Breaking News

Breaking News

ಸಂಬಂಧಿಯನ್ನೇ ಕೊಂದು ಮೃತದೇಹವನ್ನು ಚರಂಡಿಗೆ ಎಸೆದು ಪರಾರಿ!

ವರ್ತೂರು ಠಾಣೆ ವ್ಯಾಪ್ತಿಯ ಚಿಕ್ಕಬೆಳ್ಳಂದೂರು ಗ್ರಾಮದ ಚರಂಡಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಇದೇ ವೇಳೆ ದೀಪಕ್ ಪತ್ನಿ ಸುಷ್ಮಾ ತನ್ನ ಪತಿ ಕಾಣೆಯಾಗಿದ್ದಾಗಿ ದೂರು ನೀಡಿದ್ದರು. ಈ ವೇಳೆ ಮೃತದೇಹ ಪರಿಶೀಲಿಸಿದ ಸುಷ್ಮಾ, ಇದು ತನ್ನ ಪತಿ ದೀಪಕ್ ಮೃತದೇಹ ಎಂದು ಗುರುತಿಸಿದ್ದರು. ಸಂಬಂಧಿಯೇ ಕೊಲೆ ಮಾಡಿರುವ ಅನುಮಾನವಿದೆ ಎಂದು ದೂರು ನೀಡಿದ್ದರು.ಒಂದು ದಿನ ದೀಪಕನನ್ನು ಕರೆದೊಯ್ದ ವಿಕಾಸ್ ಹೊಡೆದು ಬುದ್ಧಿ …

Read More »

ಹೋಟೆಲ್ ನಲ್ಲಿ ‘ಖೋಟಾ ನೋಟ್’ ಪ್ರಿಂಟ್ ಮಾಡ್ತಿದ್ದ ಯುವಕ ಅರೆಸ್ಟ್!

ಬೆಂಗಳೂರಲ್ಲಿ ಹೋಟೆಲ್ ರೂಮ್‌ನಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕ್ರಿಷ್ ಮಾಲಿ (23) ಎಂದು ತಿಳಿದುಬಂದಿದೆ. ಟಸ್ಕರ್ ಟೌನ್‌ನಲ್ಲಿರುವ ಹೋಟೆಲ್‌ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ.

Read More »

ಕುಂದಾಪುರ: ಚಿಲ್ಲರೆ ವಿಷಯವಾಗಿ ಮುಸ್ಲಿಂ ಮಹಿಳೆಯಿಂದ ಹಿಂದೂ ಮಹಿಳೆಯ ಮೇಲೆ ಹಲ್ಲೆ!

ಕುಂದಾಪುರದ ಮಾವಿನಕಟ್ಟೆಯ ಮೆಡಿಕಲ್ ಶಾಪ್‌ನಲ್ಲಿ ಚಿಲ್ಲರೆ ಹಣದ ವಿಚಾರದಲ್ಲಿ ಆದ ವಿವಾದದಲ್ಲಿ, ಯಾಸ್ಮಿನ್ ಎಂಬ ಮುಸ್ಲಿಂ ಮಹಿಳೆಯು ಅಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಎಂಬ ಹಿಂದೂ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಲ್ಲಿ ಗಾಯಗೊಂಡ ಲಕ್ಷ್ಮಿಯನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ

Read More »

ಸೊಸೆಯನ್ನೇ ಗುಂಡಿಕ್ಕಿ ಕೊಂದ ಮಾಜಿ ಸೇನಾಧಿಕಾರಿ!

ಪ್ರಿಯಾಂಕಾಳ ಅವರ ಮಾವ ಗುರ್ಜರ್ ತನ್ನ ಅಣ್ಣನ ಮಗ ಧ್ರುವನೊಂದಿಗೆ ಮರುಮದುವೆ ಆಗುವಂತೆ ಅವಳ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ಈ ಪ್ರಸ್ತಾಪ ಅವಳಿಗೆ ಇಷ್ಟವಿರಲಿಲ್ಲ. ಜೊತೆಗೆ ತನ್ನ ತಂಗಿಗೆ ಈಗಾಗಲೇ ಮೂರು ಮಕ್ಕಳಿರುವುದರಿಂದ ಅವಳು ನಿರಾಕರಿಸಿದ್ದಳು. ಈ ವಿಷಯಕ್ಕೆ ಆಗಾಗ್ಗೆ ಜಗಳಗಳಿಗೆ ಕಾರಣವಾಗಿತ್ತು.ಈ ಕಾರಣಕ್ಕೆ ತನ್ನ ಸಹೋದರಿಯನ್ನು ಆತ ಹತ್ಯೆ ಮಾಡಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ಮುಖೇಶ್ ಆರೋಪಿಸಿದ್ದಾರೆ.ಮುಖೇಶ್‌ ಅವರ ಆರೋಪದ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More »

ಚಿಕ್ಕಬಳ್ಳಾಪುರ :ಮಗನ ಈ ಸ್ಥಿತಿಯನ್ನು ಕಂಡ ತಾಯಿ ಹ್ರದಯಘಾತದಿಂದ ಸಾವು!!

ಜಮೀನು ವಿವಾದದ ಹಿನ್ನಲೆ ಯುವಕನೊಬ್ಬನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಲಾಗಿದ್ದು, ಮಗನ ಈ ಸ್ಥಿತಿಯನ್ನು ಕಂಡ ತಾಯಿ.ಮಗನ ರಕ್ಷಣೆಗೆ ಧಾವಿಸಿದ ನವೀನ್ ತಾಯಿ ಯಶೋಧಮ್ಮನ ಮೇಲೂ ಹಲ್ಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ. ತಾಯಿ ಮಗ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಆದರೆ ಆಸ್ಪತ್ರೆಗೆ ಬರುವುಷ್ಟರಲ್ಲಿ ತಾಯಿ ಯಶೋಧಮ್ಮ ಮೃತಪಟ್ಟಿದ್ದಾರೆ ಎಂದು ವೈದ್ಯರು ಧೃಡೀಕರಿಸಿದ್ದಾರೆ.ಯುವಕನ ಕೊಲೆಗೆ ಯತ್ನಿಸಿದ ಆರೋಪಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

Read More »

ಮಂಡ್ಯ : ನೇಣು ಬಿಗಿದುಕೊಂಡು ವೃದ್ದ ದಂಪತಿ ಆತ್ಮಹತ್ಯೆ!

ಮರಕ್ಕೆ ನೇಣುಬಿಗಿದುಕೊಂಡು ವೃದ್ದ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಸಕ್ಕರೆನಾಡು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಗ್ರಾಮದಲ್ಲಿ ನಡೆದಿದೆ. ಈದ್ಗಾ ಮೈದಾನದ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.ಸ್ಥಳಕ್ಕೆ ಕೆ.ಆರ್.ಎಸ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಹೊಸಕೋಟೆ: ರಸ್ತೆ ನಿರ್ಮಾಣಕ್ಕೆ ಭೂಮಿ ಕೊಟ್ಟವರಿಗೆ ರಸ್ತೆ ಇಲ್ಲ!

ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆಯಿಂದ ತಮಿಳುನಾಡಿನ ಹೊಸೂರು ವರೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ-207 ನಿರ್ಮಾಣಕ್ಕೆ ಭೂಮಿ ನೀಡಿದ ರೈತರು ಓಡಾಡಲು ರಸ್ತೆ ಇಲ್ಲದೆ ದಿಕ್ಕು ತೋಚದಂತಾಗಿದೆ.ದಾಬಸ್‌ಪೇಟೆಯಿಂದ ಹೊಸೂರು ವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಉದ್ದ ಒಟ್ಟು 139 ಕಿಲೋಮೀಟರ್. ಇದರಲ್ಲಿ ಸುಮಾರು 122 ಕಿಲೋಮೀಟರ್‌ ರಾಜ್ಯದಲ್ಲೇ ಹಾದು ಹೋಗುತ್ತದೆ. ಹೆದ್ದಾರಿಯಿಂದ ರಾಜ್ಯದ ಸಾರಿಗೆ ಸಂಪರ್ಕಕ್ಕೆ ವೇಗ ಸಿಗುತ್ತದೆ. ಆದರೆ ಸ್ಥಳೀಯರಿಗೆ ಅನುಕೂಲ ಆಗುವಂತ ಸರ್ವಿಸ್‌ ರಸ್ತೆ ನಿರ್ಮಿಸದೆ ಇರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.ರೈತರ ಅನುಕೂಲಕ್ಕಾಗಿ …

Read More »

ವಿಮಾನ ದುರಂತದಲ್ಲಿ ಗಾಯಗೊಂಡವರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ..

ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 241 ಪ್ರಯಾಣಿಕರು ಮೃತಪಟ್ಟಿದ್ದು, ಗಾಯಗೊಂಡವರನ್ನು ಭೇಟಿಯಾಗಿ ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ರಮೇಶ್ ವಿಶ್ವಾಸ್‌ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಪತ್ರೆಗೆ ಭೇಟಿ ಮಾಡಿ ಆರೋಗ್ಯವನ್ನ ವಿಚಾರಿದ್ದಾರೆ.ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ತಂಡಗಳನ್ನು ಭೇಟಿಯಾದೆ. ಈ ಊಹಿಸಲಾಗದ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನಾವು ಯಾವಾಗಲೂ ಇರುತ್ತೇವೆ …

Read More »

ಲಾರಿ ಡಿಕ್ಕಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು!!

ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ್ದು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರೆ, 16 ಜನ5 ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ನಡೆದಿದೆ.ಓವರ್ ಟೇಕ್ ಮಾಡಲು ಹೋದಾಗ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.ನಿದ್ದೆಯ ಮಂಪರಿನಲ್ಲಿ ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಅಪಘಾತದಲ್ಲಿ ಕೇಶವರೆಡ್ಡಿ …

Read More »

ಧಾರವಾಡ ಜಿಲ್ಲೆಯಲ್ಲಿ ಮಳೆ, 1 ಸಾವು, ಮತ್ತೊಬ್ಬರು ಕಣ್ಮರೆ!

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುಬ್ಬಳ್ಳಿನಗರ ತಾಲೂಕು ಅಯೋದ್ಯ ಗ್ರಾಮದ ನೇಕಾರನಗರ ಬ್ರಿಜ್ ಹತ್ತಿರ ಬೈಕಿನಲ್ಲಿ ರಸ್ತೆ ದಾಟುವಾಗ ಹುಸೇನಸಾಬ ಸಯ್ಯದಸಾಬ ಕಳಸ (58) ಅವರು ನೀರಿನ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ. ಇವರೊಂದಿಗೆ ಬೈಕ್‍ನಲ್ಲಿದ್ದ ವ್ಯಕ್ತಿ ಅಪಾಯದಿಂದ ಪಾರಾಗಿದ್ದಾರೆ. ತಹಶೀಲ್ದಾರ ಕಲ್ಲನಗೌಡ ಆರ್.ಪಾಟೀಲ ಅವರ ನೇತೃತ್ವದಲ್ಲಿ ತಾಲೂಕಾಡಳಿತವು ಕಣ್ಮರೆಯಾದ ವ್ಯಕ್ತಿಯ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ತಪಾಸಣೆ ಕಾರ್ಯ ಮುಂದುವರೆದಿದೆ. ಹೆಚ್ಚಿನ ಕಾರ್ಯಾಚರಣೆ ಕೈಗೊಳ್ಳಲು ಬೆಳಗಾವಿಯಿಂದ ಇಂದು ಸಂಜೆ …

Read More »