Breaking News

Breaking News

ಮನೆಯಲ್ಲೇ ಹೆರಿಗೆ ಮಾಡಲು ಹೋಗಿ ಸಾವಿಗೀಡಾದ ಯುವತಿ,!!

ಬೆಂಗಳೂರಿನಲ್ಲಿ ಸಾಕಷ್ಟು ಆರೋಗ್ಯ ಸೇವೆ ಇದ್ದರೂ ಅದನ್ನು ಪಡೆಯದೆ, ಮನೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಲು ಹೋಗಿ ಯುವತಿ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಮನೆಯೊಂದರಲ್ಲಿ ಹೆರಿಗೆಯಾದ ಯುವತಿಯೊಬ್ಬರು ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.ಯುವತಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಓರ್ವ ಯುವಕನ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಗರ್ಭಿಣಿಯಾಗಿದ್ದ ಯುವತಿಗೆ ನಿನ್ನೆ ರಾತ್ರಿ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೆರಿಗೆಯ …

Read More »

ಹೆಂಡತಿ ಹಣ ಕೊಡಲಿಲ್ಲ ಅಂತ ನೇಣಿಗೆ ಶರಣಾದ ಪತಿ..!

ಕೆಲಸ ಮಾಡ್ತಿದ್ದ ಈತ ರಾತ್ರಿ ಶಾಲೆ ಕಟ್ಟಡದಲ್ಲಿಯೇ ಮಲಗಿಕೊಳ್ತಿದ್ದ.ಹೀಗೆ ನಿನ್ನೆ ಅಂದ್ರೆ ಜೂನ್ 18 ರಂದು ಬೆಳಗ್ಗೆ 11 ಗಂಟೆಗೆ ಪತ್ನಿಗೆ ಕರೆ ಮಾಡಿ 20 ಸಾವಿರ ಹಣ ಕೇಳಿದ್ನಂತೆ. ಆದ್ರೆ ಪತ್ನಿ ಹಣ ಕೊಡಲು ನಿರಾಕರಿಸಿದ್ದ‌. ಇದರಿಂದ ಬೇಸರಗೊಂಡು ರಾತ್ರಿ ಮದ್ಯಪಾನ ಮಾಡಿ ಶಾಲೆ ಆವರಣದಲ್ಲಿರೊ ಕಟ್ಟಡದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹ ಸ್ಥಳಾಂತರಿಸಿ …

Read More »

ಗುತ್ತಿಗಾರು :ಬಾಲಕಿ ಗರ್ಭಿಣಿ, ಬಾಲಕನ ಬಂಧನ!

15 ವರ್ಷದ ಬಾಲಕಿ ಐದು ತಿಂಗಳ ಬಸುರಿಯಾಗಿದ್ದು, ಆಕೆ ಆಸ್ಪತ್ರೆಗೆ ಬಂದಾಗ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು. ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯ ಸಮೀಪದ ಸಂಬಂಧಿ, ಅಪ್ರಾಪ್ತ ವಯಸ್ಸಿನ ಬಾಲಕನಿಂದ ಬಾಲಕಿಯೋ ರ್ವಳು ಗರ್ಭ ಧರಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Read More »

ಮೊಮ್ಮಕಳನ್ನು ಕೊಂದು ಒಂದೇ ಕುಟುಂಬದ ನಾಲ್ವರು ಸಾವು!

ಪತಿಯೊಂದಿಗೆ ವಾಸಿಸುತ್ತಿದ್ದ ಪವಿತ್ರಾ ಗಂಡನೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಕಾಳೀಶ್ವರಿ ಮನೆಗೆ ಹೋಗಿದ್ದರು.ಪವಿತ್ರಾ ಆ ವ್ಯಕ್ತಿಯೊಂದಿಗೆ ಮನೆಯಿಂದ ಓಡಿ ಹೋಗಿದ್ದಳು. ಇದರಿಂದ ಅವಮಾನಕ್ಕೊಳಗಾದ ಅಜ್ಜಿ ಚೆಲ್ಲಮ್ಮಾಳ್ ಮತ್ತು ಅವರ ಮಗಳು ಕಾಳೀಶ್ವರಿ, ತಮ್ಮ ಮೊಮ್ಮಕ್ಕಳಾದ ಲಿಥಿಕ್ಷಾ (7) ಮತ್ತು ದೀಪ್ತಿ (5) ಅವರನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇದಾಯಕೊಟ್ಟೈ ಪೊಲೀಸರು, ಅವರ ಮೃತದೇಹಗಳನ್ನು ವಶಪಡಿಸಿಕೊಂಡು ಶವಪರೀಕ್ಷೆಗಾಗಿ ದಿಂಡಿಗಲ್ ಸರ್ಕಾರಿ …

Read More »

ಬೌನ್ಸ್‌ರ್ ಕಾರು ಡಿಕ್ಕಿ, ಅಪಘಾತವಾದ ಮಹಿಳೆ!!

ಸಿದ್ಧಗಂಗಾ ಮಠಕ್ಕೆ ಹೋಗಿದ್ದಾಗ ನಡೆದ ಘಟನೆ ಕಳೆದ ಮೂರು ದಿನದ ಹಿಂದೆ ಯುವ ರಾಜ್‌ಕುಮಾರ್‌ ಅವರ ಸಿನಿಮಾ ತಂಡ ತುಮಕೂರಿನ ಪ್ರಸಿದ್ಧ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಹೋಗಿತ್ತು. ಈ ಸಮಯದಲ್ಲಿ ಜನಸಂದಣಿ ಹೆಚ್ಚಿತ್ತು. ಅಭಿಮಾನಿಗಳು ಸಹ ಬಹಳಷ್ಟಿದ್ದರೆ. ಆಗ ಬೌನ್ಸ್‌ರ್‌ಗಳಿದ್ದ ಕಾರು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದಿತ್ತು, ಆದರೆ ಈ ಬಗ್ಗೆ ಜನ ಹೆಚ್ಚಿದ್ದ ಕಾರಣ ಯುವ ಅವರಿಗೆ ತಿಳಿದಿರಲಿಲ್ಲ. ಮನೆಗೆ ಹೋದಾಗ ಮಾಧ್ಯಮಗಳ ಮೂಳಕ ತಿಳಿದು ಬಂದು ಕ್ಷಮೆ ಕೇಳಿದ್ದಾರೆ.

Read More »

ಸೊರಬ :ವಾಹನದ ಮೇಲೆ ಉರುಳಿದ ಮರ,ಇಬ್ಬರಿಗೆ ಗಾಯ!

ಬೃಹತ್ ಮರವೊಂದು ಕ್ಯಾಂಟರ್ ವಾಹನದ ಮೇಲೆ ಉರುಳಿ ಬಿದ್ದು ಇಬ್ಬರು ಗಾಯಗೊಂಡಿದ್ದಾರೆ.ಹಿರೇಕೆರೂರು ತಾಲ್ಲೂಕಿನ ಹದ್ರಿಹಳ್ಳಿ ಗ್ರಾಮದ ಹನುಮಂತಪ್ಪ ಮತ್ತು ವೀರೇಶ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸಾಗರಕ್ಕೆ ಕಳುಹಿಸಲಾಗಿದೆ.

Read More »

ಹುಬ್ಬಳ್ಳಿ : ಕೆರೆಗೆ ಜಾರಿಬಿದ್ದು ಅವಳಿ ಜವಳಿ ಮಕ್ಕಳು ಸಾವು!

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಯರಿನಾರಾಯಣಪೂರ ಗ್ರಾಮದಲ್ಲಿ ಆಟವಾಡುತ್ತ ಕೆರೆಗೆ ಜಾರಿಬಿದ್ದು ಅವಳಿ ಜವಳಿ ಮಕ್ಕಳಿಬ್ಬರು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.ಆಟವಾಡುತ್ತಿದ್ದ ಸಮಯದಲ್ಲಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ತಂದೆ ತಾಯಿಗಳ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಸ್ಥಳಕ್ಕೆ ತಹಶಿಲ್ದಾರ ರಾಜು ಮಾವರಕರ ಹಾಗೂ ಜಗದೀಶ ಕಮ್ಮಾರ ಕುಂದಗೋಳ ಪೊಲೀಸ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More »

ಮೂವರು ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು.!

ಅಭಿಜ್ಞಾ (8) ಅವನಿ (6) ಆರ್ಯ (4) ಎಂಬ ಮಕ್ಕಳ ಜೊತೆಗೆ ತಾಯಿ ಸಿದ್ದಮ್ಮ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಕ್ಕಳ ಜೊತೆಗೆ ಕೃಷಿ ಹೊಂಡಕ್ಕೆ ಸಿದ್ದಮ್ಮ ಹಾರಿದ್ದಾಳೆ. ಸಂಜೆಯಾದರೂ ಕುರಿಗಳು ಮತ್ತು ಪತ್ನಿ ಮಕ್ಕಳು ಹಿಂದಿರುಗದ ಹಿನ್ನೆಲೆಯಲ್ಲಿ ಪತಿ ಕುಮಾರ್ ಹುಡುಕಾಟ ನಡೆಸಿದ್ದಾನೆ. ಕೃಷಿ ಹೊಂಡದ ಬಳಿಗೆ ನಿಂತಿದ್ದ ಕುರಿಗಳನ್ನು ನೋಡಿ ಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾನೆ. ಪತ್ನಿ ಮಕ್ಕಳು ಕಾಣದಿದ್ದಾಗ ಕೃಷಿ ಹೊಂಡದಲ್ಲಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ತಕ್ಷಣ …

Read More »

ಡ್ಯಾಂನಲ್ಲಿ ಮುಳುಗಿ ಡಿಪ್ಲೊಮಾ ವಿದ್ಯಾರ್ಥಿ ದಾರುಣ ಸಾವು!

ವಿದ್ಯಾರ್ಥಿ ವಿಕಾಸ್, ತನ್ನ ಸ್ನೇಹಿತರಾದ ಸೃಜನ್ ಮತ್ತು ಲೋಕೇಶ್ ಗೌಡ ಅವರೊಂದಿಗೆ ಮಂಚನಬೆಲೆ ಡ್ಯಾಂಗೆ ಈಜಲು ಹೋಗಿದ್ದಾರೆ.ನೀರಿನಲ್ಲಿ ಕೆಲವೇ ನಿಮಿಷಗಳಲ್ಲಿ ವಿಕಾಸ್ ಆಳಕ್ಕೆ ಸಿಲುಕಿ ಮುಳುಗಲು ಆರಂಭಿಸಿದ್ದಾನೆ. ಕೂಡಲೇ ಸ್ನೇಹಿತರು ಪೊಲೀಸರು ಹಾಗೂ ಅಗ್ನಿಶಾಮಕ ದಳ ಮತ್ತು ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಜಿದ್ದಾರೆ. ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.ಸುಮಾರು 6 ಗಂಟೆಗಳ ಹುಡುಕಾಟದ ಬಳಿಕ ವಿಕಾಸ್ ಮೃತದೇಹ ಪತ್ತೆಯಾಗಿದೆ. ಇದೀಗ ಮೃತದೇಹವ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಸ್ವಾಭಾವಿಕ …

Read More »

ರೌಡಿಶೀಟರ್ ಕೊಲೆ ಪ್ರಕರಣ: ಮತ್ತಿಬ್ಬರ ಬಂಧನ!!

ನಗರದ ಜನತಾ ಕಾಲೊನಿಯಲ್ಲಿ ಜೂನ್ 14ರ ರಾತ್ರಿ ವಿಜಯ್ (26) ಎಂಬ ರೌಡಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದರು.ಕಾರ್ಯಾಚರಣೆ ವೇಳೆ ನಾಲ್ವರು ಆರೋಪಿಗಳು ಪೊಲೀಸರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಪರಾರಿಯಾಗುತ್ತಿದ್ದ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಬಂಧಿತ ಅರುಣ್ ಹಾಗೂ ದೀಪು ಹೇಳಿಕೆ ಆಧರಿಸಿ ಇನ್ನಿಬ್ಬರನ್ನು ಬಂಧಿಸಲಾಗಿದೆ. ದಾಳಿ ವೇಳೆ ಜೆ.ಜೆ.ನಗರ ಠಾಣೆ ಎಎಸ್‌ಐ ಕುಮಾರ್ ಮತ್ತು ಕಾನ್‌ಸ್ಟೆಬಲ್‌ ಕರೀಂ ಸಾಬ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »