ಪತಿಯೊಂದಿಗೆ ವಾಸಿಸುತ್ತಿದ್ದ ಪವಿತ್ರಾ ಗಂಡನೊಂದಿಗಿನ ಭಿನ್ನಾಭಿಪ್ರಾಯದ ಬಳಿಕ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಕಾಳೀಶ್ವರಿ ಮನೆಗೆ ಹೋಗಿದ್ದರು.ಪವಿತ್ರಾ ಆ ವ್ಯಕ್ತಿಯೊಂದಿಗೆ ಮನೆಯಿಂದ ಓಡಿ ಹೋಗಿದ್ದಳು. ಇದರಿಂದ ಅವಮಾನಕ್ಕೊಳಗಾದ ಅಜ್ಜಿ ಚೆಲ್ಲಮ್ಮಾಳ್ ಮತ್ತು ಅವರ ಮಗಳು ಕಾಳೀಶ್ವರಿ, ತಮ್ಮ ಮೊಮ್ಮಕ್ಕಳಾದ ಲಿಥಿಕ್ಷಾ (7) ಮತ್ತು ದೀಪ್ತಿ (5) ಅವರನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇದಾಯಕೊಟ್ಟೈ ಪೊಲೀಸರು, ಅವರ ಮೃತದೇಹಗಳನ್ನು ವಶಪಡಿಸಿಕೊಂಡು ಶವಪರೀಕ್ಷೆಗಾಗಿ ದಿಂಡಿಗಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಗಳ ತಪ್ಪು ನಿರ್ಧಾರದ ಅವಮಾನವನ್ನು ಸಹಿಸಲಾಗದೆ ಒಂದೇ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಒಟ್ಟನ್‌ಛತ್ರಂ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

