತ್ತದೆ.ಈ ಸಾಲವನ್ನು ಮರುಪಾವತಿ ಮಾಡಲೇ ಇರುವಂತ ಹಿನ್ನೆಲೆಯಲ್ಲಿ ಈ ಒಂದು ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 406 420 ಅಡಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ಮ್ಯಾನೇಜರ್ FIR ದಾಖಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

