BigTv News
June 15, 2025
Breaking News
ಹೊಸಕೋಟೆಯಿಂದ ಕೆಆರ್ ಪುರಂ ಮಾರ್ಗವಾಗಿ ಬರುತ್ತಿದ್ದ ಇಂಡಿಕಾ ಕಾರು ನಿಯಂತ್ರಣ ಸಿಗದೇ ಮುಂದೆ ಹೋಗುತ್ತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ.ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಶನಿವಾರ ತಡರಾತ್ರಿ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಆಟೋ ಪಲ್ಟಿ ಹೊಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.ಆಟೋದಲ್ಲಿ ಮಗು ಕೂಡಾ ಇದ್ದು, ತರಚಿದ ಗಾಯಗಳಿಂದ ಬಚಾವ್ ಆಗಿದೆ. ಕಾರಿನಲ್ಲಿದ್ದ ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಕೆಆರ್ ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Read More »
BigTv News
June 15, 2025
Breaking News
ಮಂಗಳೂರಿನಲ್ಲಿ ಕುಂಭದ್ರೋಣ ಮಳೆಗೆ ಭಾರಿ ಜಲಸ್ಫೋಟ ಸಂಭವಿಸಿದ್ದು, ಕಂಕನಾಡಿ ಬಳಿಯ ಸುವರ್ಣ ಲೇನಲ್ಲಿ ಭಾರಿ ಅವಘಡ ಸಂಭವಿಸಿದೆ.ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಅವಘಡ ಸಂಭವಿಸಿದೆ.ಧಾರಾಕಾರ ಮಳೆಗೆ ಕೊಡಿ ಕುಸಿದು ಮನೆಗಳಿಗೆ ನೀರು ನುಗ್ಗಿದೆ. ಖಾಸಗಿ ಆಸ್ಪತ್ರೆ ಗೋಡೆ ಕುಸಿತ ಪರಿಣಾಮದಿಂದ ಕೂದಲೆಳೆ ಅಂತರದಲ್ಲಿ ಜ್ಯೋಕಿಂ ಡಿಸೋಜಾ ಎಂಬ ಕುಟುಂಬ ಪಾರಾಗಿದೆ. ಕುಟುಂಬದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
Read More »
BigTv News
June 15, 2025
Breaking News
ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಗಾಳಿ- ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ ಮರಿಯಾನೆ ಮೃತಪಟ್ಟಿವೆ.ಆಹಾರ ಅರಸಿ ಕಾಫಿ ತೋಟದೊಳಗೆ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
BigTv News
June 15, 2025
Breaking News
ಪುಟ್ಟ ಹಸು ಗಿನ್ನೆಸ್ ದಾಖಲೆಯ ಪುಸ್ತಕ ಸೇರಿದೆ. ಕೆಲ ವರ್ಷಗಳ ಹಿಂದೆ ಈ ಪುಟಾಣಿ ಮೃತಪಟ್ಟಿದ್ದು, ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಚಿಕ್ಕ ಗಾತ್ರದ ಅಥವಾ ಅತ್ಯಂತ ಕುಳ್ಳ ಹಸು ಎನ್ನುವ ಪಟ್ಟ ಪಡೆದುಕೊಂಡಿದೆ.ಇದು ಸಾವನ್ನಪ್ಪಿ ನಾಲ್ಕು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಮತ್ತೆ ಇದರ ಬಗ್ಗೆ ಈಗ ಸುದ್ದಿಯಾಗುತ್ತಿದೆ.ರಾಣಿಯ ಆರೋಗ್ಯ ತೀವ್ರ ಹದಗೆಟ್ಟ ನಂತರ ಚಿಕಿತ್ಸೆ ನೀಡಲು ತುರ್ತಾಗಿ ಕರೆದೊಯ್ಯಲಾಯಿತು, ಆದರೆ ಪಶುವೈದ್ಯರು ಅವಳನ್ನು ಉಳಿಸಲು …
Read More »
BigTv News
June 15, 2025
Breaking News
ಕಾಂತಾರ: ಅಧ್ಯಾಯ 1 ಚಿತ್ರೀಕರಣದ ವೇಳೆ ಜಲಾಶಯದಲ್ಲಿ ದೋಣಿ ಮುಳುಗಿ, ನಟ-ನಿರ್ದೇಶಕ ರಿಷಭ್ ಶೆಟ್ಟಿ ಮತ್ತು 30 ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.ಕೊಪ್ಪ ಎಂದು ಸ್ಥಳೀಯವಾಗಿ ಕರೆಯಲ್ಪಡುವ ಪ್ರದೇಶದ ಬಳಿಯ ಜಲಾಶಯದ ಆಳವಿಲ್ಲದ ವಲಯದಲ್ಲಿ ಅಪಘಾತ ಸಂಭವಿಸಿದ್ದು, ಇದು ಸಂಭವನೀಯ ದುರಂತವನ್ನು ತಪ್ಪಿಸಲು ಸಹಾಯ ಮಾಡಿದೆ. ಆದಾಗ್ಯೂ, ಕ್ಯಾಮೆರಾಗಳು ಮತ್ತು ಇತರ ಚಿತ್ರೀಕರಣ ಉಪಕರಣಗಳು ನೀರಿಗೆ ಬಿದ್ದಿವೆ. ಸ್ಥಳಕ್ಕೆ ಭೇಟಿ ನೀಡಿದ ತೀರ್ಥಹಳ್ಳಿ ಪೊಲೀಸರ ಪ್ರಕಾರ, ಹಡಗಿನಲ್ಲಿದ್ದ ಜನರು ಅಪಾಯದಿಂದ ಪಾರಾಗಿದ್ದಾರೆ. …
Read More »
BigTv News
June 15, 2025
Breaking News
ನಿರಂಜನ ಮತ್ತು ಸುಷ್ಮಾ 8 ವರ್ಷಗಳ ಹಿಂದೆ ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ಈ ಜೋಡಿ ರೆಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಪೋಷಕರು ಇಂದು ಯುವತಿಯನ್ನು ಹೊತ್ತೊಯ್ದಿದ್ದಾರೆ. ಪೋಷಕರ ವಿರೋಧದ ನಡುವೆ ಯುವಕ, ಯುವತಿ ಮದುವೆಯಾಗಿ ಬೇರೆಯಾಗಿ ಒಟ್ಟಿಗೆ ಜೀವಿಸುತ್ತಿದ್ದರು. ಆದರೆ ಇಂದು ಪೋಷಕರು ಯುವತಿಯನ್ನು ಹೊತ್ತೋಯ್ದಿರುವ ಘಟನೆ ನಡೆದಿದೆ.ಸುಷ್ಮಾ ತಂಟೆಗೆ ಬಂದರೆ ಸುಮ್ಮನೆ ಬಿಡಲ್ಲ ಎಂದು ನಿರಂಜನ್ಗೆ ಬೆದರಿಕೆ ಹಾಕಿದ್ದಾರೆ ಸದ್ಯ ನಿರಂಜನ್ ರಕ್ಷಣೆ ಕೋರಿ ಹುಬ್ಬಳ್ಳಿ …
Read More »
BigTv News
June 15, 2025
Breaking News
ಬೆಳಗಾವಿಯ ಖಾನಾಪುರದಾದ್ಯಂತ ವರುಣಾರ್ಭಟಕ್ಕೆ ಮಲಪ್ರಭಾ ನದಿ ಉಕ್ಕಿ ಹರಿಯ್ತುತ್ತಿದೆ.ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿದೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.ಸೇತುವೆ ಪಕ್ಕದಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಭಾರಿ ಮಳೆಯಿಂದ ಮಲಪ್ರಭಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ನೀರಿನ ರಭಸಕ್ಕೆ ರಸ್ತೆಯೇ ಕೊಚ್ಚಿ ಹೋಗಿದೆ.ಇದರಿಂದಾಗಿ ಬೆಳಗಾವಿ-ಗೋವಾ ನಡುವೆ ಸಾಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರು, ವಾಹನ ಸವಾರರು ಬೇರೆ ಮಾರ್ಗದಲ್ಲಿ ಗೋವಾ ತೆರಳುವಂತೆ ಪೊಲೀಸರು …
Read More »
BigTv News
June 15, 2025
Breaking News
ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಿಂದಾಗಿ ಗುಡ್ಡಕುಸಿತ ಸಂಭವಿಸುತ್ತಿದ್ದು, ಶೃಗೇರಿ ಬಳಿ ನೆಮ್ಮಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ ಗುಡ್ಡ ಕುಸಿಯುತ್ತಿದೆ.ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ.ಪದೇ ಪದೇ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಬದಲಿ ಮಾರ್ಗದಲ್ಲಿ ತೆರಳುವಂತೆ ವಾಹನ ಸವಾರರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಮಂಗಳೂರು ತೆರಳುವವರು ಬೇರೆ ಮಾರ್ಗದಲ್ಲಿ ತೆರಳುವಂತೆ ಸೂಚಿಸಲಾಗಿದೆ.ಬಿದರಗೋಡು, ಆಗುಂಬೆ, ಉಡುಪಿ ಮಾರ್ಗವಾಗಿ ಸಂಚರಿಸುವಂತೆ ಪೊಲೀಸರು ತಿಳಿಸಿದ್ದಾರೆ.
Read More »
BigTv News
June 15, 2025
Breaking News
ಚಂದನ್, ಪವನ್ ಹಾಗೂ ಅಚಲ್ ಮೂವರು ಸ್ನೇಹಿತರು. ಕಳೆದ ತಿಂಗಳು ಮೂವರು ಚಿಕ್ಕಜಾಲದ ನೆಕ್ಸ್ಟ್ ಚಾಪ್ಟರ್ ಪಬ್ಗೆ ಹೋಗುತ್ತಾರೆ. ಈ ವೇಳೆ ಚಂದನ್ಗೆ ಉಳಿದಿಬ್ಬರು ಸ್ನೇಹಿತರು ಕಂಠಪೂರ್ತಿ ಕುಡಿಸುತ್ತಾರೆ. ನಂತರ ಪವನ್ ಹಾಗೂ ಅಚಲ್, ಚಂದನ್ ನನ್ನು ಕಾರಿನತ್ತ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅಚಲ್ ಜೆಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್ಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾನೆ. ಸ್ಥಳಕ್ಕೆ ಬಂದ ಗ್ಯಾಂಗ್ ಚಂದನ್ಗೆ ಹಿಗ್ಗಾಮುಗ್ಗು ಥಳಿಸಿ ಆತನ …
Read More »
BigTv News
June 15, 2025
Breaking News, Crime
ಬಾಲಕಿ ತೋಟಕ್ಕೆ ತೆರಳಿದ್ದಾಗ, ಪಕ್ಕದ ಊರಿನ ಬಾಲಕನು ಆಕೆಯನ್ನು ಹೊಲಕ್ಕೆ ಕರೆದೊಯ್ದು 14 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿದ್ದಾನೆ.ಮಗಳು ಮನೆಗೆ ಬಾರದಿರುವುದರಿಂದ ಆತಂಕಗೊಂಡ ಪೋಷಕರು ಹುಡುಕಿಕೊಂಡು ಹೋಗಿದ್ದಾರೆ. ಆಗ ಬಾಲಕಿಯು ಗಾಯಗೊಂಡ ಸ್ಥಿತಿಯಲ್ಲಿ ಹೊಲದಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣವೇ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Read More »