Breaking News

Breaking News

ಅರೆಬೈಲ್ ಜಲಪಾತದಲ್ಲಿ ಸಿಲುಕಿದ ಹುಬ್ಬಳಿಯ ಐವರ ರಕ್ಷಣೆ!!

ಅರಬಿಲ್ ಜಲಪಾತದಲ್ಲಿ ಆಕಸ್ಮಿಕವಾಗಿ ಸಿಲುಕಿದ ಪ್ರವಾಸಿಗರ ರಕ್ಷಣೆ ಮಾಡಲಾಗಿದೆ. ನೀರಿನ ಮದ್ಯ ಸಿಕ್ಕಿಹಾಕಿಕೊಂಡಿರುವವರು ಹುಬ್ಬಳ್ಳಿಯ ಎಸ್‌ಡಿಎಂ ನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದ. ರೆಬಲ್ ಜಲಪಾತವು ಮಳೆಗಾಲದಲ್ಲಿ ಮಾತ್ರ ಹರಿವುದರಿಂದ ಅಷ್ಟೊಂದು ಪ್ರಸಿದ್ಧಅಲ್ಲ. ಆದರೆ ಅಧಿಕ ಮಳೆಯ ಕಾರಣದಿಂದ ಪ್ರವಾಹ ಉಂಟಾಗಿದ್ದು ಪ್ರವಾಸಿಗರು ಸಿಲಿಕಿಕೊಂಡು ಕಷ್ಟಪಡುವ ಪರಿಸ್ಥಿತಿ ಬಂದಿದೆ. ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ಗ್ರಾಮದವರು ರಕ್ಷಿಸಿದ್ದಾರೆ.

Read More »

ಉಚಿತವಾಗಿ 10 ಸಾವಿರ ಪುಸ್ತಕ ವಿತರಣೆ ಯೋಜನೆ.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು ‘ನೂರು ಶಾಲೆಗಳಿಗೆ ನೂರು ಪುಸ್ತಕ’ ಯೋಜನೆ ಹಮ್ಮಿಕೊಂಡಿದ್ದು, ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಈ ವರ್ಷ ಉಚಿತವಾಗಿ 10 ಸಾವಿರ ಪುಸ್ತಕಗಳನ್ನು ವಿತರಿಸಲು ಮುಂದಾಗಿದೆ.ಒಂದು ಶೀರ್ಷಿಕೆಯ ನೂರು ಪ್ರತಿಗಳನ್ನು ಆರ್. ದೊಡ್ಡೇಗೌಡ, ಕಾರ್ಯದರ್ಶಿ, ನಿಡಸಾಲೆ ಪಿ. ವಿಜಯ್, ಸಾಹಿತ್ಯ ಸುಗ್ಗಿ, ನಂ.40, 3ನೇ ಬ್ಲಾಕ್, 2ನೇ ಹಂತ, ನಾಗರಬಾವಿ, ಬೆಂಗಳೂರು -560072 ಈ ವಿಳಾಸಕ್ಕೆ ಕಳುಹಿಸಬೇಕು. ದೂರವಾಣಿ …

Read More »

ಕನ್ನಡ ಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದ ರಾಜ್ಯ ಸರ್ಕಾರ: ಕೇಂದ್ರಕ್ಕೆ ಪತ್ರ ಬರೆದ ಸಚಿವ ಶಿವರಾಜ್ ತಂಗಡಗಿ

ರಾಜ್ಯ ಸರ್ಕಾರ ಕನ್ನಡ ಧ್ವಜಕ್ಕೆ ಮತ್ತೆ ಹಕ್ಕು ಮಂಡಿಸಿದೆ. ಹಳದಿ-ಕೆಂಪು ಬಾವುಟಕ್ಕೆ ಅಧಿಕೃತ ಮಾನ್ಯತೆ ಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2017 ರಲ್ಲೇ ಬಾವುಟ ಅಧಿಕೃತ ಕೋರಿ ಕೇಂದ್ರಕ್ಕೆ ಅಂದಿನ ಸಿದ್ದರಾಮಯ್ಯ ಸರ್ಕಾರ ಮನವಿ ಸಲ್ಲಿಸಿತ್ತು.ಕನ್ನಡ ಬಾವುಟಕ್ಕೆ ಒಪ್ಪಿಗೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಶೋಭಾ ಕರಂದ್ಲಾಜೆ ಮಾತಾಡುತ್ತಾರೆ. ದಯಮಾಡಿ ಕೇಂದ್ರದಿಂದ ಕನ್ನಡ ಬಾವುಟಕ್ಕೆ …

Read More »

ಟಾಲಿವುಡ್’ ಖ್ಯಾತ ಹಾಸ್ಯನಟ ‘ಫಿಶ್ ವೆಂಕಟ್’ ನಿಧನ!

ಖ್ಯಾತ ಹಾಸ್ಯನಟ ಫಿಶ್ ವೆಂಕಟ್ ನಿಧನರಾಗಿದ್ದಾರೆ. ಜನಪ್ರಿಯ ನಟ ಫಿಶ್ ವೆಂಕಟ್, ಅವರ ನಿಜವಾದ ಹೆಸರು ವೆಂಕಟ್ ರಾಜ್, ಜುಲೈ 18, 2025 ರಂದು ನಿಧನರಾದರು. ಕೆಲವು ಸಮಯದಿಂದ ಮೂತ್ರಪಿಂಡ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ರಾತ್ರಿ ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಜನಪ್ರಿಯ ನಟ ಫಿಶ್ ವೆಂಕಟ್ ನಿಧನಕ್ಕೆ ಅನೇಕ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

Read More »

ಬೆಂಗಳೂರು: ನಿವೃತ್ತ ಪ್ರಾಧ್ಯಾಪಕ ಬಿ.ಮಹಾಬಲೇಶ್ವರ್ ನಿಧನ!

1942ರ ಜನವರಿ 25ರಂದು ಮಂಗಳೂರಿನಲ್ಲಿ ಜನಿಸಿದ ಮಹಾಬಲೇಶ್ವರ್ ಅವರು, ಮದ್ರಾಸ್‌ನ ರಾಮಕೃಷ್ಣ ಮಿಷನ್‌ ಶಾಲೆಯಲ್ಲಿ ಪ್ರೌಢಶಿಕ್ಷಣ, ಆಂಧ್ರದ ಅನಂತಪುರದಲ್ಲಿ ಕಾಲೇಜು ಶಿಕ್ಷಣ ಮತ್ತು ತಿರುಪತಿ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂಎಸ್‌ಸಿ ಪದವಿ ಪಡೆದರು. 1970ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು.ಹೊಸಕೆರೆಹಳ್ಳಿಯ ನಿವಾಸಿ, ಭೂವಿಜ್ಞಾನ ವಿಷಯದ ನಿವೃತ್ತ ಪ್ರಾಧ್ಯಾಪಕ ಬಿ.ಮಹಾಬಲೇಶ್ವರ್ (83) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನರಾದರು.ಮೃತರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ. ಸಂಜೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು …

Read More »

ಭೂಮಿ ಉಳಿಸಲು ದೇವನಹಳ್ಳಿ ರೀತಿ ಹೋರಾಟ: ಮಾಜಿ ಶಾಸಕ ರಮೇಶ್‌ ಕುಮಾರ್‌ ಎಚ್ಚರಿಕೆ

ಯದರೂರು ಗ್ರಾಮದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ವಿಚಾರವಾಗಿ ಶುಕ್ರವಾರ ಭೂಸ್ವಾಧೀನ ಅಧಿಕಾರಿಗಳು ಹಾಗೂ ರೈತರೊಂದಿಗಿನ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.ಈ ಹಿಂದೆ ನಡೆದ ಸಭೆಯಲ್ಲಿ ಭೂಮಿ ಕೊಡುವುದಿಲ್ಲ ಎಂಬುದಾಗಿ ರೈತರು ಬರೆದುಕೊಟ್ಟಿದ್ದಾರೆ. ಈಗಲೂ ಅದೇ ರೀತಿ ಬರೆದುಕೊಟ್ಟಿದ್ದಾರೆ’ ಎಂದರು. ‘ಕೈಗಾರಿಕಾ ವಲಯ ಸ್ಥಾಪಿಸಲು 1,044 ಎಕರೆ ಸರ್ವೇ ಭೂಮಿಯನ್ನು ವಶಕ್ಕೆ ಪಡೆಯಲು ತೀರ್ಮಾನಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. ಭೂಸ್ವಾಧೀನ ಮಾಡಿಕೊಳ್ಳಲು ನೋಟಿಸ್ ಕೂಡ ನೀಡಿದೆ. ನೋಟಿಸ್ ಬಂದಿರುವ ರೈತರನ್ನು ನಾನೂ …

Read More »

ಕೌಟುಂಬಿಕ ಸಮಸ್ಯೆಯಲ್ಲಿ ಕಾಣದ ಕೈಗಳ ರಾಜಕೀಯ: ಮಾಜಿ ಸಚಿವ ಪ್ರಭು ಚವ್ಹಾಣ್ ಸ್ಪಷ್ಟನೆ

ಬೀದರ್: ಯುವತಿಯೊಬ್ಬರು ನನ್ನ ಪುತ್ರನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವುದು ವಿರೋಧಿಗಳ ರಾಜಕೀಯ ಷಡ್ಯಂತ್ರವಾಗಿದೆ ಎಂದು ಮಾಜಿ ಸಚಿವ ಹಾಗೂ ಔರಾದ(ಬಿ) ಶಾಸಕ ಪ್ರಭು ಬಿ.ಚವ್ಹಾಣ ಸ್ಪಷ್ಟನೆ ನೀಡಿದ್ದಾರೆ. ಅದೆಷ್ಟೋ ಹೆಣ್ಣು ಮಕ್ಕಳ ಮದುವೆಯನ್ನು ಮುಂದೆ ನಿಂತು ಮಾಡುವ ನಾನು ಯಾರೊಬ್ಬರ ಕೇಡು ಬಯಸುವುದಿಲ್ಲ. ಈ ಯುವತಿ ಕೂಡ ನನಗೆ ಮಗಳಿದ್ದಂತೆ. ನನ್ನ ಬಗ್ಗೆ ಕ್ಷೇತ್ರ ಮತ್ತು ಜಿಲ್ಲೆಯ ಜನತೆಗೆ ಸರಿಯಾಗಿ ಗೊತ್ತಿದೆ ಎಂದು ಹೇಳಿದ್ದಾರೆ. ಮಹಿಳಾ ಆಯೋಗದಿಂದ …

Read More »

ದುಬಾರಿ ಕುದುರೆ ‘ರೋಲೆಕ್ಸ್’ ನೋಡಲು ಮುಗಿಬಿದ್ದ ಜನ!

ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮದ ಬಳಿ ಒಂದು ವಿಚಿತ್ರವಾದ ದೃಶ್ಯ ಕಂಡುಬಂದಿದೆ. ಬರೋಬ್ಬರಿ 1 ಕೋಟಿ 17 ಲಕ್ಷ ಮೌಲ್ಯದ ‘ರೋಲೆಕ್ಸ್’ ತಳಿಯ ಕುದುರೆ ಗ್ರಾಮೀಣ ಪ್ರದೇಶದ ಜನರ ವೀಕ್ಷಣೆಗೆ ಪ್ರದರ್ಶನಕ್ಕೆ ಬಂದಿದ್ದು, ಈ ದುಬಾರಿ ಕುದುರೆಯನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಮುಗಿಬಿದ್ದು ಹರಿದು ಬಂದ ದೃಶ್ಯ ಇಂದು ವೈರಲ್ ಆಗಿದೆ.ಈ ಬಗ್ಗೆ ಮಾತನಾಡಿರುವ ಕುದುರೆ ಮಾಲೀಕ ಶಫೀರ್ ಅಹ್ಮದ್, ಚಿಕ್ಕಂದಿನಿಂದಲೂ ಕುದುರೆ ಸವಾರಿ ಮಾಡುವ ಆಸೆ …

Read More »

ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌; ಬೆಂಗಳೂರು IISC ವಿಶಿಷ್ಠ ಸಾಧನೆ

ಬೆಂಗಳೂರಲ್ಲಿ ಇರುವ ಭಾರತೀಯ ವಿಜ್ಞಾನ ಸಂಸ್ಥೆ(IISC) ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಯ ಯಶಸ್ವಿ ಸಂಶೋಧನೆ ನಡೆಸಿದ್ದು, ಕೇಂದ್ರ ಸರ್ಕಾರ ಇದಕ್ಕೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.IISCಯಿಂದ ಆತ್ಮನಿರ್ಭರ ಆವಿಷ್ಕಾರ: ಸಾಮಾನ್ಯವಾಗಿ ಕೃಷಿ ತ್ಯಾಜ್ಯಗಳನ್ನು ಸುಟ್ಟು ಹಾಕಲಾಗುತ್ತಿದೆ. ಇದನ್ನು ಹಾಗೇ ಬಿಟ್ಟರೂ ಇದು ವಾತಾವರಣಕ್ಕೆ ಮೀಥೇನ್ ಅನ್ನು ಹೊರಸೂಸುತ್ತವೆ. ಆದರೆ ನಮ್ಮ ಭಾರತೀಯ ವಿಜ್ಞಾನ ಸಂಸ್ಥೆ ʼಕೃಷಿ ತ್ಯಾಜ್ಯ …

Read More »

ಪ್ರಜ್ವಲ್‌ ರೇವಣ್ಣ ಕೇಸ್‌ ಮೊದಲ ತೀರ್ಪು ಜು.30ರಂದು ಪ್ರಕಟ: ಮಾಜಿ ಸಂಸದನ ವಿರುದ್ಧ ಒಟ್ಟು 4 ಪ್ರಕರಣ!!

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಪ್ರಕರಣಗಳ ಪೈಕಿ ಒಂದಾದ ಕೆ.ಆರ್‌.ನಗರದ ಮಹಿಳೆ ಮೇಲೆ ಅತ್ಯಾ*ಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಕುರಿತ ಅಂತಿಮ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜು.30ರಂದು ಪ್ರಕಟಿಸಲಿದೆ.ಸಿಐಡಿಯ ಎಸ್‌ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌ ಅವರು ತಮ್ಮ ವಾದ ಮತ್ತು ಅದನ್ನು ಬೆಂಬಲಿಸುವ ಕೆಲ ತೀರ್ಪಿಗೆ ಸಂಬಂಧಿಸಿದ ಲಿಖಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದೇ ವೇಳೆ ಪ್ರಜ್ವಲ್‌ …

Read More »