BigTv News
July 10, 2025
Breaking News
ಕೊಪ್ಪ ಪಟ್ಟಣದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣವನ್ನು ನಿವೃತ್ತ ನ್ಯಾಯಾಧೀಶೆ ಶೋಭಾ ನೇತೃತ್ವದಲ್ಲಿ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ. ಶಮಿತಾ 2025ರ ಜೂನ್ 29ರಂದು ಶಾಲೆಯ ಶೌಚಾಲಯದಲ್ಲಿ ವೇಲ್ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 2023 ಜುಲೈ 27ರಂದು ವಿದ್ಯಾರ್ಥಿನಿ ಅಮುಲ್ಯ ವಸತಿ ಶಾಲೆಯ ಬಾತ್ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇಬ್ಬರೂ ವಿದ್ಯಾರ್ಥಿನಿಯರು ಒಂದೇ ಸ್ಥಳದಲ್ಲಿ, ಒಂದೇ ಕಬ್ಬಿಣಕ್ಕೆ, …
Read More »
BigTv News
July 10, 2025
Breaking News
ಸುರಂಗದ ಏಕೈಕ ಪ್ರವೇಶದಿಂದ ದಕ್ಷಿಣಕ್ಕೆ ಆರು ಮೈಲಿ (10 ಕಿ.ಮೀ) ದೂರದಲ್ಲಿರುವ ಕುಸಿದ ಸ್ಥಳಕ್ಕೆ ನಗರದ ಅಗ್ನಿಶಾಮಕ ಇಲಾಖೆ 100 ಕ್ಕೂ ಹೆಚ್ಚು ಪ್ರತಿಸ್ಪಂದಕರು ಸೇರಿದಂತೆ ಭಾರಿ ಪ್ರಮಾಣದ ಸಂಪನ್ಮೂಲಗಳನ್ನು ಕಳುಹಿಸಿದೆ. “ವಿಲ್ಮಿಂಗ್ಟನ್ನಲ್ಲಿ ಸುರಂಗ ಕುಸಿತಕ್ಕೆ ಲಾಸ್ ಏಂಜಲೀಸ್ ನಗರವು ಸಂಪನ್ಮೂಲಗಳನ್ನು ಸಜ್ಜುಗೊಳಿಸಿದೆ” ಎಂದು ಮೇಯರ್ ಕರೆನ್ ಬಾಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.ಲಾಸ್ ಏಂಜಲೀಸ್ ಅಗ್ನಿಶಾಮಕ ಇಲಾಖೆಯ ಪ್ರಕಾರ, ಯಾವುದೇ ಸಾವುಗಳು ದೃಢಪಟ್ಟಿಲ್ಲ.
Read More »
BigTv News
July 10, 2025
Breaking News
ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್ ಟೀಕಿಸಿದ್ದಾರೆ. ಕೊಡಗಿನಲ್ಲಿ ನಾವು ಎರಡು ಶಾಸಕರನ್ನು ಕಳೆದು ಕೊಂಡಿದ್ದೇವೆ. ಆದರೆ ಆಡಳಿತ ಪಕ್ಷದಿಂದ ಗೆದ್ದಿರುವ ಶಾಸಕರಿಗೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲವೆಂದರು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೊಡಗಿನ ರಸ್ತೆಗಳು ಹೇಗಿದ್ದವು, ಈಗ ಹೇಗಿದೆ, ರಸ್ತೆಗಳ ಅಭಿವೃದ್ಧಿ ಮಾಡಬೇಕಾಗಿದ್ದು ರಾಜ್ಯ ಸರ್ಕಾರದ ಹೊಣೆ …
Read More »
BigTv News
July 10, 2025
Breaking News
ಜನರಿಗೆ ಔಷಧಿ ನೀಡದೆ ಅವಧಿ ಮುಗಿದ ಬಳಿಕ ರಸ್ತೆಗೆ ಎಸೆದು ವೈದ್ಯರ ಕಳ್ಳಾಟವಾಡಿರುವ ಶಂಕೆ ಎದುರಾಗಿದ್ದು, ಹೆಸ್.ಡಿ ಕೋಟೆ ತಾಲೂಕಿನ ಅಣ್ಣೂರು ಗ್ರಾಮದ ಹೊರ ವಲಯದಲ್ಲಿ ಔಷಧಿಗಳನ್ನು ಎಸೆದಿರುವ ದೃಶ್ಯಗಳು ಕಂಡು ಬಂದಿದೆ.ಅವಧಿ ಮೀರಿದ ಔಷಧಿಗಳನ್ನು ರಸ್ತೆಗೆ ಎಸೆದಿದ್ದಾರೆ. ಹೊಟ್ಟೆ ನೋವು, ಎದೆ ನೋವು, ಪೋಷಕಾಂಶ ಸೇರಿದಂತೆ ಗರ್ಭಿಣಿಯರಿಗೆ ನೀಡಬೇಕಾಗಿರುವ ಮಾತ್ರೆಗಳು, ಇಂಜೆಕ್ಷನ್ ಟ್ಯೂಬ್ ಸಿರಿಂಜ್ ಗಳು ಕಸದ ತೊಟ್ಟಿ ಸೇರಿವೆ. ಅಣ್ಣೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಔಷಧಿ …
Read More »
BigTv News
July 10, 2025
Breaking News
ಮಡಿಕೇರಿಯಲ್ಲಿ ಶವ ಸಾಗಟಕ್ಕೂ ಜನ ಪರದಾಟ ನಡೆಸುತ್ತಿದ್ದಾರೆ. ಸರಿಯಾದ ರಸ್ತೆ ಇಲ್ಲದೆ ಶವ ಸಾಗಾಟಕ್ಕೆ ಜನರು ಪರದಾಟ ನಡೆಸುತ್ತಿದ್ದು, ಜನರು ಶವ ಹೊತ್ತು ಸಾಗಿಸಿದ ಘಟನೆ ನಡೆದಿದೆ. ಮಡಿಕೇರಿ ನಗರದ ಕನ್ನಡ ಬಾಣೆಯಲ್ಲಿ ಈ ಒಂದು ಘಟನೆ ನಡೆದಿದೆ.ಕನ್ನಂಡ ಬಾಣೆ ನಿವಾಸಿಗಳಿಗೆ ನರಕದ ಬದುಕು ಎದುರಾಗಿದ್ದು, ಗರ್ಭಿಣಿಯರನ್ನು ಕೂಡ ಕುರ್ಚಿಯಲ್ಲಿ ಕೂರಿಸಿ ಸಾಗಾಟ ನಡೆಸಲಾಗಿದೆ. ಬಾಣೆಗೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ಅಡ್ಡಿಪಡಿಸಲಾಗಿದ್ದು, ಬಡಾವಣೆಯ ಅಂಚಿನಲ್ಲಿ ಮೀಸಲು ಅರಣ್ಯ ಪ್ರದೇಶ …
Read More »
BigTv News
July 10, 2025
Breaking News
ಮನೆಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮೊದಲಿಗೆ ವಿಚಾರಣ ನ್ಯಾಯಾಲಯದಲ್ಲಿ ಜಾಮೀನು ಕೋರಬೇಕು. ಪ್ರಜ್ವಲ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿಚಾರಣ ನ್ಯಾಯಾಲಯವು 10 ದಿನಗಳಲ್ಲಿ ನಿರ್ಧರಿಸಬೇಕು ಎಂದು ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.ಪ್ರಜ್ವಲ್ ರೇವಣ್ಣ ಪರ ಪ್ರಭುಲಿಂಗ ನಾವದಗಿ ವಾದ ಮಂಡಿಸಿ, ವಿಚಾರಣ ನ್ಯಾಯಾಲಯದಲ್ಲಿ ಜಾಮೀನು ಕೋರದೆಯೇ ಹೈಕೋರ್ಟ್‌ಗೆ ಬರಬಹುದಾಗಿದೆ ಎಂದು ವಾದಿಸಿದರು. ಇದನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.
Read More »
BigTv News
July 10, 2025
Breaking News
ಜಮೀನಿನ ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿ ಹಿರಿಯರು ನ್ಯಾಯಪಂಚಾಯಿತಿ ಮಾಡಿ ಬಗೆಹರಿಸಿದ್ದರು.ಆದರೆ ಯುವಕನ ವಿರುದ್ಧ ಕೆಲವರು ಜಾತಿ ನಿಂದನೆ ಮಾಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದರು. ಜೈಲಿಗೆ ಹೋದರೆ ಮರ್ಯಾದೆ ಹೋಗುತ್ತೆ ಎಂದು ಭಯಗೊಂಡು ಯುವಕ ಮೆಹಬೂಬ್ (22) ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗ ಆತ್ಮಹತ್ಯೆ ಮಾಡಿಕೊಂಡ ವಿಷಯ ಕೇಳಿ ಆಘಾತಗೊಂಡ ಆತನ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಒಂದೇ ಮನೆಯಲ್ಲಿ ಒಂದೇ ದಿನ ಎರಡು ಸಾವಾಗಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.
Read More »
Shaikh BigTv
July 9, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಮಂಟೂರ್ ರಸ್ತೆಯ ಅರಳಿಕಟ್ಟೆ ಎಂಬುಲ್ಲಿ ಘಟನೆ ನಡೆದಿದೆ.ಶವ ಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ಎರಡು ಗುಂಪುಗಳ ನಡುವೆ ಜಗಳ ಆಗಿದೆ. ನಿಂದನೆ ಮಾಡಿ, ಗುರಾಯಿಸಿದ್ರು ಅಂತ ಆರಂಭವಾಗಿ ಹೊಡೆದಾಡಿ ಕೊಂಡಿದ್ದಾರೆ ನಾಲ್ಕು ಜನರಿಗೆ ಗಾಯ ಆಗಿದೆ ಗಾಯಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡು ಗುಂಪುಗಳು ಮೊದಲು ಜೊತೆಗಿದ್ದವರು ನಂತರ ಪರಸ್ಪರ ದ್ವೇಷ ಬೆಳೆದಿತ್ತು ಎರಡು ಕಡೆ ದೂರು – ಪ್ರತಿ ದೂರು ದಾಖಲಾಗಿದೆ.ಎರಡು ಕಡೆಯಿಂದ ನಾಲ್ಕೈರಿಂದ ಐದು ಜನರನ್ನ ವಶಕ್ಕೆ …
Read More »
BigTv News
July 9, 2025
Breaking News
ದಂಪತಿಗಳು ಕೋಲಾರದ ಶ್ರೀನಿವಾಸಪುರ ಮೂಲದವರು ಎಂದು ತಿಳಿದು ಬಂದಿದೆ. ಶಾಪಿಂಗ್ ಗೆ ಹೋಗಿ ಬಂದ ಹೆಂಡತಿ ಜೊತೆ ಪತಿ ಹರೀಶ್ ಕಿರಿಕ್ ತೆಗೆದಿದ್ದಾನೆ. ಗಲಾಟೆ ತಾರಕಕ್ಕೇರಿ ಹೆಂಡತಿ ಮೇಲೆ ಗಂಡ ಹಲ್ಲೆ ನಡೆಸಿದ್ದಾನೆ. ಹೆಂಡತಿ ಕೆಳಗೆ ಬೀಳುತ್ತಿದ್ದಂತೆ ಕಾಲಿನಿಂದ ಪತ್ನಿಯ ಕುತ್ತಿಗೆ ತುಳಿದು ಕೊಲೆ ಮಾಡಿದ್ದಾನೆ. ಪತಿ ಹರೀಶ್ ಕೆಲವು ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿದ್ದನು ಎನ್ನಲಾಗಿದೆ. ಪತ್ನಿ ಜೊತೆ ಹರೀಶ್ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನು .
Read More »
BigTv News
July 9, 2025
Breaking News
ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿಯ ಭೀಕರ ಕೊಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ,14 ವರ್ಷದ ಅರುಣ ಎಂಬ ಬಾಲಕಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.ಮೃತ ಬಾಲಕಿ ಅರುಣ ಅವರ ತಂದೆ ಮತ್ತು ತಾಯಿ ಕೆಲಸಕ್ಕೆ ತೆರಳಿದ್ದರು.ಈ ವೇಳೆ ಶಾಲೆಗೆ ತೆರಳಬೇಕಿದ್ದ ಬಾಲಕಿ ಕಾರಣಾಂತರಗಳಿಂದ ಶಾಲೆಗೆ ಹೋಗದೇ ಮನೆಯಲ್ಲಿ ಏಕಾಂಗಿಯಾಗಿ ಉಳಿದಿದ್ದಳು ಎನ್ನಲಾಗಿದೆ.ಈ ವೇಳೆ ಮನೆಯಲ್ಲಿಯೇ ಬಾಲಕಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯ ಮಾಹಿತಿ ತಿಳಿದ ಕೂಡಲೇ …
Read More »