Breaking News

Breaking News

ಹೊಳೆನರಸೀಪುರ: ತಂದೆ, ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ ಪಾಪಿ!

ತಂದೆ ದೇವೇಗೌಡ ಹಾಗೂ ಅಣ್ಣ ಮಂಜುನಾಥ್ ಎಂಬವರನ್ನು ಮೋಹನ್ ಎಂಬಾತ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ ಪರಾರಿಯಾಗಿದ್ದಾನೆ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.ಹಾಸನದಲ್ಲಿ ಆಸ್ತಿ ವಿಚಾರಕ್ಕಾಗಿ ಭೀಕರ ಡಬರ್ ಮರ್ಡರ್ ನಡೆದಿದೆ.

Read More »

ಟೆನಿಸ್ ಆಟಗಾರ್ತಿಯಾಗಿದ್ದ ಪುತ್ರಿಯನ್ನೇ ಕೊಂದ ಪಾಪಿ ತಂದೆ!

ದೀಪಕ್ ಯಾದವ್ 25 ವರ್ಷದ ಮಗಳು ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ಅವರ ತಂದೆಯೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.ಆದರೆ, ಆಕೆಯ ತಂದೆ ತನ್ನ ಮಗಳ ಗಳಿಕೆಯಿಂದ ಬದುಕುತ್ತಿದ್ದಕ್ಕಾಗಿ ಜನರು ಅವರನ್ನು ಕೆಣಕುತ್ತಿದ್ದರಿಂದ ಟೆನಿಸ್ ಅಕಾಡೆಮಿಯನ್ನು ಮುಚ್ಚುವಂತೆ ಒತ್ತಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ವರದಿಯಲ್ಲಿ (ಎಫ್‌ಐಆರ್) ದೀಪಕ್ ಯಾದವ್ ತನ್ನ ಮಗಳು ತನ್ನ ಉದ್ಯಮವನ್ನು ಮುಚ್ಚಲು ನಿರಾಕರಿಸಿದಾಗ ಕೋಪಗೊಳ್ಳುತ್ತಿದ್ದರು ಎಂದು …

Read More »

ರೈಲ್ವೇ ಹಳಿಗಳ ಮೇಲೆ ಮರಿಗೆ ಜನ್ಮ ನೀಡಿದ ಕಾಡಾನೆ : 2 ಗಂಟೆ ರೈಲು ಸಂಚಾರ ನಿಲ್ಲಿಸಿ ಮಾನವೀಯತೆ ಮೆರೆದ ಸಿಬ್ಬಂದಿ.

ಹಳಿಗಳ ಮೇಲೆ ಆನೆಯೊಂದು ಮರಿಗೆ ಜನ್ಮ ನೀಡಿದ್ದು, 2 ಗಂಟೆ ರೈಲು ಸಂಚಾರ ಸ್ಥಗಿತಗೊಂಡ ಘಟನೆ ಜಾರ್ಖಂಡ್ ನಲ್ಲಿದೆ. ಕಾಡು ಆನೆಯೊಂದು ರೈಲ್ವೆ ಹಳಿಗಳ ಮೇಲೆ ತನ್ನ ಮರಿಗೆ ಜನ್ಮ ನೀಡಿದ್ದು, ರೈಲು ಸಂಚಾರ ಕೆಲಹೊತ್ತು ಸ್ಥಗಿತವಾಗಿತ್ತು. ಆನೆ ಮತ್ತು ಅದರ ನವಜಾತ ಮರಿ ಹೆರಿಗೆಯ ನಂತರ ಸುರಕ್ಷಿತವಾಗಿ ನಡೆದುಕೊಂಡು ಹೋಗಿದೆ.ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಮಾನವ-ಪ್ರಾಣಿಗಳ ಸಾಮರಸ್ಯದ ಅಸ್ತಿತ್ವದ ಈ ಉದಾಹರಣೆಯನ್ನು …

Read More »

ರೇಣುಕಾಸ್ವಾಮಿ ಕೊಲೆ ಕೇಸ್ : ಕೋರ್ಟ್ ಗೆ ಹಾಜರಾದ ನಟ ದರ್ಶನ್!

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಇಂದು ನ್ಯಾಯಾಲಯದೆದುರು ಹಾಜರಾಗಿದ್ದಾರೆ.ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕುರಿತು ವಿಚಾರಣೆ ನಡೆಯಿತು. ವಿಚಾರಣೆಗೆ ನಟ ದರ್ಶನ್ ಹಾಜರಾಗಿದ್ದಾರೆ.

Read More »

ಸೇತುವೆ ಕುಸಿತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ!!

ವಡೋದರಾ ಜಿಲ್ಲೆಯ ಪದ್ರಾ ತಾಲೂಕಿನ ಮುಜ್ ಪುರದಲ್ಲಿರುವ ಈ ಸೇತುವೆ ಮುಜ್ ಪುರ್ ನ್ನು ಆನಂದ್ ಜಿಲ್ಲೆಯ ಗಂಭೀರಾಗೆ ಹಾಗೂ ಮಧ್ಯ ಗುಜರಾತ್ ನಿಂದ ಸೌರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. 43 ವರ್ಷಗಳಷ್ಟು ಹಳೆಯ ಸೇತುವೆ ಇದಾಗಿದ್ದು, ಇಂದು ಸೇತುವೆಯ ಮಧ್ಯ ಭಾಗ ಏಕಾಏಕು ಮುರಿದು ಬಿದ್ದಿದೆ.ಘಟನೆಗೆ ಸಂಬಂಧಿಸಿದಂತೆ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ ಎಂದು ವಡೋದರಾ ಎಸ್ ಪಿ ತಿಳಿಸಿದ್ದಾರೆ.ಒಂದೇ …

Read More »

ಮದುವೆ ಆಗದೇ ಗರ್ಭಿಣಿಯಾದ ಭಾವನಾ: ಐವಿಎಫ್‌ಗೆ ವೀರ್ಯ ದಾನ ಮಾಡಿದ ವ್ಯಕ್ತಿ ಯಾರು?

ಐವಿಎಫ್‌ ತಂತ್ರಜ್ಞಾನದ ಮೂಲಕ ಮಕ್ಕಳ ಪಡೆಯಲು ಮುಂದಾಗಿರುವ ನಟಿ ಭಾವನಾ ಅವರು, ಐವಿಎಫ್‌ ಪ್ರಕ್ರಿಯೆ ವೇಳೆ ದಾನಿಯ ಆಯ್ಕೆ ಹೇಗೆ ನಡೆಯುತ್ತದೆ? ದಾನಿಯನ್ನ ಭಾವನಾ ಖುದ್ದಾಗಿ ಆಯ್ಕೆ ಮಾಡಿಕೊಂಡ್ರಾ? ದಾನಿಗಳಿಗೆ ಇರುವ ನಿಯಮಗಳೇನು? ಈ ಬಗ್ಗೆ ಭಾವನಾ ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮದುವೆಯಾಗದೆ, ಸಂಗಾತಿ ಇಲ್ಲದೆ, ಐವಿಎಫ್‌ ಮುಖಾಂತರ ಭಾವನಾ ರಾಮಣ್ಣ ಗರ್ಭ ಧರಿಸಿದ್ದಾರೆ. ಈಗಾಗಲೇ ನಟಿ ಭಾವನಾ ಅವರಿಗೆ ಆರು ತಿಂಗಳು ತುಂಬು ಗರ್ಭಿಣಿಯಾಗಿದ್ದಾರೆ. ವೈದ್ಯರುಹೇಳಿದ ಡೋನರ್ ಅನ್ನು …

Read More »

ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್‌ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!

ತಮಗೆ ನೀಡಿದ ದಾಲ್‌ ಕೆಟ್ಟಿದೆ ಎಂದ ಕೂಗಿದ ಸಂಜಯ್‌ ಗಾಯಕ್ವಾಡ್‌, ‘ಇದನ್ನು ನನಗೆ ಯಾರು ಕೊಟ್ಟರು? ಇದರ ವಾಸನೆಯ ನೋಡಿ. ಇದನ್ನು ಪ್ಯಾಕ್ ಮಾಡಿ ಆಹಾರ ಇಲಾಖೆಗೆ ಕರೆ ಮಾಡಿದ್ದಾರೆ. ನೀವು ಇಂತಹ ಆಹಾರವನ್ನು ಶಾಸಕರಿಗೆ ನೀಡುತ್ತೀರಿ ಎಂದಾದರೆ ಜನಸಾಮಾನ್ಯರ ಗತಿ ಏನು?’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಪ್ರಶ್ನೆಗೆ ಉತ್ತರ ನೀಡದ ಕ್ಯಾಂಟೀನ್‌ ಸಿಬ್ಬಂದಿಯ ಮುಖಕ್ಕೆ, ಶಿವಸೇನೆ (ಶಿಂಧೆ ಬಣ) ಶಾಸಕ ತಮ್ಮ ಕೈಯಿಂದ ಗುದ್ದಿದರು. ಇನ್ನು …

Read More »

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌ ಹೇಳಿಕೆ.

ಸರ್ಕಾರಿ ಕ್ಯಾಂಟೀನ್‌ನಲ್ಲಿ ಹಳಸಿದ ಆಹಾರ ನೀಡಿದ್ದಕ್ಕೆ ಆಡಳಿತಾರೂಢ ಶಿವಸೇನೆ (ಏಕನಾಥ ಶಿಂಧೆ)ಯ ಶಾಸಕ ಸಂಜಯ್‌ ಗಾಯಕ್ವಾಡ್‌ ಕ್ಯಾಂಟೀನ್‌ ಸಿಬ್ಬಂದಿಗೆ ಥಳಿಸಿದ ಘಟನೆಗೆ ಸಂಬಂಧಿಸಿ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಈ ವಿಚಾರವಾಗಿ ವಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು.ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ, ಇಂತಹ ನಡವಳಿಕೆಗಳು ಸ್ವೀಕಾರರ್ಹವಲ್ಲ, ಥಳಿತವು ಜನರಿಗೆ ತಪ್ಪು ಸಂದೇಶವನ್ನು ರವಾನಿಸುತ್ತವೆ. ಆದ್ದರಿಂದ, ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಸ್ಪೀಕರ್‌ ನಿರ್ಧರಿಸಬೇಕು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ವಿಧಾನ …

Read More »

ಯುವತಿಯರ ಫೋಟೋ, ವಿಡಿಯೋ ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಆರೋಪಿ ಅರೆಸ್ಟ್!

ಅಸಭ್ಯವಾಗಿ ಕಾಣುವಂತೆ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ನಡೆಸಿ,ಆರೋಪಿಯು ಪೋಸ್ಟ್ ಮಾಡುತ್ತಿದ್ದ. ಬೆಂಗಳೂರಿನ ಕೆಆರ್ ಪುರಂ ನಿವಾಸಿಯಾಗಿರುವ ಗುರುದೀಪ್ ಸಿಂಗನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.ಇತ್ತೀಚಿಗೆ ಯುವತಿಯರ ಫೋಟೋ ಮತ್ತು ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಯುವತಿಯೋರ್ವಳು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಳು. ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Read More »

ಮದ್ದೂರು : ವೃದ್ಧನಿಂದ ಶಾಲಾ ವಿದ್ಯಾರ್ಥಿನಿ ಮೇಲೆ ಬಲತ್ಕಾರ!!

ಕಂದಾಯ ಇಲಾಖೆ ಗ್ರಾಮಲೆಕ್ಕಿಗನ ಸಹಾಯಕನಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡಿರುವ 65 ವರ್ಷದ ರಾಮಯ್ಯ ತೈಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಆಕೆಯ ಪೋಷಕರು ಕೂಲಿ ಕೆಲಸಕ್ಕೆ ಹೋದಾಗ ಪಕ್ಕದ ಮನೆ ನಿವಾಸಿ ರಾಮಯ್ಯ ಆಕೆಯೊಂದಿಗೆ ಆಟವಾಡುವ ನೆಪದಲ್ಲಿ ತನ್ನ ಮನೆಗೆ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಬಾಲಕಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು ವಿಚಾರಣೆ …

Read More »