Breaking News

Breaking News

ಮನನೊಂದ ತಾಯಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವು!

ಕೌಟುಂಬಿಕ ಕಲಹದಿಂದ ಮನನೊಂದ ತಾಯಿ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಸಾವಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಗ್ರಾಮದಲ್ಲಿ ನಡೆದಿದೆ. ಬಾಧಗಾನಹಳ್ಳಿ ಗ್ರಾಮದ ಲಾವಣ್ಯ (30) ನಿಹಾರಿಕಾ (10) ನೇಹಾ (6) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.ಮೃತದೇಹಗಳನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮೃತ ಲಾವಣ್ಯ ನಿನ್ನೆ ಪತಿ ಜಯಣ್ಣನ ಜೊತೆ ಜಗಳವಾಡಿದ್ದು, ಚೆನ್ನಾಗಿ ದುಡಿ, ಏರ್‌ಪೋರ್ಟ್‌ಗೆ ಡ್ರೈವರ್‌ ಕೆಲಸಕ್ಕೆ ಹೋಗು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ.

Read More »

ವೇಗವಾಗಿ ಬಂದ ಬೈಕ್​ ಗೋಡೆಗೆ ಡಿಕ್ಕಿ, ವಿದ್ಯಾರ್ಥಿ ಸ್ಥಳದಲ್ಲೇ ಸಾವು!!

ಬುಧವಾರ ಸಂಜೆ ಆಶ್ರಿತ್ ತನ್ನ ಸ್ನೇಹಿತನೊಂದಿಗೆ 150CC ಬೈಕ್ ಅನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ MBBS ವಿದ್ಯಾರ್ಥಿ ಮೃತಪಟ್ಟ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ.ಮೃತ ವಿದ್ಯಾರ್ಥಿಯನ್ನು ಅರ್ಷಿದ್ ಆಶ್ರಿತ್ (21) ಎಂದು ಗುರುತಿಸಲಾಗಿದ್ದು, ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.

Read More »

ತೆಲಂಗಾಣ : ಸೂಟ್‌ಕೇಸ್‌ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ!

ಬಚುಪಲ್ಲಿ ಪೊಲೀಸರು ಮೆರೂನ್ ಸೂಟ್ ಧರಿಸಿದ್ದ ಮಹಿಳೆಯ ಶವವನ್ನು ಪತ್ತೆಯಾಗಿದ್ದು, ಕೊಲೆ 10 ರಿಂದ 12 ದಿನಗಳ ಹಿಂದೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಮಹಿಳೆಯ ಗುರುತು ಇನ್ನೂ ದೃಢಪಟ್ಟಿಲ್ಲ. ಯಾರೋ ಆಕೆಯನ್ನು ಬೇರೆಡೆ ಕೊಂದು ಇಲ್ಲಿ ಶವವನ್ನು ಎಸೆದಿರುವಂತೆ ತೋರುತ್ತಿದೆ’ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ತನಿಖೆಯ ಮೇಲ್ವಿಚಾರಣೆ ಮಾಡಲು ಮತ್ತು ತಂಡಗಳಿಗೆ ಅಗತ್ಯ ಸೂಚನೆಗಳನ್ನು ಎಸಿಪಿ ಅಪರಾಧ ಸ್ಥಳಕ್ಕೆ ಭೇಟಿ ನೀಡಿದರು. ಮೃತ ಮಹಿಳೆಯ ಗುರುತು ಅಥವಾ ಆಕೆಯ ಸಾವಿನ ಸುತ್ತಲಿನ ಸಂದರ್ಭಗಳ …

Read More »

ಕಲಬುರಗಿ :ನಡುರಸ್ತೆಯಲ್ಲೇ ವ್ಯಕ್ತಿಯ ಭೀಕರ ಕೊಲೆ!

ನಗರದ ಹೊರವಲಯದ ಫಿರೋಜಾಬಾದ ಬಳಿ ಹಳೇ ದ್ವೇಷ ಹಿನ್ನಲೆ ವ್ಯಕ್ತಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ನಿಜಾಮುದ್ದೀನ್ ಬಾವರ್ಚಿ ಎಂದು ಗುರುತಿಸಲಾಗಿದೆ.ಕೊಲೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದೆ. ನಡು ರಸ್ತೆಯಲ್ಲಿ ಬರ್ಬರ ಹತ್ಯೆ ಮಾಡಿರೋ ಶಂಕೆಯಿದೆ. ಕೊಲೆಯಾದ ವ್ಯಕ್ತಿ ಸಹ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಕೆಲ ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ

Read More »

ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಮಾಡಿಸಿರುವ ತಾಯಿ!!

ಮಗಳು ತನ್ನ ತಂದೆಯ ಜೊತೆ ಉಳಿದುಕೊಂಡಿದ್ದು, ಅಪರೂಪಕ್ಕೆ ತಾಯಿ ಬಳಿ ಬರುತ್ತಿದ್ದಳು.ಈ ವೇಳೆ ತಾಯಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿಸಿದ್ದಾಳೆ ಎನ್ನಲಾಗಿದೆ. ಜನವರಿಯಿಂದ ಮಾರ್ಚ್‌ವರೆಗೆ ಹರಿದ್ವಾರ, ಬೃಂದಾವನ ಮತ್ತು ಆಗ್ರಾದಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಲಾಗಿದೆ ಎಂದು ಮನನೊಂದ ಮಗಳು ತನ್ನ ತಂದೆ ಬಳಿ ಹೇಳಿಕೊಂಡಿದ್ದಾಳೆ.ಕೂಡಲೇ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ತಾಯಿ ಆಕೆಯ ಪ್ರಿಯಕರ ಸುಮಿತ್‌ ಪತ್ವಾಲ್‌ …

Read More »

ಅಜಾಗರುಕತೆಯಿಂದ ಮಗುಚಿದ ಲಾರಿ, ಚಾಲಕನ ಬಂಧನ!!

ಕಾಸರಗೋಡಿನ ಪಾಲಕುನ್ನಿನಲ್ಲಿ ಗುರುವಾರ ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿ ಲಾರಿ ಮಗುಚಿದೆ. ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ. ಅಜಾಗರೂಕತೆಯಿಂದ ಲಾರಿ ಚಲಾಯಿಸಿದ ಆರೋಪದಲ್ಲಿ ಚಾಲಕ ಕೆ.ಇಂತಿಯಾಝ್ ಎಂಬಾತನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.

Read More »

ಮಹಿಳೆಯೊಂದಿಗೆ ಅಸಭ್ಯ ವರ್ತನೆ, ವ್ಯಕ್ತಿ ಬಂಧನ!!

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸೊಂದರಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಆಲಪ್ಪುಳ ನಿವಾಸಿ ನಾಸರ್ (53) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸಹಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

Read More »

ಕ್ಷುಲ್ಲಕ ಕಾರಣಕ್ಕೆ ಮನನೊಂದು ನೇಣಿಗೆ ಶರಣು…!

ಕಾಸರಗೋಡು :ಬೇಡಗಂ ಬಳಿಯ ವಲಿಯಡ್ಕ ನಿವಾಸಿ ವಿನೀಷ್ ಬಾಬು (45) ಮನೆ ಬಳಿಯ ಶೆಡ್ಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬೇಡಡ್ಕ ಕಾಂಞಿರತ್ತಿಕ್ಕಾಲ್ ಎಂಬಲ್ಲಿ ವ್ಯಾಪಾರ ನಡೆಸುತ್ತಿದ್ದರು. ಹೊಸದುರ್ಗ ತೆರುವತ್ ಲಕ್ಷ್ಮಿನಗರ ನಿವಾಸಿ ಕೆ.ವಿ ಆದರ್ಶ್ (24) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೆ.ಆಶೋಕನ್-ರಾಧಾ ದಂಪತಿ ಪುತ್ರ.

Read More »

ಕಾಸರಗೋಡು : ಆತ್ಮಹತ್ಯೆಗೆ ಯತ್ನ, ಮಹಿಳೆ ಸಾವು!!

ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ವಯನಾಡಿನ ವೈದ್ಯಕೀಯ ಆಸ್ಪತ್ರೆ ಕಾಲೇಜಿಗೆ ದಾಖಲಾಗಿದ್ದ ಉದುಮಾ ಬಳಿಯ ಅರಮಂಗಾನಂ ಉಲೂಜಿ ನಿವಾಸಿ ರಂಜಿನಿ (17) ಮೃತಪಟ್ಟಿದ್ದಾರೆ. ಸುಮಲತಾ ಅವರ ಪುತ್ರಿ ರಂಜಿನಿ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.

Read More »

ಮಂಜೇಶ್ವರ : ಬಾವಿಯಲ್ಲಿ ಅಪರಿಚಿತ ಶವ ಪತ್ತೆ!

ಮಂಜೇಶ್ವರ ಬಳಿಯ ಕೆದಂಬಾಡಿ ಪಾವಲಗುರಿ ಎಂಬಲ್ಲಿನ ಬಾವಿಯಲ್ಲಿ ಸ್ಥಳೀಯ ನಿವಾಸಿ ಅಫ್ತಾಬ್ ಎಂಬವರ ಪತ್ನಿ ಅಫ್ಸಾಬಿ (52) ಅವರ ಶವ ಗುರುವಾರ ಪತ್ತೆಯಾಗಿದೆ. ಉಪ್ಪಳದ ಅಗ್ನಿಶಾಮಕದಳ ಶವವನ್ನು ಮೇಲಕ್ಕೆತ್ತಿದೆ. ಪೊಲೀಸರು ಪ್ರಕರಣ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ್ದಾರೆ.

Read More »