Breaking News

Breaking News

ಬೆಂಗಳೂರು : ಮನೆಯಲ್ಲಿ ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಮಹಿಳೆ!

ಫ್ಲ್ಯಾಟ್‌ನಲ್ಲಿ ಸಾಕು ನಾಯಿ ಮೃತದೇಹದ ಜತೆ ಖಾಸಗಿ ಕಂಪನಿ ಮಹಿಳಾ ಉದ್ಯೋಗಿಯೊಬ್ಬಳು ಮೂರು ದಿನಗಳ ಕಾಲ ಕಳೆದಿರುವ ದಾರುಣ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ತಪಾಸಣೆ ನಡೆಸಿದಾಗ ನಾಯಿ ಮೃತದೇಹ ಸಿಕ್ಕಿದೆ.ಹಸಿವಿನಿಂದ ನಾಯಿ ಸತ್ತಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಅಪಾರ್ಟ್‌ಮೆಂಟ್‌ಗೆ ತೆರಳಿ ಸ್ಥಳೀಯರ ಜತೆ ಪೊಲೀಸರು ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Read More »

ಅಕ್ರಮ ಸಂಬಂಧಕ್ಕೆ ಅಡ್ಡಿ, ಪತಿ ಕಥೆ ಮುಗಿಸಿದ ಪತ್ನಿ!

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿದ್ದಾಳೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಾಡುಶೆಟ್ಟಿ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ಶಂಕರಮೂರ್ತಿ ಎಂಬುವವರನ್ನು ಅವರ ಪತ್ನಿ ಸುಮಂಗಳಾ ಮತ್ತು ಆಕೆಯ ಪ್ರಿಯಕರ ನಾಗರಾಜು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.ಸುಮಂಗಳಾ ಮತ್ತು ನಾಗರಾಜು ಒಟ್ಟಾಗಿ ಶಂಕರಮೂರ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ, ದೊಣ್ಣೆಯಿಂದ ಹೊಡೆದು, ಕೊನೆಗೆ ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಂದಿದ್ದಾರೆ. ಆರೋಪಿಗಳನ್ನು …

Read More »

ಬೀಚ್ ಗೆ ಕರೆದೊಯ್ದು ಕಾರ್ ನಲ್ಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ!

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಸೋಮೇಶ್ವರ ಬೀಚ್ ಗೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜಾಲತಾಣದಲ್ಲಿ ಪರಿಚಯಿಸಿಕೊಂಡಿದ್ದ ಆರೋಪಿ 5 ದಿನದಲ್ಲೇ ಭೇಟಿಯಾಗಲು ಉಳ್ಳಾಲದ ಮನೆಗೆ ಕಾರ್ ನಲ್ಲಿ ಕರೆದೊಯ್ದಿದ್ದ.ನಂತರ ಆಕೆಯನ್ನು ಕುತ್ತಾರು ಸಮೀಪದ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಂ ಕೇಳಿದ್ದಾನೆ. ಆದರೆ, ಬಾಲಕಿಯಾಗಿದ್ದ ಕಾರಣ ಲಾಡ್ಜ್ ಸಿಬ್ಬಂದಿ ರೂಂಮ್ ನೀಡಿರಲಿಲ್ಲ. ನಂತರ ಸೋಮೇಶ್ವರ ಕಡಲ …

Read More »

ಮೇಲಾಧಿಕಾರಿಗಳ ಆದೇಶ ಗಾಳಿಗೆ ತೂರಿದ್ರಾ ಅಂಕಲಿ ಪೊಲೀಸರು..?!!!

ಹೆಲ್ಮಟ್ ದರಿಸಿಲ್ಲ ಎಂದು ಮನಬಂದಂತೆ ತಾಯಿ ಮಗನ ಮೇಲೆ ಅಂಕಲಿ ಪೊಲೀಸರ ‌ಹಲ್ಲೆ!!! ತಾಯಿ ಮುಂದೆ ಮಗನಿಗೆ ಮೃಗಗಳ ರೀತಿ ನಡೆದುಕೊಂಡ ಇವರಿಗೆ ಸಾರ್ವಜನಿಕರ ಆಕ್ರೋಶ…

Read More »

ವಾಮಾಚಾರಕ್ಕಾಗಿ ನಾಯಿಯನ್ನೇ ಸುಟ್ಟುಕೊಂದ ಮಾಟಗಾತಿ!

ಯುವತಿಯೋರ್ವಳು ವಾಮಾಚಾರಕ್ಕಾಗಿ ತನ್ನ ನಾಯಿಯನ್ನೇ ಬೆಂಕಿ ಹಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಮಹದೇವಪುರದ ಚಿನ್ನಪ್ಪ ಲೇಔಟ್‌ ನ ಅಪಾರ್ಟ್‌ ಮೆಂಟ್‌ ಒಂದರಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಈಕೆ ನಾಯಿಯನ್ನು ಬಲಿಕೊಟ್ಟಿದ್ದು, ಅಪಾರ್ಟ್‌ ಮೆಂಟ್‌ ತುಂಬಾ ದುರ್ನಾತ ಹಬ್ಬಿದಾಗ ಈಕೆಯ ಕೃತ್ಯ ಹೊರಬಿದ್ದಿದೆ.ಸ್ಥಳೀಯರ ದೂರನ್ನಾಧರಿಸಿ ಬಿಬಿಎಂಪಿ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದಾಗ ಈ ಕೃತ್ಯ ಹೊರಬಿದ್ದಿದೆ.ಮಹಿಳೆಯ ವಿರುದ್ಧ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸರ್ಕಾರಿ ನೌಕರಿಗೆ ನಕಲಿ ಅಂಕಪಟ್ಟಿ ಸಲ್ಲಿಕೆ ಪ್ರಕರಣ, ಇಬ್ಬರಿಗೆ ಜೈಲು!

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹಿಂಬಾಕಿ ಅಟೆಂಡರ್ ಹುದ್ದೆಗೆ ಖೊಟ್ಟಿ ಅಂಕಪಟ್ಟಿ ಸಲ್ಲಿಸಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ಹಾಗೂ ತಲಾ ನಾಲ್ಕು ಸಾವಿರ ರೂ. ದಂಡ ವಿಧಿಸಿ ವಿಜಯಪುರದ ಪ್ರಧಾನ ಸಿಜೆಎಂ ನ್ಯಾಯಾಲಯ ಆದೇಶಿಸಿದೆ.ಈ ಪ್ರಕರಣದ ವಿಚಾರಣೆ ನಡೆಸಿರುವ ಪ್ರಧಾನ ಸಿಜೆಎಂ ನ್ಯಾಯಾಲಯದ ನ್ಯಾ.ಮಲ್ಲಿಕಾರ್ಜುನ ಅಂಬಲಿ ಅವರು ಇಬ್ಬರು ಆರೋಪಿಗಳಿಗೆ ಐಪಿಸಿ ಕಲಂ 468, 471 ಮತ್ತು 420ರಡಿ ಈ ಶಿಕ್ಷೆ ಹಾಗೂ …

Read More »

ಮುಸ್ಲಿಂ ಯುವತಿಗೆ ಬೈಕ್‌ಅಲ್ಲಿ ಡ್ರಾಪ್‌ ನೀಡಿದ್ದಕ್ಕೆ ಹಿಂದು ಯುವಕನ ಮೇಲೆ ಮುಸ್ಲಿಂ ಯುವಕರ ಗೂಂಡಾಗಿರಿ!

ಮುಸ್ಲಿಂ ಯುವಕರಿಂದ ಹಲ್ಲೆಗೆ ಒಳಗಾಗಿದ್ದ ಬೈಲಪ್ಪ ಎನ್ನುವ ವ್ಯಕ್ತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವರಿಗೆ ಬೈಕ್‌ ಅಲ್ಲಿ ಬೈಲಪ್ಪ ಡ್ರಾಪ್‌ ಮಾಡಿದ್ದ. ಈ ವೇಳೆ ಬೈಕ್ ಅಡ್ಡಗಟ್ಟಿ ಹದಿನೈದು ಜನರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಘಟನೆಯ ಬಗ್ಗೆ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಹೆಡೆಮುರಿಕಟ್ಟಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ.ಮೊಹಮದ್‌ ಸಲ್ಮಾನ್, ಮಹ್ಮದ್ ಆದಿಲ್, …

Read More »

ಕೊಯ್ದು ಮೂರು ಎಮ್ಮೆಗಳ ಹತ್ಯೆ ಮಾಡಿ ಕ್ರೌರ್ಯ ಮೆರೆದ ದುಷ್ಕರ್ಮಿಗಳು.!

ಆಂಧ್ರಪ್ರದೇಶದ ಎಲೂರು ಜಿಲ್ಲೆ ಲಿಂಗಪಾಲಂ ಮಂಡಲದ ಮಾಥ ಗುಡೆಮ್ ಉಪನಗರದ ಸುಂದರರಾವ್ಪೇಟ್ ಗ್ರಾಮದಲ್ಲಿ ತೋರ್ಲಪತಿ ರವಿ ಎಂಬುವವರಿಗೆ ಸೇರಿದ ಮೂರು ಎಮ್ಮೆಗಳನ್ನು ಕ್ರೂರವಾಗಿ ಶಿರಚ್ಛೇದ ಮಾಡಲಾಗಿದೆ. ಈ ವಿಷಯವನ್ನು ಧರ್ಮಜಿಗುಡೆಮ್ ಪೊಲೀಸರಿಗೆ ವರದಿ ಮಾಡಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ಆರೋಪಿಗಳನ್ನು ಶೀಘ್ರವೇ ಹಿಡಿದು ಶಿಕ್ಷೆ ವಿಧಿಸಬೇಕೆಂದು ಸುತ್ತಮುತ್ತಲಿನ ಹಳ್ಳಿಗಳ ಜನರು ಒತ್ತಾಯಿಸುತ್ತಿದ್ದಾರೆ.

Read More »

ವಿದೇಶಿ ಹಣ ಪರಿವರ್ತನೆ ನೆಪದಲ್ಲಿ ಉದ್ಯಮಿಗೆ ಮೋಸ; ಬರೋಬ್ಬರಿ 2 ಕೋಟಿ ಹಣ ದೋಚಿ ಕಿಡಿಗೇಡಿಗಳು ಪರಾರಿ!

ವಿದೇಶಿ ಹಣ ಪರಿವರ್ತನೆ ನೆಪದಲ್ಲಿ ಉದ್ಯಮಿಯೊಬ್ಬರಿಂದ ಎರಡು ಕೋಟಿ ರು. ಹಣ ದೋಚಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಣ ಪರಿವರ್ತನೆ ಸಲುವಾಗಿ ಬೆಂಜಮಿನ್ ಅವರ ಭೇಟಿಗೆ ಪೂರ್ವನಿಗದಿಯಂತೆ ವಿದ್ಯಾರಣ್ಯಪುರದ ಎಂ.ಎಸ್‌.ಪಾಳ್ಯ ಸರ್ಕಲ್ ಬಳಿಗೆ ತೆರಳಿದ್ದೆ. ತದನಂತರ ಬೆಂಜಮಿನ್ ಅವರಿಗೆ ನಾವು ನೀಡಿದ ಹಣವನ್ನು ಎಣಿಕೆ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಏಳೆಂಟು ಜನರು ನುಗ್ಗಿ ಹಣವನ್ನು ಕೊಡುವಂತೆ ಬೆದರಿಸಿದರು. ಇದಕ್ಕೆ ವಿರೋಧಿಸಿದಾಗ ಚಾಕು ತೋರಿಸಿ …

Read More »

ಹಾಸನದಲ್ಲಿ ಮುಂದುವರೆದ ಹೃದಯಾಘಾತ ಸರಣಿ ಸಾವು: ಮತ್ತೋರ್ವ ಬಲಿ!

ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದೆ. ಇಂದು ಹೃದಯಾಘಾತಕ್ಕೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅಲ್ಲಿಗೆ ಜಿಲ್ಲೆಯಲ್ಲಿ 1 ತಿಂಗಳ ಅಂತರದಲ್ಲಿ 16 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸಿದ್ದೇಶ್ವರ್ ನಗರದ ನಿವಾಸಿ ಗೋವಿಂದ(37) ಮೃತ ವ್ಯಕ್ತಿ.

Read More »